ಕಾರ್ಮಿಕ ಭವಿಷ್ಯನಿಧಿ ಒಕ್ಕೂಟವು (ಇಪಿಎಫ್ಒ) ಉದ್ಯೋಗಿಗಳ ಅನುಕೂಲಕ್ಕಾಗಿ ಭವಿಷ್ಯನಿಧಿ ಹೂಡಿಕೆಯನ್ನು ಪಾರದರ್ಶಕವಾಗಿ ಮಾಡಿದೆ. ಇಪಿಎಫ್ಒ ಚಂದಾದಾರರು ಈಗ ಪಿಎಫ್ ಅಥವಾ ಇಪಿಎಫ್ ಬಾಕಿಯನ್ನು ಯೂನಿವರ್ಸಲ್ ಅಕೌಂಟ್ ನಂಬರ್ (UAN) ಇಲ್ಲದೆಯೂ ಪರಿಶೀಲನೆ ಮಾಡಿಕೊಳ್ಳಬಹುದು. ಈ ಹೊಸ ಪದ್ಧತಿಯನ್ನು ಇಪಿಎಫ್ಒ ಅಳವಡಿಸಿಕೊಂಡಿದೆ. ಇಪಿಎಫ್ಒ ಚಂದಾದಾರರು ಇಪಿಎಫ್ಒ ಹೋಮ್ ಪೇಜ್ಗೆ ಲಾಗ್ ಇನ್ ಆಗಿ, ಕೆಲವು ಸರಳ ಹಂತಗಳನ್ನು ಅನುಸರಿಸಿದರೆ ತುಂಬ ಸಲೀಸಾಗಿಯೇ ತಮ್ಮ ಖಾತೆಯಲ್ಲಿನ ಬಾಕಿ ಮೊತ್ತವನ್ನು ಯೂನಿವರ್ಸಲ್ ಅಕೌಂಟ್ ನಂಬರ್ ಇಲ್ಲದೆಯೂ ಪರಿಶೀಲಿಸಬಹುದು.
ಪಿಎಫ್- ಇಪಿಎಫ್ ಬಾಕಿ ಪರಿಶೀಲನೆ ಮಾಡೋದು ಹೇಗೆ ಎಂಬುದನ್ನು ಹಂತ ಹಂತವಾಗಿ ತಿಳಿದುಕೊಳ್ಳಿ:
1) ಪಿಎಫ್ ಅಥವಾ ಇಪಿಎಫ್ ಖಾತೆದಾರರು ಇಪಿಎಫ್ಒ ಹೋಮ್ ಪೇಜ್ಗೆ ಲಾಗ್ ಇನ್ ಆಗಬೇಕು.
2) ಅಲ್ಲಿ “ಕ್ಲಿಕ್ ಹಿಯರ್ ಟು ನೋ ಯುವರ್ ಪಿಎಫ್ ಬಾಲೆನ್ಸ್” (Click here to know your PF balance) ಎಂಬ ಬಟನ್ ಒತ್ತಿ.
3) ಹೀಗೆ ಕ್ಲಿಕ್ ಮಾಡಿದ ಮೇಲೆ ಇಪಿಎಫ್ಒ ಸದಸ್ಯರಿಗೆ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಮಾಹಿತಿಗಳನ್ನು ಭರ್ತಿ ಮಾಡಬೇಕು.
4) ನಿಮ್ಮ ರಾಜ್ಯ, ಇಪಿಎಫ್ ಕಚೇರಿ, ಎಸ್ಟಾಬ್ಲಿಷ್ಮೆಂಟ್ ಕೋಡ್, ಪಿಎಫ್ ಖಾತೆ ಸಂಖ್ಯೆ ಮತ್ತು ಇತರ ಮಾಹಿತಿಗಳನ್ನು ನಮೂದಿಸಬೇಕು.
5) ದೃಢೀಕರಣ (Acknowledgement)ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು I agree ಎಂಬ ಆಯ್ಕೆಯನ್ನು ಒತ್ತಿ/
6) ಸ್ಕ್ರೀನ್ ಮೇಲೆ ನಿಮ್ಮ ಪಿಎಫ್ ಅಥವಾ ಇಪಿಎಫ್ ಬಾಕಿ ಕಾಣಿಸಿಕೊಳ್ಳುತ್ತದೆ.
ಯುಎಎನ್ ಸಂಖ್ಯೆ ಇರುವಾಗ ಪಿಎಫ್ ಬ್ಯಾಲೆನ್ಸ್ ಪರಿಶೀಲನೆ ಹೇಗೆ?
1) ಎಸ್ಸೆಮ್ಮೆಸ್ ಅಥವಾ ಮಿಸ್ಡ್ ಕಾಲ್ ಸೇವೆ ಮೂಲಕವೂ ಇಪಿಎಫ್ಒ ಚಂದಾದಾರರು ಪಿಎಫ್ ಬ್ಯಾಲೆನ್ಸ್ ಪರಿಶೀಲನೆ ಮಾಡಬಹುದು.
2) ಎಸ್ಸೆಮ್ಮೆಸ್ ಮೂಲಕವಾಗಿ ಪಿಎಫ್ ಬ್ಯಾಲೆನ್ಸ್ ಪರಿಶೀಲನೆ ಮಾಡಿಕೊಳ್ಳುವಂತಿದ್ದಲ್ಲಿ ಚಂದಾದಾರರ ನೋಂದಾಯಿತ (ರಿಜಿಸ್ಟರ್ಡ್) ಮೊಬೈಲ್ ಸಂಖ್ಯೆಯಿಂದ 7738299899ಗೆ ಎಸ್ಸೆಮ್ಮೆಸ್ ಕಳಿಸುವ ಮೂಲಕ ತಿಳಿದುಕೊಳ್ಳಬಹುದು.
3) ‘EPFOHO UAN’ ಈ ಫಾರ್ಮ್ಯಾಟ್ನಲ್ಲಿ ಎಸ್ಸೆಮ್ಮೆಸ್ ಇರಬೇಕು. ಇಪಿಎಫ್ಒದಿಂದ ಆ ಎಸ್ಸೆಮ್ಮೆಸ್ಗೆ ಪಿಎಫ್ನಲ್ಲಿ ಎಷ್ಟು ಮೊತ್ತ ಇದೆ ಎಂಬ ಬಗ್ಗೆ ಸಂದೇಶ ಕಳಿಸಿದ ಖಾತೆದಾರರಿಗೆ ಮಾಹಿತಿ ಬರುತ್ತದೆ.
4) ಇಪಿಎಫ್ಒ ಚಂದಾದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ 011-22901406ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಪಿಎಫ್ ಅಥವಾ ಇಪಿಎಫ್ ಬಾಕಿಯನ್ನು ತಿಳಿದುಕೊಳ್ಳಬಹುದು.
ಇದನ್ನೂ ಓದಿ: EPF account: ಇಪಿಎಫ್ ಖಾತೆ ವರ್ಗಾವಣೆ, ವಿಥ್ಡ್ರಾ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಸಂಗತಿಗಳಿವು
(Here is the step by step details to check PF or EPF balance without UAN number by EPFO subscribers)