ಸರ್ವರಿಗೂ ಇನ್ಷೂರೆನ್ಸ್ ಹೇಗೆ ತಲುಪಿಸಬೇಕು? ಜಿಐಸಿ ಮುಖ್ಯಸ್ಥರ ಬಳಿ ಇದೆ ಐಡಿಯಾ

Health insurance updates: ಇನ್ಷೂರೆನ್ಸ್ ವ್ಯಾಪ್ತಿ ಹೆಚ್ಚಾದಲ್ಲಿ ಆರ್ಥಿಕತೆ ಚುರುಕುಗೊಳ್ಳುತ್ತದೆ ಎಂದು ಜನರಲ್ ಇನ್ಷೂರೆನ್ಸ್ ಕೌನ್ಸಿಲ್ ಮುಖ್ಯಸ್ಥ ತಪನ್ ಸಿಂಘೆಲ್ ಅಭಿಪ್ರಾಯಪಟ್ಟಿದ್ದಾರೆ. ಇನ್ಷೂರೆನ್ಸ್ ರೀಚ್ ಹೆಚ್ಚಾಗಲು ಸಾಧ್ಯವಾಗಿಸುವ ಮೂರು ಐಡಿಯಾಗಳನ್ನು ಮುಂದಿಟ್ಟಿದ್ದಾರೆ. ಕಂಪನಿಗಳು ತಮ್ಮೆಲ್ಲಾ ಉದ್ಯೋಗಿಗಳಿಗೆ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಬೇಕು. ಹೆಚ್ಚೆಚ್ಚು ವಿಮಾ ಕಂಪನಿಗಳು ಸ್ಥಾಪನೆಯಾಗಬೇಕು ಎಂಬುದು ಅವರ ಸಲಹೆ.

ಸರ್ವರಿಗೂ ಇನ್ಷೂರೆನ್ಸ್ ಹೇಗೆ ತಲುಪಿಸಬೇಕು? ಜಿಐಸಿ ಮುಖ್ಯಸ್ಥರ ಬಳಿ ಇದೆ ಐಡಿಯಾ
ಹೆಲ್ತ್ ಇನ್ಷೂರೆನ್ಸ್
Follow us
|

Updated on: Sep 12, 2024 | 5:55 PM

ನವದೆಹಲಿ, ಸೆಪ್ಟೆಂಬರ್ 12: ಸರ್ಕಾರ ಬಡವರು, ವೃದ್ಧರು ಸೇರಿದಂತೆ ದುರ್ಬಲ ವರ್ಗಗಳಿಗೆ ಪಿಎಂ ಜನ್ ಆರೋಗ್ಯ ಇನ್ಷೂರೆನ್ಸ್ ಯೋಜನೆ ಜಾರಿಗೆ ತಂದಿದೆ. ಕಾರ್ಪೊರೇಟ್ ವಲಯದಲ್ಲಿ ಹಲವು ಉದ್ಯೋಗಿಗಳಿಗೆ ಇನ್ಷೂರೆನ್ಸ್ ಕವರೇಜ್ ಇದೆ. ಆದರೂ ಕೂಡ ಭಾರತದಲ್ಲಿ ಹೆಚ್ಚಿನ ಜನರು ಹೆಲ್ತ್ ಇನ್ಷೂರೆನ್ಸ್ ವ್ಯಾಪ್ತಿಯಿಂದ ಹೊರಗೇ ಉಳಿದಿದ್ದಾರೆ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇನ್ಷೂರೆನ್ಸ್ ತಲುಪಿರುವ ಪ್ರಮಾಣ ಶೇಕಡಾವಾರು ಲೆಕ್ಕದಲ್ಲಿ ಬಹಳ ಕಡಿಮೆ. ಈ ಹಿನ್ನೆಲೆಯಲ್ಲಿ ಜನರಲ್ ಇನ್ಷೂರೆನ್ಸ್ ಕೌನ್ಸಿಲ್​ನ ಮುಖ್ಯಸ್ಥ ತಪನ್ ಸಿಂಘೆಲ್ ಎಲ್ಲರಿಗೂ ಇನ್ಷೂರೆನ್ಸ್ ತಲುಪಿಸಲು ಸಾಧ್ಯವಾಗಿಸುವಂಥ ಕೆಲ ಐಡಿಯಾಗಳನ್ನು ಮುಂದಿಟ್ಟಿದ್ದಾರೆ.

  1. ಕಂಪನಿಗಳು ತಮ್ಮ ಉದ್ಯೋಗಿಗಳೆಲ್ಲರಿಗೂ ಇನ್ಷೂರೆನ್ಸ್ ಮಾಡಿಸುವುದು ಕಡ್ಡಾಯ ಆಗಬೇಕು
  2. ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಇನ್ಷೂರೆನ್ಸ್ ಮಾಡಿಸಲು ಸಿಎಸ್​ಆರ್ ಫಂಡ್ ಬಳಸಲು ಅವಕಾಶ ಕೊಡಬೇಕು. ಅಥವಾ ಸರ್ಕಾರಿ ವಿಮಾ ಯೋಜನೆಗಳ ಉಪಯೋಗ ಪಡೆಯಬೇಕು.
  3. ಹೆಚ್ಚೆಚ್ಚು ವಿಮಾ ಸಂಸ್ಥೆಗಳು ಈ ಕ್ಷೇತ್ರಕ್ಕೆ ಬರಬೇಕು.

