Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋವಿಡ್ 19 ವಿರುದ್ಧ ನಸಲ್ ಸ್ಪ್ರೇ ತಂದ ಕಂಪೆನಿಯಿಂದ ಭಾರತದ ಯೋಜನೆ ಬಗ್ಗೆ ಮಾಹಿತಿ

ಸ್ಯಾನೊಟೈಜ್​ ಎಂಬ ಕಂಪೆನಿ ಕಂಡುಹಿಡಿದಿರುವ ನಸಲ್ ಸ್ಪ್ರೇ ಕೊರೊನಾ ವಿರುದ್ಧ ಪರಿಣಾಮಕಾರಿ ಎನ್ನಲಾಗುತ್ತಿದೆ. ಆ ಬಗ್ಗೆ ಕಂಪೆನಿಯ ಸಹಸಂಸ್ಥಾಪಕರ ಎಕ್ಸ್​ಕ್ಲೂಸಿವ್ ಸಂದರ್ಶನ ಇಲ್ಲಿದೆ.

ಕೋವಿಡ್ 19 ವಿರುದ್ಧ ನಸಲ್ ಸ್ಪ್ರೇ ತಂದ ಕಂಪೆನಿಯಿಂದ ಭಾರತದ ಯೋಜನೆ ಬಗ್ಗೆ ಮಾಹಿತಿ
ಕ್ರಿಸ್ ಮಿಲ್ಲರ್
Follow us
Srinivas Mata
|

Updated on: Apr 20, 2021 | 7:04 PM

ಭಾರತದಲ್ಲಿ ಕಳೆದ ಕೆಲ ವಾರದಿಂದ ನಿರಂತರವಾಗಿ ಕೊರೊನಾ ಸೋಂಕು ಪ್ರಕರಣಗಳು ಜಾಸ್ತಿ ಆಗುತ್ತಲೇ ಇವೆ. ಲಸಿಕೆ ಹಾಕುವ ಪ್ರಕ್ರಿಯೆ ನಡೆಯುತ್ತಿದ್ದರೂ ಈ ಸಂಖ್ಯೆಯಲ್ಲಿ ಮಾತ್ರ ಹೆಚ್ಚಾಗುತ್ತಲೇ ಹೋಗುತ್ತಿದೆ. ಈ ಮಧ್ಯೆ ಕೆನಡಿಯನ್ ಕಂಪೆನಿಯಾದ SaNotize (ಸ್ಯಾನೋಟೈಜ್)ನಿಂದ ವೈರಾಣುವಿನ ಮೇಲೆ ದಾಳಿ ಮಾಡುವಂಥ ನಸಲ್ ಸ್ಪ್ರೇ ಅಭಿವೃದ್ಧಿ ಮಾಡಲಾಗಿದೆ. ಅಂದರೆ ಇದು ಮೂಗಿನ ಮೂಲಕ ಔಷಧವನ್ನು ಸ್ಪ್ರೇ ಮಾಡುವುದು. ಯುನೈಟೆಡ್ ಕಿಂಗ್​ಡಮ್​ನಲ್ಲಿ ಎರಡನೇ ಹಂತದ ಕ್ಲಿನಿಕ್ ಟ್ರಯಲ್​ನಲ್ಲಿ ಇದು ಭರವಸೆಯ ಫಲಿತಾಂಶವನ್ನು ಸಹ ನೀಡಿದೆ. ಎರಡನೇ ಹಂತದಲ್ಲಿ ಕೆನಡಾ ದೇಶದಲ್ಲಿ ಸುರಕ್ಷತೆ ಮತ್ತು ಪರಿಣಾಮಕಾರಿ ಅಧ್ಯಯನವನ್ನು ಮುಗಿಸಿದೆ. ಐಎನ್​ಡಿಯನ್ನು ಪಡೆದು, ಅಮೆರಿಕದಲ್ಲಿ ಕ್ಲಿನಿಕಲ್ ಟ್ರಯಲ್​ಗೆ ಅವಕಾಶ ಸಿಕ್ಕಿದೆ.

