
ಹೆಚ್ಚಿನ ಜನರಿಗೆ ಗೊತ್ತಿಲ್ಲದ ಸಂಗತಿ ಇದು. ಇಪಿಎಫ್ (EPF) ಅಥವಾ ನೌಕರರ ಭವಿಷ್ಯ ನಿಧಿ ಖಾತೆ ಹೊಂದಿರುವವರಿಗೆ ಯಾವುದೇ ಹೆಚ್ಚುವರಿ ಪ್ರೀಮಿಯಂ ಇಲ್ಲದೆ ₹7 ಲಕ್ಷದವರೆಗೆ ಉಚಿತ ಜೀವ ವಿಮೆ (Life Insurance) ಸೌಲಭ್ಯ ಸಿಗುತ್ತದೆ. ಇದನ್ನು ‘ಇಡಿಎಲ್‌ಐ’ (Employees’ Deposit Linked Insurance Scheme – EDLI) ಯೋಜನೆ ಎಂದು ಕರೆಯಲಾಗುತ್ತದೆ. ಇಪಿಎಫ್ ಖಾತೆ ಹೊಂದಿರುವ ಪ್ರತಿಯೊಬ್ಬ ಉದ್ಯೋಗಿಗೂ ಈ ವಿಮಾ ರಕ್ಷಣೆ ಸ್ವಯಂಚಾಲಿತವಾಗಿ ಅನ್ವಯಿಸುತ್ತದೆ. ಈ ವಿಮಾ ಸೌಲಭ್ಯದ ಬಗ್ಗೆ ಇಪಿಎಫ್ ಖಾತೆದಾರರಲ್ಲೇ ಹೆಚ್ಚಿನ ಮಂದಿಗೆ ತಿಳಿದಿಲ್ಲ. ಕೆಲಸ ಮಾಡುವ ಸಂಸ್ಥೆಗಳೂ ಕೂಡ ಉದ್ಯೋಗಿಗಳಿಗೆ ಈ ವಿಮೆಯ ಬಗ್ಗೆ ಮಾಹಿತಿ ನೀಡುವ ಗೋಜಿಗೆ ಹೋಗುವುದಿಲ್ಲ.
ಇಪಿಎಫ್ ಖಾತೆದಾರರಿಗೆ ಸಿಗುವ ಈ ವಿಮೆಗಾಗಿ ಉದ್ಯೋಗಿ ಯಾವುದೇ ಪ್ರೀಮಿಯಂ ಪಾವತಿಸಬೇಕಾಗಿಲ್ಲ ಅಥವಾ ಪ್ರತ್ಯೇಕವಾಗಿ ನೋಂದಣಿ ಮಾಡಿಕೊಳ್ಳಬೇಕಾಗಿಲ್ಲ. ಕಂಪನಿಯು (Employer) ನಿಮ್ಮ ಇಪಿಎಫ್ ಖಾತೆಗೆ ಕೊಡುಗೆ ನೀಡುವಾಗ, ಅದರ ಜೊತೆಗೆ ಉದ್ಯೋಗಿಯ ಮೂಲ ವೇತನದ ಶೇ. 0.5 ರಷ್ಟು (ಗರಿಷ್ಠ ₹75) ಹಣವನ್ನು ಈ ಇಡಿಎಲ್‌ಐ ಯೋಜನೆಗೆ ಜಮಾ ಮಾಡುತ್ತದೆ.
ಇಪಿಎಫ್ ಸದಸ್ಯರಿಗೆ ಏಳು ಲಕ್ಷ ರೂವರೆಗೆ ಜೀವ ವಿಮಾ ಕವರೇಜ್ ಇರುತ್ತದೆ. ಆದರೆ, ಕನಿಷ್ಠ 12 ತಿಂಗಳು ಅವರ ಇಪಿಎಫ್ ಅಕೌಂಟ್ ಸಕ್ರಿಯವಾಗಿರಬೇಕು. ಖಾತೆದಾರರು ಮೃತಪಟ್ಟಾಗ ಅವರ ಇಪಿಎಫ್ ಅಕೌಂಟ್ ಚಾಲ್ತಿಯಲ್ಲಿರಬೇಕು. ಯಾವುದೇ ಇಪಿಎಫ್ ಸದಸ್ಯರು ಉದ್ಯೋಗದಲ್ಲಿರುವಾಗ (In service) ಮರಣ ಹೊಂದಿದರೆ ಮಾತ್ರ ವಿಮಾ ರಕ್ಷಣೆ ಸಿಗುವುದು. ಅವರ ನಾಮಿನಿ (Nominee) ಅಥವಾ ಕಾನೂನುಬದ್ಧ ವಾರಸುದಾರರು ಈ ವಿಮಾ ಹಣವನ್ನು ಕ್ಲೈಮ್ ಮಾಡಬಹುದು.
