ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡಲು ಗಡುವು ಜೂನ್ 14ಕ್ಕೆ ವಿಸ್ತರಣೆ; ಆನ್​ಲೈನ್​ನಲ್ಲಿ ಈ ಕಾರ್ಯ ಮಾಡುವುದು ಹೇಗೆ? ಇಲ್ಲಿದೆ ವಿವರ

Free Update of Aadhaar Till June 14th: ಶುಲ್ಕ ಪಾವತಿಸುವ ಅಗತ್ಯ ಇಲ್ಲದೇ ಆನ್​ಲೈನ್​ನಲ್ಲಿ ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡಲು ನೀಡಲಾಗಿದ್ದ ಸಮಯಾವಕಾಶವನ್ನು ಮಾರ್ಚ್ 14ರಿಂದ ಜೂನ್ 14ಕ್ಕೆ ವಿಸ್ತರಿಸಲಾಗಿದೆ. ವಿಳಾಸ ಬದಲಾಯಿಸಲಾಗಿದ್ದರೆ, ಹೆಸರು ಬದಲಾಯಿಸುವುದಿದ್ದರೆ, ಜನ್ಮದಿನಾಂಕ ಬದಲಿಸುವುದಿದ್ದರೆ ಹೀಗೆ ಆಧಾರ್​ನಲ್ಲಿ ಅಪ್​ಡೇಟ್ ಮಾಡಬಹುದು. 10 ವರ್ಷಕ್ಕೂ ಹೆಚ್ಚು ಹಳೆಯ ಆಧಾರ್ ಅನ್ನು ಅಪ್​ಡೇಟ್ ಮಾಡಬೇಕು.

ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡಲು ಗಡುವು ಜೂನ್ 14ಕ್ಕೆ ವಿಸ್ತರಣೆ; ಆನ್​ಲೈನ್​ನಲ್ಲಿ ಈ ಕಾರ್ಯ ಮಾಡುವುದು ಹೇಗೆ? ಇಲ್ಲಿದೆ ವಿವರ
ಆಧಾರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 12, 2024 | 12:09 PM

ನವದೆಹಲಿ, ಮಾರ್ಚ್ 12: ಆಧಾರ್ ಕಾರ್ಡ್ (Aadhaar Card) ಈಗ ಬಹಳ ಪ್ರಮುಖವಾಗಿ ಬೇಕಾಗಿರುವ ದಾಖಲೆಯಾಗಿದೆ. ವೈಯಕ್ತಿಕ ಗುರುತಿನ ಜೊತೆಗೆ ನಮ್ಮ ನಿವಾಸದ ದಾಖಲೆಯಾಗಿಯೂ ಇದನ್ನು ಬಳಸಬಹುದು. ಸರ್ಕಾರಿ ಸೌಲಭ್ಯಗಳು ಸೇರಿದಂತೆ ನಾನಾ ಸೇವೆಗಳಿಗೆ ಆಧಾರ್ ದಾಖಲೆ ನೆರವಾಗುತ್ತದೆ. ವ್ಯಕ್ತಿಯ ಬಯೋಮೆಟ್ರಿಕ್ ದತ್ತಾಂಶ, ವಿಳಾಸ ಮೊದಲಾದ ಮಾಹಿತಿ ಆಧಾರ್​ನಲ್ಲಿ ಇರುತ್ತದೆ. ಆಧಾರ್​ನಲ್ಲಿ ಕೆಲವಿಷ್ಟು ಮಾಹಿತಿಯನ್ನು ಆನ್​ಲೈನ್​ನಲ್ಲಿ ಅಪ್​ಡೇಟ್ ಮಾಡಲು ಸಾಧ್ಯವಿದೆ. ಮಾರ್ಚ್ 14ರವರೆಗೂ ಉಚಿತವಾಗಿ ಮಾಡಲು (free aadhaar updation) ಅವಕಾಶ ನೀಡಲಾಗಿತ್ತು. ಈಗ ಅದನ್ನು ಜೂನ್ 14ಕ್ಕೆ ವಿಸ್ತರಿಸಲಾಗಿದೆ. ಅಂದರೆ ಜೂನ್ 14ರವರೆಗೂ ನೀವು ಆನ್​ಲೈನ್​ನಲ್ಲಿ ಆಧಾರ್ ಅನ್ನು ಅಪ್​ಡೇಟ್ ಮಾಡಬಹುದಾಗಿದೆ.

ಆಧಾರ್ ಯಾಕೆ ಅಪ್​ಡೇಟ್ ಮಾಡಬೇಕು?

