ನಿಮಗೆ ಆಧಾರ್ ನಂಬರ್ ಮರೆತೇಹೋಯ್ತಾ? ತುರ್ತಾಗಿ ಮಾಹಿತಿ ಬೇಕೆಂದರೆ ಹೀಗೆ ಮಾಡಿ

|

Updated on: Mar 31, 2024 | 9:03 AM

Know How to retrieve lost Aadhaar number in online: ಆಧಾರ್ ನಂಬರ್ ಮರೆತುಹೋಗಿದ್ದರೆ ಅದನ್ನು ಪಡೆಯುವುದು ಕಷ್ಟವೇನಲ್ಲ. ಆನ್​ಲೈನ್​ನಲ್ಲೇ ಸುಲಭವಾಗಿ ಪತ್ತೆ ಮಾಡಬಹುದು. ಅದಕ್ಕೆ ಆಧಾರ್​ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಹಾಗೂ ಆಧಾರ್​ನಲ್ಲಿರುವ ನಿಮ್ಮ ಪೂರ್ಣ ಹೆಸರು ಗೊತ್ತಿದ್ದರೆ ಸಾಕು. ಒಂದು ವೇಳೆ ಮೊಬೈಲ್ ನಂಬರ್ ಕೂಡ ಇಲ್ಲದಿದ್ದಲ್ಲಿ ಆಗಲೂ ಕೂಡ ಆಧಾರ್ ಸಂಖ್ಯೆ ಪತ್ತೆ ಮಾಡುವ ಅವಕಾಶಗಳುಂಟು. ಈ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.

ನಿಮಗೆ ಆಧಾರ್ ನಂಬರ್ ಮರೆತೇಹೋಯ್ತಾ? ತುರ್ತಾಗಿ ಮಾಹಿತಿ ಬೇಕೆಂದರೆ ಹೀಗೆ ಮಾಡಿ
ಆಧಾರ್
Follow us on

ಆಧಾರ್ ನಂಬರ್ (Aadhaar card) ಈಗ ಬಹಳ ಮುಖ್ಯವಾಗಿರುವ ವಿವಿಧ ಉದ್ದೇಶಗಳಿಗೆ ಅಗತ್ಯವಿರುವ ದಾಖಲೆಯಾಗಿದೆ. ಇದು ಗುರುತಿಗೆ ಸಾಕ್ಷ್ಯ (id proof), ವಿಳಾಸಕ್ಕೆ ಸಾಕ್ಷ್ಯ (address proof) ದಾಖಲೆ ಎನಿಸಿದೆ. 12 ಅಂಕಿಗಳ ಆಧಾರ್ ಸಂಖ್ಯೆಯನ್ನು ಹಲವು ಕಾರ್ಯಗಳಿಗೆ ಬಳಸಲಾಗುತ್ತದೆ. ಕೆಲವೊಮ್ಮೆ ಆಧಾರ್ ಕಾರ್ಡ್ ಕಳೆದುಹೋಗಿ, ಅದರ ನಂಬರ್ ಕೂಡ ಮರೆತುಹೋಗಿರುವ ಸಾಧ್ಯತೆ ಇಲ್ಲದಿಲ್ಲ. ಆಧಾರ್ ಸಂಖ್ಯೆಯೂ ಗೊತ್ತಿಲ್ಲ, ಅದರೆ ಎನ್ಲೋಲ್ಮೆಂಟ್ ನಂಬರ್ ಗೊತ್ತಿದ್ದರೆ ಆಧಾರ್ ಸಂಖ್ಯೆ ಹೊರತೆಗೆಯಬಹುದು. ಒಂದು ವೇಳೆ ಎನ್​ರೋಲ್ಮೆಂಟ್ ನಂಬರ್ ಕೂಡ ಗೊತ್ತಿಲ್ಲದಿದ್ದರೆ? ಈ ಸನ್ನಿವೇಶದಲ್ಲೂ ಆಧಾರ್ ಸಂಖ್ಯೆಯನ್ನು ಮರಳಿ ಪಡೆಯುವ ಅವಕಾಶ ಇದೆ. ಇದು ಬಹಳ ಸರಳ. ಯುಐಡಿಎಐ ವೆಬ್​ಸೈಟ್​ನಲ್ಲಿ ಮರೆತುಹೋದ ಆಧಾರ್ ನಂಬರ್ ಅನ್ನು ಕಂಡುಹಿಡಿಯಬಹುದು. ಆದರೆ, ಆಧಾರ್ ಕಾರ್ಡ್​ನಲ್ಲಿ ನೀವು ನೀಡಿರುವ ನಿಮ್ಮ ಹೆಸರು ಮತ್ತು ಅದಕ್ಕೆ ನೊಂದಾಯಿಸಿರುವ ಮೊಬೈಲ್ ನಂಬರ್ ಇದ್ದರೆ ಸಾಕು. ಆಧಾರ್ ಸಂಖ್ಯೆ ಸುಲಭವಾಗಿ ಕಂಡುಹಿಡಿಯಬಹುದು.

