Asia Power Index: ಏಷ್ಯಾದಲ್ಲಿ ಅತಿಪ್ರಭಾವಶಾಲಿ ದೇಶಗಳು: ಅಮೆರಿಕ, ಚೀನಾ ನಂತರದ ಸ್ಥಾನ ಭಾರತಕ್ಕೆ

Lowy Institute Asia Power Index 2024: ಆಸ್ಟ್ರೇಲಿಯಾ ಮೂಲದ ಲೋವಿ ಇನ್ಸ್​ಟಿಟ್ಯೂಟ್ ಪ್ರಕಟಿಸಿದ ಏಷ್ಯಾ ಪವರ್ ಇಂಡೆಕ್ಸ್​ನಲ್ಲಿ ಭಾರತ 4ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಏರಿದೆ. ಜಪಾನ್ ಅನ್ನು ಹಿಂದಿಕ್ಕಿ ಮೇಲೇರಿದೆ. ಏಷ್ಯಾ ಮಟ್ಟಕ್ಕೆ ಅಮೆರಿಕ ಮತ್ತು ಚೀನಾ ಸೂಪರ್ ಪವರ್ ದೇಶಗಳೆನಿಸಿವೆ. ಭಾರತ ಆದಿಯಾಗಿ 16 ದೇಶಗಳು ಮಿಡಲ್ ಪವರ್ ದೇಶಗಳೆನಿಸಿವೆ. ಭವಿಷ್ಯದ ಸಂಪನ್ಮೂಲಗಳ ವಿಚಾರದಲ್ಲಿ ಭಾರತ ಆಶಾದಾಯಕ ಸ್ಥಿತಿಯಲ್ಲಿದೆ.

Asia Power Index: ಏಷ್ಯಾದಲ್ಲಿ ಅತಿಪ್ರಭಾವಶಾಲಿ ದೇಶಗಳು: ಅಮೆರಿಕ, ಚೀನಾ ನಂತರದ ಸ್ಥಾನ ಭಾರತಕ್ಕೆ
ಭಾರತ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 27, 2024 | 12:16 PM

ನವದೆಹಲಿ, ಸೆಪ್ಟೆಂಬರ್ 27: ಏಷ್ಯಾ ಖಂಡದಲ್ಲಿ ಅತ್ಯಂತ ಪ್ರಭಾವ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನಕ್ಕೆ ಜಿಗಿದಿದೆ. ಆಸ್ಟ್ರೇಲಿಯಾ ಮೂಲದ ಲೋವಿ ಇನ್ಸ್​ಟಿಟ್ಯೂಟ್ (Lowy Institute) ಎಂಬ ಚಿಂತನ ವೇದಿಕೆ (ಥಿಂಕ್ ಟ್ಯಾಂಕ್) ಪ್ರಕಟಿಸಿದ ಪಟ್ಟಿಯಲ್ಲಿ ಜಪಾನ್ ಅನ್ನು ಭಾರತ ಹಿಂದಿಕ್ಕಿ ಒಂದು ಸ್ಥಾನ ಮೇಲೇರಿದೆ. ಏಷ್ಯಾದಲ್ಲಿ ಅಮೆರಿಕವೇ ಅತ್ಯಂತ ಶಕ್ತಿಶಾಲಿಯಾಗಿದೆ. ಅಮೆರಿಕದ ಸಮೀಪದಲ್ಲೇ ಚೀನಾ ಇದೆ. ಲೋವಿ ಇನ್ಸ್​ಟಿಟ್ಯೂಟ್​ನ ಏಷ್ಯಾ ಪವರ್ ಇಂಡೆಕ್ಸ್​ನಲ್ಲಿ (Asia Power Index) ಅಮೆರಿಕ ಮತ್ತು ಚೀನಾ ಮೊದಲಿನ ಸಾಲಿನಲ್ಲಿವೆ. ಅಮೆರಿಕಕ್ಕೆ 81.7 ಅಂಕಗಳನ್ನು ನೀಡಲಾಗಿದೆ. ಚೀನಾಗೆ 72.7 ಅಂಕಗಳು ಸಿಕ್ಕಿವೆ. ಇವೆರಡೂ ಕೂಡ ಏಷ್ಯಾದಲ್ಲಿ ಸೂಪರ್ ಪವರ್ ಎನಿಸಿವೆ.

ಒಟ್ಟಾರೆ 27 ದೇಶಗಳು ಏಷ್ಯಾ ಪವರ್ ಇಂಡೆಕ್ಸ್​ನಲ್ಲಿವೆ. ಇದರಲ್ಲಿ ಸೂಪರ್ ಪವರ್, ಮೇಜರ್ ಪವರ್ ಮಿಡಲ್ ಪವರ್ ಮತ್ತು ಮೈನರ್ ಪವರ್ ಎಂದು ನಾಲ್ಕು ಮಟ್ಟಗಳಾಗಿ ವರ್ಗೀಕರಿಸಲಾಗಿದೆ. ಅಮೆರಿಕ ಮತ್ತು ಚೀನಾ ಸೂಪರ್ ಪವರ್ ಎನಿಸಿವೆ. ಮೇಜರ್ ಪವರ್ ದೇಶಗಳು ಯಾವುವೂ ಇಲ್ಲ. 16 ದೇಶಗಳು ಮಿಡಲ್ ಪವರ್ ಪಟ್ಟಿಯಲ್ಲಿವೆ. ಇದರಲ್ಲಿ ಭಾರತ ಮುಂಚೂಣಿಯಲ್ಲಿದೆ. ಇದು 39.1 ಅಂಕ ಪಡೆದಿದೆ. ಜಪಾನ್, ಆಸ್ಟ್ರೇಲಿಯಾ, ರಷ್ಯಾ ಮತ್ತು ಸೌತ್ ಕೊರಿಯಾ ದೇಶಗಳೂ 30ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿವೆ. ಒಂದು ಕಾಲದಲ್ಲಿ ವಿಶ್ವದ ಸೂಪರ್ ಪವರ್ ದೇಶವಾಗಿದ್ದ ರಷ್ಯಾ ಏಷ್ಯಾದಲ್ಲಿ ಹೊಂದಿರುವ ಪ್ರಭಾವದಲ್ಲಿ 6ನೇ ಸ್ಥಾನ ಪಡೆದಿದೆ.

