Raj Kundra: ಶಿಲ್ಪಾ ಶೆಟ್ಟಿ ಗಂಡ ರಾಜ್ ಕುಂದ್ರಾ ವಿರುದ್ಧ ಪಿಎಂಎಲ್​ಎ, ಫೆಮಾ ಅಡಿ ಪ್ರಕರಣ ಸಾಧ್ಯತೆ

| Updated By: Srinivas Mata

Updated on: Jul 24, 2021 | 10:21 PM

ನಟಿ ಶಿಲ್ಪಾ ಶೆಟ್ಟಿ ಗಂಡ ರಾಜ್ ಕುಂದ್ರಾ ವಿರುದ್ಧ ಅಶ್ಲೀಲ ಚಿತ್ರಗಳ ತಯಾರಿಕೆ ಮತ್ತು ವಿತರಣೆಯ ಆರೋಪ ಬಂದಿದೆ. ಇದೀಗ ಜಾರಿ ನಿರ್ದೇಶನಾಲಯವು ಕುಂದ್ರಾ ವಿರುದ್ಧ ಫೆಮಾ ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ವಿಚಾರಣೆ ಮಾಡುವ ಸಾಧ್ಯತೆ ಇದೆ.

Raj Kundra: ಶಿಲ್ಪಾ ಶೆಟ್ಟಿ ಗಂಡ ರಾಜ್ ಕುಂದ್ರಾ ವಿರುದ್ಧ ಪಿಎಂಎಲ್​ಎ, ಫೆಮಾ ಅಡಿ ಪ್ರಕರಣ ಸಾಧ್ಯತೆ
ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ (ಸಂಗ್ರಹ ಚಿತ್ರ)
Follow us on

ನಟಿ ಶಿಲ್ಪಾ ಶೆಟ್ಟಿ ಗಂಡ ಹಾಗೂ ಉದ್ಯಮಿಯಾದ ರಾಜ್​ ಕುಂದ್ರಾ ವಿರುದ್ಧ ಸದ್ಯದಲ್ಲೇ ಅಕ್ರಮ ಹಣ ವರ್ಗಾವಣೆ ಮತ್ತು ಫಾರಿನ್ ಎಕ್ಸ್​ಚೇಂಜ್ ಮ್ಯಾನೇಜ್​ಮೆಂಟ್ ಆ್ಯಕ್ಟ್ (FEMA) ಅಡಿಯಲ್ಲಿ ಪ್ರಕರಣ ಎದುರಿಸುವ ಸಾಧ್ಯತೆ ಇದೆ. ಈ ಕಾಯ್ದೆ ಅಡಿ ಜಾರಿ ನಿರ್ದೇಶನಾಲಯದಿಂದ ಪ್ರಕರಣ ದಾಖಲಾಗಬಹುದು. ಮೂಲಗಳು ಹೇಳುವಂತೆ, ರಾಜ್ ಕುಂದ್ರಾ ವಿರುದ್ಧ ಕೇಳಿಬಂದಿರುವ ಆರೋಪದಲ್ಲಿ ಒಳಗೊಂಡಿರುವ ಹಣಕಾಸು ವಿಷಯಗಳಿಗೆ ಸಂಬಂಧಿಸಿದಂತೆ ತನಿಖೆ ಮಾಡಲಿದೆ. ಆದ್ದರಿಂದ ಅಕ್ರಮ ಹಣಕಾಸು ವರ್ಗಾವಣೆ ತಡೆ ಕಾಯ್ದೆ (PMLA) ಮತ್ತು FEMA ಅಡಿಯಲ್ಲಿ ಜುಲೈ 26ರ ನಂತರ ಈ ತಿಂಗಳ ಒಳಗೆ ಯಾವಾಗಲಾದರೂ ಪ್ರಕರಣ ದಾಖಲಾಗಬಹುದು. ವಿದೇಶೀ ವಿನಿಮಯದಲ್ಲಿಇ ಆಗಿರುವ ನಿಯಮ ಉಲ್ಲಂಘನೆ, ಹಣಕಾಸು ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಪ್ರೋಟೊಕಾಲ್​ ಅನುಸರಿಸಿ, ಮುಂಬೈ ಪೊಲೀಸರು ಜಾರಿ ನಿರ್ದೇಶನಾಲಯಕ್ಕೆ ತನಿಖೆ ಕೈಗೊಳ್ಳುವಂತೆ ಮಾಹಿತಿ ನೀಡಲಿದ್ದಾರೆ.

