AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್​ಎಸ್​ಇಯಲ್ಲಿ ಟಿ+0 ಸೆಟಲ್ಮೆಂಟ್ ಸಿಸ್ಟಂ ಜಾರಿ ಮುಂದೂಡಿಕೆ; ಶನಿವಾರ, ಭಾನುವಾರ ಪ್ರಾಯೋಗಿಕ ಲೈವ್ ಟ್ರೇಡಿಂಗ್

T+0 settlement system deferred: ಎನ್​ಎಸ್​ಇ ಸಂಸ್ಥೆ ತನ್ನ ಷೇರು ವಿನಿಮಯ ಕೇಂದ್ರದಲ್ಲಿ ಷೇರು ಟ್ರೇಡಿಂಗ್​ನ ಕ್ಯಾಪಿಟಲ್ ಮಾರ್ಕೆಟ್ ಸೆಗ್ಮೆಂಟ್​​ನಲ್ಲಿ ಟಿ+0 ಸೆಟಲ್ಮೆಂಟ್ ಸಿಸ್ಟಂ ಜಾರಿಗೊಳಿಸುವುದನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಮುಂದಿನ ಸೂಚನೆ ಬರುವವರೆಗೂ ಒಂದೇ ದಿನದ ಟ್ರೇಡಿಂಗ್ ಮತ್ತು ಸೆಟಲ್ಮೆಂಟ್ ವ್ಯವಸ್ಥೆ ಜಾರಿ ತಾತ್ಕಾಲಿಕವಾಗಿ ನಿಲ್ಲಲಿದೆ. ಇದೇ ವೇಳೆ, ಎನ್​ಎಸ್​ಇನ ಡಿಸಾಸ್ಟರ್ ರಿಕವರಿ ಸೈಟ್​ನಿಂದ ಶನಿವಾರ ಮತ್ತು ಭಾನುವಾರ ಲೈವ್ ಟ್ರೇಡಿಂಗ್ ಸೆಷನ್ಸ್ ನಡೆಯಲಿದೆ.

ಎನ್​ಎಸ್​ಇಯಲ್ಲಿ ಟಿ+0 ಸೆಟಲ್ಮೆಂಟ್ ಸಿಸ್ಟಂ ಜಾರಿ ಮುಂದೂಡಿಕೆ; ಶನಿವಾರ, ಭಾನುವಾರ ಪ್ರಾಯೋಗಿಕ ಲೈವ್ ಟ್ರೇಡಿಂಗ್
ಟ್ರೇಡಿಂಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 27, 2024 | 3:16 PM

Share

ಮುಂಬೈ, ಸೆಪ್ಟೆಂಬರ್ 27: ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಟಿ+0 ಸೆಟಲ್ಮೆಂಟ್ ಸಿಸ್ಟಂನಲ್ಲಿ ಟ್ರೇಡಿಂಗ್ ಮಾಡುವುದನ್ನು ಮುಂದಕ್ಕೆ ಹಾಕಿದೆ. ಎನ್​ಎಸ್​ಇ ಇಂದು ಶುಕ್ರವಾರ ಟಿ+0 ವ್ಯವಸ್ಥೆ ಮುಂದೂಡಲಾಗಿರುವುದನ್ನು ತಿಳಿಸಿ ಸುತ್ತೋಲೆ ಹೊರಡಿಸಿದೆ. ‘ಕ್ಯಾಪಿಟಲ್ ಮಾರ್ಕೆಟ್ ಸೆಗ್ಮೆಂಟ್ ಗೋ ಲೈವ್​ನಲ್ಲಿ ಟಿ+0 ಸೆಟಲ್ಮೆಂಟ್ ಸೈಕಲ್​ನಲ್ಲಿ ಟ್ರೇಡಿಂಗ್ ಮಾಡುವುದನ್ನು ಮುಂದೂಡಲಾಗಿದೆ’ ಎಂದು ಎನ್​ಎಸ್​ಇ ತನ್ನ ಹೊಸ ಸರ್ಕ್ಯುಲಾರ್​ನಲ್ಲಿ ತಿಳಿಸಿದೆ. ಇದರೊಂದಿಗೆ, ಟ್ರೇಡಿಂಗ್ ಮಾಡಿದ ದಿನವೇ ಹಣ ಪಡೆಯುವ ಟಿ+0 ಸೆಟಲ್ಮೆಂಟ್ ಅವಕಾಶವನ್ನು ಎನ್​ಎಸ್​​ಐ ತಾತ್ಕಾಲಿಕವಾಗಿ ಕೈಬಿಟ್ಟಿದೆ. ಮುಂದಿನ ಸೂಚನೆ ಬರುವವರೆಗೂ ಟಿ+0 ಇರಲ್ಲ.

ಏನಿದು ಟಿ+0 ಸಿಸ್ಟಂ?

ಟಿ+0 ಸಿಸ್ಟಂನಲ್ಲಿ ಟಿ ಎಂದರೆ ಟ್ರೇಡಿಂಗ್. ನೀವು ಷೇರನ್ನು ಖರೀದಿಸಿದಾಗ ಅದೇ ದಿನ ನಿಮ್ಮ ಡೀಮ್ಯಾಟ್ ಖಾತೆಗೆ ಷೇರು ವರ್ಗಾವಣೆ ಆಗುತ್ತದೆ. ನೀವು ಷೇರು ಮಾರಿದಾಗ ಅದರ ಹಣವು ನಿಮ್ಮ ಖಾತೆಗೆ ಅದೇ ದಿನದಂದು ತಲುಪುತ್ತದೆ.

