ಕನಿಷ್ಠ ವೇತನ ಹೆಚ್ಚಿಸಿದ ಸರ್ಕಾರ; ಕುಶಲಕರ್ಮಿಗಳಿಗೆ ಕನಿಷ್ಠ ದಿನಗೂಲಿ 1,035 ರೂಗೆ ಹೆಚ್ಚಳ

Minimum wages for workers get increased: ಹಣದುಬ್ಬರ ಏರಿಕೆಗೆ ಅನುಗುಣವಾಗಿ ಸರ್ಕಾರ ಕನಿಷ್ಠ ದಿನಗೂಲಿಯನ್ನು ಏರಿಕೆ ಮಾಡಿದೆ. ಅಸಂಘಟಿತ ವಲಯಗಳಲ್ಲಿ ವೇರಿಯಬಲ್ ಡಿಯರ್ನೆಸ್ ಅಲೋಯನ್ಸ್ ಅನ್ನು ಪರಿಷ್ಕರಿಸಲಾಗಿದೆ. ಸ್ಕಿಲ್ ಅಲ್ಲದ ಕೆಲಸಗಳನ್ನು ಮಾಡುವವರಿಗೆ ಕನಿಷ್ಠ ದಿನಗೂಲಿ 783 ರೂಗೆ ಏರಿಕೆ ಮಾಡಲಾಗಿದೆ. ಅರೆಕೌಶಲ್ಯದ ಕಾರ್ಮಿಕರಿಗೆ ದಿನಗೂಲಿ 868 ರೂ, ಕುಶಲಕರ್ಮಿಗಳಿಗೆ 1,035 ರೂಗೆ ಹೆಚ್ಚಳ ಮಾಡಲಾಗಿದೆ.

ಕನಿಷ್ಠ ವೇತನ ಹೆಚ್ಚಿಸಿದ ಸರ್ಕಾರ; ಕುಶಲಕರ್ಮಿಗಳಿಗೆ ಕನಿಷ್ಠ ದಿನಗೂಲಿ 1,035 ರೂಗೆ ಹೆಚ್ಚಳ
ಹಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 27, 2024 | 11:13 AM

ನವದೆಹಲಿ, ಸೆಪ್ಟೆಂಬರ್ 27: ಅಸಂಘಟಿತ ವಲಯಗಳಲ್ಲಿ (Informal sector) ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು (minimum wages) ಸರ್ಕಾರ ಹೆಚ್ಚಿಸಿದೆ. ಕುಶಲತೆಯ ಅವಶ್ಯಕತೆ ಇಲ್ಲದ ಕೆಲಸಗಳನ್ನು ಮಾಡುವವರಿಗೆ (unskilled labours) ಕನಿಷ್ಠ ವೇತನ 783 ರೂಗೆ ಏರಿಸಲಾಗಿದೆ. ವಾರಕ್ಕೆ ಒಂದು ರಜೆಯಂತೆ ಪರಿಗಣಿಸಿದರೆ ತಿಂಗಳಿಗೆ ಕನಿಷ್ಠ ವೇತನ 20,358 ರೂ ಆಗುತ್ತದೆ. ಅರೆ ಕೌಶಲ್ಯದ ಕಾರ್ಮಿಕರಿಗೆ (semi skilled workers) ಕನಿಷ್ಠ ದಿನಗೂಲಿ 868 ರೂಗೆ ಏರಿಕೆ ಮಾಡಲಾಗಿದೆ. ಉನ್ನತ ಕೌಶಲ್ಯದ ಕಾರ್ಮಿಕರಿಗೆ (highly skilled workers) ದಿನಗೂಲಿಯನ್ನು 1,035 ರೂಗೆ ಹೆಚ್ಚಿಸಲಾಗಿದೆ. ಒಟ್ಟಾರೆ ಕನಿಷ್ಠ ದಿನಗೂಲಿ ಮಾಸಿಕವಾಗಿ 20,358 ರೂನಿಂದ 26,910 ರೂವರೆಗೂ ಇರಲಿದೆ. ಅಕ್ಟೋಬರ್ 1ರಿಂದ ಇದು ಜಾರಿಯಾಗಲಿದೆ. ಇದು ಎ ಗ್ರೇಡ್ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಮಾಡಲಾಗಿರುವ ದರ ಪರಿಷ್ಕರಣೆ.

