Elon Musk: ಎಲಾನ್ ಮಸ್ಕ್ ಮಾಲೀಕರಾದರೆ ಟ್ವಿಟರ್​ನ 75% ಉದ್ಯೋಗಿಗಳ ವಜಾ; ವರದಿ

| Updated By: Ganapathi Sharma

Updated on: Oct 21, 2022 | 10:22 AM

ಟ್ವಿಟರ್​ನ ಮಾಲೀಕರಾದರೆ ಶೇಕಡಾ 75ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ ಬಗ್ಗೆ ಎಲಾನ್ ಮಸ್ಕ್ ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

Elon Musk: ಎಲಾನ್ ಮಸ್ಕ್ ಮಾಲೀಕರಾದರೆ ಟ್ವಿಟರ್​ನ 75% ಉದ್ಯೋಗಿಗಳ ವಜಾ; ವರದಿ
ಎಲಾನ್ ಮಸ್ಕ್​
Follow us on

ಸ್ಯಾನ್​ ಫ್ರಾನ್ಸಿಸ್ಕೊ: ಟ್ವಿಟರ್​ನ (Twitter) ಮಾಲೀಕರಾದರೆ ಶೇಕಡಾ 75ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ (Laying Off) ಬಗ್ಗೆ ಎಲಾನ್ ಮಸ್ಕ್ (Elon Musk) ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಟ್ವಿಟರ್‌ನ 7,500 ಉದ್ಯೋಗಿಗಳ ಪೈಕಿ ಶೇಕಡಾ 75ರಷ್ಟು ಮಂದಿಯನ್ನು ಕೆಲಸದಿಂದ ವಜಾಗೊಳಿಸುವ ಬಗ್ಗೆ ಮಸ್ಕ್ ಅವರು ಉದ್ದೇಶಿತ ಹೂಡಿಕೆದಾರರ ಬಳಿ ಚರ್ಚಿಸಿದ್ದಾರೆ ಎಂದು ‘ದಿ ವಾಷಿಂಗ್ಟನ್ ಪೋಸ್ಟ್​’ನಲ್ಲಿ ಗುರುವಾರ ಪ್ರಕಟವಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮತ್ತು ಮೂಲಗಳ ಬಗ್ಗೆಯೂ ಪತ್ರಿಕೆ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.

ಈ ವಿಚಾರಕ್ಕೆ ಸಂಬಂಧಿಸಿ ಟ್ವಿಟರ್ ಹಾಗೂ ಎಲಾನ್ ಮಸ್ಕ್ ಅವರಿಂದ ಪ್ರತಿಕ್ರಿಯೆ ಕೋರಿ ಸಂದೇಶ ಕಳುಹಿಸಲಾಗಿತ್ತು. ಅವರು ಇದಕ್ಕೆ ಉತ್ತರಿಸಿಲ್ಲ ಎಂದು ವರದಿ ಹೇಳಿದೆ.

ಇದನ್ನೂ ಓದಿ: Twitter: ಟ್ವಿಟರ್​ನಲ್ಲಿ ಬಂದಿದೆ ಹೊಸ ಆಯ್ಕೆ: ಈಗ ಜಿಫ್, ಫೋಟೋ, ವಿಡಿಯೋವನ್ನು ಒಂದೇ ಟ್ವೀಟ್​ನಲ್ಲಿ ಬಳಸಿ

ಇದನ್ನೂ ಓದಿ
Petrol Price Today: ಇಳಿಕೆಯಾಯಿತಾ ಪೆಟ್ರೋಲ್ ಬೆಲೆ?; ನಿಮ್ಮ ನಗರಗಳಲ್ಲಿ ಇಂದಿನ ಡೀಸೆಲ್ ದರ ಹೀಗಿದೆ
Gold Price Today: ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆ, ಪ್ರಮುಖ ನಗರಗಳ ಬೆಲೆ ಇಲ್ಲಿದೆ
Health Insurance: ಆರೋಗ್ಯ ವಿಮೆ ಮಾಡಿಸುತ್ತಿದ್ದೀರಾ? ಅಸ್ತಿತ್ವದಲ್ಲಿರುವ ಕಾಯಿಲೆಗಳ ವಿವರ ನೀಡಲು ಮರೆಯಬೇಡಿ
Amazon Great Indian Festival: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ ಸೇಲ್​, ಕೋಟ್ಯಧಿಪತಿಗಳಾದ 650 ಮಾರಾಟಗಾರರು

