Sign In

By signing in or creating an account, you agree with Associated Broadcasting Company's Terms & Conditions and Privacy Policy.

Gautam Adani: ಏಷ್ಯಾದ ಎರಡನೇ ಅತಿ ದೊಡ್ಡ ಸಿರಿವಂತ ಸಿಂಹಾಸನದಲ್ಲಿ ಈಗ ಗೌತಮ್ ಅದಾನಿ; ಒಟ್ಟು ಆಸ್ತಿ 4.85 ಲಕ್ಷ ಕೋಟಿ ರೂಪಾಯಿ

ಏಷ್ಯಾದ ಅತಿ ಸಿರಿವಂತರು ಎನಿಸಿಕೊಂಡ ಮೊದಲ ಇಬ್ಬರೂ ಈಗ ಭಾರತೀಯರೇ. ಮೊದಲ ಸ್ಥಾನದಲ್ಲಿ ಮುಕೇಶ್ ಅಂಬಾನಿ ಇದ್ದರೆ, ಎರಡನೇ ಸ್ಥಾನಕ್ಕೆ ಈಗ ಗೌತಮ್ ಅದಾನಿ ಏರಿದ್ದಾರೆ.

Gautam Adani: ಏಷ್ಯಾದ ಎರಡನೇ ಅತಿ ದೊಡ್ಡ ಸಿರಿವಂತ ಸಿಂಹಾಸನದಲ್ಲಿ ಈಗ ಗೌತಮ್ ಅದಾನಿ; ಒಟ್ಟು ಆಸ್ತಿ 4.85 ಲಕ್ಷ ಕೋಟಿ ರೂಪಾಯಿ
ಗೌತಮ್ ಅದಾನಿ (ಸಂಗ್ರಹ ಚಿತ್ರ)
Follow us
Srinivas Mata
|

Updated on:May 21, 2021 | 11:54 AM

ಭಾರತದ ಉದ್ಯಮಿ ಗೌತಮ್ ಅದಾನಿ ಹೊಸ ದಾಖಲೆಯೊಂದನ್ನು ತಮ್ಮ ಶ್ರೀಮಂತಿಕೆಯ ಕಿರೀಟಕ್ಕೆ ಗರಿಯಂತೆ ಸಿಕ್ಕಿಸಿಕೊಂಡಿದ್ದಾರೆ. ಈಗ ಹೆಮ್ಮೆಯಿಂದ ನಾವೆಲ್ಲ ಹೇಳಬಹುದು; ಏಷ್ಯಾದ ಮೊದಲ ಎರಡು ಅತಿ ಹೆಚ್ಚು ಶ್ರೀಮಂತರ ಸ್ಥಾನದಲ್ಲಿ ಭಾರತೀಯರಿದ್ದಾರೆ. ಮೊದಲನೇ ಸ್ಥಾನದಲ್ಲಿ ಇರುವುದು ರಿಲಯನ್ಸ್ ಇಂಡಸ್ಟ್ರೀಸ್​ನ ಮುಕೇಶ್ ಅಂಬಾನಿ. ಎರಡನೇ ಸ್ಥಾನದಲ್ಲಿದ್ದಾರೆ ಗೌತಮ್ ಅದಾನಿ. ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಅದಾನಿ ಸಮೂಹದ ನಿವ್ವಳ ಆಸ್ತಿ ಮೌಲ್ಯ 6650 ಕೋಟಿ ಅಮೆರಿಕನ್ ಡಾಲರ್ (ಭಾರತದ ರೂಪಾಯಿ ಲೆಕ್ಕದಲ್ಲಿ 4,85,253 ಕೋಟಿ). ಅದಾನಿ ಪಕ್ಕಕ್ಕೆ ಸರಿಸಿರುವುದು ಚೀನಾದ ಝೋಂಗ್ ಶನ್ಷನ್ ಅವರನ್ನು. ಅಂದಹಾಗೆ ಶನ್ಷನ್ ಆಸ್ತಿ ಮೌಲ್ಯ 6360 ಕೋಟಿ ಅಮೆರಿಕನ್ ಡಾಲರ್ ಇದೆ. ಶ್ರೀಮಂತಿಕೆ ವಿಚಾರದಲ್ಲಿ ಅದಾನಿ ಏನಾದರೂ ತಾನು ಏಷ್ಯಾದ ನಂಬರ್ ಒನ್ ಆಗಬೇಕು ಅಂದುಕೊಂಡರೆ, ಅವರಿಗಿಂತ ಮುಂದಿರುವುದು ತನ್ನದೇ ದೇಶದ ಮುಕೇಶ್ ಅಂಬಾನಿ ಮಾತ್ರ.