ಇದನ್ನೂ ಓದಿ: ಹುರುನ್ ಅಂಡರ್ 35 ಉದ್ಯಮಿಗಳ ಪಟ್ಟಿಯಲ್ಲಿ ಪಲ್ಲೋನ್ ಮಿಸ್ತ್ರಿ, ಅಲಖ್ ಪಾಂಡೆ ಮತ್ತಿತರರು; ಚಿಕ್ಕ ವಯಸ್ಸಿನ ಉದ್ಯಮಿಗಳು ಬೆಂಗಳೂರಲ್ಲೇ ಹೆಚ್ಚು

ಪಾಕಿಸ್ತಾನ, ಉತ್ತರ ಕೊರಿಯಾ, ಬ್ರೂನೇ ಮೊದಲಾದ ದೇಶಗಳೂ ಕೂಡ ಮಧ್ಯಮ ಶಕ್ತಿ ಅಥವಾ ಮಿಡಲ್ ಪವರ್ ದೇಶಗಳಾಗಿವೆ. ಅಲ್ಪ ಶಕ್ತ ದೇಶಗಳಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಮಯನ್ಮಾರ್ ಮೊದಲಾದವು ಇವೆ.

ಏಷ್ಯಾದಲ್ಲಿ ಯಾವ್ಯಾವ ದೇಶಗಳು ಎಷ್ಟು ಪ್ರಭಾವ ಹೊಂದಿವೆ ಎಂದು ಗುರುತಿಸಲು ಲೋವಿ ಇನ್ಸ್​ಟಿಟ್ಯೂಟ್ ಎಂಟು ಮಾನದಂಡಗಳನ್ನು ಇಟ್ಟುಕೊಂಡಿದೆ. ಭವಿಷ್ಯದ ಸಂಪನ್ಮೂಲಗಳು, ಡಿಫೆನ್ಸ್ ನೆಟ್ವರ್ಕ್, ಸಾಂಸ್ಕೃತಿ ಪ್ರಭಾವ, ಆರ್ಥಿಕ ಸಾಮರ್ಥ್ಯ, ಮಿಲಿಟರಿ ಸಾಮರ್ಥ್ಯ, ಪ್ರತಿರೋಧ ಶಕ್ತಿಯಲ್ಲಿ ಅಮೆರಿಕವೇ ಮುಂಚೂಣಿಯಲ್ಲಿದೆ. ಆದರೆ, ಏಷ್ಯಾದಲ್ಲಿ ಆರ್ಥಿಕ ಸಂಬಂಧ ಹೆಣೆಯುವುದು ಮತ್ತು ರಾಜತಾಂತ್ರಿಕ ಪ್ರಭಾವ ಬೀರುವುದು ಈ ವಿಚಾರದಲ್ಲಿ ಅಮೆರಿಕಕ್ಕಿಂತ ಚೀನಾ ಮುಂದಿದೆ.

ಇದನ್ನೂ ಓದಿ: ಟಾಟಾ ಗ್ರೂಪ್​ನಿಂದ ಭಾರತದ ಮೊದಲ ಸೆಮಿಕಂಡಕ್ಟರ್ ತಯಾರಿಕೆ ಘಟಕ ಸ್ಥಾಪನೆ ನಿಶ್ಚಿತ; ತೈವಾನ್​ನ ಪಿಎಸ್​​ಎಂಸಿ ಜೊತೆ ಒಪ್ಪಂದ

ಭಾರತವು ಭವಿಷ್ಯದ ಸಂಪನ್ಮೂಲಗಳ ಶೇಖರಣೆಯಲ್ಲಿ ಉತ್ತಮ ಪ್ರಗತಿ ಹೊಂದಿದೆ. ಜಪಾನ್ ಅನ್ನು ಒಟ್ಟಾರೆಯಾಗಿ ಹಿಂದಿಕ್ಕಲು ಕಾರಣವಾಗಿದ್ದು ಇದೇ ವಿಚಾರ. ಆದರೆ ಏಷ್ಯಾ ಮಟ್ಟದಲ್ಲಿ ಆರ್ಥಿಕ ಸಂಬಂಧಗಳ ವಿಚಾರದಲ್ಲಿ ಭಾರತ ಹಿಂದುಳಿದಿದೆ ಎನ್ನುವುದು ಲೋವಿ ಇನ್ಸ್​ಟಿಟ್ಯೂಟ್​ನ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?