AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GST: 25 ಕೆಜಿಗೂ ಹೆಚ್ಚು ತೂಕದ ಪಾಕೆಟ್​ಗಳಿಗೆ ಜಿಎಸ್​ಟಿ ಇಲ್ಲ; ಮತ್ತೊಮ್ಮೆ ವ್ಯಾಖ್ಯಾನಿಸಿದ ಹಣಕಾಸು ಇಲಾಖೆ

ಜಿಎಸ್​ಟಿ ಯಾವುದಕ್ಕೆಲ್ಲಾ ಅನ್ವಯವಾಗಲಿದೆ ಎಂದು ಕೇಂದ್ರ ಹಣಕಾಸು ಇಲಾಖೆಯು ಮತ್ತೊಮ್ಮೆ ಸ್ಪಷ್ಟಪಡಿಸಿದೆ

GST: 25 ಕೆಜಿಗೂ ಹೆಚ್ಚು ತೂಕದ ಪಾಕೆಟ್​ಗಳಿಗೆ ಜಿಎಸ್​ಟಿ ಇಲ್ಲ; ಮತ್ತೊಮ್ಮೆ ವ್ಯಾಖ್ಯಾನಿಸಿದ ಹಣಕಾಸು ಇಲಾಖೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jul 18, 2022 | 1:19 PM

Share

ಬೆಂಗಳೂರು/ಕಲಬುರಗಿ: ಪ್ಯಾಕ್ ಆದ ಆಹಾರ ಪದಾರ್ಥಗಳು ಮತ್ತು ಡೇರಿ ಉತ್ಪನ್ನಗಳ ಮೇಲೆ ಇಂದಿನಿಂದ ಜಾರಿಯಾಗಿರುವ ಶೇ 5ರ ಸರಕು ಮತ್ತು ಸೇವಾ ಸುಂಕಕ್ಕೆ (Goods and Service Tax – GST) ರಾಷ್ಟ್ರವ್ಯಾಪಿ ವರ್ತಕರು ಮತ್ತು ಗ್ರಾಹಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಜಿಎಸ್​ಟಿ ಯಾವುದಕ್ಕೆಲ್ಲಾ ಅನ್ವಯವಾಗಲಿದೆ ಎಂದು ಇದೀಗ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ‘ಯಾವುದೇ ಬ್ರಾಂಡ್​ನ ಆಹಾರ ಪದಾರ್ಥವು ಒಂದೇ ಪ್ಯಾಕ್​ನಲ್ಲಿ 26 ಕೆಜಿಗೂ ಹೆಚ್ಚು ತೂಕವಿದ್ದರೆ ಅದಕ್ಕೆ ಜಿಎಸ್​ಟಿ ಅನ್ವಯಿಸುವುದಿಲ್ಲ’ ಎಂದು ಹಣಕಾಸು ಇಲಾಖೆಯ (The Central Board of Indirect Taxes and Customs – CBITC) ಪರೋಕ್ಷ ತೆರಿಗೆ ಮತ್ತು ಅಬಕಾರಿ ಸುಂಕ ವಿಭಾಗ ಭಾನುವಾರ ತಡರಾತ್ರಿ ಸ್ಪಷ್ಟನೆ ನೀಡಿದೆ.

ಮೊದಲೇ ಪ್ಯಾಕ್ ಮಾಡಿರುವ 25 ಕೆಜಿಗೂ ಕಡಿಮೆ ತೂಕದ ಆಹಾರ ಉತ್ಪನ್ನಗಳಿಗೆ ಮಾತ್ರವೇ ಶೇ 5ರ ಜಿಎಸ್​ಟಿ ಅನ್ವಯವಾಗಲಿದೆ. ಆದರೆ ಯಾವುದೇ ಚಿಲ್ಲರೆ ಮಾರಾಟಗಾರ ಸಗಟು ವ್ಯಾಪಾರಿಯಿಂದ ಖರೀದಿಸಿದ 25 ಕೆಜಿ ಪಾಕೆಟ್​ ಒಡೆದು ಕಡಿಮೆ ತೂಕದ ಪ್ಯಾಕ್ ಮಾಡಿ ಮಾರಿದರೆ ಅದಕ್ಕೆ ಜಿಎಸ್​ಟಿ ಲಾಗು ಆಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

