15,000 ಕೋಟಿ ರೂ ಮೊತ್ತದ ಸಾಲವನ್ನೇ ಮಾರಿಬಿಟ್ಟ ಎಚ್ಡಿಎಫ್ಸಿ ಬ್ಯಾಂಕ್; ಏನು ಕಾರಣ?
HDFC bank sells loans of Rs 15,000 crore: ಎಚ್ಡಿಎಫ್ಸಿ ಬ್ಯಾಂಕ್ ತನ್ನ ಕೆಲ ಗೃಹ ಸಾಲ ಮತ್ತು ವಾಹನ ಸಾಲಗಳನ್ನು ಮಾರಿದೆ. ಕ್ರೆಡಿಟ್ ಡೆಪಾಸಿಟ್ ರೇಶಿಯೋ ಕಡಿಮೆ ಮಾಡುವ ಸಲುವಾಗಿ ದೇಶದ ಅತಿದೊಡ್ಡ ಬ್ಯಾಂಕ್ ಈ ಕ್ರಮ ಕೈಗೊಂಡಿದೆ. ವರದಿಗಳ ಪ್ರಕಾರ ಎಚ್ಡಿಎಫ್ಸಿ ಬ್ಯಾಂಕ್ 6,000 ಕೋಟಿ ರೂ ಮೊತ್ತದ ಗೃಹಸಾಲ, 9,000 ಕೋಟಿ ರೂ ಮೊತ್ತದ ಕಾರ್ ಸಾಲವನ್ನು ಮಾರಿದೆ.
ಮುಂಬೈ, ಸೆಪ್ಟೆಂಬರ್ 27: ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿದ ಎಚ್ಡಿಎಫ್ಸಿ ಸುಮಾರು 15,000 ಕೋಟಿ ರೂ ಮೊತ್ತದ ಗೃಹ ಸಾಲ ಮತ್ತು ಕಾರು ಸಾಲಗಳನ್ನು ಮಾರಿರುವುದು ತಿಳಿದುಬಂದಿದೆ. ಇದರಲ್ಲಿ 6,000 ಕೋಟಿ ರೂ ಮೊತ್ತದ ಗೃಹ ಸಾಲ, ಹಾಗೂ 9,000 ಕೋಟಿ ರೂ ಮೊತ್ತದ ಕಾರ್ ಲೋನ್ಗಳು ಸೇರಿವೆ. ಆರು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಎಚ್ಡಿಎಫ್ಸಿಯ ಗೃಹ ಸಾಲಗಳನ್ನು ಖರೀದಿಸಿವೆ. ಖಾಸಗಿ ಡೀಲ್ಗಳ ಮೂಲಕ ಈ ವ್ಯವಹಾರ ನಡೆದಿದೆ. ಎಚ್ಡಿಎಫ್ಸಿಯ ಕಾರ್ ಲೋನ್ಗಳನ್ನು ಮುಂಬೈನ ಹಲವು ಸ್ಥಳೀಯ ಅಸೆಟ್ ಮ್ಯಾನೇಜ್ಮೆಮೆಂಟ್ ಕಂಪನಿಗಳು ಪಡೆದುಕೊಂಡಿವೆ.
ಎಚ್ಡಿಎಫ್ಸಿ ತನ್ನ ಸಾಲಗಳನ್ನು ಮಾರಿದ್ದು ಯಾಕೆ?
