Thinking Hats IPO: ಬಂಡವಾಳ ಕೇಳಿದ್ದು 15 ಕೋಟಿ ರೂ , ಬಿಡ್ ಸಲ್ಲಿಕೆಯಾಗಿದ್ದು ಎರಡೂವರೆ ಸಾವಿರ ಕೋಟಿಗೂ ಹೆಚ್ಚು

IPO craze continues: ಥಿಂಕಿಂಗ್ ಹ್ಯಾಟ್ಸ್ ಎಂಟರ್ಟೈನ್ಮೆಂಟ್ ಸಲ್ಯೂಶನ್ಸ್ ಪ್ರೈ ಲಿ ಸಂಸ್ಥೆಯ 15 ಕೋಟಿ ರೂ ಮೊತ್ತದ ಐಪಿಒಗೆ ಭರ್ಜರಿ ಸ್ಪಂದನೆ ಸಿಕ್ಕಿದೆ. ರೀಟೇಲ್ ಹೂಡಿಕೆದಾರರು ಈ ಸಣ್ಣ ಮಾಧ್ಯಮ ಕಂಪನಿಯ ಷೇರಿಗೆ ಮುಗಿಬಿದ್ದಿದ್ದಾರೆ. 15 ಕೋಟಿ ರೂ ಮೊತ್ತದ ಷೇರುಗಳ ಖರೀದಿಗೆ ಸಲ್ಲಿಕೆಯಾದ ಒಟ್ಟು ಬಿಡ್​ಗಳ ಮೊತ್ತ 2,500 ಕೋಟಿ ರೂಗೂ ಹೆಚ್ಚು. 44 ರೂ ಬೆಲೆಯ ಇದರ ಷೇರಿನ ಜಿಎಂಪಿ ಸದ್ಯ ಶೇ. 68ರಷ್ಟಿದೆ.

Thinking Hats IPO: ಬಂಡವಾಳ ಕೇಳಿದ್ದು 15 ಕೋಟಿ ರೂ , ಬಿಡ್ ಸಲ್ಲಿಕೆಯಾಗಿದ್ದು ಎರಡೂವರೆ ಸಾವಿರ ಕೋಟಿಗೂ ಹೆಚ್ಚು
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 27, 2024 | 4:05 PM

ನವದೆಹಲಿ, ಸೆಪ್ಟೆಂಬರ್ 27: ಭಾರತದಲ್ಲಿ ಐಪಿಒ ಕ್ರೇಜ್ ಮುಂದುವರಿದಿದೆ. ಸಣ್ಣ ಪುಟ್ಟ ಕಂಪನಿಗಳಿಗೆಲ್ಲಾ ಪ್ರಾಥಮಿಕ ಬಂಡವಾಳ ಮಾರುಕಟ್ಟೆಲ್ಲಿ ನಿರೀಕ್ಷೆ ಮೀರಿದ ಸ್ಪಂದನೆ ಸಿಕ್ಕಿದೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಐಪಿಒಗಳು ನಿರೀಕ್ಷಿತ ಬಂಡವಾಳ ಪಡೆಯಲು ಯಶಸ್ವಿಯಾಗುತ್ತಿವೆ. ಅದರಲ್ಲೂ ಸಣ್ಣ ಸಂಸ್ಥೆಗಳಾದ ಎಸ್​ಎಂಇಗಳಿಗಂತೂ ಹೂಡಿಕೆದಾರರು ಮುಗಿಬೀಳುತ್ತಿರುವಂತೆ ಭಾಸವಾಗುತ್ತಿದೆ. ಇಂದು ಶುಕ್ರವಾರ ಮುಕ್ತಾಯಗೊಂಡ ಥಿಂಕಿಂಗ್ ಹ್ಯಾಟ್ಸ್ ಎಂಟರ್ಟೈನ್ಮೆಂಟ್ ಸಲ್ಯೂಶನ್ಸ್ ಸಂಸ್ಥೆಯ ಐಪಿಒಗೆ ಸಖತ್ ಸ್ಪಂದನೆ ಸಿಕ್ಕಿದೆ. ಕೇವಲ 15 ಕೋಟಿ ರೂ ಬಂಡವಾಳ ಮಾತ್ರಕ್ಕೆ ಐಪಿಒಗೆ ಬಂದಿದ್ದ ಈ ಸಂಸ್ಥೆಯ ಷೇರುಗಳನ್ನು ಖರೀದಿಸಲು 2,500 ಕೋಟಿ ರೂಗೂ ಹೆಚ್ಚು ಮೌಲ್ಯದ ಬಿಡ್​ಗಳು ಸಲ್ಲಿಕೆ ಆಗಿವೆ.

