ವಿಶ್ವದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರೆಂಬ ಕಿರೀಟದಿಂದ ಐಎಂಎಫ್ ಡೆಪ್ಯೂಟಿ ಎಮ್​ಡಿ ತನಕ 2021ರ ಸಾಧಕಿಯರು

| Updated By: Srinivas Mata

Updated on: Dec 22, 2021 | 1:26 PM

2021ರಲ್ಲಿ ಸಾಧನೆ ಮಾಡಿದವರ ಪೈಕಿ ಗೀತಾ ಗೋಪಿನಾಥ್​ರಿಂದ ಫಲ್ಗುಣಿ ನಾಯರ್​ ತನಕ ಐವರು ಮಹಿಳೆಯರ ಬಗ್ಗೆ ಕುತೂಹಲಕರ ಮಾಹಿತಿ ಇಲ್ಲಿದೆ.

ವಿಶ್ವದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರೆಂಬ ಕಿರೀಟದಿಂದ ಐಎಂಎಫ್ ಡೆಪ್ಯೂಟಿ ಎಮ್​ಡಿ ತನಕ 2021ರ ಸಾಧಕಿಯರು
ಗೀತಾ ಗೋಪಿನಾಥ್ (ಸಂಗ್ರಹ ಚಿತ್ರ)
Follow us on

ಇನ್ನೇನು 2021ನೇ ಇಸವಿ ಕೊನೆ ಆಗುತ್ತಿದೆ. ಈ ವರ್ಷ ನಮ್ಮೆಲ್ಲರ ಜೀವನದಲ್ಲೂ ನಾನಾ ಬಗೆಯ ಪ್ರಭಾವ ಬೀರಿದೆ. ಇನ್ನು ಮಹಿಳೆಯರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿದ್ದಾರೆ. ಅದು ಗೀತಾ ಗೋಪಿನಾಥ್​ರಿಂದ ಲೀನಾ ನಾಯರ್​ ತನಕ ಮಾಡಿದ ಸಾಧನೆಯಿಂದಾಗಿ ಭಾರತದಲ್ಲಿ ಹಲವರಿಗೆ ಸ್ಫೂರ್ತಿ ಆಗಿದ್ದಾರೆ. ಆ ಮೂಲಕ ಹತ್ತಾರು ಲಕ್ಷ ಮಂದಿಗೆ ಬಹಳ ದೊಡ್ಡ ಕನಸುಗಳನ್ನು ಕಾಣಲು ಪ್ರೇರಣೆ ಆಗಿದ್ದಾರೆ. ಇನ್ನು ತಮ್ಮ 50ನೇ ವರ್ಷದಲ್ಲಿ ಉದ್ಯಮ ಆರಂಭಿಸಿದ ನೈಕಾ ಸಿಇಒ ಫಲ್ಗುಣಿ ನಾಯರ್ ಕೆಲ ವರ್ಷಗಳಲ್ಲಿ ಬಿಲಯನೇರ್ ಆಗಿದ್ದಾರೆ (1 ಬಿಲಿಯನ್​ಗೆ 100 ಕೋಟಿ). ಆ ರೀತಿ ಈ ವರ್ಷ ದೊಡ್ಡ ಸಾಧನೆಗಳನ್ನು ಮಾಡಿದ ಐವರು ಮಹಿಳೆಯರನ್ನು ಈ ಲೇಖನದಲ್ಲಿ ನೆನಪಿಸಿಕೊಳ್ಳಲಾಗುತ್ತಿದೆ.

ಗೀತಾ ಗೋಪಿನಾಥ್
ಕರ್ನಾಟಕದ ಮೈಸೂರಿನಲ್ಲಿ ಜನಿಸಿದ ಗೀತಾ ಗೋಪಿನಾಥ್ ಅವರು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮೊದಲ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ಆದರು. ಇದಕ್ಕೂ ಮುನ್ನ ಐಎಂಎಫ್​ನಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ಇತಿಹಾಸ ಬರೆದರು. 2022ರ ಜನವರಿಯಲ್ಲಿ ಹೊಸ ಹುದ್ದೆ ವಹಿಸಿಕೊಳ್ಳಲಿದ್ದಾರೆ. ಈ ಸಮಯಕ್ಕೆ ಗೀತಾ ಅವರಂಥವರು ಈ ಹುದ್ದೆ ನಿರ್ವಹಿಸುವ ಅಗತ್ಯ ಇದೆ ಎಂದು ಐಎಂಎಫ್​ನ ಎಂ.ಡಿ. ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ.

