Elon Musk: ರಷ್ಯಾ ಸುದ್ದಿ ಮೂಲ ಪ್ರಸಾರ ಮಾಡದಂತೆ ಎಲಾನ್​ ಮಸ್ಕ್​ಗೆ ಸೂಚನೆ; ಹೀಗೆ ಹೇಳಿದ್ದು ಉಕ್ರೇನ್​ ಅಲ್ಲ

ರಷ್ಯಾ ಸುದ್ದಿಯನ್ನು ಪ್ರಸಾರ ಮಾಡದಂತೆ ತಮಗೆ ತಿಳಿಸಿರುವುದಾಗಿ ಮತ್ತು ಅದು ಉಕ್ರೇನ್ ಸರ್ಕಾರವಲ್ಲ ಎಂದು ಟೆಸ್ಲಾದ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.

Elon Musk: ರಷ್ಯಾ ಸುದ್ದಿ ಮೂಲ ಪ್ರಸಾರ ಮಾಡದಂತೆ ಎಲಾನ್​ ಮಸ್ಕ್​ಗೆ ಸೂಚನೆ; ಹೀಗೆ ಹೇಳಿದ್ದು ಉಕ್ರೇನ್​ ಅಲ್ಲ
ಎಲಾನ್ ಮಸ್ಕ್ (ಸಂಗ್ರಹ ಚಿತ್ರ)
Follow us
| Updated By: Srinivas Mata

Updated on: Mar 05, 2022 | 2:56 PM

ಉಕ್ರೇನ್‌ನಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ (Ukraine- Russia Crisis) ಹಿನ್ನೆಲೆಯಲ್ಲಿ ರಷ್ಯಾದ ಸುದ್ದಿ ಮೂಲಗಳನ್ನು ನಿರ್ಬಂಧಿಸಲು ಕೆಲವು ಸರ್ಕಾರಗಳಿಂದ ಸ್ಟಾರ್‌ಲಿಂಕ್‌ಗೆ ತಿಳಿಸಲಾಗಿದೆ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ರಷ್ಯಾದ ಆಕ್ರಮಣದಿಂದ ಹಾನಿಗೊಳಗಾದ ಉಕ್ರೇನ್‌ನಲ್ಲಿ ಕಂಪೆನಿಯ ಸ್ಟಾರ್‌ಲಿಂಕ್ ಉಪಗ್ರಹ ಬ್ರಾಡ್‌ಬ್ಯಾಂಡ್ ಸೇವೆಯನ್ನು “ಗುರಿ” ಮಾಡಬಹುದಾದ ಹೆಚ್ಚಿನ ಅವಕಾಶವಿದೆ ಎಂದು ಮಸ್ಕ್ ಎಚ್ಚರಿಸಿದ ಒಂದು ದಿನದ ನಂತರ ಈ ಟ್ವೀಟ್ ಬಂದಿದೆ. ಮಸ್ಕ್ ಟ್ವೀಟ್ ಮಾಡಿ, “ಸ್ಟಾರ್‌ಲಿಂಕ್‌ಗೆ ರಷ್ಯಾದ ಸುದ್ದಿ ಮೂಲಗಳನ್ನು ನಿರ್ಬಂಧಿಸಲು ಕೆಲವು ಸರ್ಕಾರಗಳು (ಉಕ್ರೇನ್ ಅಲ್ಲ) ಹೇಳಿವೆ. ಗನ್​ ಪಾಯಿಂಟ್​ ಹೊರತು ನಾವು ಹಾಗೆ ಮಾಡುವುದಿಲ್ಲ. ಮುಕ್ತ ಅಭಿಪ್ರಾಯ ತಿಳಿಸುವಂತೆ ಇರುವುದಕ್ಕೆ ಕ್ಷಮಿಸಿ,” ಎಂದಿದ್ದಾರೆ.

