What India Thinks Today: ಡಿಜಿಟಲೀಕರಣ ಸಣ್ಣ ಪಟ್ಟಣಗಳ ಜನರ ಆಶೋತ್ತರ ಗರಿಗೆದರುವಂತೆ ಮಾಡಿದೆ: ಪೂನಾವಾಲ ಫಿನ್​ಕಾರ್ಪ್ ಎಂಡಿ ಅಭಯ್ ಭೂತಡ

Poonawalla Fincorp MD Abhay Bhutad Speaks: ದೇಶದ ನಂಬರ್-1 ನ್ಯೂಸ್ ನೆಟ್‌ವರ್ಕ್ ಟಿವಿ9 ನ 'ವಾಟ್ ಇಂಡಿಯಾ ಥಿಂಕ್ಸ್ ಟುಡೇ' ಜಾಗತಿಕ ಶೃಂಗಸಭೆಯಲ್ಲಿ, ಪೂನಾವಾಲಾ ಫಿನ್‌ಕಾರ್ಪ್‌ನ ಎಂಡಿ ಅಭಯ್ ಭೂತಡ, ದೇಶದಲ್ಲಿ ನಡೆಯುತ್ತಿರುವ ಡಿಜಿಟಲ್ ಕ್ರಾಂತಿಯು ಲಾತೂರ್‌ನಂತಹ ತನ್ನ ಸಣ್ಣ ಪಟ್ಟಣದಲ್ಲಿಯೂ ಅನೇಕ ಅಡೆತಡೆಗಳನ್ನು ಮುರಿದಿದೆ ಎಂದು ಹೇಳಿದರು. ವಿಶ್ವಗುರು ಆಗುವ ಎಲ್ಲಾ ಸಾಮರ್ಥ್ಯ ಈ ದೇಶ ಹೊಂದಿದೆ ಎನ್ನುವ ಆತ್ಮವಿಶ್ವಾಸ ಎಲ್ಲರಲ್ಲೂ ಮೂಡಿದೆ ಎಂದಿದ್ದಾರೆ ಭೂತಡ.

What India Thinks Today: ಡಿಜಿಟಲೀಕರಣ ಸಣ್ಣ ಪಟ್ಟಣಗಳ ಜನರ ಆಶೋತ್ತರ ಗರಿಗೆದರುವಂತೆ ಮಾಡಿದೆ: ಪೂನಾವಾಲ ಫಿನ್​ಕಾರ್ಪ್ ಎಂಡಿ ಅಭಯ್ ಭೂತಡ
ಅಭಯ್ ಭೂತಡ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 25, 2024 | 7:57 PM

ಹಣಕಾಸು ವಲಯದ ಕಂಪನಿ ಪೂನಾವಾಲಾ ಫಿನ್‌ಕಾರ್ಪ್‌ನ ಎಂಡಿ ಅಭಯ್ ಭೂತಡ (Abhay Bhutad) ಅವರು ಮಹಾರಾಷ್ಟ್ರದ ಸಣ್ಣ ಪಟ್ಟಣವಾದ ಲಾತೂರ್‌ನಿಂದ ಬಂದವರು ಎಂದು ಹೇಳುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ ಇಲ್ಲಿ ಆಗಿರುವ ಬದಲಾವಣೆಗಳನ್ನು ಅವರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಮೋದಿ ಸರ್ಕಾರದ ಅನೇಕ ಡಿಜಿಟಲ್ ಉಪಕ್ರಮಗಳು (digital initiatives) ಅಭಯ್ ಭೂತಡ ಅವರಂತಹ ಸಣ್ಣ ಪಟ್ಟಣದ ನಿವಾಸಿಗಳಿಗೆ ಸೀಮೋಲಂಘನ ಮಾಡಲು ಅವಕಾಶ ಕಲ್ಪಿಸಿವೆ. ಟಿವಿ9 ನೆಟ್‌ವರ್ಕ್‌ನ ಜಾಗತಿಕ ಶೃಂಗಸಭೆಯ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅಭಯ್ ಭೂತಡ, ತಮ್ಮಂತಹ ಸಣ್ಣ ಪಟ್ಟಣದ ಜನರಿಗೆ ಡಿಜಿಟಲ್ ಕ್ರಾಂತಿ ಇತ್ತ ಅವಕಾಶಗಳ ಬಗ್ಗೆ ಹೇಳಿಕೊಂಡರು.

ಸರ್ಕಾರದ ವಿವಿಧ ಡಿಜಿಟಲ್ ಯೋಜನೆಗಳು ಸಮಾಜದ ಪ್ರತಿಯೊಂದು ಭಾಗವೂ ತನ್ನ ಕನಸುಗಳನ್ನು ಪೂರೈಸಲು, ಬೆಳೆಯಲು, ಆಶಿಸಲು ಸಹಾಯವಾಗಿವೆ. ನಿಮ್ಮೊಂದಿಗೆ ಒಂದು ವಿವಾರ ಹಂಚಿಕೊಳ್ಳಬೇಕು. ನಾನು ಮಹಾರಾಷ್ಟ್ರದ ಲಾತೂರ್ ಎಂಬ ಸ್ಥಳದವನು. ನನ್ನಂತಹ ಸಣ್ಣ ಪಟ್ಟಣದ ಜನರಿಗೆ ಅಡೆತಡೆಗಳನ್ನು ನಿವಾರಿಸಿ ಈ ರಾಷ್ಟ್ರನಿರ್ಮಾಣಕ್ಕೆ ಕೊಡುಗೆ ನೀಡಲು ಡಿಜಿಟಲೀಕರಣ ಯಾವ ರೀತಿ ನೆರವಾಗಿದೆ ಎಂಬುದನ್ನು ಕಂಡಿದ್ದೇನೆ. ಸಂಕಲ್ಪ ಸಿದ್ಧಿ ಎನ್ನುವುದು ಇದೇ ಎಂಬುದು ನನ್ನ ಭಾವನೆ ಎಂದು ಪೂನಾವಾಲ ಫಿನ್​ಕಾರ್ಪ್​ನ ನಿರ್ವಾಹಕ ನಿರ್ದೇಶಕರು ಹೇಳಿದರು.