ಚೀನಾದ ಶನ್ಷನ್ ಈ ವರ್ಷದ ಫೆಬ್ರವರಿ ತನಕ ಏಷ್ಯಾದ ಅತ್ಯಂತ ಶ್ರೀಮಂತ ಎನಿಸಿಕೊಂಡಿದ್ದರು. ಅವರನ್ನು ದಾಟಿ ಮುಂದೆ ಹೋದವರು ಮುಕೇಶ್ ಅಂಬಾನಿ. ನಿಮಗೆ ಗೊತ್ತಿರಲಿ, ಚೀನಾದ ಶನ್ಷನ್ ಅವರು ನೋಂಗ್​ಫು ಸ್ಪ್ರಿಂಗ್ ಅಧ್ಯಕ್ಷ ಮತ್ತು ಬೀಜಿಂಗ್ ವಾಂಟೈ ಬಯಾಲಜಿಕಲ್ ಫಾರ್ಮಸಿ ಎಂಟರ್​ಪ್ರೈಸಸ್​ನ ಪ್ರಮುಖ ಮಾಲೀಕರು. ವಿಶ್ವದ ಆರನೇ ಶ್ರೀಮಂತ ಎನಿಸಿಕೊಂಡಿದ್ದ ಶನ್ಷನ್ ಆಸ್ತಿ ಈಚಿನ ತಿಂಗಳಲ್ಲಿ ಕರಗಿದೆ. ಸದ್ಯಕ್ಕೆ ವಿಶ್ವ ಸಿರಿವಂತರ ಒಟ್ಟಿಯಲ್ಲಿ ಅಂಬಾನಿ 13 ಹಾಗೂ ಅದಾನಿ 14ನೇ ಸ್ಥಾನದಲ್ಲಿದ್ದಾರೆ. ಕಳೆದ ಒಂದೇ ವರ್ಷದಲ್ಲಿ ಅದಾನಿ ಆಸ್ತಿ ಮೌಲ್ಯ 3270 ಕೋಟಿ ಅಮೆರಿಕನ್ ಡಾಲರ್ ಹೆಚ್ಚಾಗಿದೆ. ಹೆಚ್ಚು-ಕಡಿಮೆ ಕರ್ನಾಟಕ ರಾಜ್ಯ ಸರ್ಕಾರದ ಬಜೆಟ್ ಮೊತ್ತವು ಒಬ್ಬ ವ್ಯಕ್ತಿಯ ಆಸ್ತಿಗೆ ಸೇರ್ಪಡೆ ಆಗಿದೆ. ಇನ್ನು ಮುಕೇಶ್ ಅಂಬಾನಿ ಆಸ್ತಿ 17.55 ಕೋಟಿ ಯುಎಸ್​ಡಿ ಕಡಿಮೆ ಆಗಿದ್ದು, ಸದ್ಯದ ನಿವ್ವಳ ಆಸ್ತಿ ಮೌಲ್ಯ 7650 ಕೋಟಿ ಡಾಲರ್ ಇದೆ.

1980ರ ದಶಕದ ಕೊನೆಯಲ್ಲಿ ಕಮಾಡಿಟಿ ಟ್ರೇಡರ್​ ಆಗಿ ಉದ್ಯಮ ಜಗತ್ತಿಗೆ ಕಾಲಿಟ್ಟವರು ಗೌತಮ್ ಅದಾನಿ. ಇಂಥ ದೊಡ್ಡ ಸಾಮ್ರಾಜ್ಯ ಕಟ್ಟುವುದಕ್ಕೆ ಎರಡು ದಶಕಗಳ ಸಮಯ ಅವರಿಗೆ ತೆಗೆದುಕೊಂಡಿದೆ. ಅಲ್ಲಿ ಗಣಿಗಾರಿಕೆ, ಬಂದರು, ವಿದ್ಯುತ್ ಘಟಕದಿಂದ ವಿಮಾನ ನಿಲ್ದಾಣ, ಡೇಟಾ ಸೆಂಟರ್, ನಗರ ಅನಿಲ ಮತ್ತು ರಕ್ಷಣಾ ವಲಯದ ತನಕ ಅದಾನಿ ಸಮೂಹ ತೊಡಗಿಕೊಂಡಿದೆ. ಭಾರತದಲ್ಲಿ 10,000 ಕೋಟಿ ಅಮೆರಿಕನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ದಾಟಿದ ಮೂರನೇ ಕಂಪೆನಿ ಎಂಬ ಅಗ್ಗಳಿಕೆಗೆ ಕಳೆದ ಏಪ್ರಿಲ್​ನಲ್ಲಿ ಪಾತ್ರವಾಯಿತು ಅದಾನಿ ಸಮೂಹ. ಕಳೆದ ಎರಡು ವರ್ಷದಲ್ಲಿ ಅದಾನಿ ಸಮೂಹ ದೇಶದ ಏಳು ವಿಮಾನ ನಿಲ್ದಾಣಗಳ ಹತೋಟಿ ತೆಗೆದುಕೊಂಡಿದೆ. ನವೀಕೃತ ಎನರ್ಜಿ ಸಾಮರ್ಥ್ಯದಲ್ಲಿ ಭಾರೀ ಹೆಚ್ಚಳ ಮಾಡಿದೆ. ಶ್ರೀಲಂಕಾದಲ್ಲಿ ಬಂದರು ಅಭಿವೃದ್ಧಿಗೆ ಕಾಂಟ್ರ್ಯಾಕ್ಟ್ ಪಡೆದಿದೆ. ಭಾರತದಲ್ಲಿ ಬಂದರುಗಳ ನಿರ್ವಹಣೆ ಮಾಡುತ್ತಿದೆ.

