ಬಿಲಿಯನೇರ್ ಎಲಾನ್ ಮಸ್ಕ್ ನೇತೃತ್ವದ ಏರೋಸ್ಪೇಸ್ ಕಂಪೆನಿಯಾದ “ಸ್ಪೇಸ್ ಎಕ್ಸ್” (SpaceX) ಈ ವಾರದ ಆರಂಭದಲ್ಲಿ ಪ್ರಕಟಿಸಿದ ಸೆಕೆಂಡರಿ ಷೇರು ಮಾರಾಟದ ನಂತರ 100 ಬಿಲಿಯನ್ ಡಾಲರ್ ಮೌಲ್ಯಮಾಪನದ್ದಾಗಿದೆ ಎಂದು ಸಿಎನ್ಬಿಸಿ ಅಕ್ಟೋಬರ್ 8ರಂದು ವರದಿ ಮಾಡಿದೆ. ಹೊಸ ಮತ್ತು ಅಸ್ತಿತ್ವದಲ್ಲಿರುವ ಹೂಡಿಕೆದಾರರೊಂದಿಗೆ ಒಳಗಿನವರಿಂದ 755 ಮಿಲಿಯನ್ ಯುಎಸ್ಡಿ ಮೌಲ್ಯದ ಸ್ಟಾಕ್ ಅನ್ನು ಪ್ರತಿ ಷೇರಿಗೆ 560 ಯುಎಸ್ಡಿ ಬೆಲೆಯಲ್ಲಿ ಮಾರಾಟ ಮಾಡಲು ಸ್ಪೇಸ್‌ಎಕ್ಸ್ ಒಪ್ಪಂದ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ. ಈ ಪ್ರಸ್ತಾಪವು ಅಸ್ತಿತ್ವದಲ್ಲಿರುವ ಷೇರುಗಳ ಸೆಕೆಂಡರಿ ಮಾರಾಟವನ್ನು ಪ್ರತಿನಿಧಿಸುತ್ತದೆ, ಎಂದು ಈ ಮೇಲೆ ಉಲ್ಲೇಖಿಸಿದ ಜನರು ಹೇಳಿದ್ದಾರೆ. ಇದು ಸ್ಪೇಸ್‌ಎಕ್ಸ್‌ನ ಹೊಸ ಮೌಲ್ಯಮಾಪನವನ್ನು 100.3 ಬಿಲಿಯನ್ ಡಾಲರ್ಗೆ ಕೊಂಡೊಯ್ಯುತ್ತದೆ. ಇದು ಫೆಬ್ರವರಿಯಲ್ಲಿ 74 ಶತಕೋಟಿ ಡಾಲರ್ ಇದ್ದದ್ದು ಶೇ 33ರಷ್ಟು ಹೆಚ್ಚಾಗಿದೆ.
ಫೆಬ್ರವರಿ ತಿಂಗಳಲ್ಲಿ ಮಸ್ಕ್ ನೇತೃತ್ವದ ಸಂಸ್ಥೆಯು ಇದೇ ರೀತಿಯ ಸೆಕೆಂಡರಿ ವಹಿವಾಟನ್ನು ಹೊಂದಿತ್ತು. ಒಳಗಿನವರಿಗೆ 750 ಮಿಲಿಯನ್ ಯುಎಸ್ಡಿವರೆಗೆ ಮಾರಾಟ ಮಾಡಲು ಒಪ್ಪಂದವಾಗಿತ್ತು. ಸ್ಪೇಸ್‌ಎಕ್ಸ್‌ನ ಹೊಸ ಮೌಲ್ಯಮಾಪನವು 100.3 ಬಿಲಿಯನ್ ಯುಎಸ್ಡಿಯೊಂದಿಗೆ ಕಂಪೆನಿಯನ್ನು “ಸೆಂಟಿಕಾರ್ನ್” ಅಥವಾ “ಹೆಕ್ಟೊಕಾರ್ನ್” – ಗಣ್ಯ ಪಟ್ಟಿಯಲ್ಲಿ ಸೇರುವಂತೆ ಮಾಡಿದೆ. -ಇದರ ಅರ್ಥ ಏನೆಂದರೆ ಯೂನಿಕಾರ್ನ್‌ಗಿಂತ 100 ಪಟ್ಟು ಮೌಲ್ಯದ ಕಂಪೆನಿಗಳು. ಅದಕ್ಕಾಗಿ ಈ ಪದಗಳಲ್ಲಿ ಉಲ್ಲೇಖಿಸಲಾಗುತ್ತದೆ. ಯೂನಿಕಾರ್ನ್ನ ಆರಂಭದ ಹಂತವು 1 ಬಿಲಿಯನ್ ಯುಎಸ್ಡಿಯೊಂದಿಗೆ ಆಗುತ್ತದೆ.
ಸಿಬಿ ಒಳನೋಟಗಳ ಪ್ರಕಾರ, ಸ್ಪೇಸ್ ಎಕ್ಸ್ ವಿಶ್ವದ ಎರಡನೇ ಅತ್ಯಮೂಲ್ಯ ಖಾಸಗಿ ಕಂಪೆನಿಯಾಗಿದೆ. ಇದರರ್ಥ ಇದು ಚೀನಾದ ಹೊಸ ಮಾಧ್ಯಮ ದೈತ್ಯ ಬೈಟ್ಡ್ಯಾನ್ಸ್ಗಿಂತ ಮಾತ್ರ ಹಿಂದಿದೆ. ಸ್ಪೇಸ್‌ಎಕ್ಸ್ 100 ಬಿಲಿಯನ್ ಮೌಲ್ಯಮಾಪನವನ್ನು ತಲುಪುವ ಕುರಿತು ಹೇಳಿಕೆಯನ್ನು ನೀಡಬೇಕಿದೆ. ಏರೋಸ್ಪೇಸ್ ಸಂಸ್ಥೆಯಾದ ಸ್ಪೇಸ್ ಎಕ್ಸ್ ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪೆನಿಯಾಗಿಲ್ಲದ ಕಾರಣ ವರದಿಗಳಲ್ಲಿ ಉಲ್ಲೇಖಿಸಲಾದ ಮೂಲಗಳು ತಮ್ಮ ಹೆಸರು ಹಾಗೂ ಇತರ ಮಾಹಿತಿಯನ್ನು ತಿಳಿಸಿಲ್ಲ. ಅಂದರೆ ಕಂಪೆನಿಯು ಈ ಮಾಹಿತಿಯನ್ನು ಸಾರ್ವಜನಿಕವಾಗಿ ತಿಳಿಸಲು ಆಯ್ಕೆ ಮಾಡದ ಹೊರತು ಹಣಕಾಸಿಗೆ ಸಂಬಂಧಿಸಿದ ವಿವರಗಳು ಖಾಸಗಿಯಾಗಿ ಇರುತ್ತವೆ.
ಇದನ್ನೂ ಓದಿ:Gaganyaan: ಗಗನಯಾನ ಮಿಷನ್ಗಾಗಿ ಇಸ್ರೋದಿಂದ ವಿಕಾಸ್ ಎಂಜಿನ್ 3ನೇ ಟೆಸ್ಟ್ ಯಶಸ್ವಿ; ಎಲಾನ್ ಮಸ್ಕ್ ಅಭಿನಂದನೆ