ಇದನ್ನೂ ಓದಿ: ಐದು ಲಕ್ಷ ಕವರೇಜ್ ನೀಡುವ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್​ಗೆ ಅರ್ಜಿ ಸಲ್ಲಿಕೆ, ಅರ್ಹತೆ, ದಾಖಲೆ ಇತ್ಯಾದಿ ವಿವರ

ಬಜಾಜ್ ಅಲಾಯನ್ಜ್ ಜನರಲ್ ಇನ್ಷೂರೆನ್ಸ್ ಸಂಸ್ಥೆಯ ಎಂಡಿ ಮತ್ತು ಸಿಇಒ ಆಗಿರುವ ಹಾಗು ಇನ್ಷೂರೆನ್ಸ್ ಮತ್ತು ಪಿಂಚಣಿಗಳ ಭಾರತೀಯ ಉದ್ಯಮಗಳ ಒಕ್ಕೂಟದ ರಾಷ್ಟ್ರೀಯ ಕಮಿಟಿಯ ಮುಖ್ಯಸ್ಥರೂ ಆಗಿರುವ ತಪನ್ ಸಿಂಘೆಲ್ ಈ ಮೇಲಿನ ಮೂರು ಸಲಹೆಗಳನ್ನು ನೀಡಿದ್ದಾರೆ.

‘ಇನ್ಷೂರೆನ್ಸ್ ವ್ಯಾಪ್ತಿ ಹೆಚ್ಚಿಸಬೇಕೆಂದರೆ ಬ್ಯಾಂಕ್ ಕ್ಷೇತ್ರದಲ್ಲಿ ಆದಂತೆ ಹೆಚ್ಚೆಚ್ಚು ವಿಮಾ ಕಂಪನಿಗಳು ಸ್ಥಾಪಿತವಾಗಬೇಕು. ಒಂದು ಸಾವಿರ ಇನ್ಷೂರೆನ್ಸ್ ಕಂಪನಿಗಳ ಸ್ಥಾಪನೆಯಾದರೆ ಅವು ಬಿಸಿನೆಸ್ ಮಾಡಲೇಬೇಕು. ಇದರಿಂದ ಮಾರುಕಟ್ಟೆ ಬೆಳೆಯುತ್ತದೆ,’ ಎಂದು ಹೆಚ್ಚಿನ ಸಂಖ್ಯೆಯ ವಿಮಾ ಸಂಸ್ಥೆಗಳಿಂದ ಆಗುವ ಪ್ರಯೋಜನವನ್ನು ಸಿಂಘೆಲ್ ತಿಳಿಸಿದ್ದಾರೆ.

ಹೆಲ್ತ್ ಇನ್ಷೂರೆನ್ಸ್ ಹೆಚ್ಚು ಮಂದಿಯನ್ನು ತಲುಪುವುದರಿಂದ ಮತ್ತು ಪಾಲಿಸಿಯ ಕವರೇಜ್ ಪ್ರಮಾಣ ಹೆಚ್ಚಿಸುವುದರಿಂದ ಆರ್ಥಿಕತೆ ಚುರುಕುಗೊಳ್ಳುತ್ತದೆ ಎನ್ನುವ ವಾದವನ್ನು ಅವರು ಮುಂದಿಟ್ಟಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಫ್ಯಾಕ್ಟರಿ ಮಾಡಿ, ಆದ್ರೆ ಟೆಕ್ನಾಲಜಿ ಬಿಟ್ಟುಕೊಡಬೇಡಿ: ಚೀನೀ ಇವಿ ಕಂಪನಿಗಳಿಗೆ ಗೈಡ್​ಲೈನ್ಸ್

ಹೆಲ್ತ್ ಇನ್ಷೂರೆನ್ಸ್ ಪಾಲಿಸಿಯ ಕವರೇಜ್ ಮೊತ್ತವನ್ನು ಹೆಚ್ಚಿಸುವುದರಿಂದ ಆಸ್ಪತ್ರೆಗಳಿಗೆ ಅನುಕೂಲವಾಗುತ್ತದೆ. ಹೊಸ ಹೊಸ ಆಸ್ಪತ್ರೆ, ಕ್ಲಿನಿಕ್​ಗಳ ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತದೆ. ಹೆಲ್ತ್ ಕೇರ್ ವ್ಯವಸ್ಥೆ ಇನ್ನಷ್ಟು ಗರಿಗೆದರುತ್ತದೆ. 2023-24ರಲ್ಲಿ ಹೆಲ್ತ್ ಇನ್ಷೂರೆನ್ಸ್ ಕ್ಲೇಮ್ ಮೊತ್ತ 75,000 ಕೋಟಿ ರೂಗೂ ಹೆಚ್ಚಿತ್ತು. ಇದರಿಂದ ಹೊಸ ಆಸ್ಪತ್ರೆಗಳು ನಿರ್ಮಾಣ ಆಗುತ್ತಿವೆ ಎಂದು ತಪನ್ ಸಿಂಘೆಲ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