‘ಕಾನೂನು ಮತ್ತು ಮಾಪನ ಕಾಯ್ದೆ 2009’ರ ಪ್ರಕಾರ ವ್ಯಾಖ್ಯಾನಿಸಲಾಗಿರುವ ಮೊದಲೇ ಪ್ಯಾಕ್ ಆಗಿರುವ ಆಹಾರ ಉತ್ಪನ್ನಗಳು (ಧಾನ್ಯಗಳು, ಕಾಳುಗಳು, ಅಕ್ಕಿ, ಗೋಧಿ, ಹಿಟ್ಟು ಇತ್ಯಾದಿ) ಎನಿಸಿಕೊಳ್ಳುವ ಉತ್ಪನ್ನಗಳು 25 ಕೆಜಿಗೂ ಕಡಿಮೆ ಇದ್ದು, ಪ್ಯಾಕ್ಡ್​ ರೂಪದಲ್ಲಿ ಮಾರಾಟಕ್ಕೆ ತಂದರೆ ಅದಕ್ಕೆ ಜಿಎಸ್​ಟಿ ಅನ್ವಯವಾಗುತ್ತಿತ್ತು. ಈ ನಿಯಮದಲ್ಲಿ ಕೇಂದ್ರ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ 25 ಕೆಜಿಗೂ ಹೆಚ್ಚಿನ ತೂಕದ ಪ್ಯಾಕ್​ಗಳಿಗೆ ಶೇ 5ರ ಜಿಎಸ್​ಟಿ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಹಾಗೆಂದು ಒಂದು 30 ಕೆಜಿ ಪ್ಯಾಕ್ ಒಳಗೆ 10 ಕೆಜಿಯ ಮೂರು ಪ್ಯಾಕ್​ ಇರಿಸಿ ಮತ್ತೊಮ್ಮೆ ಪ್ಯಾಕ್ ಮಾಡಿ ಮಾರುಕಟ್ಟೆಗೆ ತಂದರೆ ಅದಕ್ಕೆ ಮೊದಲಿನಂತೆ ತೆರಿಗೆ ಅನ್ವಯವಾಗಲಿದೆ. ಆದರೆ ವಿತರಕರಿಗೆ 10 ಕೆಜಿ ತೂಕದ ಪ್ಯಾಕ್ ಸರಬರಾಜು ಮಾಡಿದರೆ ಜಿಎಸ್​ಟಿ ವಿನಾಯ್ತಿ ಸಿಗಲಿದೆ. ಯಾವುದೇ ಒಂದು ನಿರ್ದಿಷ್ಟ ಪಾಕೆಟ್​ 25 ಕೆಜಿಗೂ ಹೆಚ್ಚು ತೂಕದ್ದಾಗಿದ್ದರೆ ಅದಕ್ಕೆ ಜಿಎಸ್​ಟಿ ಅನ್ವಯವಾಗುವುದಿಲ್ಲ ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.

30 ಕೆಜಿ ತೂಕದ ತೊಗರಿ ಪಾಕೆಟ್​ ಮಾರಾಟಕ್ಕೆ ವ್ಯಾಪಾರಿಗಳ ನಿರ್ಧಾರ

ಕೇಂದ್ರ ಸರ್ಕಾರವು ಜಾರಿ ಮಾಡಿರುವ ಹೊಸ ಜಿಎಸ್​ಟಿ ನಿಯಮದ ಪ್ರಕಾರ 25 ಕೆಜಿ ತೂಕದ ಬ್ರಾಂಡೆಡ್ ತೊಗರಿ ಚೀಲಕ್ಕೆ ಶೇ 5ರ ತೆರಿಗೆ ಅನ್ವಯವಾಗಲಿದೆ. ಗ್ರಾಹಕರಿಗೆ ಈ ತೆರಿಗೆಯ ಹೊರೆ ತಪ್ಪಿಸಲೆಂದು ಕಲಬುರ್ಗಿಯ ದಾಲ್ ಮಿಲ್ ಮಾಲೀಕರು 30 ಕೆಜಿ ತೂಕದ ತೊಗರಿ ಚೀಲಗಳನ್ನು ಪ್ಯಾಕ್ ಮಾಡಿ ಮಾರಲು ಮುಂದಾಗಿದ್ದಾರೆ. ಈವರೆಗೆ ಐದು, ಹತ್ತು ಹಾಗೂ 25 ಕೆಜಿ ತೂಕದ ತೊಗರಿ ಬೇಳೆ ಪಾಕೆಟ್​ಗಳನ್ನು ಕೆಲ ಮಿಲ್ ಮಾಲೀಕರು ಮಾರುತ್ತಿದ್ದರು. ಮುಂದಿನ ದಿನಗಳಲ್ಲಿ 25 ಕೆಜಿ ಒಳಗಿನ ಪಾಕೆಟ್​ಗಳಿಗೆ ಶೇ 5ರ ಜಿಎಸ್​ಟಿ ಸೇರಿಸಿ ಗರಿಷ್ಠ ಮಾರಾಟ ದರ ನಿರ್ಧರಿಸಲಾಗುತ್ತದೆ. 26 ಕೆಜಿ ತೂಗುವ ಪಾಕೆಟ್​ಗಳಿಗೆ ಜಿಎಸ್​ಟಿ ಹಂಗಿಲ್ಲದೆ ದರ ವಿಧಿಸಲಾಗುತ್ತದೆ.

ಪ್ರಸ್ತುತ ಕಲಬುರ್ಗಿಯಲ್ಲಿ ಒಂದು ಕೆಜಿ ತೊಗರಿ ಬೆಲೆ ₹ 97 ಇದೆ. ಶೇ 5ರ ಜಿಎಸ್​ಟಿ ಲಾಗು ಆದರೆ ಸುಮಾರು ₹ 5ರಷ್ಟು ದರ ಹೆಚ್ಚಳಕಂಡು, ಚಿಲ್ಲರೆ ದರ ₹ 100ರ ಗಡಿದಾಟಿದೆ.

Published On - 1:19 pm, Mon, 18 July 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