ಭಾರತದ ಬಂದರು ವಲಯದ ಶೇ 30ರಷ್ಟನ್ನು ಹತೋಟಿಯಲ್ಲಿ ಇಟ್ಟುಕೊಂಡಿರುವುದು ಅದಾನಿ ಪೋರ್ಟ್ಸ್. ತನ್ನ ನವೀಕೃತ ಎನರ್ಜಿ, ನಗರ ಅನಿಲ ವಿತರಣೆ ವ್ಯವಹಾರಕ್ಕೆ ಫ್ರೆಂಚ್ ಮೂಲದ ಟೋಟಲ್​ ಅನ್ನು ಸಹಭಾಗಿಯಾಗಿ ಮಾಡಿಕೊಂಡಿದೆ ಎನ್ನುತ್ತವೆ ವರದಿಗಳು. 2025ನೇ ಇಸವಿ ಹೊತ್ತಿಗೆ 25 ಗಿಗಾವ್ಯಾಟ್ಸ್ ನವೀಕೃತ ಸಾಮರ್ಥ್ಯದ ಗುರಿಯನ್ನು ಹೊಂದಿದೆ. ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಬುಧವಾರ ಹೇಳಿರುವ ಪ್ರಕಾರ, 5GW ನವೀಕೃತ ವಿದ್ಯುತ್ ಪೋರ್ಟ್​ಫೋಲಿಯೋವನ್ನು ಎಸ್​ಬಿ ಎನರ್ಜಿ ಇಂಡಿಯಾದಿಂದ ಪೂರ್ಣ ಪ್ರಮಾಣದಲ್ಲಿ ಸಂಪೂರ್ಣಗೊಂಡ ಎಂಟರ್​ಪ್ರೈಸ್ ಎವ್ಯಾಲ್ಯುಯೇಷನ್ (EV) 350 ಕೋಟಿ ಅಮೆರಿಕನ್ ಡಾಲರ್​ಗೆ ಖರೀದಿಸಿದ್ದಾಗಿ ಹೇಳಿದೆ. ಅಂದಹಾಗೆ ಈ ಎಸ್​ಬಿ ಎನರ್ಜಿ ಅನ್ನೋದು ಜಪಾನ್ ಮೂಲದ ಸಾಫ್ಟ್​ಬ್ಯಾಂಕ್ ಗ್ರೂಪ್ ಕಾರ್ಪ್ ಮತ್ತು ಭಾರ್ತಿ ಗ್ರೂಪ್ ಜಂಟಿ ಉದ್ಯಮ. ಕ್ರಮವಾಗಿ ಶೇ 80 ಹಾಗೂ 20ರಷ್ಟು ಪಾಲನ್ನು ಹೊಂದಿವೆ. ಈ ವ್ಯವಹಾರವು ಭಾರತದ ರಿನೀವಬಲ್ ಎನರ್ಜಿ ವಲಯದಲ್ಲೇ ಅತಿ ದೊಡ್ಡ ವಹಿವಾಟು ಎನ್ನಲಾಗುತ್ತಿದೆ.

ಇದನ್ನೂ ಓದಿ: ವಿಶ್ವದ ಅತ್ಯಂತ ಶ್ರೀಮಂತರನ್ನೂ ಮೀರಿಸಿದ ಗೌತಮ್ ಅದಾನಿ; ಇವರ ಮುಂದೆ ಬೆಜೋಸ್, ಮಸ್ಕ್ ಕೂಡ ಮಸುಕು

ಇದನ್ನೂ ಓದಿ: ಭಾರತದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಸಾಮ್ರಾಜ್ಯ ವಿಸ್ತರಣೆಯ ರೋಚಕ ಕತೆ ಇಲ್ಲಿದೆ

(Indian businessman Gautam Adani become Asia’s second richest person now. He is just behind Reliance Industries chairman Mukesh Ambani)

Published On - 11:43 am, Fri, 21 May 21

PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