Who Is Tesla Founder: ಟೆಸ್ಲಾ ಸ್ಥಾಪಿಸಿದ್ದು ಮಸ್ಕ್ ಅಲ್ಲ ಎಂಬ ಬೆಂಗಳೂರು ವ್ಯಕ್ತಿಯ ಟ್ವೀಟ್​ಗೆ ಎಲಾನ್ ಉತ್ತರ ಏನು?

| Updated By: Srinivas Mata

Updated on: Apr 23, 2022 | 1:59 PM

ಟೆಸ್ಲಾವನ್ನು ಎಲಾನ್ ಮಸ್ಕ್ ಖರೀದಿಸಿದ್ದು, ಸ್ಥಾಪಿಸಿದ್ದಲ್ಲ ಎಂಬ ಬೆಂಗಳೂರು ವ್ಯಕ್ತಿಯ ಟ್ವೀಟ್​ಗೆ ಎಲಾನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ಆ ಬಗ್ಗೆ ವಿವರ ಇಲ್ಲಿದೆ.

Who Is Tesla Founder: ಟೆಸ್ಲಾ ಸ್ಥಾಪಿಸಿದ್ದು ಮಸ್ಕ್ ಅಲ್ಲ ಎಂಬ ಬೆಂಗಳೂರು ವ್ಯಕ್ತಿಯ ಟ್ವೀಟ್​ಗೆ ಎಲಾನ್ ಉತ್ತರ ಏನು?
ಎಲಾನ್ ಮಸ್ಕ್ (ಸಂಗ್ರಹ ಚಿತ್ರ)
Follow us on

ಟೆಸ್ಲಾ ಕಂಪೆನಿಯನ್ನು ಸ್ಥಾಪಿಸಿದವರು ಯಾರು ಎಂಬ ದಾಖಲೆಗಳನ್ನು ಒದಗಿಸುವ ವಿಚಾರದಲ್ಲಿ ಎಲಾನ್ ಮಸ್ಕ್ (Elon Musk) ಅವರು ಉತ್ಸುಕರಾಗಿದ್ದಾರೆ. ಈಚೆಗೆ ಟ್ವೀಟ್ ಮಾಡಿದ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು, “ಎಲಾನ್ ಮಸ್ಕ್ ಟೆಸ್ಲಾ ಸ್ಥಾಪಕ ಅಲ್ಲ. ಅವರು ಅದನ್ನು ಸ್ವಾಧೀನಪಡಿಸಿಕೊಂಡರು,” ಎಂದಿದ್ದರು. ಅವರಿಗೆ ಮಸ್ಕ್ ಪ್ರತಿಕ್ರಿಯಿಸಿದ್ದಾರೆ. “ಎಲಾನ್ ಮಸ್ಕ್ ಟೆಸ್ಲಾ ಸ್ಥಾಪಕ ಅಲ್ಲ. ಅವರು ಅದನ್ನು ಸ್ವಾಧೀನಪಡಿಸಿಕೊಂಡರು,” ಎಂದು ಗ್ರೋಥ್​ಸ್ಕೂಲ್‌ನ ಸಂಸ್ಥಾಪಕ ಮತ್ತು ಸಿಇಒ ವೈಭವ್ ಸಿಸಿಂಟಿ ಟ್ವೀಟ್ ಮಾಡಿದ್ದರು. ಪ್ರತಿಕ್ರಿಯೆಯಾಗಿ ಎಲಾನ್ ಮಸ್ಕ್ ಟ್ವೀಟ್ ಮಾಡಿ, “ಅದಕ್ಕೆ ಹತ್ತಿರವೂ ಇಲ್ಲ. ಇದು ಯಾವುದೇ ಉದ್ಯೋಗಿಗಳಿಲ್ಲದ ಶೆಲ್ ಕಂಪೆನಿ ಆಗಿತ್ತು. ಯಾವುದೇ ಐಪಿ ಇಲ್ಲ, ಯಾವುದೇ ವಿನ್ಯಾಸಗಳಿಲ್ಲ, ಯಾವುದೇ ಮಾದರಿಯಿಲ್ಲ, ಅಕ್ಷರಶಃ ಬೇರೆ ಯಾವುದೂ ಇಲ್ಲ. ಆದರೆ ಏಸಿ ಪ್ರೊಪಲ್ಷನ್‌ನ T-Zero ಕಾರನ್ನು ವಾಣಿಜ್ಯೀಕರಿಸುವ (ವ್ಯಾಪಾರ) ಯೋಜನೆ ಮಾತ್ರ ಇತ್ತು. ಇದನ್ನು ನನಗೆ ಪರಿಚಯಿಸಿದ್ದು ಜೆಬಿ ಸ್ಟ್ರಾಬೆಲ್ ಹೊರತು ಎಬರ್‌ಹಾರ್ಡ್ ಅಲ್ಲ. ‘ಟೆಸ್ಲಾ ಮೋಟಾರ್ಸ್’ ಎಂಬ ಹೆಸರು ಕೂಡ ಇತರರ ಒಡೆತನದಲ್ಲಿತ್ತು!”

