ಷೇರು ಪೇಟೆಯಲ್ಲಿ ಹೂಡಿಕೆಗೆ ಹಲವು ಆಕರ್ಷಕ ಆಯ್ಕೆಗಳಿವೆ. ಆದರೆ ಈ ಹೂಡಿಕೆಯ ವಿಷಯಕ್ಕೆ ಸಂಬಂಧಿಸಿದಂತೆ ಹಲವರು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕೇ ಅಥವಾ ನೇರ ಷೇರುಗಳಲ್ಲಿ ಹೂಡಿಕೆ ಮಾಡಿದರೆ ಸೂಕ್ತವೇ ಎಂಬ ಗೊಂದಲಕ್ಕೆ ಒಳಗಾಗುತ್ತಾರೆ. ಅಂತಹವರಿಗೆ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್) ಒಂದು ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಇವುಗಳು ಕೂಡಾ ಪೇರು ಪೇಟೆ ರೀತಿಯಲ್ಲಿ ವ್ಯವಹಸರಿಸುತ್ತವೆ ಮತ್ತು ಇವು ಮ್ಯೂಚುವಲ್ ಫಂಡ್‌ಗಳಿಗಿಂತ ಭಿನ್ನವಾಗಿ ವ್ಯವಹರಿಸುತ್ತವೆ. ಹಾಗಾದರೆ ಈ ಇಟಿಎಫ್ ಏನು? ಅದು ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ತಿಳಿಯಿರಿ.
ಇಟಿಎಫ್ ಎಂದರೆ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್. ಷೇರು ಪೇಟೆಯ ರೀತಿಯಲ್ಲೇ ಇದರಲ್ಲಿ ವ್ಯವಹಾರಗಳು ನಡೆಯುತ್ತವೆ. ಆದರೆ ಇದು ಮ್ಯೂಚುವಲ್ ಫಂಡ್ ಹಾಗೂ ಷೇರುಗಳಿಗಿಂತ ಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ನೀವು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಅದರಲ್ಲಿ ನೀವು ಪಡೆಯುವ ಆದಾಯವು ಫಂಡ್ ಮ್ಯಾನೆಜರ್‌ನ ಜ್ಞಾನ ಮತ್ತು ಮಾರುಕಟ್ಟೆಯ ಏರಿಳಿತಗಳನ್ನು ಅವಲಂಬಿಸಿರುತ್ತದೆ. ನೀವು ಷೇರುಗಳಲ್ಲಿ ಹೂಡಿಕೆ ಮಾಡಿದರೆ, ಉತ್ತಮ ಷೇರುಗಳನ್ನು ಆಯ್ಕೆ ಮಾಡುವಲ್ಲಿ ಒಂದು ರೀತಿಯ ಗೊಂದಲ ಇರುತ್ತದೆ.
ಹೂಡಿಕೆಯ ವಿಷಯಕ್ಕೆ ಸಂಬಂಧಿಸಿದ ಇಂತಹ ಗೊಂದಲವನ್ನು ತೊಡೆದು ಹಾಕಲು ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್) ಇಟಿಎಫ್ ಉತ್ತಮ ಆಯ್ಕೆಯಾಗಿದೆ. ಇಟಿಎಫ್‌ನಲ್ಲಿ, ನೀವು ಹಣವನ್ನು ಒಂದೇ ಸ್ಟಾಕ್‌ನಲ್ಲಿ ಹೂಡಿಕೆ ಮಾಡದೆ ಷೇರು ಮಾರುಕಟ್ಟೆಯ ಸೂಚ್ಯಂಕದಲ್ಲಿ ಒಳಗೊಂಡಿರುವ ಷೇರುಗಳ ಗುಂಪಿನಲ್ಲಿ ಹೂಡಿಕೆ ಮಾಡಬಹುದು. ಇಟಿಎಫ್‌ಗಳು ಕಂಪನಿಯ ಷೇರುಗಳಂತೆ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟು ನಡೆಸುತ್ತವೆ. ಇಟಿಎಫ್ ಒಂದು ನಿಷ್ಕ್ರಿಯ ಹೂಡಿಕೆಯಾಗಿದ್ದು, ಅದು ಒಂದೇ ಸೂಚ್ಯಂಕ, ವಲಯ, ಥೀಮ್ ಅಥವಾ ಸರಕುಗಳಲ್ಲಿ ಹೂಡಿಕೆ ಮಾಡುವಂತಹದ್ದಾಗಿದೆ. ನೀವು ಇಟಿಎಫ್‌ನ ಘಟಕವನ್ನು ಖರೀದಿಸಿದಾಗ, ಅದಕ್ಕೆ ಲಿಂಕ್ ಮಾಡಲಾದ ಸೂಚ್ಯಂಕದಲ್ಲಿ ನೀವು ಹೂಡಿಕೆ ಮಾಡುತ್ತೀರಿ. ಹಾಗಾಗಿ ಷೇರು ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡಲು ಭಯಪಡುವವರಿಗೆ ಮತ್ತು ಮಾರುಕಟ್ಟೆಯ ಉತ್ಕರ್ಷದ ಲಾಭವನ್ನು ಪಡೆಯಲು ಬಯಸುವವರಿಗೆ ಇಟಿಎಫ್ ಒಂದು ಉತ್ತಮ ಹೂಡಿಕೆಯ ಆಯ್ಕೆಯಾಗಿದೆ.
ಇದನ್ನೂ ಓದಿ: ಇಟಿಎಫ್ ಗಳ ಖರೀದಿ ಹಾಗೂ ಮಾರಾಟ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಮ್ಯೂಚುಯಲ್ ಫಂಡ್‌ಗಳಿಗಿಂತ ಭಿನ್ನವಾಗಿ , ಇಟಿಎಫ್‌ಗಳನ್ನು ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ ವ್ಯಾಪಾರ ಮಾಡಲಾಗುತ್ತದೆ. ಸ್ಟಾಕ್, ಬಾಂಡ್, ಸರಕು, ಉದ್ಯಮ/ವಲಯ, ಕರೆನ್ಸಿ ಇಟಿಎಫ್ ಇವೆಲ್ಲವು ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳಾಗಿದ್ದು, ಈ ರೂಪದಲ್ಲಿ ನೀವು ಹೂಡಿಕೆಯನ್ನು ಮಾಡಬಹುದಾಗಿದೆ. ಅಲ್ಲದೆ ಇದು ಹೂಡಿಕೆದಾರರಿಗೆ ಮಾರುಕಟ್ಟೆಯ ಬೆಲೆಯಲ್ಲಿ ದಿನವಿಡೀ ಷೇರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:02 pm, Fri, 20 December 24