ಜಿಎಸ್ಟಿ ಇನ್ವಾಯ್ಸ್ ಅಪ್ಲೋಡ್ ಮಾಡುವ ಡೆಡ್ಲೈನ್ ಸೇರಿದಂತೆ ನವೆಂಬರ್ನಲ್ಲಿ ಐದು ಪ್ರಮುಖ ಬದಲಾವಣೆಗಳಿವು…
Major Changes In November: ನೂರು ಕೋಟಿ ರೂ ವ್ಯವಹಾರ ಹೊಂದಿರುವ ದೊಡ್ಡ ಕಂಪನಿಗಳು 30 ದಿನದೊಳಗೆ ಜಿಎಸ್ಟಿ ಇನ್ವಾಯ್ಸ್ಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಬೇಕು. ಇದೂ ಸೇರಿದಂತೆ ಇನ್ನೂ ಕೆಲ ನಿಯಮ ಬದಲಾವಣೆಗಳು ನವೆಂಬರ್ನಿಂದ ಚಾಲನೆಗೊಳ್ಳಲಿವೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ...
ಅಕ್ಟೋಬರ್ ತಿಂಗಳು ಮುಗಿಯಲು ಒಂದು ವಾರ ಬಾಕಿ ಇದೆ. ನವೆಂಬರ್ ತಿಂಗಳಲ್ಲಿ ಯಥಾಪ್ರಕಾರ ಒಂದಷ್ಟು ವ್ಯಾವಹಾರಿಕ ಮತ್ತು ಹಣಕಾಸು ಬದಲಾವಣೆಗಳು ಇರುತ್ತವೆ. ಈ ಬದಲಾವಣೆಗಳು ಸರ್ಕಾರದ ನೀತಿಗಳಿಗೆ ಸಂಬಂಧಿಸಿದ್ದು. ಜಿಎಸ್ಟಿ, ಆಮದು ನಿರ್ಬಂಧ, ಷೇರು ವಹಿವಾಟು ಶುಲ್ಕ ಇತ್ಯಾದಿಗಳಲ್ಲಿ ಒಂದಷ್ಟು ಬದಲಾವಣೆಗಳಿವೆ. ಇವುಗಳಲ್ಲಿ ಪ್ರಮುಖವಾದುವು ಇಲ್ಲಿವೆ…
ದೊಡ್ಡ ವ್ಯವಹಾರಗಳಿಗೆ ಜಿಎಸ್ಟಿಯಲ್ಲಿ ಬದಲಾವಣೆ
ನೂರು ಕೋಟಿ ರೂಗಿಂತ ಹೆಚ್ಚು ಮೊತ್ತದ ಟರ್ನೋವರ್ ಇರುವ ಸಂಸ್ಥೆಗಳು 30 ದಿನದೊಳಗೆ ಇ-ಇನ್ವಾಯ್ಸಿಂಗ್ ಪೋರ್ಟಲ್ನಲ್ಲಿ ಜಿಎಸ್ಟಿ ಇನ್ವಾಯ್ಸ್ಗಳನ್ನು ಅಪ್ಲೋಡ್ ಮಾಡಬೇಕು. ಈ ಕ್ರಮವು ನವೆಂಬರ್ 1ರಿಂದ ಚಾಲನೆಗೆ ಬರುತ್ತದೆ.
ಲ್ಯಾಪ್ಟಾಪ್ ಆಮದು ನಿರ್ಬಂಧ
ಆಮದು ನಿರ್ಬಂಧಿತ ಎಚ್ಎಸ್ಎನ್ 8741 ಕೆಟಗರಿ ಅಡಿಯಲ್ಲಿ ಬರುವ ಲ್ಯಾಪ್ಟಾಪ್, ಟ್ಯಾಬ್ಲೆಟ್, ಪರ್ಸನಲ್ ಕಂಪ್ಯೂಟರ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಅಕ್ಟೋಬರ್ 30ರವರೆಗೂ ಅವಕಾಶ ಕೊಡಲಾಗಿದೆ. ನವೆಂಬರ್ 1ರಿಂದ ಇದು ಮುಂದುವರಿಯುತ್ತದಾ ಎಂಬುದು ಗೊತ್ತಿಲ್ಲ.
