ಬೆಂಗಳೂರು-ಮಂಗಳೂರು-ಕೊಲ್ಲಂಗೆ ವಿಶೇಷ ರೈಲುಗಳು: ಇಲ್ಲಿದೆ ವೇಳಾಪಟ್ಟಿ
Summer Special Trains: ನೈರುತ್ಯ ರೈಲ್ವೆ ಇಲಾಖೆ ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ಬೆಂಗಳೂರಿನಿಂದ ಮಂಗಳೂರು ಮತ್ತು ಕೊಲ್ಲಂಗೆ ವಿಶೇಷ ರೈಲುಗಳ ಸಂಚಾರಕ್ಕೆ ಮುಂದಾಗಿದೆ. ಎಸ್‌ಎಂವಿಟಿ ಬೆಂಗಳೂರಿನಿಂದ ಕೊಲ್ಲಂ ಮತ್ತು ಮಂಗಳೂರಿಗೆ ರೈಲುಗಳ ಸಂಚಾರ ದಿನಾಂಕ, ಸಮಯ ಮತ್ತು ಕೋಚ್ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ಏಪ್ರಿಲ್ 16: ಪ್ರಯಾಣಿಕರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ನೈರುತ್ಯ ರೈಲು (South Western Railway) ಬೇಸಿಗೆ ರಜೆಯ ವಿಶೇಷ ರೈಲುಗಳನ್ನು ಓಡಿಸಲು ಮುಂದಾಗಿದೆ. ಎಸ್‌ಎಂವಿಟಿ (SMVT) ಬೆಂಗಳೂರು ಟು ಕೊಲ್ಲಂ ಎಕ್ಸ್‌ಪ್ರೆಸ್ (Bengaluru-Kollam) ಮತ್ತು ಎಸ್‌ಎಂವಿಟಿ ಬೆಂಗಳೂರು ಟು ಮಂಗಳೂರಿಗೆ ವಿಶೇಷ ರೈಲುಗಳು ಸಂಚರಿಸಲಿವೆ. ಈ ಬಗ್ಗೆ ನೈರುತ್ಯ ರೈಲ್ವೆ ಇಲಾಖೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಬೆಂಗಳೂರು-ಮಂಗಳೂರು-ಕೊಲ್ಲಂಗೆ ವಿಶೇಷ ರೈಲುಗಳ ಸಮಯ, ದಿನಾಂಕ ಸೇರಿದಂತೆ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
ವಿಶೇಷ ರೈಲುಗಳ ವಿವರ
ರೈಲು ಸಂಖ್ಯೆ 06585: ಎಸ್‌ಎಂವಿಟಿ ಬೆಂಗಳೂರು ಟು ಕೊಲ್ಲಂ ಎಕ್ಸ್‌ಪ್ರೆಸ್. ಏಪ್ರಿಲ್ 19 (ಶನಿವಾರ) ಮಧ್ಯಾಹ್ನ 3:50 ಗಂಟೆಗೆ ಹೊರಟು ಭಾನುವಾರ ಬೆಳಿಗ್ಗೆ 06:20 ಕೊಲ್ಲಂ ತಲುಪುತ್ತದೆ. ದಿನಕ್ಕೆ ಒಂದು ಸೇವೆ ಮಾತ್ರ ಇರಲಿದೆ.
ಇದನ್ನೂ ಓದಿ: ಬೆಂಗಳೂರು ಮೆಟ್ರೋ ಕಾಮಗಾರಿ ವೇಳೆ ದುರಂತ: ವಯಾಡೆಕ್ಟ್ ಬಿದ್ದು ಆಟೋ ಚಾಲಕ ಸಾವು, ಜನರು ಆಕ್ರೋಶ
ರೈಲು ಸಂಖ್ಯೆ 06586: ಕೊಲ್ಲಂ ಟು ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್. 20 ಏಪ್ರಿಲ್ (ಭಾನುವಾರ) ಸಂಜೆ 5:50 ಕ್ಕೆ ಹೊರಟು ಮರುದಿನ ಅಂದರೆ ಸೋಮವಾರ ಎಸ್‌ಎಂವಿಟಿ ಬೆಂಗಳೂರು ಬೆಳಿಗ್ಗೆ 08:35 ಕ್ಕೆ ತಲುಪಲಿದೆ. ದಿನಕ್ಕೆ ಒಂದು ಸೇವೆ ಮಾತ್ರ ಇರಲಿದೆ.
