Petrol Diesel Price on February 26: ಕಚ್ಚಾತೈಲ ಬೆಲೆ ಕುಸಿತ, ಛತ್ತೀಸ್​ಗಢದಲ್ಲಿ ಪೆಟ್ರೋಲ್ ಬೆಲೆ ಇಳಿಕೆ, ಪಂಜಾಬ್​ನಲ್ಲಿ ಏರಿಕೆ

|

Updated on: Feb 26, 2024 | 7:12 AM

ಸರ್ಕಾರಿ ತೈಲ ಕಂಪನಿಗಳು ಫೆಬ್ರವರಿ 26, ಸೋಮವಾರ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್‌ನ ಹೊಸ ಬೆಲೆಗಳನ್ನು ಬಿಡುಗಡೆ ಮಾಡಿವೆ. ರಾಷ್ಟ್ರಮಟ್ಟದಲ್ಲಿ ಇಂಧನ ಬೆಲೆಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬರಲಿಲ್ಲ. ಕಚ್ಚಾ ತೈಲದ ಅಂತಾರಾಷ್ಟ್ರೀಯ ಬೆಲೆಗೆ ಅನುಗುಣವಾಗಿ ಭಾರತದಲ್ಲಿ ಇಂಧನ ಬೆಲೆಯನ್ನು ನಿರ್ಧರಿಸಲಾಗುತ್ತದೆ. ದೆಹಲಿ, ಬೆಂಗಳೂರು, ಮುಂಬೈ, ಚೆನ್ನೈ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ತಿಳಿಯೋಣ.

Petrol Diesel Price on February 26: ಕಚ್ಚಾತೈಲ ಬೆಲೆ ಕುಸಿತ, ಛತ್ತೀಸ್​ಗಢದಲ್ಲಿ ಪೆಟ್ರೋಲ್ ಬೆಲೆ ಇಳಿಕೆ, ಪಂಜಾಬ್​ನಲ್ಲಿ ಏರಿಕೆ
ಪೆಟ್ರೋಲ್
Image Credit source: Business Today
Follow us on

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ(Crude Oil) ಬೆಲೆಯಲ್ಲಿ ಇಳಿಕೆಯಾಗಿದೆ. ಸೋಮವಾರ ಬೆಳಗ್ಗೆ ಸುಮಾರು 6 ಗಂಟೆಗೆ ಡಬ್ಲ್ಯುಟಿಐ ಕಚ್ಚಾ ತೈಲವನ್ನು ಪ್ರತಿ ಬ್ಯಾರೆಲ್‌ಗೆ 76.25 ಡಾಲರ್‌ಗೆ ಮಾರಾಟ ಮಾಡಲಾಗುತ್ತಿದೆ. ಅದೇ ಸಮಯದಲ್ಲಿ, ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್ಗೆ 81.36 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ. ದೇಶದ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಇತ್ತೀಚಿನ ದರಗಳನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜೂನ್ 2017 ರ ಮೊದಲು, ಪ್ರತಿ 15 ದಿನಗಳಿಗೊಮ್ಮೆ ಬೆಲೆ ಪರಿಷ್ಕರಣೆ ಮಾಡಲಾಗುತ್ತಿತ್ತು.

ಛತ್ತೀಸ್‌ಗಢದಲ್ಲಿ ಪೆಟ್ರೋಲ್ ಬೆಲೆ 44 ಪೈಸೆ ಮತ್ತು ಡೀಸೆಲ್ ಬೆಲೆ 43 ಪೈಸೆ ಏರಿಕೆಯಾಗಿದೆ. ರಾಜಸ್ಥಾನದಲ್ಲಿ ಪೆಟ್ರೋಲ್ 50 ಪೈಸೆ ಮತ್ತು ಡೀಸೆಲ್ 46 ಪೈಸೆ ಹೆಚ್ಚಾಗಿದೆ. ಪಂಜಾಬ್, ಮಹಾರಾಷ್ಟ್ರ, ಹರಿಯಾಣ, ಜಮ್ಮು ಮತ್ತು ಕಾಶ್ಮೀರದಲ್ಲಿ  ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಬಿಹಾರದಲ್ಲಿ ಪೆಟ್ರೋಲ್ 32 ಪೈಸೆ ಮತ್ತು ಡೀಸೆಲ್ 30 ಪೈಸೆ ಕಡಿಮೆಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ 14 ಪೈಸೆಗಳಷ್ಟು ಅಗ್ಗವಾಗಿದೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ತಮಿಳುನಾಡಿನಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ.

ಸೋಮವಾರದಂದು ಪೆಟ್ರೋಲ್ ಮತ್ತು ಡೀಸೆಲ್ ಇತ್ತೀಚಿನ ಬೆಲೆಗಳನ್ನು ಬಿಡುಗಡೆ ಮಾಡಲಾಗಿದೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಬಹಳ ದಿನಗಳಿಂದ ಸ್ಥಿರವಾಗಿರುವುದು ಗೊತ್ತೇ ಇದೆ. ಈ ಹಿನ್ನೆಲೆಯಲ್ಲಿ ಇಂದಿಗೂ ದೇಶದ ದೇಶಿ ಮಾರುಕಟ್ಟೆಯ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅಂದರೆ ಹಳೆಯ ಬೆಲೆಯಲ್ಲೇ ಪೆಟ್ರೋಲ್, ಡೀಸೆಲ್ ಖರೀದಿಸಬಹುದು.