ಇದನ್ನೂ ಓದಿ: ಬೆಂಗಳೂರು-ಸಿಂಗಾಪುರಕ್ಕೆ ಏರ್ ಇಂಡಿಯಾ ನಾನ್ ಸ್ಟಾಪ್ ಫ್ಲೈಟ್; ಸಮಯ, ಟಿಕೆಟ್ ಬೆಲೆ ಇತ್ಯಾದಿ ವಿವರ
ಈಕ್ವಿಟಿ ಡಿರೈವೇಟಿವ್ ವಹಿವಾಟು ಶುಲ್ಕ ಹೆಚ್ಚಳ
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಈಕ್ವಿಟಿ ಡಿರೈವೇಟಿವ್ ವಿಭಾಗದಲ್ಲಿ ನಡೆಯುವ ವಹಿವಾಟುಗಳಿಗೆ ಶುಲ್ಕವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ನವೆಂಬರ್ 1ರಿಂದ ಜಾರಿಗೆ ಬರುತ್ತದೆ. ಎಸ್ ಅಂಡ್ ಪಿ ಬಿಎಸ್ಇ ಸೆನ್ಸೆಕ್ಸ್ ಆಪ್ಷನ್ಸ್ನ ಟ್ರೇಡಿಂಗ್ನಲ್ಲಿ ಈ ಶುಲ್ಕ ಏರಿಕೆ ಇರುತ್ತದೆ.
ಕಿಂಡಲ್ ಫೈಲ್ಗಳಿಗೆ ಅಮೇಜಾನ್ ಬೆಂಬಲ ಇಲ್ಲ…
ನವೆಂಬರ್ 1ರಿಂದ ಮೋಬಿ (MOBI) ಫಾರ್ಮ್ಯಾಟ್ನ ಫೈಲ್ಗಳಿಗೆ ಅಮೇಜಾನ್ ಸಪೋರ್ಟ್ ನೀಡುವುದನ್ನು ನಿಲ್ಲಿಸುತ್ತದೆ. ಆನ್ಲೈನ್ನಲ್ಲಿ ಪುಸ್ತಕ ಓದುವ ಪ್ಲಾಟ್ಫಾರ್ಮ್ ಆಗಿರುವ ಕಿಂಡಲ್ ರೀಡರ್ನಲ್ಲಿ ಸಪೋರ್ಟ್ ಹೊಂದಿರುವ ಫೈಲ್ಗಳಿಗೆ (.mobi, .azw, .prc) ಅಮೇಜಾನ್ ಅವಕಾಶ ನೀಡುವುದಿಲ್ಲ. ಇದರಿಂದ ಇಮೇಲ್, ಕಿಂಡಲ್ ಆ್ಯಪ್, ಆಂಡ್ರಾಯ್ಡ್, ವಿಂಡೋಸ್ ಮತ್ತು ಮ್ಯಾಕ್ ಮುಖಾಂತರ ಮೋಬಿ ಫೈಲ್ಗಳನ್ನು ಕಳುಹಿಸಲು ‘ಸೆಂಡ್ ಟು ಕಿಂಡಲ್’ ಫೀಚರ್ ಬಳಸುವ ಬಳಕೆದಾರರಿಗೆ ಕಷ್ಟವಾಗುತ್ತದೆ.
ಇದನ್ನೂ ಓದಿ: ಉದ್ಯೋಗ ಬಹಳ ರಿಸ್ಕ್; ಬಿಸಿನೆಸ್ ಮಾಡ್ರಪ್ಪ ಅಂತಿದಾರೆ ಮೈಕ್ರೋಸಾಫ್ಟ್ ಇಂಡಿಯಾ ಮಾಜಿ ಛೇರ್ಮನ್ ರವಿ ವೆಂಕಟೇಸನ್
ಯೂರೋಪಿಯನ್ ಪೇಟೆಂಟ್ ಆಫೀಸ್ನಲ್ಲಿ ಬದಲಾವಣೆಗಳು
ಇಪಿಒ ಅಥವಾ ಯೂರೋಪಿಯನ್ ಪೇಟೆಂಟ್ ಆಫೀಸ್ನಲ್ಲಿ ಈಗಿರುವ ನಿಯಮಗಳ ಪ್ರಕಾರ, ಅದು ಹೊರಡಿಸುವ ಯಾವುದೇ ಸಂಹವನವನ್ನು ಆ ದಿನಾಂಕ ಬಳಿಕ 10 ದಿನಗಳಲ್ಲಿ ನೋಟಿಫೈ ಆಗುತ್ತದೆ. ಈ 10 ದಿನಗಳ ನಿಯಮ ನವೆಂಬರ್ 1ರಿಂದ ರದ್ದಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