ಟೆಸ್ಲಾದವರ ಪ್ರಕಾರ, ಈ ತಿಂಗಳ ಆರಂಭದಲ್ಲಿ TEDನಲ್ಲಿ ಕಾಣಿಸಿಕೊಂಡಾಗ ಮಸ್ಕ್ ಅದೇ ಅಂಶಗಳನ್ನು ತಿಳಿಸಿದ್ದಾರೆ. ಜುಲೈ 2003ರಲ್ಲಿ ಮಾರ್ಟಿನ್ ಎಬರ್ಹಾರ್ಡ್ ಮತ್ತು ಮಾರ್ಕ್ ಟಾರ್ಪೆನಿಂಗ್ ಅವರಿಂದ ಟೆಸ್ಲಾ ಮೋಟಾರ್ಸ್ ಅನ್ನು ಸ್ಥಾಪಿಸಲಾಯಿತು. ಎಲಾನ್ ಮಸ್ಕ್ ಬಂದಿದ್ದು ಮತ್ತು ಜೆಬಿ ಸ್ಟ್ರಾಬೆಲ್ ಕಂಪೆನಿಗೆ ಸೇರಿದ್ದು ತಿಂಗಳ ನಂತರ. TED 2022ರಲ್ಲಿ ಕಾಣಿಸಿಕೊಂಡ ವೇಳೆ ಮಸ್ಕ್ ಅವರು ಜೆಬಿ ಸ್ಟ್ರಾಬೆಲ್ ಜತೆ ಟೆಸ್ಲಾವನ್ನು ಪ್ರಾರಂಭಿಸದಿದ್ದಕ್ಕೆ ವಿಷಾದ ವ್ಯಕ್ತಪಡಿಸಿದರು. ಅವರು “ತಾವು ಕಂಪನಿಯಲ್ಲಿ ಹೂಡಿಕೆ ಮಾಡಿಲ್ಲ ಎಂದು ಹೇಳಿದ್ದಾರೆ. ಅವರು ಸ್ಟ್ರಾಬೆಲ್ ಮತ್ತು ಟೆಸ್ಲಾದ ಸಂಸ್ಥಾಪಕರು ಎಂದು ಲಿಸ್ಟ್ ಮಾಡಲಾದ ಇತರ ವ್ಯಕ್ತಿಗಳು ಕಂಪೆನಿಯನ್ನು ರಚಿಸಿದರು.”