ಆಧಾರ್ ನಂಬರ್ ಪತ್ತೆ ಮಾಡುವ ಸುಲಭ ಕ್ರಮ

ಮರೆತುಹೋದ ಆಧಾರ್ ಸಂಖ್ಯೆಯನ್ನು ಕಂಡು ಹಿಡಿಯಲು ಈ ಮುಂದಿನ ಲಿಂಕ್ ಕ್ಲಿಕ್ ಮಾಡಿ: myaadhaar.uidai.gov.in/retrieve-eid-uid

ಇಲ್ಲಿ ಆಧಾರ್ ಕಾರ್ಡ್​ನಲ್ಲಿರುವ ನಿಮ್ಮ ಪೂರ್ಣ ಹೆಸರು, ಆಧಾರ್​ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ನಮೂದಿಸಿ. ಕ್ಯಾಪ್ಚಾ ಹಾಕಿ ಒಟಿಪಿ ಪಡೆಯಿರಿ.

ಬಳಿಕ ನಿಮ್ಮ ಮೊಬೈಲ್ ನಂಬರ್​ಗೆ ಬರುವ ಒಟಿಪಿಯನ್ನು ಹಾಕಿ ಸಲ್ಲಿಸಿ.

ನಿಮ್ಮ ನೊಂದಾಯಿತ ಮೊಬೈಲ್ ನಂಬರ್​ಗೆ ಆಧಾರ್ ನಂಬರ್ ಅನ್ನು ಯುಐಡಿಎಐ ವತಿಯಿಂದ ಕಳುಹಿಸಲಾಗುತ್ತದೆ.

ಇದನ್ನೂ ಓದಿ: ಏಪ್ರಿಲ್ ತಿಂಗಳಲ್ಲಿ ಯುಗಾದಿ, ಈದ್ ಸೇರಿ ಬ್ಯಾಂಕುಗಳಿಗೆ ಒಟ್ಟು 14 ದಿನ ರಜೆ; ಕರ್ನಾಟಕದಲ್ಲಿ ಯಾವತ್ತಿದೆ ರಜೆ

ಮೊಬೈಲ್ ನಂಬರ್ ಕೂಡ ಗೊತ್ತಿಲ್ಲದಿದ್ದರೆ ಹೀಗೆ ಮಾಡಬಹುದು…

ಒಂದು ವೇಳೆ ಆಧಾರ್​ಗೆ ನೀವು ಮೊಬೈಲ್ ನಂಬರ್ ಲಿಂಕ್ ಮಾಡದೇ ಹೋಗಿದ್ದು, ಆಗ ಆಧಾರ್ ಸಂಖ್ಯೆ ಮರೆತುಹೋಗಿದ್ದರೆ ಅದನ್ನು ಪಡೆಯುವ ಅವಕಾಶ ಇರುತ್ತದೆ. ಅದಕ್ಕೆ ಆಧಾರ್ ಕೇಂದ್ರಕ್ಕೆ ಹೋಗಿ ಪ್ರಿಂಟ್ ಆಧಾರ್ ಸರ್ವಿಸ್ ಪಡೆಯಬಹುದು.

ಆಧಾರ್ ಸೆಂಟರ್​ಗೆ ಹೋಗಿ ನಿಮ್ಮ ಹೆಸರು, ಊರು ಇತ್ಯಾದಿ ವಿವರವನ್ನು ನಮೂದಿಸಿ. ಫಿಂಗರ್ ಪ್ರಿಂಟ್ ಇತ್ಯಾದಿ ಬಯೋಮೆಟ್ರಿಕ್ ಮಾಹಿತಿಯನ್ನು ಒದಗಿಸಿ. ಇದು ಸರಿಹೊಂದಿದರೆ ನಿಮಗೆ ಆಧಾರ್ ಕಾರ್ಡ್ ಅನ್ನು ಅಲ್ಲಿಯೇ ನೀಡಲಾಗುತ್ತದೆ.

ಅಷ್ಟೇ ಅಲ್ಲದೆ, 1947 ನಂಬರ್​ಗೆ ಕರೆ ಮಾಡಿ, ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಕಾಲ್​ನಲ್ಲಿರುವ ಆಪರೇಟರ್​ಗೆ ತಿಳಿಸಿದರೆ ಅವರು ಆಧಾರ್ ನಂಬರ್ ಅನ್ನು ನಿಮಗೆ ತಿಳಿಸುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