ಬ್ಯಾಂಕುಗಳು ಠೇವಣಿ ಮತ್ತು ಸಾಲ ಮಧ್ಯೆ ಸಮತೋಲನ ಹೊಂದಿರುವುದು ಅಗತ್ಯ. ಎಚ್ಡಿಎಫ್ಸಿ ಸೇರಿದಂತೆ ಬಹಳಷ್ಟು ಬ್ಯಾಂಕುಗಳು ಠೇವಣಿಗಳ ಕೊರತೆ ಎದುರಿಸುತ್ತಿವೆ. ಅದರಲ್ಲೂ ಎಚ್ಡಿಎಫ್ಸಿ ಬ್ಯಾಂಕ್ಗೆ ಇದರ ಹೊರೆ ತೀರಾ ಹೆಚ್ಚಿತ್ತು. ಎಚ್ಡಿಎಫ್ಸಿ ವಿಲೀನದ ಬಳಿಕ ಎಚ್ಡಿಎಫ್ಸಿ ಬ್ಯಾಂಕ್ಗೆ ಸಾಲದ ಪ್ರಮಾಣ ವಿಪರೀತ ಆಗಿದೆ. ಎಚ್ಡಿಎಫ್ಸಿ ಗೃಹ ಸಾಲಗಳನ್ನು ನೀಡುತ್ತಿದ್ದ ಸಂಸ್ಥೆ. ಆ ಸಾಲವೆಲ್ಲವೂ ಎಚ್ಡಿಎಫ್ಸಿ ಬ್ಯಾಂಕ್ಗೆ ವರ್ಗವಾಗಿತ್ತು.
ಬ್ಯಾಂಕುಗಳು ಠೇವಣಿ ಮತ್ತು ಸಾಲದ ಅನುಪಾತ ಸರಿಯಾಗಿ ಪಾಲಿಸಬೇಕು ಎಂದು ಆರ್ಬಿಐ ನಿರ್ದೇಶನ ಇದೆ. ಈ ಕಾರಣಕ್ಕೆ ಎಚ್ಡಿಎಫ್ಸಿ ತನ್ನ ಸಾಲಗಳನ್ನು ಮಾರಿ ಕೈತೊಳೆದುಕೊಳ್ಳುವುದು ಅಗತ್ಯ ಇತ್ತು.
ಇದನ್ನೂ ಓದಿ: Asia Power Index: ಏಷ್ಯಾದಲ್ಲಿ ಅತಿಪ್ರಭಾವಶಾಲಿ ದೇಶಗಳು: ಅಮೆರಿಕ, ಚೀನಾ ನಂತರದ ಸ್ಥಾನ ಭಾರತಕ್ಕೆ
ಮಾರ್ಚ್ ವೇಳೆ ಎಚ್ಡಿಎಫ್ಸಿ ಬ್ಯಾಂಕ್ನ ಕ್ರೆಡಿಟ್ ಮತ್ತು ಡೆಪಾಸಿಟ್ ರೇಶಿಯೋ ಶೇ. 104ರಷ್ಟಿತ್ತು. ಅಂದರೆ ಡೆಪಾಸಿಟ್ಗಿಂತ ಸಾಲದ ಪ್ರಮಾಣ ಎರಡು ಪಟ್ಟು ಹೆಚ್ಚಿತ್ತು. ಹಿಂದಿನ ಮೂರು ವರ್ಷಗಳಲ್ಲಿ ಅದರ ಅನುಪಾತ ಶೇ. 85ರಿಂದ ಶೇ. 88ರ ಶ್ರೇಣಿಯಲ್ಲಿ ಇತ್ತು. ಜೂನ್ ತಿಂಗಳಲ್ಲಿ ಎಚ್ಡಿಎಫ್ಸಿ ಬ್ಯಾಂಕ್ 5,000 ಕೋಟಿ ರೂ ಸಾಲವನ್ನು ಮಾರಿತ್ತು. ಈಗ 15,000 ಕೋಟಿ ರೂ ಮೊತ್ತದ ಸಾಲವನ್ನು ಮಾರಿದರೆ. ಅಲ್ಲಿಗೆ ಕಳೆದ ಮೂರು ತಿಂಗಳಲ್ಲಿ ಒಟ್ಟು 20,000 ಕೋಟಿ ರೂ ಸಾಲವನ್ನು ಎಚ್ಡಿಎಫ್ಸಿ ಮಾರಿ, ಹೊರೆ ತಗ್ಗಿಸಿಕೊಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