EPFO Website Down: ಇಪಿಎಫ್ ಸರ್ವರ್ ಡೌನ್; ಇ-ಪಾಸ್ಬುಕ್ ಸೌಲಭ್ಯಕ್ಕೆ ಅಡಚಣೆ
ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಇಪಿಎಫ್ಒ ವೆಬ್ಸೈಟ್ ಸರ್ವರ್ ಡೌನ್ ಆಗಿದ್ದು, ಚಂದಾದಾರರು ಇ-ಪಾಸ್ಬುಕ್ ಸೇವೆ ಪಡೆಯುವುದಕ್ಕೆ ಗುರುವಾರ ಅಡಚಣೆಯಾಗಿದೆ.
ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಇಪಿಎಫ್ಒ (EPFO) ವೆಬ್ಸೈಟ್ ಸರ್ವರ್ ಡೌನ್ ಆಗಿದ್ದು, ಚಂದಾದಾರರು ಇ-ಪಾಸ್ಬುಕ್ ಸೇವೆ ಪಡೆಯುವುದಕ್ಕೆ ಗುರುವಾರ ಅಡಚಣೆಯಾಗಿದೆ. ಇ-ಪಾಸ್ಬುಕ್ಗೆ ಲಾಗಿನ್ ಆಗಲು ಪ್ರಯತ್ನಿಸಿದರೆ, ‘ತಾಂತ್ರಿಕ ನಿರ್ವಹಣೆಯ ಸಮಸ್ಯೆಗಳಿಂದಾಗಿ ಈ ಅಡಚಣೆ ಉಂಟಾಗಿದೆ. ಇದಕ್ಕಾಗಿ ವಿಷಾದಿಸುತ್ತೇವೆ’ ಎಂಬ ಸಂದೇಶ ಕಾಣಿಸುತ್ತಿವೆ. ಇಪಿಎಫ್ಒ ವೆಬ್ಸೈಟ್ನಲ್ಲೇ ಇರುವ ಮಾಹಿತಿ ಪ್ರಕಾರ, ಸಂಜೆ 5 ಗಂಟೆ ವೇಳೆ ಸಮಸ್ಯೆ ಬಗೆಹರಿಯಲಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರದ ಡಿಜಿಟಲ್ ಉಪಕ್ರಮದ ಅಡಿ ಆರಂಭಿಸಲಾಗಿರುವ ‘ಉಮಂಗ್’ ಆ್ಯಪ್ನಲ್ಲಿಯೂ ಇ-ಪಾಸ್ಬುಕ್ ದೊರೆಯುತ್ತಿಲ್ಲ ಎನ್ನಲಾಗಿದೆ. ನಿನ್ನೆಯಿಂದ ಎಪಿಎಫ್ ಪೋರ್ಟಲ್ ಲಾಗಿನ್ ಆಗಲು ಯತ್ನಿಸುತ್ತಿದ್ದು, ಸಾಧ್ಯವಾಗುತ್ತಿಲ್ಲ. ಪಾಸ್ಬುಕ್ ಪೋರ್ಟಲ್ ಕೂಡ ಸಂಪೂರ್ಣವಾಗಿ ಡೌನ್ ಆಗಿದೆ ಎಂದು ಇಪಿಎಫ್ಒ ಚಂದಾದಾರರೊಬ್ಬರು ಟ್ವೀಟ್ ಮಾಡಿದ್ದಾರೆ.
ಇಪಿಎಫ್ಒ ಪಾಸ್ಬುಕ್ ಸೇವೆ ಕಳೆದ ಕೆಲವು ದಿನಗಳಿಂದ ಡೌನ್ ಆಗಿದೆ. ಯಾವಾಗ ಇದು ಸರಿಯಾಗಲಿದೆ?’ ಎಂದು ಚಂದಾದಾರರೊಬ್ಬರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ
Dear member, we regret for the inconvenience. Kindly wait for some time. The matter will be resolved shortly.
— EPFO (@socialepfo) January 12, 2023
ಪ್ರತಿ ತಿಂಗಳು ಎಷ್ಟು ಪಿಎಫ್ ಮೊತ್ತ ಜಮೆಯಾಗಿದೆ ಎಂಬುದನ್ನು ಪರಿಶೀಲಿಸಲು ಇಪಿಎಫ್ಒ ಇ-ಪಾಸ್ಬುಕ್ ನೆರವಾಗುತ್ತದೆ. ಚಂದಾದಾರರೇ, ಅನನುಕೂಲತೆಗಾಗಿ ವಿಷಾದಿಸುತ್ತೇವೆ. ದಯವಿಟ್ಟು ಸ್ವಲ್ಪ ಸಮಯ ಕಾಯಿರಿ. ಸದ್ಯದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು ಇಪಿಎಫ್ಒ ಟ್ವೀಟ್ ಮಾಡಿದೆ.
ಇದನ್ನೂ ಓದಿ: EPFO New Subscribers: ಅಕ್ಟೋಬರ್ನಲ್ಲಿ 12.94 ಲಕ್ಷ ಮಂದಿ ಇಪಿಎಫ್ಒಗೆ ಸೇರ್ಪಡೆ; ಉದ್ಯೋಗ ಹೆಚ್ಚಳವೂ ಕಾರಣ
ಉದ್ಯೋಗಿಗಳ ಭವಿಷ್ಯ ನಿಧಿಗೆ ಸಂಬಂಧಿಸಿದ ಎಲ್ಲ ಆನ್ಲೈನ್ ವ್ಯವಹಾರಗಳು ಇಪಿಎಫ್ಒ ವೆಬ್ಸೈಟ್ ಮೂಲಕ ನಡೆಯುತ್ತವೆ. ಬ್ಯಾಲೆನ್ಸ್ ಪರಿಶೀಲನೆ, ಪಿಎಫ್ ಮೊತ್ತದ ವರ್ಗಾವಣೆ, ಕ್ಲೇಮ್ ಮತ್ತು ಕ್ಲೇಮ್ ಸಂಬಂಧಿತ ವಿವರಗಳು, ಇತ್ಯಾದಿ ಎಲ್ಲ ಚಟುವಟಿಕೆಗಳಿಗೂ ಇಪಿಎಫ್ಒ ವೆಬ್ಸೈಟೇ ಆಧಾರ. ಹೀಗಾಗಿ ವೆಬ್ಸೈಟ್ ಸರ್ವರ್ ಡೌನ್ ಆಗಿರುವುದರಿಂದ ಲಕ್ಷಾಂತರ ಮಂದಿ ಬಳಕೆದಾರರಿಗೆ ತೊಂದರೆಯಾಗುವಂತಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:34 pm, Thu, 12 January 23