ಮಾರಾಟ ಒಪ್ಪಂದದ ಹೊರತಾಗಿಯೂ ಟ್ವಿಟರ್ ಉದ್ಯೋಗ ಕಡಿತಕ್ಕೆ ಚಿಂತನೆ ನಡೆಸಿತ್ತು. ಆದರೆ, ಮಸ್ಕ್ ಚಿಂತನೆ ಮಾಡಿರುವ ಪ್ರಮಾಣವು ಟ್ವಿಟರ್ ಯೋಜಿಸಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿದೆ ಎಂದು ವರದಿ ಹೇಳಿದೆ. ಕಂಪನಿಯ ಹಲವು ಉದ್ಯೋಗಿಗಳನ್ನು ವಜಾಗೊಳಿಸಬೇಕು ಎಂದು ಮಸ್ಕ್ ಈ ಹಿಂದೆ ಕೂಡ ಹೇಳಿದ್ದರು. ಆದರೆ ನಿರ್ದಿಷ್ಟ ಸಂಖ್ಯೆಯನ್ನು ಉಲ್ಲೇಖಿಸಿರಲಿಲ್ಲ. ಸಾರ್ವಜನಿಕವಾಗಿಯೂ ಹೇಳಿಕೆ ನೀಡಿರಲಿಲ್ಲ.

ಹೂಡಿಕೆದಾರರನ್ನು ಆಕರ್ಷಿಸಲು ನೆರವಾಗಬಹುದೆಂದ ವಿಶ್ಲೇಷಕರು:

‘ಶೇಕಡಾ 75ರ ಉದ್ಯೋಗ ಕಡಿತವು ಹಣಕಾಸಿನ ಹರಿವು ಮತ್ತು ಲಾಭಕ್ಕೆ ನೆರವಾಗಲಿದೆ. ಇದರಿಂದ ಹೂಡಿಕೆದಾರರನ್ನು ಆಕರ್ಷಿಸಬಹುದು. ಆದರೆ ಇಂಥ ಉದ್ಯೋಗ ಕಡಿತವು ಕಂಪನಿಯನ್ನು ಹಲವು ವರ್ಷಗಳಷ್ಟು ಹಿಂದಕ್ಕೆ ತಳ್ಳಲಿದೆ’ ಎಂದು ವೆಡ್​ಬುಷ್​ನ ವಿಶ್ಲೇಷಕ ಡ್ಯಾನ್ ಐವ್ಸ್​ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗಷ್ಟೇ ಎಲಾನ್ ಮಸ್ಕ್ ಮತ್ತೊಮ್ಮೆ ಟ್ವಿಟರ್ ಖರೀದಿಗೆ ಪ್ರಸ್ತಾವ ಮುಂದಿಟ್ಟಿದ್ದರು. ಈ ಮೊದಲು ಒಪ್ಪಿಕೊಂಡಿದ್ದ ದರಕ್ಕೇ ಕಂಪನಿಯನ್ನು ಖರೀದಿಸುವುದಾಗಿ ಮಸ್ಕ್ ಸ್ಪಷ್ಟಪಡಿಸಿದ್ದರು. ಇದಕ್ಕೂ ಮುನ್ನ ಟ್ವಿಟರ್ ಮತ್ತು ಮಸ್ಕ್​ ನಡುವೆ ಹೇಳಿಕೆ-ಪ್ರತಿ ಹೇಳಿಕೆಗಳ ಸಮರ ನಡೆದಿತ್ತು. ಖರೀದಿ ಪ್ರಸ್ತಾವದಿಂದ ಹಿಂದೆ ಸರಿಯಲೆಂದು ಮಸ್ಕ್​ ನ್ಯಾಯಾಲಯದಲ್ಲಿ ಕಾನೂನು ಸಮರವನ್ನೂ ಆರಂಭಿಸಿದ್ದರು. ಮತ್ತೊಂದು ಬೆಳವಣಿಗೆಯಲ್ಲಿ ಟ್ವಿಟರ್​ಗೆ ನೀಡಿದ್ದ ಖರೀದಿ ಪ್ರಸ್ತಾವಕ್ಕೆ ಮಾನ್ಯತೆ ನೀಡುವುದಾಗಿ ಮಸ್ಕ್​ ಅಮೆರಿಕದ ಸೆಕ್ಯುರಿಟಿ ಅಂಡ್ ಎಕ್ಸ್​ಚೇಂಜ್ ಕಮಿಷನ್​ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:20 am, Fri, 21 October 22