ಇದನ್ನೂ ಓದಿ: ಹುರುನ್ ಅಂಡರ್ 35 ಉದ್ಯಮಿಗಳ ಪಟ್ಟಿಯಲ್ಲಿ ಪಲ್ಲೋನ್ ಮಿಸ್ತ್ರಿ, ಅಲಖ್ ಪಾಂಡೆ ಮತ್ತಿತರರು; ಚಿಕ್ಕ ವಯಸ್ಸಿನ ಉದ್ಯಮಿಗಳು ಬೆಂಗಳೂರಲ್ಲೇ ಹೆಚ್ಚು

ಷೇರು ವಿನಿಮಯ ಕೇಂದ್ರಗಳಲ್ಲಿ ಮೊದಮೊದಲು ಟಿ+5 ಸೆಟಲ್ಮೆಂಟ್ ವ್ಯವಸ್ಥೆ ಇತ್ತು. ಅಂದರೆ, ಇವತ್ತು ನೀವು ಷೇರು ಮಾರಿದರೆ ಅದರ ಹಣ ಸಿಗಲು ಐದು ದಿನ ಕಾಯಬೇಕಿತ್ತು. 2002ರಲ್ಲಿ ಟಿ+3 ಸಿಸ್ಟಂಗೆ ಬದಲಾಯಿಸಲಾಯಿತು. 2003ರಲ್ಲಿ ಟಿ+2 ಸಿಸ್ಟಂ ಬಂದಿತು. 2023ರಲ್ಲಿ ಟಿ+1 ಸಿಸ್ಟಂ ಚಾಲೂ ಇದೆ.

ಟಿ+0 ಸಿಸ್ಟಂ ಅನ್ನು ಮಾರ್ಚ್ ತಿಂಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಯಿತು. ಬಿಎಸ್​ಇ ಮತ್ತು ಎನ್​ಎಸ್​ಇ ಆಯ್ದ 25 ಷೇರುಗಳಿಗೆ ಟಿ+0 ಸೆಟಲ್ಮೆಂಟ್ ಸೌಲಭ್ಯ ತರಲಾಯಿತು. ಎಸ್​ಬಿಐ, ಎಂಆರ್​ಎಫ್, ಹಿಂಡಾಲ್ಕೋ, ವೇದಾಂತ, ಅಂಬುಜಾ ಸಿಮೆಂಟ್ಸ್, ಅಶೋಕ್ ಲೀಲ್ಯಾಂಡ್, ಬಜಾಜ್ ಆಟೊ, ಬ್ಯಾಂಕ್ ಆಫ್ ಬರೋಡಾ, ನೆಸ್ಲೆ, ಬಿಪಿಸಿಎಲ್ ಇತ್ಯಾದಿ ಷೇರುಗಳಿಗೆ ಟಿ+0 ಸೆಟಲ್ಮೆಂಟ್ ಸಿಸ್ಟಂ ಅಳವಡಿಸಲಾಗಿತ್ತು.

ಇದನ್ನೂ ಓದಿ: 15,000 ಕೋಟಿ ರೂ ಮೊತ್ತದ ಸಾಲವನ್ನೇ ಮಾರಿಬಿಟ್ಟ ಎಚ್​​ಡಿಎಫ್​ಸಿ ಬ್ಯಾಂಕ್; ಏನು ಕಾರಣ?

ನಾಳೆಯಿಂದ ಪ್ರಾಯೋಗಿಕ ಟ್ರೇಡಿಂಗ್ ಸೆಷನ್ಸ್

ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ತನ್ನ ಡಿಸಾಸ್ಟರ್ ರಿಕವರಿ ಸೈಟ್​ನಿಂದ (ವಿಪತ್ತು ಪರಿಹಾರ ತಾಣ) ಲೈವ್ ಟ್ರೇಡಿಂಗ್ ಮಾಡಲಿದೆ. ಸೆಪ್ಟೆಂಬರ್ 30ಕ್ಕೆ ಆರಂಭವಾಗಿ ಅಕ್ಟೋಬರ್ 1ರವರೆಗೆ, ಎರಡು ದಿನ, ಅಂದರೆ ಶನಿವಾರ ಮತ್ತು ಭಾನುವಾರ ಪ್ರಾಯೋಗಿಕ ಲೈವ್ ಟ್ರೇಡಿಂಗ್ ಸೆಷನ್ಸ್ ನಡೆಯಲಿವೆ.

ಶನಿವಾರ ಮಧ್ಯಾಹ್ನದ 12ಗಂಟೆಯಿಂದ 1 ಗಂಟೆಯವರೆಗೆ ಎಕ್ಸ್​ಚೇಂಜ್ ಕಂಟಿಜೆನ್ಸಿ ಟೆಸ್ಟ್​ಗಳು ನಡೆಯಲಿವೆ ಎಂದು ಎನ್​ಎಸ್​ಇ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More