ಮನಿ9 ಜತೆಗೆ ಸ್ಯಾನೊಟೈಜ್​ನ ಮುಖ್ಯ ವಿಜ್ಞಾನ ಅಧಿಕಾರಿ ಹಾಗೂ ಸಹ ಸಂಸ್ಥಾಪಕ ಕ್ರಿಸ್ ಮಿಲ್ಲರ್ ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ಉತ್ಪನ್ನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಭಾರತದಲ್ಲಿ ಕಂಪೆನಿಗಳ ಜತೆಗೆ ಸಹಭಾಗಿತ್ವ ವಹಿಸುವುದು ಮತ್ತು ಕೋವಿಡ್- 19 ವಿರುದ್ಧ ಇದು ಹೇಗೆ ಪರಿಣಾಮಕಾರಿ ಎಂಬುದನ್ನು ವಿವರಿಸಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರಶ್ನೆ: ಕೊರೊನಾ ವೈರಾಣುವಿನ ಪ್ರಭಾವವನ್ನು ಈ ಸ್ಪ್ರೇ ಹೇಗೆ ತಡೆಯುತ್ತದೆ ಎಂಬುದನ್ನು ವಿವರಿಸುತ್ತೀರಾ? ಕ್ರಿಸ್: ಈ ಸ್ಪ್ರೇನಲ್ಲಿ ಇರುವುದರ ಪೈಕಿ ಅತಿ ಮುಖ್ಯವಾದ ಅಂಶ ನೈಟ್ರಿಕ್ ಆಸಿಡ್. ಇದರಲ್ಲಿ ವೈರಾಣುವಿರೋಧಿ ಸ್ವಭಾವ ಇದ್ದು, ಅದಕ್ಕೆ ಇದು ಹೆಸರುವಾಸಿ. ನಮ್ಮ ದೇಹದಲ್ಲಿ ಸಹಜವಾಗಿ ರೋಗನಿರೋಧಕ ಶಕ್ತಿ ಹೆಚ್ಚು ಮಾಡುವುದಕ್ಕೆ ಕಂಡುಬರುತ್ತದೆ. ಕಾಯಿಲೆಗೆ ತಡೆ ಒಡ್ಡುವಂಥ ಔಷಧ ಇದು. ಸ್ಯಾನಿಟೈಜರ್ ರೀತಿಯಲ್ಲಿ ಇರುತ್ತದೆ. ಒಂದು ವೇಳೆ ನಿನ್ನೆಯೋ ಇಂದೋ ನಿಮ್ಮ ದೇಹ ಕಾಯಿಲೆಗೆ ತುತ್ತಾಗುವ ಸನ್ನಿವೇಶಕ್ಕೆ ಎದುರಾಗಿತ್ತು ಅಂದುಕೊಳ್ಳಿ. NONS ಸ್ಪ್ರೇ ಬಳಸುವುದರಿಂದ ಕಾಯಿಲೆ ತಡೆಯಬಹುದು. ಮೂಗಿನಲ್ಲಿ ವೈರಾಣುಗಳನ್ನು ಈ ಸ್ಪ್ರೇ ಕೊಲ್ಲುತ್ತದೆ. ಪೂರ್ಣ ಪ್ರಮಾಣದಲ್ಲಿ ವೈರಾಣು ಹಬ್ಬುವ ಮೊದಲು ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗುವುಯದೇ ಮೂಗಿನಲ್ಲಿ. ಈ ಹಂತದಲ್ಲಿ ವೈರಾಣು ನಿಯಂತ್ರಿಸಿದರೆ (ನಮ್ಮ ಯು.ಕೆ. ಅಧ್ಯಯನದಲ್ಲಿ ಯು.ಕೆ. ರೂಪಾಂತರಿ ವಿರುದ್ಧವೂ ಇದು ಕಂಡಿದೆ) ಕಾಯಿಲೆ ನಿಯಂತ್ರಣ ಮಾಡುತ್ತೀರಿ.