ರೀಟೇಲ್ ಹೂಡಿಕೆದಾರರೇ ಹೆಚ್ಚಿನ ಪ್ರಮಾಣದಲ್ಲಿ ಸಬ್​ಸ್ಕ್ರೈಬ್ ಮಾಡಿದ್ದಾರೆ. ಈ ರೀಟೇಲ್ ಇನ್ವೆಸ್ಟರ್​ಗಳು ಸಲ್ಲಿಸಿದ ಬಿಡ್​ಗಳ ಮೌಲ್ಯ 2,000 ಕೋಟಿ ರೂಗಿಂತಲೂ ಅಧಿಕ. ಇಂದು ಶುಕ್ರವಾರ ಈ ಐಪಿಒದ ಬಿಡ್ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ಇದನ್ನೂ ಓದಿ: ಎನ್​ಎಸ್​ಇಯಲ್ಲಿ ಟಿ+0 ಸೆಟಲ್ಮೆಂಟ್ ಸಿಸ್ಟಂ ಜಾರಿ ಮುಂದೂಡಿಕೆ; ಶನಿವಾರ, ಭಾನುವಾರ ಪ್ರಾಯೋಗಿಕ ಲೈವ್ ಟ್ರೇಡಿಂಗ್

ವೆಬ್ ಸೀರೀಸ್, ಸಿನಿಮಾ, ಧಾರವಾಹಿ, ಲೈವ್ ಶೋ, ಇವೆಂಟ್ ಆಯೋಜನೆ ಇತ್ಯಾದಿ ಮಾಡುವ ಥಿಂಕಿಂಗ್ ಹ್ಯಾಟ್ಸ್ ಎಂಟರ್ಟೈನ್ಮೆಂಟ್ ಸಲ್ಯೂಶನ್ಸ್ ಸಂಸ್ಥೆ 15.08 ಕೋಟಿ ರೂ ಬಂಡವಾಳ ಸಂಗ್ರಹಣೆಯ ಗುರಿಯೊಂದಿಗೆ 32.49 ಲಕ್ಷ ಷೇರುಗಳನ್ನು ಐಪಿಒದಲ್ಲಿ ಮಾರಾಟಕ್ಕೆ ಇಟ್ಟಿತ್ತು. ಅದರ ಐಪಿಒ ಷೇರು ಬೆಲೆ 44 ರೂ ಇತ್ತು. ಐಪಿಒದಲ್ಲಿ ಖರೀದಿಸಲು ಕನಿಷ್ಠ ಮೊತ್ತದ ಷೇರುಗಳು 3,000. ಕನಿಷ್ಠ ಹೂಡಿಕೆ ಮೊತ್ತ 1,32,000 ರೂ ಆಗಿತ್ತು.

ಥಿಂಕಿಂಗ್ ಹ್ಯಾಟ್ಸ್ ಸಂಸ್ಥೆಯ ಈ ಐಪಿಒಗೆ ನಿರೀಕ್ಷೆಮೀರಿ ಉತ್ತಮ ಸ್ಪಂದನೆ ಸಿಕ್ಕಿದೆ. ಷೇರಿನ ಬೇಡಿಕೆ ಎಷ್ಟು ಎಂಬುದಕ್ಕೆ ಸೂಚಕವೆನ್ನಬಹುದಾದ ಗ್ರೇ ಮಾರ್ಕೆಟ್ ಪ್ರೀಮಿಯಮ್ ಅಥವಾ ಜಿಎಂಪಿ ಶುಕ್ರವಾರ ಮಧ್ಯಾಹ್ನದಂದು ಶೇ. 68ರಷ್ಟು ಇತ್ತು. ಜಿಎಂಪಿ ಹೆಚ್ಚು ಇದ್ದಷ್ಟೂ ಆ ಷೇರಿಗೆ ಬೇಡಿಕೆ ಹೆಚ್ಚಿದೆ ಎಂದರ್ಥ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಟಾಟಾ ಗ್ರೂಪ್​ನಿಂದ ಭಾರತದ ಮೊದಲ ಸೆಮಿಕಂಡಕ್ಟರ್ ತಯಾರಿಕೆ ಘಟಕ ಸ್ಥಾಪನೆ ನಿಶ್ಚಿತ; ತೈವಾನ್​ನ ಪಿಎಸ್​​ಎಂಸಿ ಜೊತೆ ಒಪ್ಪಂದ

ಥಿಂಕಿಂಗ್ ಹ್ಯಾಟ್ಸ್ ಎಂಟರ್ಟೈನ್ಮೆಂಟ್ ಸಲ್ಯೂಶನ್ಸ್ ಸಂಸ್ಥೆ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಅಕ್ಟೋಬರ್ 3ರಂದು ಲಿಸ್ಟ್ ಆಗಲಿದೆ. ಎನ್​ಎಸ್​ಇನ ಎಸ್​ಎಂಇ ಮತ್ತು ಎಮರ್ಜ್ ಕೆಟಗರಿಗಳಲ್ಲಿ ಇದು ಸೇರ್ಪಡೆಯಾಗಬಹುದು. ಈಗಿರುವ ಜಿಎಂಪಿ ಗಮನಿಸಿದರೆ ಅಕ್ಟೋಬರ್ 3ರಂದು ಇದು 60 ರೂ ಆಸುಪಾಸಿನ ಬೆಲೆಗೆ ಲಿಸ್ಟ್ ಆಗುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