ಆಗಸ್ಟ್​ನಲ್ಲಿ ರೀಟೇಲ್ ಹಣದುಬ್ಬರ ಶೇ. 3.65ಕ್ಕೆ ಹೆಚ್ಚಳ; ಆರ್​ಬಿಐ ಗುರಿಯೊಳಗೆ ಬಂಧಿಯಾದ ಬೆಲೆ ಏರಿಕೆ

Retail inflation in August: ಜುಲೈನಲ್ಲಿ ಶೇ. 3.54 ಇದ್ದ ರೀಟೇಲ್ ಹಣದುಬ್ಬರ ಆಗಸ್ಟ್​ನಲ್ಲಿ ಶೇ. 3.65ಕ್ಕೆ ಏರಿದೆ. ಹಲವು ಆರ್ಥಿಕ ತಜ್ಞರ ಪ್ರಕಾರ ಆಗಸ್ಟ್​​ನಲ್ಲಿ ಹಣದುಬ್ಬರ ಶೇ. 3.50ರಷ್ಟಿರಬಹುದು ಎಂದು ಅಂದಾಜಿಸಿದ್ದರು. ನಿರೀಕ್ಷೆಗಿಂತಲೂ ಹೆಚ್ಚು ಮಟ್ಟಕ್ಕೆ ಬೆಲೆ ಏರಿಕೆ ಆಗಿದೆ. ತರಕಾರಿ ಬೆಲೆಗಳು ತೀರಾ ಹೆಚ್ಚಾಗಿರುವುದು ಹಣದುಬ್ಬರ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಆಗಸ್ಟ್​ನಲ್ಲಿ ರೀಟೇಲ್ ಹಣದುಬ್ಬರ ಶೇ. 3.65ಕ್ಕೆ ಹೆಚ್ಚಳ; ಆರ್​ಬಿಐ ಗುರಿಯೊಳಗೆ ಬಂಧಿಯಾದ ಬೆಲೆ ಏರಿಕೆ
ಹಣದುಬ್ಬರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 12, 2024 | 6:32 PM

ನವದೆಹಲಿ, ಸೆಪ್ಟೆಂಬರ್ 12: ಆಗಸ್ಟ್ ತಿಂಗಳಲ್ಲಿ ಭಾರತದ ರೀಟೇಲ್ ಹಣದುಬ್ಬರ ಶೇ. 3.65ರಲ್ಲಿದೆ. ಜುಲೈ ತಿಂಗಳಲ್ಲಿ ಹಣದುಬ್ಬರ ಶೇ. 3.54ರಷ್ಟಿತ್ತು. ಐದು ವರ್ಷದಲ್ಲೇ ಅತ್ಯಂತ ಕಡಿಮೆ ಮಟ್ಟದ ಹಣದುಬ್ಬರ ಅದಾಗಿತ್ತು. ಆಗಸ್ಟ್​ನಲ್ಲಿ ತುಸು ಹೆಚ್ಚಳವಾಗಿದೆ. ವಿವಿಧ ಆರ್ಥಿಕ ತಜ್ಞರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಹಣದುಬ್ಬರ ಇದೆ. ರಾಯ್ಟರ್ಸ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ರೀಟೇಲ್ ಹಣದುಬ್ಬರ ಆಗಸ್ಟ್​​ನಲ್ಲಿ ಶೇ. 3.50ಗೆ ಇಳಿಯಬಹುದು ಎಂದು 53 ಆರ್ಥಿಕ ತಜ್ಞರ ಅನಿಸಿಕೆ ಆಗಿತ್ತು. ಆ ನಿರೀಕ್ಷೆ ಮೀರಿ ಹಣದುಬ್ಬರ ಶೇ. 3.65ಕ್ಕೆ ಹೆಚ್ಚಳವಾಗಿದೆ.