ಪ್ರಶ್ನೆ: ಯು.ಕೆ. ಮತ್ತು ಕೆನಡಾದಲ್ಲಿ ತುರ್ತು ಬಳಕೆಗಾಗಿ ಸ್ಯಾನೋಟೈಜ್ ಮನವಿ ಮಾಡಿದೆಯಾ? ಕ್ರಿಸ್:  ಅವರ ಜತೆಗೆ ನಡೆಸಿದ ಭೇಟಿ ಆಧಾರದಲ್ಲಿ ನೀಡಿದ ಸಲಹೆಗಳನ್ನು ಇಟ್ಟುಕೊಂಡು ನಾವು ಮನವಿ ಸಿದ್ಧಪಡಿಸುತ್ತಿದ್ದೇವೆ.

ಪ್ರಶ್ನೆ: ಯಾವ ವಯಸ್ಸಿನವರು ಈ ಹಿಂದಿನ ಕ್ಲಿನಿಕಲ್ ಟ್ರಯಲ್​ಗಳಲ್ಲಿ ಭಾಗಿ ಆಗಿದ್ದರು? ಕ್ರಿಸ್: ವಯಸ್ಕರರು, ಅದರಲ್ಲೂ 50ರಿಂದ 70ರ ವಯೋಮಾನದವರು.

ಪ್ರಶ್ನೆ: ಅನುಮತಿಗೆ ಯಾವ ದೇಶಗಳ ಜತೆಗೆ ಮಾತುಕತೆ ನಡೆಸಿದ್ದೀರಿ? ಯಾವುದಾದರೂ ದೇಶಕ್ಕೆ ಪೂರೈಕೆ ಶುರು ಮಾಡಿದ್ದೀರಾ? ಕ್ರಿಸ್: ಇಸ್ರೇಲ್, ಬಹರೇನ್​ನಿಂದ ಅನುಮತಿ ಸಿಕ್ಕಿದೆ. ಇತರ ಹಲವು ದೇಶಗಳ ಜತೆ ಮಾತುಕತೆ ನಡೆಯುತ್ತಿದೆ.

ಪ್ರಶ್ನೆ: ಈ ಸ್ಪ್ರೇಗೆ ಎಷ್ಟು ದರ ಇಡಬೇಕು ಅಂದುಕೊಂಡಿದ್ದೀರಾ? ಕ್ರಿಸ್: ಎಲ್ಲ ನಾಗರಿಕರಿಗೂ ಕೈಗೆಟುಕುವ ದರದಲ್ಲಿ ಬೆಲೆಯನ್ನು ನಿಗದಿ ಮಾಡಬೇಕು ಎಂದು ಎಲ್ಲ ಭಾಗೀದಾರರ ಜತೆಗೂ ಚರ್ಚೆ ಮಾಡ್ತಿದ್ದೀವಿ.

ಪ್ರಶ್ನೆ: ಭಾರತ ದೊಡ್ಡ ಮಾರ್ಕೆಟ್ ಮತ್ತು ಕೋವಿಡ್- 19 ಪ್ರಕರಣಗಳು ಇಲ್ಲಿ ಹಿಂದೆಂದಿಗಿಂತ ಹೆಚ್ಚಾಗಿದೆ. ಭಾರತದ ಮಾರ್ಕೆಟ್​ಗೆ ನಿಮ್ಮದು ನಿರ್ದಿಷ್ಟವಾದ ಯೋಜನೆ ಇದೆಯಾ? ಕ್ರಿಸ್: ನಮಗೆ ಭಾರತದ ಹೆಸರಾಂತ ಫಾರ್ಮಾಸ್ಯುಟಿಕಲ್ ಕಂಪೆನಿ ಜತೆಗೆ ಸಹಭಾಗಿತ್ವ ಬೇಕು. ಅಂಥ ಹಲವು ಕಂಪೆನಿಗಳ ಜತೆಗೆ ಮಾತುಕತೆ ನಡೆಸಿದ್ದೀವಿ.

