ಹೆಣ್ಮಕ್ಕಳಿಗೆ ಆಸ್ತಿಹಕ್ಕು; ಗಮನ ಸೆಳೆಯುತ್ತದೆ ಸನ್​ಫೀಸ್ಟ್ ಮಾಮ್ಸ್ ಮ್ಯಾಜಿಕ್ ಅಭಿಯಾನದ ವಿಡಿಯೋ

|

Updated on: Oct 25, 2024 | 6:21 PM

'Will of Change' campaign by Sunfeast Mom's Magic: ಕಾನೂನು ಪ್ರಕಾರ ಹೆಣ್ಮಕ್ಕಳಿಗೆ ಸಮಾನ ಆಸ್ತಿ ಹಕ್ಕು ಇದೆಯಾದರೂ ವಾಸ್ತವದಲ್ಲಿ ಅದು ಆಚರಣೆಯಲ್ಲಿರುವುದು ಬಹಳ ಕಡಿಮೆ. ಈ ಹಿನ್ನೆಲೆಯಲ್ಲಿ ಸನ್​ಫೀಸ್ಟ್ ಮಾಮ್ಸ್ ಮ್ಯಾಜಿಕ್ ಬ್ರ್ಯಾಂಡ್ ವತಿಯಿಂದ ‘ವಿಲ್ ಆಫ್ ಚೇಂಜ್’ ಎನ್ನುವ ಅಭಿಯಾನ ನಡೆಯುತ್ತಿದೆ. ಇದರ ಒಂದು ವರದಿ...

ಹೆಣ್ಮಕ್ಕಳಿಗೆ ಆಸ್ತಿಹಕ್ಕು; ಗಮನ ಸೆಳೆಯುತ್ತದೆ ಸನ್​ಫೀಸ್ಟ್ ಮಾಮ್ಸ್ ಮ್ಯಾಜಿಕ್ ಅಭಿಯಾನದ ವಿಡಿಯೋ
ಮಾಮ್ಸ್ ಮ್ಯಾಜಿಕ್
Follow us on

ಬೆಂಗಳೂರು, ಅಕ್ಟೋಬರ್ 24: ಭಾರತದ ಕಾನೂನು ಪ್ರಕಾರ ಕುಟುಂಬದ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಇರುವಷ್ಟೇ ಅಧಿಕಾರ ಹೆಣ್ಮಕ್ಕಳಿಗೂ ಇದೆ. ಆದರೆ, ವಾಸ್ತವ ಸಂಗತಿ ಬಹಳ ಭಿನ್ನವಾಗಿದೆ. ಸನ್​ಫೀಸ್ಟ್ ಮಾಮ್ಸ್ ಮ್ಯಾಜಿಕ್​ನಿಂದ ನಡೆಸಲಾದ ಅಧ್ಯಯನವೊಂದು ರಿಯಾಲಿಟಿ ಬಿಚ್ಚಿಟ್ಟಿದೆ. ಭಾರತದಲ್ಲಿ ಶೇ. 7ರಷ್ಟು ಹೆಣ್ಮಕ್ಕಳಿಗೆ ಮಾತ್ರ ಉಯಿಲು ಮೂಲಕ ಸಮಾನ ಆಸ್ತಿಪಾಲು ಸಿಕ್ಕಿದೆ. ದುರದೃಷ್ಟ ಎಂದರೆ, ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎನ್ನುವ ಮಾತು ಈಗಲೂ ಭಾರತೀಯ ಕುಟುಂಬದಲ್ಲಿ ಜಾರಿಯಲ್ಲೇ ಇದೆ. ಈ ಹಿನ್ನೆಲೆಯಲ್ಲಿ ಸನ್​ಫೀಸ್ಟ್ ಮಾಮ್ಸ್ ಮ್ಯಾಜಿಕ್ ‘ಬದಲಾವಣೆಯ ಉಯಿಲು’ (Will of Change) ಎನ್ನುವ ಅಭಿಯಾನ ಕೈಗೊಂಡಿದೆ.

ಐಟಿಸಿ ಸಂಸ್ಥೆಯ ಅಲಿ ಹ್ಯಾರಿಸ್ ಶೇರೆಯಿಂದ ಶ್ಲಾಘನೆ

‘ಭಾರತದಲ್ಲಿನ ಹೆಚ್ಚಿನ ಸಂಖ್ಯೆಯ ತಾಯಂದಿರೇ ತಮ್ಮ ತವರಿನ ಆಸ್ತಿ ವಿಚಾರದಲ್ಲಿ ಅನ್ಯಾಯಕ್ಕೊಳಗಾಗಿರುವುದು. ಈಗ ಇವರು ತಮ್ಮ ಸ್ವಂತ ಕುಟುಂಬದಲ್ಲಿ ತಮ್ಮ ಹೆಣ್ಮಕ್ಕಳಿಗಾಗಿ ಮುಂದಡಿ ಇಡಬೇಕು. ಸಮಾನ ಆಸ್ತಿ ಕೊಡಲು ಅವರು ಬದಲಾವಣೆಯ ಹರಿಕಾರರಾಗಬಲ್ಲುರು. ಈ ವಿಲ್ ಆಫ್ ಚೇಂಜ್ ಅಭಿಯಾನವು ಇಂಥ ತಾಯಂದಿರಿಗೆ ಪ್ರೇರೇಪಣೆ ನೀಡಬಲ್ಲುದು,’ ಎಂದು ಐಟಿಸಿ ಸಂಸ್ಥೆಯ ಆಹಾರ ವಿಭಾಗದ ಕೇಕ್ ಕ್ಲಸ್ಟರ್​ನ ಸಿಇಒ ಆಗಿರುವ ಅಲಿ ಹ್ಯಾರಿಸ್ ಶೇರೆ ಹೇಳುತ್ತಾರೆ.