ಹತ್ತಕ್ಕೂ ಹೆಚ್ಚು ವರ್ಷಗಳಿಂದ ಆಧಾರ್ ಅನ್ನು ಅಪ್​ಡೇಟ್ ಮಾಡದೇ ಇದ್ದವರು ಅದನ್ನು ಅಪ್​ಡೇಟ್ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ. ಬಹಳಷ್ಟು ಜನರು ಒಮ್ಮೆ ಆಧಾರ್ ಕಾರ್ಡ್ ಮಾಡಿಸಿದಾಗಿನಿಂದ ಅದನ್ನು ಅಪ್​ಡೇಟ್ ಮಾಡಿಲ್ಲ. ನಿಮ್ಮ ಪ್ರೊಫೈಲ್​ನಲ್ಲಿ ಯಾವುದೇ ಮಾಹಿತಿ ಬದಲಾವಣೆ ಇಲ್ಲದಿದ್ದರೂ ಕೂಡ ಅದನ್ನು ನಮೂದಿಸಿ ಅಪ್​ಡೇಟ್ ಮಾಡಬಹುದು.

ಇದನ್ನೂ ಓದಿ: ಬಿಟ್​ಕಾಯಿನ್ 72,000 ಡಾಲರ್ ಮೈಲಿಗಲ್ಲು; ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಕ್ರಿಪ್ಟೋ; ಯಾಕಿಷ್ಟು ಏರಿಕೆ ಆಗುತ್ತಿದೆ? ಇಲ್ಲಿದೆ ಕಾರಣ

ವಯಸ್ಸಾದಂತೆ ಬೆರಳು ಸವೆದು ಬೆರಳಚ್ಚು ಗುರುತು ಮಾಸಬಹುದು. ಮೊದಲಿನಂತೆ ಬೆರಳಚ್ಚು ಸರಿಯಾಗಿ ಮೂಡದೇ ಇರಬಹುದು. ಹೀಗಾಗಿ, ಆಧಾರ್​ನಲ್ಲಿ ನಿಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಅಪ್​ಡೇಟ್ ಮಾಡುವುದು ಅವಶ್ಯಕ ಎಂದು ಹೇಳಲಾಗುತ್ತದೆ.

ಆನ್​ಲೈನ್​ನಲ್ಲಿ ಆಧಾರ್ ಅಪ್​ಡೇಟ್ ಮಾಡುವ ಕ್ರಮಗಳು

  • ಯುಐಡಿಎಐನ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ: uidai.gov.in/
  • ಈ ವೆಬ್​ಸೈಟ್​ನಿಂದ ಮೈ ಆಧಾರ್ ಪೋರ್ಟಲ್​ಗೆ ಹೋಗಿ.
  • ಇಲ್ಲಿ ಆಧಾರ್ ನಂಬರ್ ಮತ್ತು ಒಟಿಪಿ ಮೂಲಕ ಲಾಗಿನ್ ಆಗಿರಿ.
  • ಅದರಲ್ಲಿ ನಿಮ್ಮ ಪ್ರೊಫೈಲ್​ಗೆ ಹೋಗಿ ಮಾಹಿತಿ ವೀಕ್ಷಿಸಬಹುದು.
  • ಎಲ್ಲವೂ ಸರಿ ಇದ್ದರೆ ಒಪ್ಪಿಗೆ ನೀಡಬಹುದು.

ಇದನ್ನೂ ಓದಿ: ಕಾರ್ ಲೋನ್​ಗೆ ನಿಮ್ಮ ಕನಿಷ್ಠ ಸಿಬಿಲ್ ಸ್ಕೋರ್ ಎಷ್ಟಿರಬೇಕು? ಇಲ್ಲಿದೆ ಡೀಟೇಲ್ಸ್

ಒಂದು ವೇಳೆ ವಿಳಾಸ ಮತ್ತಿತರ ಮಾಹಿತಿ ಬದಲಿಸಬೇಕೆಂದಿದ್ದರೆ ಅದನ್ನು ಮಾಡಬಹುದು. ಅದರ ದಾಖಲೆಗಳ ಸ್ಕ್ಯಾನ್ಡ್ ಕಾಪಿ ನಿಮ್ಮ ಬಳಿ ಇರಬೇಕು. ವಿಳಾಸ ಮಾಹಿತಿ ಬದಲಾಯಿಸಬೇಕಿದ್ದರೆ ಹೊಸ ವಿಳಾಸದ ಸಾಕ್ಷ್ಯ ಇರುವ ದಾಖಲೆ ಇರಬೇಕು. ಹೆಸರು ಬದಲಾಯಿಸಲಾಗಿದ್ದರೆ, ಅದಕ್ಕೆ ಪೂರಕ ದಾಖಲೆ ಇರಬೇಕು.

ಆಧಾರ್ ಕೇಂದ್ರಕ್ಕೆ ಹೋಗಿಯೂ ಮಾಡಿಸಬಹುದು

ನಿಮ್ಮ ಸಮೀಪದ ಆಧಾರ್ ಕೇಂದ್ರಗಳಿಗೆ ಹೋಗಿ ಆಧಾರ್ ಅಪ್​ಡೇಟ್ ಮಾಡಬಹುದು. ಬೆಂಗಳೂರು ಒನ್ ಇತ್ಯಾದಿ ಕಡೆಯೂ ಈ ಸೇವೆ ಲಭ್ಯ ಇರುತ್ತದೆ. ಇಲ್ಲಿ 50 ರೂ ಶುಲ್ಕ ಪಾವತಿಸಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