ಭಾರತದ ಫಾರೆಕ್ಸ್ ರಿಸರ್ವ್ಸ್ 642.631 ಬಿಲಿಯನ್ ಡಾಲರ್ಗೆ ಏರಿಕೆ; ಇದು ಸಾರ್ವಕಾಲಿಕ ಗರಿಷ್ಠ ಮಟ್ಟ
India's Forex Reserves: ಭಾರತದ ಫಾರೆಕ್ಸ್ ರಿಸರ್ವ್ಸ್ ಮೊತ್ತ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ. ಆರ್ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಮಾರ್ಚ್ 22ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 642.631 ಬಿಲಿಯನ್ ಡಾಲರ್ನಷ್ಟಾಗಿದೆ. 2021ರ ಸೆಪ್ಟಂಬರ್ನಲ್ಲಿ ಫಾರೆಕ್ಸ್ ರಿಸರ್ವ್ಸ್ 642.453 ಬಿಲಿಯನ್ ಡಾಲರ್ನಷ್ಟಾಗಿತ್ತು. ಆ ಮಟ್ಟವನ್ನು ಮೀರಿಸಿ ಅದು ಹೆಚ್ಚಾಗಿದೆ. ಫಾರೀನ್ ಕರೆನ್ಸಿ ಆಸ್ತಿ, ಎಸ್ಡಿಆರ್ ಕಡಿಮೆ ಆದರೂ ಒಟ್ಟಾರೆ ಫಾರೆಕ್ಸ್ ರಿಸರ್ವ್ಸ್ ಹೆಚ್ಚಲು ಚಿನ್ನದ ಮೀಸಲು ಸಂಗ್ರಹ ಹೆಚ್ಚಾಗಿದ್ದು ಕಾರಣ.
ನವದೆಹಲಿ, ಮಾರ್ಚ್ 31: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (Forex Reserves) ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ. ಮಾರ್ಚ್ 22ರಂದು ಅಂತ್ಯಗೊಂಡ ವಾರದಲ್ಲಿ 140 ಮಿಲಿಯನ್ ಡಾಲರ್ನಷ್ಟು ಫಾರೆಕ್ಸ್ ರಿಸರ್ವ್ಸ್ ಹೆಚ್ಚಳವಾಗಿದೆ. ಇದರೊಂದಿಗೆ ನಿಧಿ ಮೊತ್ತ 642.631 ಬಿಲಿಯನ್ ಡಾಲರ್ ಆಗಿದೆ. ಹಿಂದಿನ ವಾರದಲ್ಲಿ 6.396 ಬಿಲಿಯನ್ ಡಾಲರ್ನಷ್ಟು ಏರಿತ್ತು. ಆರ್ಬಿಐ ದತ್ತಾಂಶದ ಪ್ರಕಾರ 2021ರ ಸೆಪ್ಟೆಂಬರ್ ತಿಂಗಳಲ್ಲಿ ಫಾರೆಕ್ಸ್ ರಿಸರ್ವ್ಸ್ ಮೊತ್ತ 642.453 ಬಿಲಿಯನ್ ಡಾಲರ್ನಷ್ಟಿತ್ತು. ಅದು ಸಾರ್ವಕಾಲಿಕ ಗರಿಷ್ಠ ಮೊತ್ತವಾಗಿತ್ತು. ಈಗ ಅದನ್ನೂ ಮೀರಿಸಿ ಫಾರೆಕ್ಸ್ ರಿಸರ್ವ್ಸ್ ಹೆಚ್ಚಾಗಿದೆ.
