ಫಾರೆಕ್ಸ್ ರಿಸರ್ವ್ಸ್ ಸತತ ಆರನೇ ವಾರವೂ ಏರಿಕೆ; 700 ಬಿಲಿಯನ್ ಡಾಲರ್ ಮೈಲಿಗಲ್ಲಿಗೆ ಸಮೀಪ

|

Updated on: Sep 27, 2024 | 6:12 PM

Forex reserves of India on 2024 Sept 20th: ಆರ್​ಬಿಐನ ವಿದೇಶೀ ವಿನಿಮಯ ಮೀಸಲು ನಿಧಿ ಮತ್ತಷ್ಟು ಹೆಚ್ಚಳ ಕಂಡಿದೆ. ಸೆಪ್ಟೆಂಬರ್ 20ರಂದು ಅಂತ್ಯಗೊಂಡ ವಾರದಲ್ಲಿ 2.84 ಬಿಲಿಯನ್ ಡಾಲರ್​ನಷ್ಟು ಸಂಪತ್ತು ಹೆಚ್ಚಿದೆ. ಒಟ್ಟು ಫಾರೆಕ್ಸ್ ರಿಸರ್ವ್ಸ್ 692.3 ಬಿಲಿಯನ್ ಡಾಲರ್ ಆಗಿದೆ. ಇದು ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ. ಇದೇ ವೇಳೆ ರುಪಾಯಿ ಕರೆನ್ಸಿಯೂ ಕೂಡ ಬಲವರ್ಧನೆ ಕಂಡಿದೆ.

ಫಾರೆಕ್ಸ್ ರಿಸರ್ವ್ಸ್ ಸತತ ಆರನೇ ವಾರವೂ ಏರಿಕೆ; 700 ಬಿಲಿಯನ್ ಡಾಲರ್ ಮೈಲಿಗಲ್ಲಿಗೆ ಸಮೀಪ
ಫಾರೆಕ್ಸ್ ರಿಸರ್ವ್ಸ್
Follow us on

ನವದೆಹಲಿ, ಸೆಪ್ಟೆಂಬರ್ 27: ಭಾರತದ ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್ ಸತತ ಆರನೇ ವಾರ ಉಬ್ಬಿದೆ. ಆರ್​ಬಿಐ ಇಂದು ಶುಕ್ರವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಸೆಪ್ಟೆಂಬರ್ 20ರಂದು ಅಂತ್ಯಗೊಂಡ ವಾರದಲ್ಲಿ 2.84 ಬಿಲಿಯನ್ ಡಾಲರ್​ನಷ್ಟು ನಿಧಿ ಹೆಚ್ಚಳವಾಗಿದೆ. ಇದರೊಂದಿಗೆ, ಆರ್​ಬಿಐನ ಫಾರೆಕ್ಸ್ ಮೀಸಲು ನಿಧಿ 692.3 ಬಿಲಿಯನ್ ಡಾಲರ್ ಆಗಿದೆ. ಇದು ಸಾರ್ವಕಾಲಿಕ ಗರಿಷ್ಠ ಫಾರೆಕ್ಸ್ ನಿಧಿಯಾಗಿದೆ. 700 ಬಿಲಿಯನ್ ಡಾಲರ್ ಮಟ್ಟದ ಮೈಲಿಗಲ್ಲಿಗೆ ಬಹಳ ಸಮೀಪ ಇದೆ.

ಆರು ವಾರಗಳಿಂದಲೂ ಭಾರತದ ವಿದೇಶೀ ವಿನಿಮಯ ಮೀಸಲು ನಿಧಿಯಲ್ಲಿ ಸಂಪತ್ತು ಕ್ರೋಢೀಕರಣಗೊಳ್ಳುತ್ತಲೇ ಬಂದಿದೆ. ಹಿಂದಿನ ಐದು ವಾರದಲ್ಲಿ ಒಟ್ಟು 19.3 ಬಿಲಿಯನ್ ಡಾಲರ್​ನಷ್ಟು ಏರಿಕೆ ಆಗಿತ್ತು. ಸೆಪ್ಟೆಂಬರ್ 20ರ ವಾರದ್ದು ಪರಿಗಣಿಸಿದರೆ ಆರು ವಾರದಲ್ಲಿ ಏರಿಕೆ ಆದ ಫಾರೆಕ್ಸ್ ರಿಸರ್ವ್ಸ್ ಸಂಪತ್ತು 22.14 ಬಿಲಿಯನ್ ಡಾಲರ್​ನಷ್ಟು ಉಬ್ಬಿದೆ.

