Gold Price Today: ಮತ್ತಷ್ಟು ಏರಿಕೆಯಾಯ್ತು ಚಿನ್ನ, ಬೆಳ್ಳಿ ದರ; ನಿಮ್ಮೂರಿನಲ್ಲಿ ಎಷ್ಟಿದೆ ಆಭರಣಗಳ ಬೆಲೆ ಪರಿಶೀಲಿಸಿ
Gold Rate Today: ಮನೆಯಲ್ಲಿ ಮದುವೆ ಸಮಾರಂಭಗಳು ಎದುರಿಗಿದ್ದಾಗ ಚಿನ್ನ ಖರೀದಿಸಲೇಬೇಕಾದ ಅನಿವಾರ್ಯವಿದ್ದಾಗ ಚಿನ್ನದ ದರ ಎಷ್ಟಿದೆ ಎಂಬ ಕುತೂಹಲ ಕೆರಳುವುದು ಸಾಮಾನ್ಯ. ಬೆಂಗಳೂರು, ಚೆನ್ನೈ, ಮುಂಬೈ, ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.
Gold and Silver Price Today | ಬೆಂಗಳೂರು: ಕಳೆದ ಎರಡು ವಾರದಿಂದಲೂ ನಿರಂತರವಾಗಿ ಚಿನ್ನದ ದರ ಏರಿಕೆಯತ್ತ ಸಾಗುತ್ತಲೇ ಇದೆ. ಚಿನ್ನಾಭರಣ ಖರೀದಿಸಬೇಕು ಅಂದುಕೊಂಡಿದ್ದಾಗ ದರ ಇಳಿಕೆಯತ್ತ ಸಾಗಿರಲಿ ಎಂಬ ನಿರೀಕ್ಷೆಯ ಜತೆಗೆ ಆಸೆ ಇರುವುದು ತಪ್ಪೇನಲ್ಲ. ಆದರೆ ದೈನಂದಿನ ದರ ಬದಲಾವಣೆಯಲ್ಲಿ ಚಿನ್ನ (Gold Price), ಬೆಳ್ಳಿ ದರ (Silver Price) ಏರಿಳಿತ ಕಾಣುತ್ತಿರುವುದು ಸರ್ವೇ ಸಾಮಾನ್ಯ. ಅದರಲ್ಲಿಯೂ ಮನೆಯಲ್ಲಿ ಮದುವೆ ಸಮಾರಂಭಗಳು ಎದುರಿಗಿದ್ದಾಗ ಚಿನ್ನ ಖರೀದಿಸಲೇಬೇಕಾದ ಅನಿವಾರ್ಯವಿದ್ದಾಗ ಚಿನ್ನದ ದರ ಎಷ್ಟಿದೆ ಎಂಬ ಕುತೂಹಲ ಕೆರಳುವುದು ಸಾಮಾನ್ಯ. ಬೆಂಗಳೂರು, ಚೆನ್ನೈ, ಮುಂಬೈ, ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,050 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 200 ರೂಪಾಯಿ ಏರಿಕೆ ಆಗಿದೆ. ಅದೇ ರೀತಿ 100 ಗ್ರಾಂ ಚಿನ್ನಕ್ಕೆ 4,50,500 ರೂಪಾಯಿ ನಿಗದಿಯಾಗಿದೆ. ನಿನ್ನೆಗಿಂತ ಇಂದು 2,000 ರೂಪಾಯಿ ಏರಿಕೆ ಕಂಡಿದೆ. ಇನ್ನು, 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,150 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,91,500 ರೂಪಾಯಿ ದಾಖಲಾಗಿದೆ. ಸುಮಾರು 2,200 ರೂಪಾಯಿ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ಏರಿಳಿತ ಕಂಡು ಬಂದಿಲ್ಲ. ಕೆಜಿ ಬೆಳ್ಳಿಗೆ 66,000 ರೂಪಾಯಿ ದಾಖಲಾಗಿದೆ.
ಚೆನ್ನೈನಲ್ಲಿ ಚಿನ್ನ, ಬೆಳ್ಳಿ ದರ ಚೆನ್ನೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,380 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,53,800 ರೂಪಾಯಿ ದಾಖಲಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 2,000 ರೂಪಾಯಿ ಏರಿಕೆ ಕಂಡು ಬಂದಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,510 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,95,100 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 2,300 ರೂಪಾಯಿ ನಿಗದಿಯಾಗಿದೆ. ಚೆನ್ನೈನಲ್ಲಿ ಕೆಜಿ ಬೆಳ್ಳಿ ಬೆಲೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 100 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ.
ದೆಹಲಿಯಲ್ಲಿ ಚಿನ್ನ, ಬೆಳ್ಳಿ ದರ ದೆಹಲಿಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 47,200 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,72,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 2,000 ರೂಪಾಯಿ ಏರಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 51,490 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,14,900 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 2,400 ರೂಪಾಯಿ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಕೆಜಿ ಬೆಳ್ಳಿಗೆ 66,000 ರೂಪಾಯಿ ನಿಗದಿಯಾಗಿದೆ.
ಮುಂಬೈನಲ್ಲಿ ಚಿನ್ನ, ಬೆಳ್ಳಿ ದರ ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 47,270 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,72,700 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 5,100 ರೂಪಾಯಿ ಏರಿಕೆ ಆಗಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 48,270 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,82,700 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 5,100 ರೂಪಾಯಿ ಏರಿಕೆ ಆಗಿದೆ. ಇನ್ನು ಕೆಜಿ ಬೆಳ್ಳಿ ಬೆಲೆ 66,000 ರೂಪಾಯಿ ನಿಗದಿಯಾಗಿದೆ.
ಇದನ್ನೂ ಓದಿ:
Gold Price Today: ಬೆಂಗಳೂರಿನಲ್ಲಿ ಚಿನ್ನದ ದರ ಸ್ಥಿರ; ಬೆಳ್ಳಿ ಬೆಲೆಯಲ್ಲಿ ಇಳಿಕೆ
Published On - 7:20 am, Wed, 27 October 21