ಮತ್ತಷ್ಟು ಓದಿ: Petrol Diesel Price on February 25: ಗುಜರಾತ್​ನಲ್ಲಿ ಪೆಟ್ರೋಲ್ ಬೆಲೆ ಇಳಿಕೆ, ಪಶ್ಚಿಮ ಬಂಗಾಳದಲ್ಲಿ ಏರಿಕೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 96.72 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 89.62 ರೂ.

ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 106.31 ರೂ.ಗಳಾಗಿದ್ದು, ಡೀಸೆಲ್ ಬೆಲೆ ಲೀಟರ್‌ಗೆ 94.27 ರೂ.

ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 106.03 ರೂ. ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 92.76 ರೂ.

ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 102.63 ರೂ. ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 94.24 ರೂ.

ದೇಶದ ಇತರ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ
ನೋಯ್ಡಾ: ಪ್ರತಿ ಲೀಟರ್ ಪೆಟ್ರೋಲ್ ರೂ 96.79 ಮತ್ತು ಡೀಸೆಲ್ ಲೀಟರ್‌ಗೆ ರೂ 89.96

ಗುರುಗ್ರಾಮ: ಪ್ರತಿ ಲೀಟರ್ ಪೆಟ್ರೋಲ್ 97.18 ರೂ. ಮತ್ತು ಡೀಸೆಲ್ ಲೀಟರ್‌ಗೆ 90.05 ರೂ.

ಬೆಂಗಳೂರು: ಪೆಟ್ರೋಲ್ ಲೀಟರ್‌ಗೆ 101.94 ರೂ. ಮತ್ತು ಡೀಸೆಲ್ ಲೀಟರ್‌ಗೆ 87.89 ರೂ.

ಚಂಡೀಗಢ: ಲೀಟರ್‌ಗೆ ಪೆಟ್ರೋಲ್ 96.20 ರೂ. ಮತ್ತು ಡೀಸೆಲ್ ಲೀಟರ್‌ಗೆ 84.26 ರೂ.

ಹೈದರಾಬಾದ್: ಪೆಟ್ರೋಲ್ ಲೀಟರ್‌ಗೆ 109.66 ರೂ. ಮತ್ತು ಡೀಸೆಲ್ ಲೀಟರ್‌ಗೆ 97.82 ರೂ.

ಜೈಪುರ: ಪೆಟ್ರೋಲ್ ಲೀಟರ್‌ಗೆ 108.48 ಮತ್ತು ಡೀಸೆಲ್ ಲೀಟರ್‌ಗೆ 93.72 ರೂ.

ಪಾಟ್ನಾ: ಪೆಟ್ರೋಲ್ ಲೀಟರ್‌ಗೆ 107.24 ಮತ್ತು ಡೀಸೆಲ್ ಲೀಟರ್‌ಗೆ 94.04 ರೂ.

ಲಕ್ನೋ: ಪೆಟ್ರೋಲ್ ಲೀಟರ್‌ಗೆ 96.58 ಮತ್ತು ಡೀಸೆಲ್ ಲೀಟರ್‌ಗೆ 89.77 ರೂ.

ಪೆಟ್ರೋಲ್, ಡೀಸೆಲ್ ನಿಖರ ಬೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಫೋನ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಶೀಲಿಸಿ

ಪೆಟ್ರೋಲ್ ಮತ್ತು ಡೀಸೆಲ್ ವಿವಿಧ ನಗರಗಳಲ್ಲಿ ವಿಭಿನ್ನ ಬೆಲೆಗಳನ್ನು ಹೊಂದಿದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಫೋನ್‌ನಲ್ಲಿಯೇ ನಿಮ್ಮ ನಗರದ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ನೀವು ಪರಿಶೀಲಿಸಬಹುದು. ಇದಕ್ಕಾಗಿ, ಫೋನ್ ಮೂಲಕ ಸಂದೇಶವನ್ನು ಕಳುಹಿಸಬೇಕಾಗಿದೆ.

92249 92249 ಸಂಖ್ಯೆಗೆ ಫೋನ್ ಮೂಲಕ ಆರ್.ಎಸ್.ಪಿ ನೀವು ಪೆಟ್ರೋಲ್ ಪಂಪ್‌ನ ಡೀಲರ್ ಕೋಡ್ ಅನ್ನು ಟೈಪ್ ಮಾಡಿ ಕಳುಹಿಸಬೇಕು. ಉದಾಹರಣೆಗೆ, ದೆಹಲಿಗೆ, RSP 102072 ಎಂದು ಟೈಪ್ ಮಾಡಿ ಮತ್ತು ಅದನ್ನು 92249 92249 ಸಂಖ್ಯೆಗೆ ಕಳುಹಿಸಿ. ಈ ಸಂದೇಶವನ್ನು ಕಳುಹಿಸಿದ ತಕ್ಷಣ, ನಿಮ್ಮ ಫೋನ್‌ಗೆ ಇತ್ತೀಚಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಸಂದೇಶ ಬರುತ್ತದೆ.

 

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