ಇದನ್ನೂ ಓದಿ: Thinking Hats IPO: ಬಂಡವಾಳ ಕೇಳಿದ್ದು 15 ಕೋಟಿ ರೂ , ಬಿಡ್ ಸಲ್ಲಿಕೆಯಾಗಿದ್ದು ಎರಡೂವರೆ ಸಾವಿರ ಕೋಟಿಗೂ ಹೆಚ್ಚು

ಪಾಕಿಸ್ತಾನದ ಫಾರೆಕ್ಸ್ ರಿಸರ್ವ್ಸ್ 10 ಬಿಲಿಯನ್ ಡಾಲರ್ ಸಮೀಪ

ಪಾಕಿಸ್ತಾನದ ಫಾರೆಕ್ಸ್ ರಿಸರ್ವ್ಸ್ ಇತ್ತೀಚಿನ ವಾರದಲ್ಲಿ 24 ಮಿಲಿಯನ್ ಡಾಲರ್​​ನಷ್ಟು ಹೆಚ್ಚಳವಾಗಿದೆ. ಅಲ್ಲಿನ ಸೆಂಟ್ರಲ್ ಬ್ಯಾಂಕ್ ಹೊಂದಿರುವ ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್ ಮೊತ್ತ 9.53 ಬಿಲಿಯನ್ ಡಾಲರ್​ಗೆ ಏರಿದೆ. ಸಾಕಷ್ಟು ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಫಾರೆಕ್ಸ್ ರಿಸರ್ವ್ಸ್ ಹೆಚ್ಚಳ ಸ್ವಾಗತಾರ್ಹವಾಗಿದೆ.

ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಚೀನಾ ಬಳಿ 3.2 ಟ್ರಿಲಿಯನ್ ಡಾಲರ್​ನಷ್ಟು ಫಾರೆಕ್ಸ್ ನಿಧಿ ಇದೆ. ಜಪಾನ್ ಬಳಿ 1.2 ಟ್ರಿಲಿಯನ್ ಡಾಲರ್ ಇದೆ. ಸ್ವಿಟ್ಜರ್​ಲ್ಯಾಂಡ್ 802 ಬಿಲಿಯನ್ ಡಾಲರ್​ನಷ್ಟು ಫಾರೆಕ್ಸ್ ರಿಸರ್ವ್ಸ್ ಹೊಂದಿದೆ.

ಇದನ್ನೂ ಓದಿ: Asia Power Index: ಏಷ್ಯಾದಲ್ಲಿ ಅತಿಪ್ರಭಾವಶಾಲಿ ದೇಶಗಳು: ಅಮೆರಿಕ, ಚೀನಾ ನಂತರದ ಸ್ಥಾನ ಭಾರತಕ್ಕೆ

ಭಾರತದ ರುಪಾಯಿ ಚೇತರಿಕೆ

ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ಇತ್ತೀಚೆಗೆ 50 ಮೂಲಾಂಕಗಳಷ್ಟು ಬಡ್ಡಿದರ ಕಡಿತಗೊಳಿಸಿದ ಪರಿಣಾಮವಾಗಿ ಭಾರತದ ರುಪಾಯಿ ಮೌಲ್ಯ ಚೇತರಿಸಿಕೊಂಡಿದೆ. ಭಾರತದ ಮಾರುಕಟ್ಟೆಗೆ ವಿದೇಶಗಳಿಂದ ಬಂಡವಾಳ ಹರಿದುಬರುತ್ತಿರುವುದೂ ಕೂಡ ರುಪಾಯಿ ಕರೆನ್ಸಿಗೆ ಬಲ ತಂದುಕೊಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