ಪ್ರಶ್ನೆ: ಭಾರತದ ಕಂಪೆನಿಗಳಲ್ಲಿ ನೀವು ಎದುರು ನೋಡುತ್ತಿರುವ ಅರ್ಹತೆ ಅಥವಾ ಅಗತ್ಯಗಳೇನು? ಕ್ರಿಸ್: ಆ ಕಂಪೆನಿಗೆ ಉತ್ತಮ ಹೆಸರಿರಬೇಕು. ಎಲ್ಲರಿಗೂ ತಲುಪಿಸಬಲ್ಲಂಥ ವಿತರಣೆಯ ಜಾಲ ಇರಬೇಕು. ಅದರಲ್ಲೂ ಯಾರಿಗೆ ಲಸಿಕೆ ಸಿಗುವುದು ಕಷ್ಟ ಇದೆಯೋ ಅಂಥವರಿಗೆ ದೊರಕಿಸುವುದಕ್ಕೆ ಆಗಬೇಕು.

ಪ್ರಶ್ನೆ: ಸದ್ಯಕ್ಕೆ ಉತ್ಪಾದನೆ ಸಾಮರ್ಥ್ಯ ಮತ್ತು ವಿಸ್ತರಣೆ ಯೋಜನೆಗಳೇನು? ಕ್ರಿಸ್: ನಮ್ಮ ಉತ್ಪಾದನೆ ಸಂಪೂರ್ಣ ಸಿದ್ಧವಾಗಿದೆ ಮತ್ತು ನಾಲ್ಕು ಆರ್ಡರ್​ನಲ್ಲಿದೆ. ವಿಸ್ತರಣೆಗೆ ಸಹಾಯ ಮಾಡಬಲ್ಲಂಥ ಸಹಭಾಗಿಗಾಗಿ ಭಾರತದಲ್ಲಿ ಎದುರು ನೋಡ್ತಿದ್ದೀವಿ.

(ಸಂದರ್ಶನ: ಮನಿ9.ಕಾಮ್ ಸಂದರ್ಶಕರು: ಖುಷ್ಬೂ ತಿವಾರಿ)

ಇದನ್ನೂ ಓದಿ: ಗೂಗಲ್ ಮ್ಯಾಪ್ಸ್, ಗೂಗಲ್ ಸರ್ಚ್​ನಲ್ಲಿ ಕೋವಿಡ್- 19 ಲಸಿಕೆ ಕೇಂದ್ರಗಳ ಬಗ್ಗೆ ಸಂಪೂರ್ಣ ಮಾಹಿತಿ

(SanoTize company, which developed nasal spray for covid, that company co founder Chris Miller exclusive interview here)