ಮಸ್ಕ್ ಈ ಬಗ್ಗೆ ಒತ್ತಿ ಹೇಳಿದ್ದು, “ನಾವು ಬಂದೂಕಿನ ತುದಿಯಲ್ಲಿ ಹೊರತು ಹಾಗೆ ಮಾಡುವುದಿಲ್ಲ. ಮುಕ್ತ ಅಭಿಪ್ರಾಯ ವ್ಯಕ್ತಪಡಿಸಲು ಬಯಸುತ್ತೇವೆ, ಕ್ಷಮಿಸಿ” ಎಂದಿದ್ದಾರೆ. ಇದರ ಜತೆಗೆ ಮಸ್ಕ್ ಶನಿವಾರ ಟ್ವೀಟ್ ಮಾಡಿದ್ದು, “ಸ್ಪೇಸ್‌ಎಕ್ಸ್ ಸೈಬರ್ ಡಿಫೆನ್ಸ್ ಮತ್ತು ಸಿಗ್ನಲ್ ಜಾಮಿಂಗ್ ಅನ್ನು ಮೀರಿಸಲು ಮರುಪ್ರಾಧಾನ್ಯ ನೀಡಿದೆ. ಸ್ಟಾರ್‌ಶಿಪ್ ಮತ್ತು ಸ್ಟಾರ್‌ಲಿಂಕ್ V2ನಲ್ಲಿ ಸ್ವಲ್ಪ ವಿಳಂಬವನ್ನು ಮಾಡುತ್ತದೆ,” ಎಂದಿದೆ.

ಈ ಮಧ್ಯೆ ಟೆಸ್ಲಾ ಸಂಸ್ಥಾಪಕ ಎಲಾನ್​ ಮಸ್ಕ್ ವಿಶ್ವದಾದ್ಯಂತ ತೈಲ ಮತ್ತು ಅನಿಲ ಉತ್ಪಾದನೆಯಲ್ಲಿ ತಕ್ಷಣದ ಹೆಚ್ಚಳಕ್ಕೆ ಕರೆ ನೀಡಿದ್ದಾರೆ. ಏಕೆಂದರೆ ಸುಸ್ಥಿರ ಪರಿಹಾರಗಳು ರಷ್ಯಾದ ಉತ್ಪಾದನೆಯ ಬದಲಿ ಆಗಲು ಸಾಧ್ಯವಿಲ್ಲ. “ಇದನ್ನು ಹೇಳಲು ನನಗಿಷ್ಟವಿಲ್ಲ, ಆದರೆ ನಾವು ತೈಲ ಮತ್ತು ಅನಿಲ ಉತ್ಪಾದನೆಯನ್ನು ತಕ್ಷಣವೇ ಹೆಚ್ಚಿಸಬೇಕಾಗಿದೆ,” ಎಂದು ಮಸ್ಕ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ. “ಅಸಾಧಾರಣ ಸಮಯವು ಅಸಾಧಾರಣ ಕ್ರಮಗಳನ್ನು ಬಯಸುತ್ತದೆ,” ಎಂದಿದ್ದಾರೆ.

ಹೆಚ್ಚುತ್ತಿರುವ ತೈಲ ಮತ್ತು ಅನಿಲ ಉತ್ಪಾದನೆಯು ಟೆಸ್ಲಾದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆಯಾದರೂ ರಷ್ಯಾದ ತೈಲ ಮತ್ತು ಅನಿಲ ರಫ್ತುಗಳನ್ನು ಸರಿದೂಗಿಸಲು ಸುಸ್ಥಿರವಾದ ಇಂಧನವು ತಕ್ಷಣವೇ ಪರಿಹಾರ ಎಂಬಂತೆ ಪ್ರತಿಕ್ರಿಯಿಸುವುದಕ್ಕೆ ಸಾಧ್ಯವಿಲ್ಲ ಎಂದು ಮಸ್ಕ್ ಹೇಳಿದ್ದಾರೆ.

ಇದನ್ನೂ ಓದಿ: Starlink: 2022ರ ಜನವರಿಗೆ ಭಾರತದಲ್ಲಿ ವಾಣಿಜ್ಯ ಲೈಸೆನ್ಸ್​ಗೆ ಅರ್ಜಿ ಸಲ್ಲಿಸಲಿದೆ ಎಲಾನ್​ ಮಸ್ಕ್​ರ ಸ್ಟಾರ್​ಲಿಂಕ್

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