ಭಾರತದಲ್ಲಿ ಫ್ಯಾಕ್ಟರಿ ಮಾಡಿ, ಆದ್ರೆ ಟೆಕ್ನಾಲಜಿ ಬಿಟ್ಟುಕೊಡಬೇಡಿ: ಚೀನೀ ಇವಿ ಕಂಪನಿಗಳಿಗೆ ಗೈಡ್​ಲೈನ್ಸ್

Chinese EV companies get instructions from Govt: ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನದಲ್ಲಿ ಬಹಳ ಮುಂದಿರುವ ಚೀನೀ ಕಂಪನಿಗಳು ವಿದೇಶಗಳಲ್ಲಿ ಫ್ಯಾಕ್ಟರಿ ಸ್ಥಾಪಿಸಲು ಯೋಜಿಸುತ್ತಿವೆ. ಈ ನಡುವೆ ಚೀನಾ ಸರ್ಕಾರ ಇವಿ ಕಂಪನಿಗಳ ಸಭೆ ಕರೆದಿದ್ದು, ಭಾರತವನ್ನೂ ಒಳಗೊಂಡಂತೆ ವಿದೇಶಗಳಲ್ಲಿ ಫ್ಯಾಕ್ಟರಿ ಸ್ಥಾಪಿಸಿದರೂ ಟೆಕ್ನಾಲಜಿ ಟ್ರಾನ್ಸ್​ಫರ್ ಮಾಡಬಾರದು ಎಂದು ಸೂಚಿಸಿದೆ. ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಬಿಡಿಭಾಗ ಚೀನಾದಲ್ಲೇ ತಯಾರಾಗಬೇಕು. ವಿದೇಶೀ ಘಟಕಗಳಲ್ಲಿ ಅಸೆಂಬ್ಲಿಂಗ್ ಆಗಬೇಕು ಎಂಬ ನಿರ್ದೇಶನ ನೀಡಲಾಗಿದೆ.

ಭಾರತದಲ್ಲಿ ಫ್ಯಾಕ್ಟರಿ ಮಾಡಿ, ಆದ್ರೆ ಟೆಕ್ನಾಲಜಿ ಬಿಟ್ಟುಕೊಡಬೇಡಿ: ಚೀನೀ ಇವಿ ಕಂಪನಿಗಳಿಗೆ ಗೈಡ್​ಲೈನ್ಸ್
ಭಾರತ ಚೀನಾ ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 12, 2024 | 5:05 PM

ಬೀಜಿಂಗ್, ಸೆಪ್ಟೆಂಬರ್ 12: ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನದಲ್ಲಿ ಚೀನಾ ಬಹಳ ಮುಂದಿದೆ. ಟೆಸ್ಲಾ ಕೂಡ ಚೀನೀ ಕಂಪನಿಗಳ ಎದುರು ಪೈಪೋಟಿ ನಡೆಸಲು ಹೆಣಗುವಷ್ಟು ಪರಿಸ್ಥಿತಿ ಇದೆ. ದೇಶೀಯ ಮಾರುಕಟ್ಟೆಯಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿರುವ ಚೀನೀ ಇವಿ ಕಂಪನಿಗಳು ಈಗ ವಿದೇಶಗಳಲ್ಲಿ ವಿಸ್ತರಿಸಲು ಹೊರಟಿವೆ. ಈ ಹಂತದಲ್ಲಿ ಚೀನಾ ಸರ್ಕಾರ ತನ್ನ ದೇಶದ ಇವಿ ಕಂಪನಿಗಳಿಗೆ ಕೆಲ ಷರತ್ತುಗಳನ್ನು ವಿಧಿಸಿರುವುದು ತಿಳಿದುಬಂದಿದೆ. ಭಾರತವೂ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಕಾರುಗಳನ್ನು ತಯಾರಿಸಲು ಘಟಕ ಸ್ಥಾಪಿಸುವಾಗ ಟೆಕ್ನಾಲಜಿಯ ರಹಸ್ಯಗಳನ್ನು ಹಂಚಿಕೊಳ್ಳಬಾರದು ಎಂಬುದು ಪ್ರಮುಖವಾಗಿ ವಿಧಿಸಿರುವ ಷರತ್ತಾಗಿದೆ.

ಜುಲೈ ತಿಂಗಳಲ್ಲಿ ಚೀನಾದ ಹತ್ತಕ್ಕೂ ಹೆಚ್ಚು ವಾಹನ ತಯಾರಕರ ಸಭೆಯನ್ನು ಅಲ್ಲಿನ ವಾಣಿಜ್ಯ ಸಚಿವಾಲಯ ಕರೆದಿತ್ತು. ಅಲ್ಲಿ ಮುಂದುವರಿದ ಇವಿ ತಂತ್ರಜ್ಞಾನವನ್ನು ಬೇರೆ ದೇಶಗಳಿಗೆ ರವಾನಿಸದಂತೆ ಹೇಗೆ ಎಚ್ಚರವಹಿಸಬೇಕು ಎಂಬುದನ್ನು ಸರ್ಕಾರ ಸೂಚಿಸಿದೆ.