ಪ್ರಕರಣ ದಾಖಲಾದ ಮೇಲೆ, ತನಿಖೆ ಆರಂಭಿಸುವ ಮುಂಚೆ ಜಾರಿ ನಿರ್ದೇಶನಾಲಯದಿಂದ ಪ್ರಥಮ ಮಾಹಿತಿ ವರದಿ (FIR) ನಕಲುಪ್ರತಿಯನ್ನು ಮುಂಬೈ ಪೊಲೀಸರಿಂದ ಪಡೆದುಕೊಳ್ಳುತ್ತದೆ. ಜಾರಿ ನಿರ್ದೇಶನಾಲಯದ ಮುಂಬೈ ಕಚೇರಿಯಲ್ಲಿ ರಾಜ್ ಕುಂದ್ರಾ ವಿಚಾರಣೆ ಆರಂಭಿಸುವ ಮುಂಚೆ ಸಮನ್ ನೀಡಬಹುದು. 45 ವರ್ಷದ ರಾಜ್ ಕುಂದ್ರಾ ಮತ್ತು ಇತರ 11 ಮಂದಿಯನ್ನು ಮುಂಬೈ ಪೊಲೀಸರು ಜುಲೈ 19ರಂದು ಬಂಧಿಸಿದ್ದರು. ಅಶ್ಲೀಲ ಸಿನಿಮಾಗಳ ನಿರ್ಮಾಣದ ಆರೋಪ ಅವರ ಮೇಲೆ ಮಾಡಲಾಗಿದೆ. ಆ ನಂತರ ಜುಲೈ 23ರ ತನಕ ಪೊಲೀಸ್ ವಶಕ್ಕೆ ನೀಡಲಾಗಿತ್ತು. ಸದ್ಯಕ್ಕೆ, ಅಶ್ಲೀಲ ಸಿನಿಮಾಗಳ ನಿರ್ಮಾಣ, ಅವುಗಳನ್ನು ಕೆಲವು ಅಪ್ಲಿಕೇಷನ್​ ಮೂಲಕ ಪಬ್ಲಿಷ್ ಮಾಡಿದ ಆರೋಪ ಇದೆ.

ಈ ಅಪ್ಲಿಕೇಷನ್​ಗಳ ಚಂದಾದಾರಿಕೆ ನೀಡುವ ಮೂಲಕ, ಕಾನೂನು ಬಾಹಿರವಾಗಿ ರಾಜ್​ ಕುಂದ್ರಾ ಹಣ ಮಾಡಿರುವುದಾಗಿ ಮುಂಬೈ ಪೊಲೀಸ್ ಕ್ರೈಮ್ ಬ್ರ್ಯಾಂಚ್​ನವರು ಕೋರ್ಟ್​ ಮುಂದೆ ಹೇಳಿದ್ದಾರೆ. ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಅಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಿದೆ. ಮುಂಬೈ ಪೊಲೀಸರು ರಾಜ್ ಕುಂದ್ರಾ ವಿರುದ್ಧ ಮಾಡಿರುವ ಆ್ಯಪ್​ ಹಣಕಾಸು ವ್ಯವಹಾರಗಳು, ವಾಟ್ಸಾಪ್ ಚಾಟ್​ಗಳ ಆರೋಪಗಳ ಬಗ್ಗೆ ತನ್ನ ತನಿಖೆಯಲ್ಲಿ ಜಾರಿ ನಿರ್ದೇಶನಾಲಯವು ವಿಚಾರಣೆ ನಡೆಸಲಿದೆ. ಕುಂದ್ರಾರ ಕಂಪೆನಿಯಾದ ವಿಯಾನ್ ಇಂಡಸ್ಟ್ರೀಸ್​ನ ನಿರ್ದೇಶಕರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ವೇಳೆ ಪ್ರಶ್ನೆ ಮಾಡಬಹುದು.

ಶಿಲ್ಪಾ ಶೆಟ್ಟಿ ವಿಚಾರಣೆಯನ್ನು ತಳ್ಳಿ ಹಾಕುವಂತಿಲ್ಲ. ಕಳೆದ ವರ್ಷದ ತನಕ ಕುಂದ್ರಾ ಸಂಸ್ಥೆಯಲ್ಲಿ ಶಿಲ್ಪಾ ನಿರ್ದೇಶಕಿ ಆಗಿದ್ದರು. ಆದರೂ ಈ ಅಶ್ಲೀಲ ಚಿತ್ರಗಳ ಜಾಲದಲ್ಲಿ ಶಿಲ್ಪಾ ಶೆಟ್ಟಿಗೆ ಮುಂಬೈ ಪೊಲೀಸರು ಕ್ಲೀನ್ ಚಿಟ್ ಕೊಟ್ಟಿದೆ. ಅಂದಹಾಗೆ ಮುಂಬೈ ಪೊಲೀಸರು ರಾಜ್ ಕುಂದ್ರಾ ವಿರುದ್ಧ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: Raj Kundra: ದೇಶದ ಜನರನ್ನು ಕಷ್ಟಕ್ಕೆ ತಳ್ಳಿದ್ದ ಲಾಕ್​ಡೌನ್​ನಲ್ಲೇ ನೀಲಿ ಚಿತ್ರಗಳಿಂದ ಭರ್ಜರಿ ಲಾಭ ಎತ್ತಿದ್ದ ರಾಜ್ ಕುಂದ್ರಾ!