ಅಂದುಕೊಂಡಿದ್ದಕ್ಕಿಂತಲೂ ಬೆಲೆ ಹೆಚ್ಚಿನ ಮಟ್ಟಕ್ಕೆ ಹೋಗಲು ಪ್ರಮುಖ ಕಾರಣ ತರಕಾರಿಬೆಲೆ ಏರಿಕೆಯಾಗಿದ್ದು. ಜುಲೈನಲ್ಲಿ ಶೇ. 6.83ರಷ್ಟಿದ್ದ ತರಕಾರಿ ಹಣದುಬ್ಬರ ಆಗಸ್ಟ್​ನಲ್ಲಿ ಶೇ. 10.71ರಷ್ಟು ಬೆಳೆದಿದೆ. ಬೇಳೆ ಕಾಳುಗಳ ಹಣದುಬ್ಬರ ಶೇ. 13 ಮತ್ತು ಶೇ. 7.31ರಷ್ಟಿದೆ. ಹಣ್ಣುಗಳ ಹಣದುಬ್ಬರ ಶೇ. 6.45ರಷ್ಟಿದೆ. ಹಾಲು ಮತ್ತು ಅದರ ಉತ್ಪನ್ನಗಳು ಶೇ. 2.98ರಷ್ಟು ಬೆಲೆ ಏರಿಕೆ ಕಂಡಿವೆ. ಒಟ್ಟಾರೆ ಆಹಾರ ಹಣದುಬ್ಬರ ಶೇ. 5.42ರಿಂದ ಶೇ. 5.66ಕ್ಕೆ ಏರಿದೆ.

ಇದನ್ನೂ ಓದಿ: ಭಾರತದಲ್ಲಿ ಫ್ಯಾಕ್ಟರಿ ಮಾಡಿ, ಆದ್ರೆ ಟೆಕ್ನಾಲಜಿ ಬಿಟ್ಟುಕೊಡಬೇಡಿ: ಚೀನೀ ಇವಿ ಕಂಪನಿಗಳಿಗೆ ಗೈಡ್​ಲೈನ್ಸ್

ಇಂಧನ ಹಣದುಬ್ಬರ ಜುಲೈಗಿಂತ ಆಗಸ್ಟ್​​ನಲ್ಲಿ ಹೆಚ್ಚು ಇಳಿಮುಖವಾಗಿದೆ. ಇದು ಒಟ್ಟಾರೆ ರೀಟೇಲ್ ಹಣದುಬ್ಬರ ಶೇ. 4ಕ್ಕೆ ಹೋಗದಂತೆ ನಿಯಂತ್ರಿಸಿರಬಹುದು.

ಆರ್​ಬಿಐ ಶೇ. 4ಕ್ಕೆ ಹಣದುಬ್ಬರ ಕಟ್ಟಿಹಾಕುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಶೇ. 2ರಿಂದ 6 ಅನ್ನು ತಾಳಿಕೆಯ ಮಿತಿ ಎಂದು ನಿಗದಿ ಮಾಡಿದೆ. ಹಣದುಬ್ಬರ ಈ ತಾಳಿಕೆ ಮಿತಿಯೊಳಗೆ ಇರುವುದು ಆರ್​ಬಿಐನ ಮೊದಲ ಗುರಿ. ಅಂತಿಮವಾಗಿ ಹಣದುಬ್ಬರ ಶೇ. 4ರ ಮಟ್ಟದಲ್ಲಿ ದೀರ್ಘ ಕಾಲ ಉಳಿಯುವಂತೆ ಮಾಡುವುದು ಅದರ ಅಂತಿಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಅದರ ನೀತಿಗಳು ರೂಪಿತಗೊಳ್ಳುತ್ತಿವೆ.

ಇದನ್ನೂ ಓದಿ: ಐದು ಲಕ್ಷ ಕವರೇಜ್ ನೀಡುವ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್​ಗೆ ಅರ್ಜಿ ಸಲ್ಲಿಕೆ, ಅರ್ಹತೆ, ದಾಖಲೆ ಇತ್ಯಾದಿ ವಿವರ

ಹಣದುಬ್ಬರ ನಿಯಂತ್ರಣ ವಿಚಾರದಲ್ಲಿ ವಿಶ್ವದ ಇತರ ಸೆಂಟ್ರಲ್ ಬ್ಯಾಂಕುಗಳಿಗಿಂತ ಆರ್​ಬಿಐ ಹೆಚ್ಚು ಯಶಸ್ವಿಯಾಗಿದೆ ಎನ್ನುವ ಪ್ರಶಂಸೆ ಹಲವರಿಂದ ಸಿಕ್ಕಿದೆ. 2022ರಲ್ಲಿ ಶೇ. 7ಕ್ಕಿಂತಲೂ ಹೆಚ್ಚಿದ್ದ ಹಣದುಬ್ಬರವನ್ನು ಶೇ. 4ರ ಗಡಿಗಿಂತ ಕೆಳಗೆ ತಂದಿರುವುದು ಸಾಮಾನ್ಯ ಸಂಗತಿ ಅಲ್ಲ. ರಿಪೋ ದರವನ್ನು ಸತತವಾಗಿ ಹೆಚ್ಚಿಸುತ್ತಾ ಹೋಗಿದ್ದು ಹಣದುಬ್ಬರ ನಿಯಂತ್ರಣ ಸಾಧ್ಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್