ಐಟಿಸಿ ಸನ್​ಫೀಸ್ಟ್ ಮಾಮ್ಸ್ ಮ್ಯಾಜಿಕ್ ಎನ್ನುವುದು ಇಂಥ ಹಲವು ಅಭಿಯಾನಗಳಿಗೆ ಹೆಸರುವಾಸಿಯಾಗಿದೆ. ತಾಯಂದಿರಿಗೆ ಸಂಬಂಧಿಸಿದ ಅಭಿಯಾನಗಳನ್ನು ಈ ಹಿಂದೆ ಕೈಗೊಂಡು ಗಮನ ಸೆಳೆದಿದೆ. ಈಗ ವಿಲ್ ಆಫ್ ಚೇಂಜ್ ಅಭಿಯಾನ ಕೈಗೆತ್ತಿಕೊಂಡಿದೆ. ತಮ್ಮ ಮಕ್ಕಳಿಗೆ ಎದುರಾಗುವ ತಾರತಮ್ಯತೆಗಳ ವಿರುದ್ಧ ಹೋರಾಡಬಲ್ಲ ಒಬ್ಬ ತಾಯಿಯು ನಿಜವಾಗಿಯೂ ಸೂಪರ್​ಪವರ್ ಎಂಬ ನಂಬಿಕೆಯಲ್ಲಿ ಅಭಿಯಾನ ಕೈಗೊಳ್ಳಲಾಗುತ್ತಿದೆ ಎಂದು ಸನ್​ಫೀಸ್ಟ್ ಹೇಳುತ್ತದೆ.

ಗಮನ ಸೆಳೆಯುವ ಅಭಿಯಾನದ ವಿಡಿಯೋ…

ಈ ಅಭಿಯಾನದ ಭಾಗವಾಗಿ ಕಿರುಚಿತ್ರವೊಂದು ಬಳಕೆಯಾಗುತ್ತಿದೆ. ಶೆಫಾಲಿ ಶಾ ಮತ್ತು ಮನೀಶ್ ಚೌಧರಿ ನಟಿಸಿರುವ ಈ ಚಿತ್ರ ನಿಜಕ್ಕೂ ಭಾವನಾತ್ಮಕವೆನಿಸುತ್ತದೆ. ಪಿತ್ರಾರ್ಜಿತ ಆಸ್ತಿ ಹಂಚಿಕೆಯಲ್ಲಿ ಹೆಣ್ಮಕ್ಕಳನ್ನು ಹೇಗೆ ಕಡೆಗಣಿಸಲಾಗುತ್ತದೆ ಎಂಬುದನ್ನು ವಾಸ್ತವ ರೀತಿಯಲ್ಲಿ ಈ ಚಿತ್ರ ಬಿಚ್ಚಿಡುತ್ತದೆ. ಹೆಣ್ಮಗು ತನ್ನ ಕುಟುಂಬಕ್ಕೆ ತನ್ನದೇ ಕೊಡುಗೆ ನೀಡಿದರೂ ಆಸ್ತಿ ವಿಚಾರದಲ್ಲಿ ನಿರ್ಲಕ್ಷ್ಯಕ್ಕೊಳಗಾಗುವುದನ್ನು ಇದು ತೋರಿಸುತ್ತದೆ. ಈ ಚಿತ್ರದಲ್ಲಿ ಶೆಫಾಲಿ ಶಾ ನಿರ್ವಹಿಸಿರುವ ತಾಯಿ ಪಾತ್ರವು ಆಡುವ ಮಾತು ಆಕೆಯ ಪತಿಯ ಮನಸ್ಸನ್ನು ಕಲಕುತ್ತದೆ. ‘ಪುಟ್ಟ ಅದು ಮಾಡು, ಇದು ಮಾಡು ಎನ್ನುತ್ತೀರಿ. ಆಸ್ತಿ ವಿಚಾರಕ್ಕೆ ಬಂದರೆ ಮಾತ್ರ ಆಕೆ ನಿಮಗೆ ಪುಟ್ಟಿ ಆಗ್ತಾಳೆ,’ ಎಂದು ಆಕೆ ತನ್ನ ಪತಿಗೆ ಹೇಳುವ ಮಾತು ವಿಡಿಯೋದ ಹೈಲೈಟ್. ಕನ್ನಡದ ವಿಡಿಯೋ ಲಿಂಕ್ ಇಲ್ಲಿದೆ:

ಈ ಅಭಿಯಾನದ ಬಗ್ಗೆ ಹೆಚ್ಚಿನ ಮಾಹಿತಿಗೆ ಅದರ ವೆಬ್​ಸೈಟ್ ಸಂಪರ್ಕಿಸಬಹುದು. ವಿಳಾಸ ಇಂತಿದೆ: WillofChange.com. ಇಲ್ಲಿ ನೀವೂ ಕೂಡ ಅಭಿಯಾನದ ಭಾಗವಾಗಬಹುದು. ನೀವು ತಾಯಿಯಾಗಿದ್ದರೆ, ಹೆಣ್ಮಗು ಆಗಿದ್ದರೆ, ಅಥವಾ ನಿಮ್ಮ ಮನೆಯಲ್ಲಿ ಹೆಣ್ಮಗು ಅಥವಾ ತಾಯಿ ಇದ್ದರೆ ಅವರಿಗೆ ಈ ಅಭಿಯಾನ ತಲುಪಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