ಸಿಸಿಂಟಿಗೆ ಅವರ ಪ್ರತಿಕ್ರಿಯೆಯ ನಂತರದ ಮಸ್ಕ್ ಟ್ವೀಟ್‌ನಲ್ಲಿ, ಎಬರ್‌ಹಾರ್ಡ್ ಮತ್ತು ಟರ್ಪೆನಿಂಗ್ ಟೆಸ್ಲಾ ಸಂಸ್ಥಾಪಕರು ಎಂಬ ತರ್ಕವನ್ನು ಇಟ್ಟುಕೊಂಡು ಹೇಳುವುದಾದರೆ, ತಾನು ಪೇಪಾಲ್‌ನ ಏಕೈಕ “ಸ್ಥಾಪಕ” ಎಂದು ಹೇಳಿದ್ದಾರೆ. “ಶೆಲ್ ಕಾರ್ಪ್ ಅನ್ನು ಫೈಲಿಂಗ್ ಮಾಡುವುದು ಎಂದಾದರೆ “ಕಂಪೆನಿಯನ್ನು ಸ್ಥಾಪಿಸುವುದು” ಆಗಿದ್ದರೆ ನಾನು ಪೇಪಾಲ್‌ನ ಏಕೈಕ ಸಂಸ್ಥಾಪಕನಾಗುತ್ತೇನೆ. ಏಕೆಂದರೆ ನಾನು http://X.com (ನಂತರ ಪೇಪಾಲ್ ಎಂದು ಮರುನಾಮಕರಣ ಮಾಡಲಾಗಿದೆ)ಗಾಗಿ ಮೂಲ ಸಂಯೋಜನೆಯ ದಾಖಲೆಗಳನ್ನು ಸಲ್ಲಿಸಿದ್ದೇನೆ, ಆದರೆ ಅದು ಸ್ಥಾಪನೆ ಎಂಬರ್ಥ ನೀಡುವುದಿಲ್ಲ,” ಎಂದಿದ್ದಾರೆ. ಇನ್ನು ಎಬರ್‌ಹಾರ್ಡ್‌ನ ಬಗ್ಗೆ ಟೀಕೆಯೊಂದಿಗೆ ಮಸ್ಕ್ ಮುಕ್ತಾಯಗೊಳಿಸಿದ್ದಾರೆ: “ಜುಲೈ 2007ರಲ್ಲಿ ಮಂಡಳಿಯಿಂದ ಎಬರ್‌ಹಾರ್ಡ್‌ನನ್ನು ಸರ್ವಾನುಮತದಿಂದ ವಜಾಗೊಳಿಸಿದಾಗ (ಖಂಡಿತಾ ಒಳ್ಳೆಯ ಕಾರಣಗಳಿಗಾಗಿ) ಯಾರೂ ಅವರೊಂದಿಗೆ ಬಿಡಲಿಲ್ಲ. ಅದೇ ಎಲ್ಲವನ್ನೂ ಹೇಳುತ್ತದೆ.”

ವೈಭವ್ ಸಿಸಿಂಟಿ ಮುಂದುವರಿದು, “ಎಲಾನ್ ಮಸ್ಕ್ ಅವರು ಅದನ್ನು ಸ್ವಾಧೀನಪಡಿಸಿಕೊಂಡರೆ “ಟ್ವಿಟ್ಟರ್‌ನ ನಿಜವಾದ ಸಾಮರ್ಥ್ಯವನ್ನು ಹೊರಗೆ ತರಬಹುದು” ಎಂದು ನಾನು ನಂಬುತ್ತೇನೆ. ಆದ್ದರಿಂದ ಈ ಟ್ವೀಟ್!” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Elon Musk: ಇನ್ನೆರಡು ವರ್ಷದಲ್ಲಿ ಎಲಾನ್ ಮಸ್ಕ್ ಆಸ್ತಿ 1 ಲಕ್ಷ ಕೋಟಿ ಯುಎಸ್​ಡಿ, ಅಂದರೆ 76 ಲಕ್ಷ ಕೋಟಿ ರೂ. ಅಂತಿದೆ ಈ ವರದಿ