ಗುಜರಾತ್ ಟೈಟನ್ಸ್ ಪರ ದಾಖಲೆ ಬರೆದ ಶುಭ್​ಮನ್ ಗಿಲ್
ಗುಜರಾತ್ ಟೈಟನ್ಸ್ ಪರ ದಾಖಲೆ ಬರೆದ ಶುಭ್​ಮನ್ ಗಿಲ್
ಜೆಡಿಎಸ್​ ಮುಖಂಡರ ಕೈಗಳಲ್ಲಿ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಪ್ಲಕಾರ್ಡ್​​
ಜೆಡಿಎಸ್​ ಮುಖಂಡರ ಕೈಗಳಲ್ಲಿ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಪ್ಲಕಾರ್ಡ್​​
ಹನುಮ ಜಯಂತಿ: ಹನುಮಾನ್ ತೇರು ಎಳೆದ ಪ್ರಲ್ಹಾದ್ ಜೋಶಿ
ಹನುಮ ಜಯಂತಿ: ಹನುಮಾನ್ ತೇರು ಎಳೆದ ಪ್ರಲ್ಹಾದ್ ಜೋಶಿ
ಬ್ರಹ್ಮಾಂಡ ಗುರೂಜಿ ಭಯಾನಕ ಭವಿಷ್ಯ: ರೋಗ ರುಜಿನ ಹೆಚ್ಚಾಗೋ ಸಾಧ್ಯತೆ, ಎಚ್ಚರ
ಬ್ರಹ್ಮಾಂಡ ಗುರೂಜಿ ಭಯಾನಕ ಭವಿಷ್ಯ: ರೋಗ ರುಜಿನ ಹೆಚ್ಚಾಗೋ ಸಾಧ್ಯತೆ, ಎಚ್ಚರ
ಎಕ್ಸ್​ಪೋ ಉದ್ಘಾಟಿಸಿದ ಕಲಬುರಗಿ ಪೊಲೀಸ್ ಆಯುಕ್ತ ಡಾ ಶರಣಪ್ಪ ಎಸ್​ಡಿ
ಎಕ್ಸ್​ಪೋ ಉದ್ಘಾಟಿಸಿದ ಕಲಬುರಗಿ ಪೊಲೀಸ್ ಆಯುಕ್ತ ಡಾ ಶರಣಪ್ಪ ಎಸ್​ಡಿ
ವಕ್ಫ್ ಪ್ರತಿಭಟನೆ;ಬಂಗಾಳದ ಮುರ್ಷಿದಾಬಾದ್‌ನಲ್ಲಿ 110ಕ್ಕೂ ಹೆಚ್ಚು ಜನರ ಬಂಧನ
ವಕ್ಫ್ ಪ್ರತಿಭಟನೆ;ಬಂಗಾಳದ ಮುರ್ಷಿದಾಬಾದ್‌ನಲ್ಲಿ 110ಕ್ಕೂ ಹೆಚ್ಚು ಜನರ ಬಂಧನ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ನಟ ಶಿವರಾಜ್ ಕುಮಾರ್
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ನಟ ಶಿವರಾಜ್ ಕುಮಾರ್
ಕಂದಾಯ ಸಚಿವ ಮೆಟ್ರೋ ರೈಲಲ್ಲೂ ಒಬ್ಬಂಟಿಯಾಗಿ ಓಡಾಡುತ್ತಿರುತ್ತಾರೆ
ಕಂದಾಯ ಸಚಿವ ಮೆಟ್ರೋ ರೈಲಲ್ಲೂ ಒಬ್ಬಂಟಿಯಾಗಿ ಓಡಾಡುತ್ತಿರುತ್ತಾರೆ
ಕರ್ನಾಟಕವೀಗ ಪ್ರತಿಭಟನೆಗಳ ರಾಜ್ಯ, ಎಲ್ಲ ಮೂರು ಪಕ್ಷಗಳಿಂದ ಪ್ರತಿಭಟನೆ!
ಕರ್ನಾಟಕವೀಗ ಪ್ರತಿಭಟನೆಗಳ ರಾಜ್ಯ, ಎಲ್ಲ ಮೂರು ಪಕ್ಷಗಳಿಂದ ಪ್ರತಿಭಟನೆ!
ಅಪ್ಪಾಜಿಯವರ ಅಭಿಮಾನಿಗಳಲ್ಲೇ ನಾವು ಅಪ್ಪ-ಅಮ್ಮನನ್ನು ಕಾಣುತ್ತೇವೆ: ಲಕ್ಷ್ಮಿ
ಅಪ್ಪಾಜಿಯವರ ಅಭಿಮಾನಿಗಳಲ್ಲೇ ನಾವು ಅಪ್ಪ-ಅಮ್ಮನನ್ನು ಕಾಣುತ್ತೇವೆ: ಲಕ್ಷ್ಮಿ