ಮಾರ್ಚ್ 29ರಂದು ಆರ್ಬಿಐ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಮಾರ್ಚ್ 22ರ ವಾರದಲ್ಲಿ 140 ಮಿಲಿಯನ್ ಡಾಲರ್ನಷ್ಟು ಅಲ್ಪ ಹೆಚ್ಚಳ ಆಗಿದೆ. ಈ ಪೈಕಿ ವಿದೇಶೀ ಕರೆನ್ಸಿ ಸಂಗ್ರಹ ಕಡಿಮೆ ಆಗಿದೆ. 123 ಮಿಲಿಯನ್ ಡಾಲರ್ನಷ್ಟು ಕರೆನ್ಸಿ ಆಸ್ತಿ ಕುಂಠಿತವಾಗಿದೆ. ಎಸ್ಡಿಆರ್ ಅಥವಾ ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಕೂಡ 57 ಮಿಲಿಯನ್ ಡಾಲರ್ ಕಡಿಮೆ ಆಗಿದೆ. ಐಎಂಎಫ್ನೊಂದಿಗಿನ ನಿಧಿ ಕೂಡ 27 ಮಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ. ಈ ಮೂರು ಕೂಡ ಕಡಿಮೆ ಆದರೂ ಕೂಡ ಒಟ್ಟಾರೆ ಫಾರೆಕ್ಸ್ ರಿಸರ್ವ್ಸ್ ಹೆಚ್ಚಲು ಕಾರಣವಾಗಿರುವುದು ಗೋಲ್ಡ್ ರಿಸರ್ವ್ಸ್ನಲ್ಲಿ ಆದ ಹೆಚ್ಚಳ. ಚಿನ್ನದ ಮೀಸಲು ಸಂಪತ್ತು 347 ಮಿಲಿಯನ್ ಡಾಲರ್ನಷ್ಟು ಹೆಚ್ಚಾಗಿದೆ.
ಮಾರ್ಚ್ 22ಕ್ಕೆ ಭಾರತದ ಫಾರೆಕ್ಸ್ ರಿಸರ್ವ್ಸ್
ಒಟ್ಟಾರೆ ಫಾರೆಕ್ಸ್ ರಿಸರ್ವ್ಸ್: 642.631 ಬಿಲಿಯನ್ ಡಾಲರ್
- ಫಾರೀನ್ ಕರೆನ್ಸಿ ಆಸ್ತಿ: 568.264 ಬಿಲಿಯನ್ ಡಾಲರ್
- ಗೋಲ್ಡ್ ರಿಸರ್ವ್ಸ್: 51.487 ಬಿಲಿಯನ್ ಡಾಲರ್
- ಎಸ್ಡಿಆರ್: 18.219 ಬಿಲಿಯನ್ ಡಾಲರ್
- ಐಎಂಎಫ್ನಲ್ಲಿನ ನಿಧಿ: 4.662 ಬಿಲಿಯನ್ ಡಾಲರ್
ಇದನ್ನೂ ಓದಿ: ಚಿನ್ನ ವರ್ಸಸ್ ಷೇರು, 2023-24ರಲ್ಲಿ ಹೆಚ್ಚು ಲಾಭ ತಂದಿದ್ದು ಯಾವುದು? ಇಂಟ್ರೆಸ್ಟಿಂಗ್ ವಿಷಯ
ಭಾರತದ ಫಾರೆಕ್ಸ್ ರಿಸರ್ವ್ಸ್ ಮೊತ್ತದಲ್ಲಿ ಭಾರತದ್ದು ನಾಲ್ಕನೇ ಸ್ಥಾನ
ವಿದೇಶೀ ವಿನಿಮಯ ಮೀಸಲು ನಿಧಿ ಸಂಗ್ರಹದಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಚೀನಾ ಬಳಿ 3.2 ಟ್ರಿಲಿಯನ್ ಡಾಲರ್ನಷ್ಟು ಫಾರೆಕ್ಸ್ ರಿಸರ್ವ್ಸ್ ಇದೆ. ಜಪಾನ್ 1.28 ಟ್ರಿಲಿಯನ್ ಡಾಲರ್ನಷ್ಟು ಸಂಗ್ರಹ ಹೊಂದಿದೆ. ಸ್ವಿಟ್ಜರ್ಲ್ಯಾಂಡ್ 868 ಬಿಲಿಯನ್ ಡಾಲರ್ನಷ್ಟು ಫಾರೆಕ್ಸ್ ಆಸ್ತಿ ಹೊಂದಿದೆ. ಭಾರತದ ಕೆಳಗೆ ಐದನೇ ಸ್ಥಾನದಲ್ಲಿರುವ ರಷ್ಯಾ ಬಳಿಕ 590 ಬಿಲಿಯನ್ ಡಾಲರ್ನಷ್ಟು ಫಾರೆಕ್ಸ್ ಮೀಸಲು ಸಂಪತ್ತು ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