ಇದನ್ನೂ ಓದಿ: ಬೆಂಗಳೂರಿನ ಹೊಸಕೋಟೆಯಲ್ಲಿ ಬಿಸಿಡಿ ಟೌನ್​ಶಿಪ್; ಮಹಿಳಾ ಫಾಕ್ಸ್​ಕಾನ್ ಉದ್ಯೋಗಿಗಳಿಗೆ 900 ಅಪಾರ್ಟ್ಮೆಂಟ್ಸ್

ಭಾರತದಲ್ಲಿ ವಾಹನ ತಯಾರಿಕೆ ಘಟಕ ಸ್ಥಾಪಿಸಿದರೂ ಪ್ರಮುಖ ಭಾಗದ ಉತ್ಪಾದನೆ ಚೀನಾದಲ್ಲೇ ಆಗಬೇಕು ಎಂದು ತಿಳಿಸಲಾಗಿದೆ. ಅಲ್ಲದೇ, ಚೀನೀ ಕಂಪನಿಗಳು ವಾಹನ ಬಿಡಿಭಾಗಗಳ ನಾಕ್ ಡೌನ್ ಕಿಟ್​ಗಳನ್ನು ರಫ್ತು ಮಾಡಬೇಕು. ಬಳಿಕ ವಿದೇಶದಲ್ಲಿರುವ ತನ್ನ ಘಟಕದಲ್ಲಿ ವಾಹನ ಅಸೆಂಬ್ಲಿಂಗ್​ಗೆ ಈ ಕಿಟ್ ಅನ್ನು ಉಪಯೋಗಿಸಬೇಕು. ಇದರಿಂದ ಆಮದು ಸುಂಕ ಹೆಚ್ಚು ಬೀಳದಂತೆ ನೋಡಿಕೊಳ್ಳಬಹುದು ಎಂಬುದು ಚೀನೀ ಕಂಪನಿಗಳಿಗೆ ಕೊಡಲಾಗಿರುವ ಮತ್ತೊಂದು ಪ್ರಮುಖ ಸಲಹೆಯಾಗಿದೆ.

ನಾಕ್ ಡೌನ್ ಕಿಟ್​ನಲ್ಲಿ ವಿವಿಧ ಬಿಡಿಭಾಗಗಳಿರುತ್ತವೆ. ಇವುಗಳನ್ನು ತೆರೆದು ಹಾಗೇ ಅಸೆಂಬ್ಲಿಂಗ್ ಮಾಡಬಹುದು. ಆಮದು ತೆರಿಗೆ ಉಳಿಸಲು ಕಂಪನಿಗಳು ಈ ತಂತ್ರ ಉಪಯೋಗಿಸುತ್ತವೆ.

ಇದನ್ನೂ ಓದಿ: Windfall Tax: ವಿಂಡ್​ಫಾಲ್ ಟ್ಯಾಕ್ಸ್ ರದ್ದತಿ, ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯತೆ

ಚೀನಾ ಸರ್ಕಾರದ ಈ ಮಾರ್ಗಸೂಚಿ ಅಥವಾ ನಿಯಮಗಳು ಭಾರತ ಮಾತ್ರವಲ್ಲ, ಟರ್ಕಿ ಇತ್ಯಾದಿ ಎಲ್ಲಾ ದೇಶಗಳಿಗೂ ಅನ್ವಯವಾಗುವಂತೆ ಮಾಡಲಾಗಿದೆ. ಚೀನಾದ ಬಿವೈಡಿ, ಚೆರಿ ಆಟೊಮೊಬೈಲ್ ಮೊದಲಾದ ಆಟೊಮೊಬೈಲ್ ಕಂಪನಿಗಳು ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಪರಿಣಿತಿ ಹೊಂದಿವೆ. ಸ್ಪೇನ್, ಥಾಯ್ಲೆಂಡ್, ಹಂಗೆರಿ ಮೊದಲಾದ ದೇಶಗಳಲ್ಲಿ ಫ್ಯಾಕ್ಟರಿ ಸ್ಥಾಪಿಸಲು ಯೋಜಿಸುತ್ತಿವೆ. ಭಾರತದಲ್ಲೂ ಬಿವೈಡಿ ಫ್ಯಾಕ್ಟರಿ ಸ್ಥಾಪನೆಗೆ ಆಸಕ್ತಿ ಹೊಂದಿದೆ. ಆದರೆ, ಸರ್ಕಾರದಿಂದ ಇನ್ನೂ ಹಸಿರು ನಿಶಾನೆ ಸಿಕ್ಕಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್