WITT 2024: ಭಾರತದ ಸುಭದ್ರ ಕಾನೂನು ಸುವ್ಯವಸ್ಥೆಯಿಂದ ಆರ್ಥಿಕ ವೃದ್ಧಿಗೆ ಅನುಕೂಲ: ಅಭಯ್ ಭೂತಡ

Poonawalla Fincorp MD Abhay Bhutada Speaks: ದೇಶದ ನಾಗರಿಕರ ಸುರಕ್ಷತೆ ಮತ್ತು ಭದ್ರತೆ ಬಹಳ ಮುಖ್ಯ. ಕಾನೂನು ಸುವ್ಯವಸ್ಥೆ ಇಲ್ಲದೇ ಪ್ರಗತಿ ಹೊಂದಲು ಸಾಧ್ಯ ಇಲ್ಲ ಎಂದು ಪೂನಾವಾಲ ಫಿನ್​ಕಾರ್ಪ್ ಎಂಡಿ ಅಭಯ್ ಭೂತಡ ಹೇಳಿದ್ದಾರೆ. ಟವಿ9 ನೆಟ್ವರ್ಕ್​ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅಭಯ್ ಭೂತಡ, ದೇಶದ ನಾಗರಿಕರ ಯೋಗಕ್ಷೇಮ ಚೆನ್ನಾಗಿರುವುದಕ್ಕೆ ಗೃಹ ಸಚಿವರನ್ನು ಅಭಿನಂದಿಸಿದ್ದಾರೆ.

WITT 2024: ಭಾರತದ ಸುಭದ್ರ ಕಾನೂನು ಸುವ್ಯವಸ್ಥೆಯಿಂದ ಆರ್ಥಿಕ ವೃದ್ಧಿಗೆ ಅನುಕೂಲ: ಅಭಯ್ ಭೂತಡ
ಅಭಯ್ ಭೂತಡ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 25, 2024 | 8:30 PM

ನವದೆಹಲಿ, ಫೆಬ್ರುವರಿ 25: ಒಂದು ದೇಶದಲ್ಲಿ ಅನುಕೂಲಕರ ಉದ್ಯಮ ವಾತಾವರಣ (conducive business environment) ಇರುವುದು ಎಷ್ಟು ಮುಖ್ಯವೋ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಯೂ ಬಹಳ ಮುಖ್ಯ ಎಂದು ಪೂನಾವಾಲ ಫಿನ್​ಕಾರ್ಪ್ ಎಂಡಿ ಅಭಯ್ ಭೂತಡ (Abhay Bhutada) ಹೇಳಿದ್ದಾರೆ. ಟಿವಿ9 ನೆಟ್ವರ್ಕ್ ಆಯೋಜಿಸಿದ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಜಾಗತಿಕ ಶೃಂಗಸಭೆಯ ಭಾಷಣದಲ್ಲಿ ಮಾತನಾಡುತ್ತಿದ್ದ ಅಭಯ್ ಭೂತಡ, ಯಾವ ದೇಶವೂ ಕೂಡ ಕಾನೂನು ಸುವ್ಯವಸ್ಥೆ ಇಲ್ಲದೇ ಪ್ರಗತಿ ಹೊಂದಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.

ಈ ದೇಶ ಮತ್ತು ಅದರ ನಾಗರಿಕರಿಗೆ ಸುರಕ್ಷತೆ, ಶಾಂತಿ ಮತ್ತು ಸೌಹಾರ್ದತೆಯನ್ನು ಕಲ್ಪಿಸಲು ಗೃಹ ಸಚಿವ ಅಮಿತ್ ಶಾ ಅವರ ನಾಯಕತ್ವದಲ್ಲಿ ತೆಗೆದುಕೊಳ್ಳಲಾದ ನಿರ್ಭಯ ಕ್ರಮಗಳನ್ನು ನಾನು ಸ್ವಾಗತಿಸುತ್ತೇನೆ ಎಂದು ಅಭಯ್ ಭೂತಡ ತಿಳಿಸಿದ್ದಾರೆ.

ಇದನ್ನೂ ಓದಿ: ಡಿಜಿಟಲೀಕರಣ ಸಣ್ಣ ಪಟ್ಟಣಗಳ ಜನರ ಆಶೋತ್ತರ ಗರಿಗೆದರುವಂತೆ ಮಾಡಿದೆ: ಪೂನಾವಾಲ ಫಿನ್​ಕಾರ್ಪ್ ಎಂಡಿ ಅಭಯ್ ಭೂತಡ

ಜಾಗತಿಕ ಆರ್ಥಿಕತೆಯಲ್ಲಿ ಮರಳಿ ಸ್ಥಾನ ಪಡೆಯುತ್ತಿರುವ ಭಾರತ

ಭಾರತದ ಡಿಜಿಟಲ್ ಕ್ಷೇತ್ರದ ಬೆಳವಣಿಗೆಯು ದೇಶದ ಆರ್ಥಿಕತೆಯ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಬೀರುತ್ತಿರುವ ಬಗ್ಗೆ ಮಾತನಾಡಿದ ಪೂನಾವಾಲ ಫಿನ್​ಕಾರ್ಪ್​ನ ಎಂಡಿ, ಜಾಗತಿಕ ಆರ್ಥಿಕ ವೇದಿಕೆಯಲ್ಲಿ ಭಾರತ ಮರಳಿ ಸ್ಥಾನ ಪಡೆಯುತ್ತಿದ್ದು, ವಿಶ್ವದ ಮೂರನೇ ಆರ್ಥಿಕತೆಯ ದೇಶವಾಗುವತ್ತ ಸಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಮೋದಿ ಸರ್ಕಾರದ ಡಿಜಿಟಲ್ ಯೋಜನೆ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುತ್ತದೆ: ಅಭಯ್ ಭೂತಾಡ

ಭಾರತದ ಡಿಜಿಟಲ್ ಕ್ರಾಂತಿಯು ದೇಶವನ್ನು ಡಿಜಿಟಲ್ ಆಗಿ ಸಶಕ್ತಗೊಳಿಸಿದೆ ಮತ್ತು ಜ್ಞಾನಾಧಾರಿತ ಆರ್ಥಿಕತೆಯಾಗಿ ಪರಿವರ್ತಿಸಿದೆ. ಮನುಷ್ಯ ಕೇಂದ್ರಿತ ವಿಧಾನ ಅನುಸರಿಸಿ ಬೆಳವಣಿಗೆ ಹೊಂದಲು ಕಾರಣವಾಗಿದೆ. ಡಿಜಿಟೀಕರಣ, ನಾವೀನ್ಯತೆ, ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ನಿರ್ಮಾಣ, ಹೊಸ ತಂತ್ರಜ್ಞಾನದ ಅಳವಡಿಕೆ ಇತ್ಯಾದಿ ಮೇಲೆ ಗಮನ ಹರಿಸುತ್ತಿರುವುದರಿಂದ 2047ರೊಳಗೆ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸಲು ಸಾಧ್ಯವಾಗುತ್ತದೆ ಎಂದು ಅಭಯ್ ಭೂತಡ ಹೇಳಿದ್ದಾರೆ.

ಟಿವಿ9 ನೆಟ್ವರ್ಕ್​ನಿಂದ ಆಯೋಜಿಸಲಾಗಿರುವ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಎರಡನೇ ಆವೃತ್ತಿಯ ಕಾರ್ಯಕ್ರಮ ಇದಾಗಿದೆ. ಮೂರು ದಿನಗಳ ಈ ಸಮಾವೇಶದಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.

ಇನ್ನಷ್ಟು ಡಬ್ಲ್ಯುಐಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