ಇದನ್ನೂ ಓದಿ: ಮೋದಿ ಸರ್ಕಾರದ ಡಿಜಿಟಲ್ ಯೋಜನೆ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುತ್ತದೆ: ಅಭಯ್ ಭೂತಾಡ

ಈ ದೇಶವು ವಿಶ್ವಗುರು ಆಗುವ ಎಲ್ಲಾ ಸಾಮರ್ಥ್ಯ ಹೊಂದಿದೆ ಎಂದು ನನ್ನಂತಹ ಕೋಟ್ಯಂತರ ಭಾರತೀಯರಿಗೆ ಹಿಂದೆಂದಿಗಿಂತಲೂ ಆತ್ಮವಿಶ್ವಾಸ ಇದೆ ಎಂದೂ ಅಭಯ್ ಭೂತಡ ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ‘ಡಿಜಿಟಲ್ ಪರಿಹಾರ’ಗಳ ಹೊಸ ಮಾರುಕಟ್ಟೆ ಸೃಷ್ಟಿ

ಪ್ರಸ್ತುತ ಭಾರತದಲ್ಲಿ ಡಿಜಿಟಲ್ ಕ್ರಾಂತಿ ನಡೆಯುತ್ತಿದೆ ಎಂದು ಅಭಯ ಭೂತಡ ಹೇಳಿದರು. ಇದು ದೇಶದಲ್ಲಿ ಡಿಜಿಟಲ್ ಮತ್ತು ಟೆಕ್ ಪರಿಹಾರಗಳಿಗೆ ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿದೆ. ಭಾರತ ಸರ್ಕಾರದ ಪ್ರಧಾನ ಮಂತ್ರಿ ಜನ್ ಧನ್ ಖಾತೆ ಯೋಜನೆ, UPI ಮತ್ತು BHIM ನಂತಹ ಉಪಕ್ರಮಗಳು ಜನರಿಗೆ ಇನ್​ಕ್ಲೂಸಿವಿಟಿ ತಂದಿವೆ. ಅಷ್ಟೇ ಅಲ್ಲ, ದೇಶದಲ್ಲಿ ಡಿಜಿಟಲ್ ಪಾವತಿಯ ನೆಲೆಯೂ ಹೆಚ್ಚಿದೆ. ಇದರಲ್ಲಿ ಸರ್ಕಾರದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳ ಸೃಷ್ಟಿ, ಇ-ಕಾಮರ್ಸ್ ವಿಸ್ತರಣೆ, ಜನರಲ್ಲಿ ಫೋನ್ ಬಳಕೆಯನ್ನು ಹೆಚ್ಚಿಸುವುದು ಪ್ರಮುಖ ಘಟನೆಗಳು.

ಇದನ್ನೂ ಓದಿ: ಕ್ರಿಕೆಟ್ ಹೊರತಾದ ಕ್ರೀಡೆಗಳಲ್ಲೂ ಮಿಂಚುತ್ತಿರುವ ಭಾರತೀಯರು: ಅನುರಾಗ್ ಠಾಕೂರ್

ಟಿವಿ9ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಜಾಗತಿಕ ಶೃಂಗಸಭೆಯಾಗಿದೆ. ಎರಡು ದಿನಗಳ ಈ ಸಮ್ಮೇಳನದಲ್ಲಿ ಭಾರತ ಮತ್ತು ವಿದೇಶಗಳ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ದೇಶದ ಆರ್ಥಿಕ ಶಕ್ತಿ ಜತೆಗೆ ದೇಶದ ಸಾಫ್ಟ್ ಪವರ್ ಬಗ್ಗೆಯೂ ಕಾರ್ಯಕ್ರಮದಲ್ಲಿ ಚರ್ಚೆ ನಡೆಯಲಿದೆ. ಸಮಾವೇಶದ ಎರಡನೇ ದಿನದಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉದ್ಯಮದ ಹೊರತಾಗಿ, ರಾಜಕೀಯ ಮತ್ತು ಮನರಂಜನಾ ಪ್ರಪಂಚದ ಅನೇಕ ಪ್ರಸಿದ್ಧ ವ್ಯಕ್ತಿಗಳು ಸಹ ದಿನವಿಡೀ ಇದರಲ್ಲಿ ಭಾಗವಹಿಸಲಿದ್ದಾರೆ.

ಇನ್ನಷ್ಟು ಡಬ್ಲ್ಯುಐಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು