ಬೆಂಗಳೂರಿನ ಹೊಸಕೋಟೆಯಲ್ಲಿ ಬಿಸಿಡಿ ಟೌನ್ಶಿಪ್; ಮಹಿಳಾ ಫಾಕ್ಸ್ಕಾನ್ ಉದ್ಯೋಗಿಗಳಿಗೆ 900 ಅಪಾರ್ಟ್ಮೆಂಟ್ಸ್
BCD emprasa apartments for foxconn employees in Bengaluru: ಗುತ್ತಿಗೆ ಆಧಾರದ ಮೇಲೆ ಐಫೋನ್ ತಯಾರಿಸುವ ತೈವಾನ್ ಮೂಲದ ಫಾಕ್ಸ್ಕಾನ್ ಸಂಸ್ಥೆ ಬೆಂಗಳೂರಿನಲ್ಲಿ ನಿರ್ಮಿಸುತ್ತಿರುವ ಫ್ಯಾಕ್ಟರಿ ಸಮೀಪ ತನ್ನ ಉದ್ಯೋಗಿಗಳಿಗೆ ಅಪಾರ್ಟ್ಮೆಂಟ್ಸ್ ಅನ್ನು ಗುತ್ತಿಗೆಗೆ ಪಡೆಯುತ್ತಿದೆ. ವರದಿಗಳ ಪ್ರಕಾರ ಹೊಸಕೋಟೆಯಲ್ಲಿ ಬಿಸಿಡಿ ಗ್ರೂಪ್ನಿಂದ ನಿರ್ಮಿಸಲಾಗುತ್ತಿರುವ ಟೌನ್ಶಿಪ್ನಲ್ಲಿ 900 ಅಪಾರ್ಟ್ಮೆಂಟ್ಗಳನ್ನು ಫಾಕ್ಸ್ಕಾನ್ ಪಡೆಯುವ ಸಾಧ್ಯತೆ ಇದೆ.
ಬೆಂಗಳೂರು, ಸೆಪ್ಟೆಂಬರ್ 12: ಇಲ್ಲಿಯ ಹೊಸಕೋಟೆಯಲ್ಲಿ ಬಿಸಿಡಿ ಗ್ರೂಪ್ನಿಂದ ನಿರ್ಮಾಣವಾಗುತ್ತಿರುವ ಟೌನ್ಶಿಪ್ನಲ್ಲಿ 900 ಅಪಾರ್ಟ್ಮೆಂಟ್ಗಳನ್ನು ಫಾಕ್ಸ್ಕಾನ್ ಬುಕ್ ಮಾಡುತ್ತಿದೆ ಎನ್ನುವಂತಹ ಸುದ್ದಿ ಇದೆ. ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ ಈ ಅಪಾರ್ಟ್ಮೆಂಟ್ಗಳನ್ನು ಮೂರು ವರ್ಷದ ಗುತ್ತಿಗೆಗೆ ಪಡೆಯಲಾಗುತ್ತಿದೆ. ಇದರಲ್ಲಿ ಫಾಕ್ಸ್ಕಾನ್ನ ಮಹಿಳಾ ಉದ್ಯೋಗಿಗಳಿಗೆ ಹಂಚಿಕೆ ಮಾಡುವ ಸಾಧ್ಯತೆ ಇದೆ. ಫಾಕ್ಸ್ಕಾನ್ನ ಎಂಜಿನಿಯರಿಂಗ್, ಟೆಕ್ನಿಕಲ್ ಮತ್ತು ಸಪೋರ್ಟ್ ಸ್ಟಾಫ್ ಇರಲಿದ್ದಾರೆ. ಹಾಗೆಯೇ, ಫ್ಯಾಕ್ಟರಿಯ ಮಹಿಳಾ ಕಾರ್ಮಿಕರಿಗೂ ಇಲ್ಲಿಯೇ ವ್ಯವಸ್ಥೆ ಮಾಡಬಹುದು.
ದೇವನಹಳ್ಳಿಯ ಕೆಂಪೇಗೌಡ ಏರ್ಪೋರ್ಟ್ ಬಳಿಯ 300 ಎಕರೆ ಜಾಗದಲ್ಲಿ ಫಾಕ್ಸ್ಕಾನ್ ಸಂಸ್ಥೆ ಐಫೋನ್ ಅಸೆಂಬ್ಲಿಂಗ್ ಘಟಕ ಸ್ಥಾಪಿಸುತ್ತಿದೆ. ಫಾಕ್ಸ್ಕಾನ್ನ ಐಫೋನ್ ಫ್ಯಾಕ್ಟರಿ ಸ್ಥಳವು ಈ ಟೌನ್ಶಿಪ್ನಿಂದ ಕೆಲ ಕಿಮೀ ದೂರ ಮಾತ್ರವೇ ಇದೆ. 25 ನಿಮಿಷಗಳ ಡ್ರೈವಿಂಗ್ನಷ್ಟು ದೂರ ಇದೆ.
ಇದನ್ನೂ ಓದಿ: ಐದು ಲಕ್ಷ ಕವರೇಜ್ ನೀಡುವ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್ಗೆ ಅರ್ಜಿ ಸಲ್ಲಿಕೆ, ಅರ್ಹತೆ, ದಾಖಲೆ ಇತ್ಯಾದಿ ವಿವರ
ರಿಯಲ್ ಎಸ್ಟೇಟ್ ಕಂಪನಿಯಾದ ಬಿಸಿಡಿ ಗ್ರೂಪ್ ಈ ಟೌನ್ಶಿಪ್ ಅಭಿವೃದ್ಧಿಪಡಿಸುತ್ತಿದೆ. ಈ ಮೊದಲು ಬೇರೆ ಕಂಪನಿಯಿಂದ ಈ ಟೌನ್ಶಿಪ್ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. 2021ರಲ್ಲಿ ಬಿಸಿಡಿ ಗ್ರೂಪ್ ಈ ಪ್ರಾಜೆಕ್ಟ್ ಪಡೆದುಕೊಂಡಿತು. 250 ಕೋಟಿ ರೂ ಬಂಡವಾಳ ಹಾಕಿ ಪ್ರಾಜೆಕ್ಟ್ ಪೂರ್ಣಗೊಳಿಸಿದೆ. ಅರ್ಥ ಎಂಪ್ರಾಸ ಎಂದಿದ್ದ ಟೌನ್ಶಿಪ್ ಹೆಸರನ್ನು ಬಿಸಿಡಿ ಎಂಪ್ರಾಸ ಎಂದು ರೀ ಬ್ರ್ಯಾಂಡಿಂಗ್ ಮಾಡಲಾಗಿದೆ.
ಈ ಇಡೀ ಟೌನ್ಶಿಪ್ ಅನ್ನು ಐಟಿ ವಲಯದ ಮಹಿಳೆಯರಿಗೆಂದು ಮಾಡಲಾಗಿರುವುದು ಸದ್ಯಕ್ಕೆ ತಿಳಿದುಬಂದಿರುವ ಮಾಹಿತಿ. ಇದೇನಾದರೂ ನಿಜವಾದಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಕಾರ್ಪೊರೇಟ್ ವಲಯದ ಮಹಿಳಾ ಉದ್ಯೋಗಿಗಳಿಗೆ ಟೌನ್ಶಿಪ್ ನಿರ್ಮಾಣವಾದಂತಾಗಿದೆ.
ಹೊಸಕೋಟೆ ಬಳಿ 8 ಎಕರೆ ಜಾಗದಲ್ಲಿ ಬಿಸಿಡಿ ಎಂಪ್ರಾಸ ಟೌನ್ಶಿಪ್ ನಿರ್ಮಾಣವಾಗುತ್ತಿದೆ. ಇದರಲ್ಲಿ ತಲಾ 9 ಫ್ಲೋರ್ಗಳಿರುವ 9 ಟವರ್ಗಳಿವೆ. 700ರಿಂದ 800 ಚದರಡಿ ವಿಸ್ತೀರ್ಣದ ಸಣ್ಣ ಅಪಾರ್ಟ್ಮೆಂಟ್ಗಳು ಇಲ್ಲಿವೆ. ಒಂದೊಂದು ಅಪಾರ್ಟ್ಮೆಂಟ್ನಲ್ಲೂ 4ರಿಂದ 6 ಜನರು ವಾಸಿಸಬಹುದು.
ಇದನ್ನೂ ಓದಿ: ಅಮೆರಿಕದಲ್ಲಿ ಹಣದುಬ್ಬರ ಇಳಿಕೆ; ಚಿನ್ನ, ಬೆಳ್ಳಿ ಬೆಲೆ ಏರುವ ಸಾಧ್ಯತೆ
ಅಂದಹಾಗೆ, ಈ ಮೇಲಿನ ಪ್ರಾಜೆಕ್ಟ್ 80 ಎಕರೆ ಟೌನ್ಶಿಪ್ ಪ್ರಾಜೆಕ್ಟ್ನ ಒಂದು ಭಾಗವಷ್ಟೇ. ಎರಡನೇ ಹಂತದಲ್ಲಿ 15 ಎಕರೆ ಜಾಗದಲ್ಲಿ ವಿಲ್ಲಾ ಮತ್ತಿತರ ವಸತಿಗಳ ನಿರ್ಮಾಣವಾಗಲಿದೆ. ವರ್ಷದ ಕೊನೆಯಲ್ಲಿ ಇದು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ವಿಚಾರವನ್ನು ಬಿಸಿಡಿ ಗ್ರೂಪ್ನ ಎಂಡಿ ಮತ್ತು ಛೇರ್ಮನ್ ಆಗಿರುವ ಅಂಗದ್ ಬೇಡಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