
ಮುಂಬೈ, ಜೂನ್ 27: ಭಾರತದ ಇಬ್ಬರು ಅತಿದೊಡ್ಡ ಉದ್ಯಮಿಗಳೆನಿಸಿದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಒಬ್ಬರಿಗೊಬ್ಬರು ನೆರವಾಗುವ ರೀತಿಯ ಡೀಲ್ವೊಂದನ್ನು ಕುದುರಿಸಿದ್ದಾರೆ. ರಿಲಾಯನ್ಸ್ ಇಂಡಸ್ಟ್ರೀಸ್ಗೆ ಸೇರಿದ ಜಿಯೋ ಬಿಪಿ (Jio BP) ಹಾಗೂ ಅದಾನಿ ಟೋಟಲ್ ಗ್ಯಾಸ್ (ATGL- Adani Total Gas Ltd) ನಡುವೆ ಸಹಭಾಗಿತ್ವ ಸಾಧಿಸುವ ಒಪ್ಪಂದ ಏರ್ಪಟ್ಟಿದೆ. ಎರಡೂ ಕಂಪನಿಗಳು ಪರಸ್ಪರ ಘರ್ಷಣೆಯಾಗದ ರೀತಿಯಲ್ಲಿ ಸೇವೆ ವಿಸ್ತರಣೆ ಮಾಡಿವೆ.
ಒಪ್ಪಂದದ ಪ್ರಕಾರ, ಅದಾನಿ ಕಂಪನಿಯ ಸಿಎನ್ಜಿ ಬಂಕ್ಗಳಲ್ಲಿ ಜಿಯೋ ಬಿಪಿಯಿಂದ ಪೆಟ್ರೋಲ್ ಹಾಗೂ ಡೀಸಲ್ ಮಾರಾಟ ಆಗಲಿದೆ. ಅದೇ ರೀತಿ, ಜಿಯೋ ಬಿಪಿಯ ಬಂಕ್ಗಳಲ್ಲಿ ಎಟಿಜಿಎಲ್ನ ಸಿಎನ್ಜಿ ಮಾರಾಟ ನಡೆಯಲಿದೆ.
ದೇಶದ ಕೆಲ ಆಯ್ದ ಎಟಿಜಿಎಲ್ ಮತ್ತು ಜಿಯೊ ಬಿಪಿ ಯೂನಿಟ್ಗಳಲ್ಲಿ ಈ ಸಹಭಾಗಿತ್ವ ಇರಲಿದೆ. ಈ ಆಯ್ದ ಬಂಕ್ಗಳಲ್ಲಿ ಪೆಟ್ರೋಲ್, ಡೀಸಲ್, ಸಿಎನ್ಜಿ ಗ್ಯಾಸ್ ಈ ಮೂರೂ ಕೂಡ ಸಿಗುತ್ತದೆ.
ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಅದಾನಿ ಗ್ರೂಪ್ನಿಂದ 40 ಲಕ್ಷ ಮಂದಿಗೆ ಅನ್ನದಾನ ಸೇರಿ ವಿವಿಧ ಸೇವೆ
ಮುಕೇಶ್ ಅಂಬಾನಿ ಅವರ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಹತ್ತಾರು ಬ್ಯುಸಿನೆಸ್ಗಳನ್ನು ಹೊಂದಿದೆ. ಹೆಚ್ಚಿನವು ರೀಟೇಲ್, ಟೆಲಿಕಾಂನಂತಹ ಗ್ರಾಹಕ ಕೇಂದ್ರಿತ ಸೆಕ್ಟರ್ಗಳಲ್ಲಿವೆ.
ಇನ್ನು, ಗೌತಮ್ ಅದಾನಿ ಅವರ ಅದಾನಿ ಗ್ರೂಪ್ ಕೂಡ ಬಹಳ ದೊಡ್ಡ ಉದ್ದಿಮೆಗಳನ್ನು ನಿಭಾಯಿಸುತ್ತದೆ. ಅದರ ಪ್ರಮುಖ ಬ್ಯುಸಿನೆಸ್ ಇನ್ಫ್ರಾಸ್ಟ್ರಕ್ಚರ್ನದ್ದು. ಸಮುದ್ರದ ಬಂದರು, ವಿಮಾನ ನಿಲ್ದಾಣ, ಮೈನಿಂಗ್ ಇತ್ಯಾದಿ ಬ್ಯುಸಿನೆಸ್ ನಡೆಸುತ್ತದೆ.
ಇದನ್ನೂ ಓದಿ: Adani Foundation: ಶ್ರೇಷ್ಠ ಹಾಗೂ ಅಗ್ಗದ ವೈದ್ಯಕೀಯ ಶಿಕ್ಷಣದ ಗುರಿಯೊಂದಿಗೆ DMIHER ಜೊತೆ ಕೈಜೋಡಿಸಿದ ಅದಾನಿ
ಸೋಲಾರ್ ಇತ್ಯಾದಿ ನವೀಕರಣ ಇಂಧನ ಉತ್ಪಾದನಾ ಕ್ಷೇತ್ರದಲ್ಲಿ ಮಾತ್ರ ಎರಡೂ ಕಂಪನಿಗಳು ಪೈಪೋಟಿಯಲ್ಲಿವೆ. ಆದರೆ, ಈ ಕ್ಷೇತ್ರ ಇನ್ನೂ ಆರಂಭಿಕ ಹಂತದಲ್ಲಿದ್ದು, ಪರಸ್ಪರ ಪೈಪೋಟಿ ಏರ್ಪಡದ ರೀತಿಯಲ್ಲಿ ಬೇರೆ ಬೇರೆ ಕಡೆ ಪ್ರಾಜೆಕ್ಟ್ಗಳನ್ನು ನಡೆಸಲಾಗುತ್ತಿರುವುದು ವಿಶೇಷ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