ಯಾವೆಲ್ಲಾ ಕೋಚ್‌ಗಳು ಲಭ್ಯ
1 ಎಸಿ ಟು ಟೈಯರ್ ಕೋಚ್, 1 ಎಸಿ ತ್ರೀ ಟೈಯರ್ ಕೋಚ್, 8 ಸ್ಲೀಪರ್ ಕ್ಲಾಸ್ ಕೋಚ್‌ಗಳು, 4 ಜನರಲ್ ಸೆಕೆಂಡ್ ಕ್ಲಾಸ್ ಕೋಚ್‌ಗಳು ಮತ್ತು 2 ಸೆಕೆಂಡ್ ಕ್ಲಾಸ್ ಕೋಚ್‌ಗಳು ಹೊಂದಿವೆ.
ಎಲ್ಲೆಲ್ಲಿ ನಿಲುಗಡೆ?
SMVT ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಪೋದನೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ, ಕೊಟ್ಟಾಯಂ, ಚಂಗನಾಸ್ಸೆರಿ, ತಿರುವಲ್ಲಾ, ಚೆಂಗನ್ನೂರು, ಮಾವೇಲಿಕ್ಕರ, ಕಾಯಕುಲಂ ಹಾಗೂ ಕೊಲ್ಲಂ.
ಎಸ್‌ಎಂವಿಟಿ ಬೆಂಗಳೂರು-ಮಂಗಳೂರು ವಿಶೇಷ ರೈಲು
ಇದೇ ರೀತಿಯಾಗಿ ಎಸ್‌ಎಂವಿಟಿ ಬೆಂಗಳೂರು ಟು ಮಂಗಳೂರು ಜಂಕ್ಷನ್ ನಡುವೆ ವಿಶೇಷ ರೈಲುಗಳು ಸಂಚಸಿಲಿವೆ. ರೈಲು ಸಂಖ್ಯೆ 06579: SMVT ಬೆಂಗಳೂರು ಟು ಮಂಗಳೂರು ಜಂಕ್ಷನ್. ಏಪ್ರಿಲ್ 17 ರಂದು ರಾತ್ರಿ 11.55 ಕ್ಕೆ SMVT ಬೆಂಗಳೂರಿನಿಂದ ಹೊರಟು ಮರುದಿನ ಸಂಜೆ 4 ಗಂಟೆಗೆ ಮಂಗಳೂರು ಜಂಕ್ಷನ್ ತಲುಪುತ್ತದೆ.
South Western Railway has notified Special Trains between SMVT #Bengaluru and #Mangluru Jn to clear extra rush of passengers during summer season
Advance Reservation for the above Special trains are open from #SouthernRailway End pic.twitter.com/hkmrRiDZwV
— Southern Railway (@GMSRailway) April 15, 2025
ರೈಲು ಸಂಖ್ಯೆ 06580: ಮಂಗಳೂರು ಜಂಕ್ಷನ್ ಟು SMVT ಬೆಂಗಳೂರು. ಏಪ್ರಿಲ್ 20 ರಂದು ಮಧ್ಯಾಹ್ನ 2.10 ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಮರುದಿನ ಬೆಳಿಗ್ಗೆ 7.30 ಕ್ಕೆ SMVT ಬೆಂಗಳೂರು ತಲುಪುತ್ತದೆ.
ಎಲ್ಲೆಲ್ಲಿ ನಿಲುಗಡೆ?
SMVT ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಪೋದನೂರು, ಪಾಲಕ್ಕಾಡ್, ತ್ರಿಶೂರ್, ಕೋಜಿಕೋಡ್, ವಡಕರ, ತಲಸ್ಸೆರಿ, ಕಣ್ಣೂರು, ಪಯ್ಯನೂರು, ಕಾಞಂಗಾಡ್, ಕಾಸರಗೋಡು ಹಾಗೂ ಮಂಗಳೂರು.
ಯಾವೆಲ್ಲಾ ಕೋಚ್‌ಗಳು ಲಭ್ಯ
1 ಪ್ರಥಮ ದರ್ಜೆ ಎಸಿ ಕೋಚ್, 2 ಎಸಿ ಟೂ-ಟೈರ್ ಕೋಚ್‌ಗಳು, 4 ಎಸಿ ತ್ರೀ-ಟೈರ್ ಕೋಚ್‌ಗಳು, 7 ಸ್ಲೀಪರ್ ಕ್ಲಾಸ್ ಕೋಚ್‌ಗಳು, 4 ಸಾಮಾನ್ಯ ದ್ವಿತೀಯ ದರ್ಜೆ ಕೋಚ್‌ಗಳು ಮತ್ತು 2 ಸಾಮಾನ್ಯ ದ್ವಿತೀಯ ದರ್ಜೆ ಲಗೇಜ್-ಕಮ್-ಬ್ರೇಕ್ ವ್ಯಾನ್ ಕೋಚ್‌ಗಳು ಹೊಂದಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:41 am, Wed, 16 April 25