ಇದನ್ನೂ ಓದಿ: ಆಂಥ್ರೊಪಿಕ್-ಟಿಸಿಎಸ್ ಎಐ ಡೀಲ್; 50,000 ಉದ್ಯೋಗಿಗಳಿಗೆ ಸಿಗಲಿದೆ ಕ್ಲಾಡ್ ತರಬೇತಿ
ಕಳೆದ 12 ತಿಂಗಳ ಸರಾಸರಿ ವೇತನ ಮತ್ತು ಪಿಎಫ್ ಬ್ಯಾಲೆನ್ಸ್ ಆಧಾರದ ಮೇಲೆ ಇದನ್ನು ಲೆಕ್ಕ ಹಾಕಲಾಗುತ್ತದೆ. ಉದ್ಯೋಗಿಯ ಮೂಲ ವೇತನ (Basic Salary) ಕಳೆದ 12 ತಿಂಗಳುಗಳಿಂದ ₹15,000 ಕ್ಕಿಂತ ಹೆಚ್ಚಾಗಿದ್ದು, ಅವರ ಒಟ್ಟು ಇಪಿಎಫ್ ಬ್ಯಾಲೆನ್ಸ್ ಸರಾಸರಿ ₹3.5 ಲಕ್ಷಕ್ಕಿಂತ ಹೆಚ್ಚಿದ್ದರೆ ಗರಿಷ್ಠ ₹7 ಲಕ್ಷ ಪೂರ್ಣ ಮೊತ್ತ ಸಿಗುತ್ತದೆ.
ಇದಕ್ಕೆ ಎರಡು ಅಂಶಗಳಿವೆ. ಕಳೆದ 12 ತಿಂಗಳ ಸರಾಸರಿ ಮಾಸಿಕ ವೇತನದ (ಗರಿಷ್ಠ ₹15,000) 35 ಪಟ್ಟು ಹಣ ಸಿಗುತ್ತದೆ. ಅಂದರೆ, ₹5.25 ಲಕ್ಷದವರೆಗೆ ಸಿಗಬಹುದು. ಎರಡನೇ ಅಂಶವು ಬೋನಸ್. ಇದು ಕಳೆದ 12 ತಿಂಗಳ ಸರಾಸರಿ ಪಿಎಫ್ ಬ್ಯಾಲನ್ಸ್ನ ಶೇ. 50ರಷ್ಟು ಎಂದಿದೆ. ಇದನ್ನು ₹1.75 ಲಕ್ಷಕ್ಕೆ ಮಿತಿಗೊಳಿಸಲಾಗಿರುತ್ತದೆ. ಅಂದರೆ, 12 ತಿಂಗಳಲ್ಲಿ ಸರಾಸರಿ ಪಿಎಫ್ ಬ್ಯಾಲನ್ಸ್ 3.5 ಲಕ್ಷ ರೂ ಇದ್ದಾಗ ಪೂರ್ಣ 7 ಲಕ್ಷ ರೂ ವಿಮಾ ಕವರೇಜ್ ಸಿಗುತ್ತದೆ.
ಕಳೆದ ವರ್ಷ (2025) ಮಾಡಿದ ತಿದ್ದುಪಡಿಯ ಬಳಿಕ ಕನಿಷ್ಠ ಇಡಿಎಲ್‌ಐ ಬೆನಿಫಿಟ್ ₹2.5 ಲಕ್ಷ ಇದೆ. ಒಂದು ವೇಳೆ, ಉದ್ಯೋಗಿಯ ಪಿಎಫ್ ಬ್ಯಾಲೆನ್ಸ್ ₹50,000 ಕ್ಕಿಂತ ಕಡಿಮೆ ಇದ್ದರೂ ಕನಿಷ್ಠ ₹50,000 ಸಿಗುವ ಭರವಸೆ ಇರುತ್ತದೆ.
ದುರದೃಷ್ಟವಶಾತ್ ಇಪಿಎಫ್ ಸದಸ್ಯರು ಮರಣ ಹೊಂದಿದರೆ, ಅವರ ಕುಟುಂಬದವರು ಈ ಕೆಳಗಿನ ಹಂತಗಳ ಮೂಲಕ ಹಣವನ್ನು ಪಡೆಯಬಹುದು:
ಇದನ್ನೂ ಓದಿ: ಭಾರತ ವಿಭಾಗದ ಬಾಗಿಲು ಮುಚ್ಚಿದ ಅಮೆರಿಕದ ಓಪನ್ಡೋರ್; ಕಂಪನಿಯ ಎಲ್ಲಾ 250 ಭಾರತೀಯ ಉದ್ಯೋಗಿಗಳಿಗೆ ಗೇಟ್ಪಾಸ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