Gaganyaan: ಗಗನಯಾನ ಮಿಷನ್ಗಾಗಿ ಇಸ್ರೋದಿಂದ ವಿಕಾಸ್ ಎಂಜಿನ್ 3ನೇ ಟೆಸ್ಟ್ ಯಶಸ್ವಿ; ಎಲಾನ್ ಮಸ್ಕ್ ಅಭಿನಂದನೆ
Elon Musk: 2018ರ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಮಾನವಸಹಿತ ಗಗನಯಾನದ ಘೋಷಣೆಯನ್ನು ಮಾಡಿದ್ದರು.
ಇಸ್ರೋದ ಬಹುನಿರೀಕ್ಷಿತ ಯೋಜನೆಯಾದ ಮಾನವಸಹಿತ ಗಗನಯಾನ ಮಿಷನ್ನ ಭಾಗವಾಗಿ 3ನೇ ಬಾರಿಗೆ ವಿಕಾಸ್ ಎಂಜಿನ್ ಟೆಸ್ಟ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಟೆಸ್ಲಾಂ ಕಂಪನಿಯ ಸಂಸ್ಥಾಪಕ ಎಲಾನ್ ಮಸ್ಕ್ ಇಸ್ರೋಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಜುಲೈ 14ರಂದು ಇಸ್ರೋ ವಿಕಾಸ್ ಎಂಜಿನ್ ಹಾಟ್ ಟೆಸ್ಟ್ ಅನ್ನು ಯಶಸ್ವಿಯಾಗಿ ನಡೆಸಿದೆ. ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಗಗನಯಾನಕ್ಕೆ ಇದರಿಂದ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ ಎಂದು ಇಸ್ರೋ ಟ್ವೀಟ್ ಮಾಡಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಎಲಾನ್ ಮಸ್ಕ್ ಅಭಿನಂದನೆಗಳನ್ನು ತಿಳಿಸಿದ್ದಾರೆ.
#ISRO on July 14, 2021 has successfully conducted the hot test of the liquid propellant Vikas Engine for the core L110 liquid stage of the human rated GSLV MkIII vehicle, as part of engine qualification requirements for the #Gaganyaan Programme
Read More: https://t.co/cqYatVNwsf pic.twitter.com/4MFvHIBgVW
— ISRO (@isro) July 14, 2021
ನಿನ್ನೆ ತಮಿಳುನಾಡಿನಲ್ಲಿ ನಡೆದ ವಿಕಾಸ್ ಎಂಜಿನ್ ಪರೀಕ್ಷೆಯಲ್ಲಿ 240 ಸೆಕೆಂಡ್ಗಳ ಕಾಲ ಎಂಜಿನ್ನನ್ನು ಉಡಾವಣೆ ಮಾಡಲಾಯಿತು. ಈ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಮಾನವಸಹಿತ ಗಗನಯಾನಕ್ಕೆ ಸಿದ್ಧತೆ ನಡೆಸುತ್ತಿರುವ ಇಸ್ರೋದಲ್ಲಿ ಭಾರತೀಯ ಗಗನಯಾತ್ರಿಗಳು ಕೂಡ ಇದ್ದಾರೆ. ಭಾರತದ ನಾಲ್ವರು ಗಗನಯಾತ್ರಿಗಳು ಈಗಾಗಲೇ ರಷ್ಯಾದಲ್ಲಿ ಗಗನಯಾನಕ್ಕೆ ಅಗತ್ಯವಿರುವ ತರಬೇತಿಯನ್ನು ಪಡೆಯುತ್ತಿದ್ದಾರೆ. ಇಸ್ರೋದ GSLV MK3 ಗಗನಯಾತ್ರಿಗಳನ್ನು ಹೊತ್ತೊಯ್ಯಲಿದೆ.
2018ರ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಮಾನವಸಹಿತ ಗಗನಯಾನದ ಘೋಷಣೆಯನ್ನು ಮಾಡಿದ್ದರು. 2022ರ ಆಗಸ್ಟ್ 15ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ತುಂಬುವ ಹಿನ್ನೆಲೆಯಲ್ಲಿ ಆ ಸಂದರ್ಭದಲ್ಲಿ ಮಾನವಸಹಿತ ಗಗನಯಾನವನ್ನು ಕೈಗೊಳ್ಳುವುದಾಗಿ ಘೋಷಿಸಲಾಗಿತ್ತು.
ಇದನ್ನೂ ಓದಿ: ಇಸ್ರೋ ಬೇಹುಗಾರಿಕೆ ಪ್ರಕರಣ; ವಿಜ್ಞಾನಿ ನಂಬಿ ನಾರಾಯಣನ್ ಹಿನ್ನೆಲೆ, ಜೈಲುವಾಸ, ಸಿಬಿಐ ತನಿಖೆ
(Tesla CEO Elon Musk congratulates Isro for successfully conducting 3rd test on Vikas Engine for Gaganyaan Mission)
Published On - 12:42 pm, Thu, 15 July 21