EPFO Higher Pension: ಅಧಿಕ ಪಿಂಚಣಿ ಸೌಲಭ್ಯ ಬಯಸುವ ಉದ್ಯೋಗಿಗಳ ವೇತನ ವಿವರ ಸಲ್ಲಿಸಲು ಗಡುವು ಮೇ 31ರವರೆಗೆ ವಿಸ್ತರಣೆ
ಅಧಿಕ ಪಿಂಚಣಿ ಬಯಸುವ ಉದ್ಯೋಗಿಗಳ ವೇತನ ವಿವರ ಸಲ್ಲಿಸಲು ಸಂಸ್ಥೆಗಳಿಗೆ 2024ರ ಮೇ 31ರವರೆಗೂ ಕಾಲಾವಕಾಶ ಹೆಚ್ಚಿಸಲಾಗಿದೆ. 2014ರ ಸೆಪ್ಟೆಂಬರ್ 1ಕ್ಕೆ ಮುಂಚೆ ಇಪಿಎಸ್ ಸದಸ್ಯರಾಗಿರುವ ಉದ್ಯೋಗಿಗಳು ಹೆಚ್ಚುವರಿ ಪಿಂಚಣಿ ಸೌಲಭ್ಯಕ್ಕೆ ಅರ್ಹರಿರುತ್ತಾರೆ. ಅರ್ಹ ಉದ್ಯೋಗಿಗಳು ತಮಗೆ ಹೆಚ್ಚುವರಿ ಪಿಂಚಣಿ ಬೇಕೆಂದರೆ ತಾವು ಕೆಲಸ ಮಾಡುವ ಸಂಸ್ಥೆಗಳಲ್ಲಿ ಅರ್ಜಿ ಸಲ್ಲಿಸಬೇಕು. ಇಂಥ ಉದ್ಯೋಗಿಗಳ ವೇತನ ವಿವರವನ್ನು ಸಂಸ್ಥೆಗಳು ಇಪಿಎಫ್ಒ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕು.
ನವದೆಹಲಿ, ಜನವರಿ 4: ಅಧಿಕ ಪಿಂಚಣಿ ಬಯಸುವ ಇಪಿಎಫ್ ಖಾತೆದಾರರ (epf members) ವೇತನ ವಿವರವನ್ನು ಅವರು ಕೆಲಸ ಮಾಡುವ ಸಂಸ್ಥೆಗಳು ಇಪಿಎಫ್ಒದ ಡಾಟಾಬೇಸ್ಗೆ ಅಪ್ಲೋಡ್ ಮಾಡಬೇಕು. ಅದಕ್ಕೆ ಡಿಸೆಂಬರ್ 31ಕ್ಕೆ ಡೆಡ್ಲೈನ್ ಇತ್ತು. ಈಗ ಈ ಗಡುವನ್ನು 2024ರ ಮೇ 31ರವರೆಗೂ ವಿಸ್ತರಿಸಲಾಗಿದೆ. ಅಂದರೆ, ಉದ್ಯೋಗಿಗಳ ವೇತನ ವಿವರವನ್ನು ಇಪಿಎಫ್ಒಗೆ ಸಲ್ಲಿಸಲು ಇನ್ನೂ ಐದು ತಿಂಗಳು ಕಾಲಾವಕಾಶ ಇದೆ.
ಅಧಿಕ ಪಿಂಚಣಿಗೆ ಯಾವ ಉದ್ಯೋಗಿಗಳು ಅರ್ಹರು?
ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಉದ್ಯೋಗಿಗಳಿಗೂ ಅವಕಾಶ ಇಲ್ಲ. 2014ರ ಸೆಪ್ಟೆಂಬರ್ 1ಕ್ಕೆ ಮುಂಚಿನಿಂದ ಎಂಪ್ಲಾಯೀ ಪೆನ್ಷನ್ ಸ್ಕೀಮ್ನ (ಇಪಿಎಸ್) ಸದಸ್ಯರಾಗಿರುವ ಉದ್ಯೋಗಿಗಳು ಹೆಚ್ಚುವರಿ ಪಿಂಚಣಿಗೆ ಅರ್ಹರಿದ್ದಾರೆ. ವೇತನದಲ್ಲಿ ಇಪಿಎಸ್ ಖಾತೆಗೆ ಜಮೆ ಆಗುವ ಮೊತ್ತಕ್ಕೆ ಮಿತಿ ಇದೆ. ಹೆಚ್ಚುವರಿ ಪಿಂಚಣಿ ಸೌಲಭ್ಯ ಆಯ್ಕೆ ಮಾಡಿಕೊಂಡರೆ ಸಂಬಳದ ಹೆಚ್ಚು ಭಾಗವನ್ನು ಇಪಿಎಸ್ಗೆ ವರ್ಗಾವಣೆ ಮಾಡಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: Flight Tickets: ಫುಯಲ್ ಚಾರ್ಜ್ ಹಿಂಪಡೆದ ಇಂಡಿಗೋ ಏರ್ಲೈನ್; ಇಳಿಕೆಯಾಗಲಿದೆ ವಿಮಾನ ಟಿಕೆಟ್ ಬೆಲೆ
ಸುಪ್ರೀಂ ಕೋರ್ಟ್ ನವೆಂಬರ್ 4ರಂದು ಈ ಸಂಬಂಧ ಆದೇಶ ಹೊರಡಿಸಿತ್ತು. ಹೆಚ್ಚುವರಿ ಪಿಂಚಣಿ ಬಯಸುವ ಅರ್ಹ ಉದ್ಯೋಗಿಗಳು ತಮ್ಮ ಸಂಸ್ಥೆಗಳ ಬಳಿ ಅರ್ಜಿ ಸಲ್ಲಿಸಬೇಕಿತ್ತು. 2023ರ ಜುಲೈ 11ರವರೆಗೆ 17 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಂದ ಅರ್ಜಿ ಸಲ್ಲಿಕೆ ಆಗಿತ್ತು. ಆದರೆ, ಸಂಸ್ಥೆಗಳಿಂದ ಈ ಅರ್ಜಿಗಳ ವಿಲೇವಾರಿ ಇನ್ನೂ ಸಾಕಷ್ಟು ಬಾಕಿ ಇದ್ದರಿಂದ ಮೇ 3ರಂದು ಇದ್ದ ಡೆಡ್ಲೈನ್ ಅನ್ನು ಹಲವು ಬಾರಿ ವಿಸ್ತರಣೆ ಮಾಡುತ್ತಾ ಬರಲಾಗಿದೆ. ಇದೀಗ 2024ರ ಮೇ 31ರವರೆಗೆ ಗಡುವು ಕೊಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