ತುಟ್ಟಿಭತ್ಯೆ ರೀತಿಯಲ್ಲಿ ಕಾರ್ಮಿಕ ಕನಿಷ್ಠ ದಿನಗೂಲಿಯನ್ನೂ ವರ್ಷದಲ್ಲಿ ಎರಡು ಬಾರಿ ಪರಿಷ್ಕರಿಸಲಾಗುತ್ತದೆ. ಏಪ್ರಿಲ್ 1 ಮತ್ತು ಅಕ್ಟೋಬರ್ 1ರಂದು ಹೊಸ ದರಗಳನ್ನು ಪ್ರಕಟಿಸಲಾಗುತ್ತದೆ. ಔದ್ಯಮಿಕ ಕಾರ್ಮಿಕರ ಹಣದುಬ್ಬರದ ಆರು ತಿಂಗಳ ಸರಾಸರಿಯ ಆಧಾರದ ಮೇಲೆ ಕಾರ್ಮಿಕರ ಕನಿಷ್ಠ ವೇತನವನ್ನು ಹೆಚ್ಚಿಸಲಾಗುತ್ತದೆ.

ಆರು ತಿಂಗಳ ಗ್ರಾಹಕ ಬೆಲೆ ಅನುಸೂಚಿಯಲ್ಲಿ (ಹಣದುಬ್ಬರ) ಶೇ. 2.40ರಷ್ಟು ಏರಿಕೆ ಆಗಿದೆ. ಈ ಬೆಲೆ ಏರಿಕೆಯಿಂದ ಜೀವನ ವೆಚ್ಚವೂ ಹೆಚ್ಚಾಗಿದೆ. ಇದನ್ನು ಸರಿದೂಗಿಸಲು ಕಾರ್ಮಿಕರಿಗೆ ವೇರಿಯಬಲ್ ಡಿಎ ಅನ್ನು ಹೆಚ್ಚಿಸಲಾಗಿದೆ.

ಇದನ್ನೂ ಓದಿ: ಹುರುನ್ ಅಂಡರ್ 35 ಉದ್ಯಮಿಗಳ ಪಟ್ಟಿಯಲ್ಲಿ ಪಲ್ಲೋನ್ ಮಿಸ್ತ್ರಿ, ಅಲಖ್ ಪಾಂಡೆ ಮತ್ತಿತರರು; ಚಿಕ್ಕ ವಯಸ್ಸಿನ ಉದ್ಯಮಿಗಳು ಬೆಂಗಳೂರಲ್ಲೇ ಹೆಚ್ಚು

ಅಸಂಘಟಿತ ವಲಯಗಳು: ಕಟ್ಟಡ ನಿರ್ಮಾಣ, ಗಣಿಗಾರಿಕೆ, ಕೃಷಿ ಇತ್ಯಾದಿ ಕ್ಷೇತ್ರಗಳು

ಕೌಶಲ್ಯ ಅವಶ್ಯಕತೆ ಇಲ್ಲದ ಕೆಲಸಗಳು: ಕಟ್ಟಡ ನಿರ್ಮಾಣ ಕಾರ್ಮಿಕರು, ಕಸ ಗುಡಿಸುವವರು, ಸ್ವಚ್ಛತಾ ಕಾರ್ಯ, ಲೋಡಿಂಗ್ ಮತ್ತು ಅನ್​ಲೋಡಿಂಗ್ ಕೆಲಸ ಮಾಡುವವರು.

ಅರೆಕೌಶಲ್ಯದ ಕೆಲಸಗಳು: ಟ್ರಕ್ ಡ್ರೈವರ್, ಹೋಟೆಲ್ ಸರ್ವರ್, ಫೈಲ್ ಕ್ಲರ್ಕ್ ಮೊದಲಾದವರು.

ಕೌಶಲ್ಯ ಅಗತ್ಯ ಇರುವ ಕೆಲಸಗಳು: ಎಲೆಕ್ಟ್ರಿಶಿಯಲ್, ಪ್ಲಂಬರ್ಸ್, ಮೆಷಿನ್ ಆಪರೇಟರ್, ಕ್ರೇನ್ ಆಪರೇಟರ್ ಮೊದಲಾದವರು.

ಇದನ್ನೂ ಓದಿ: ಗವರ್ನ್ಮೆಂಟ್ ಬಾಂಡ್, ಎಫ್ ಅಂಡ್ ಒ, ಮ್ಯೂಚುವಲ್ ಫಂಡ್ ಇತ್ಯಾದಿಗಳಿಗೆ ತೆರಿಗೆಯಲ್ಲಿ ಬದಲಾವಣೆ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