ಫಲ್ಗುಣಿ ನಾಯರ್
ಫಲ್ಗುಣಿ ನಾಯರ್ ಅವರು ತಮ್ಮ ಇ-ಕಾಮರ್ಸ್ ಸೌಂದರ್ಯ ಪ್ಲಾಟ್​ಫಾರ್ಮ್ ಉದ್ಯಮ ನೈಕಾವನ್ನು ಆರಂಭಿಸಿದ್ದು ತಮ್ಮ 50ನೇ ವಯಸ್ಸಿನಲ್ಲಿ. ಈ ವರ್ಷದ ನವೆಂಬರ್​ನಲ್ಲಿ ಅವರಿಗೆ 58ನೇ ವರ್ಷವಾದಾಗ ಅವರು ಭಾರತದ ಅತಿ ಶ್ರೀಮಂತ ಸೆಲ್ಫ್​ಮೇಡ್ ಮಹಿಳಾ ಬಿಲಿಯನೇರ್ ಅನಿಸಿಕೊಂಡರು. ಎಎಫ್​ಪಿ ವರದಿಯ ಪ್ರಕಾರ ಅವರು ವಿಶ್ವದ ಅತಿ ಶ್ರೀಮಂತರಲ್ಲಿ ಒಬ್ಬರು. ಅದಕ್ಕೆ ಕಾರಣ ಆಗಿದ್ದು ಈಚೆಗೆ ಲಿಸ್ಟಿಂಗ್ ಆದ ನೈಕಾ ಷೇರು. ಆ ಮೂಲಕ ನೈಕಾ ಸ್ಥಾಪಕಿ ಹಾಗೂ ಸಿಇಒ ಭಾರತದ ಇತರ ಆರು ಬಿಲಿಯನೇರ್ ಭಾರತೀಯ ಮಹಿಳೆಯರ ಬ್ಲೂಮ್​ಬರ್ಗ್​ ಸೂಚ್ಯಂಕದಲ್ಲಿ ಸೇರ್ಪಡೆ ಆದರು.

ಲೀನಾ ನಾಯರ್
ಫ್ರೆಂಚ್​ ವಿಲಾಸಿ ಫ್ಯಾಷನ್ ಹೌಸ್ ಚಾನೆಲ್​ (Chanel) ಗ್ಲೋಬಲ್​ನ ಹೊಸ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡ ಮೊದಲ ಭಾರತೀಯರು ಲೀನಾ ನಾಯರ್. ಜಾಗತಿಕ ಮಟ್ಟದಲ್ಲಿ ಅವರು ಚಾನೆಲ್​ನ ಸಿಇಒ. ಕಂಪೆನಿಯ ಹೇಳಿಕೆ ಪ್ರಕಾರ, ಲೀನಾ ನಾಯರ್ ಜನವರಿಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನಾಯರ್ ಅವರು ಯುನಿಲಿವರ್​ನಲ್ಲಿ ಮಾನವ ಸಂಪನ್ಮೂಲ ಉನ್ನತ ಅಧಿಕಾರಿಯಾಗಿದ್ದರು.

ದಿವ್ಯಾ ಗೋಕುಲ್​ನಾಥ್
ಬೈಜೂಸ್ ಥಿಂಕ್ ಅಂಡ್ ಲರ್ನ್ ಎಡ್​ಟೆಕ್ ಪ್ಲಾಟ್​ಫಾರ್ಮ್​ನ ಸಹ ಸಂಸ್ಥಾಪಕರು ದಿವ್ಯಾ ಗೋಕುಲ್​ನಾಥ್. ಅವರು ತಮ್ಮ ಕಂಪೆನಿಯನ್ನು ಯುನಿಕಾರ್ನ್ ಆಗಿ ಬೆಳೆಸಿದವರು. ಜತೆಗೆ 405 ಕೋಟಿ ಅಮೆರಿಕನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ 35 ವರ್ಷದ ದಿವ್ಯಾ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ರುಚಿ ಕರ್ಲಾ
ಸಾಫ್ಟ್​ಬ್ಯಾಂಕ್​ನಿಂದ 160 ಮಿಲಿಯನ್ ಡಾಲರ್ ನಿಧಿ ಪಡೆದ ಮೇಲೆ ಆಫ್​ಬಿಜಿನೆಸ್​ ಯುನಿಕಾರ್ನ್ ಆಯಿತು. ಅದರ ಸಹ ಸಂಸ್ಥಾಪಕರು ರುಚಿ ಕರ್ಲಾ. OFB Tech (OfBusiness) ತಂತ್ರಜ್ಞಾನ ಕಂಪೆನಿ. ಅದು ಕಚ್ಚಾ ವಸ್ತುಗಳ ಖರೀದಿ ಮತ್ತು ಉತ್ಪಾದನೆ ಹಾಗೂ ಮೂಲಸೌಕರ್ಯ ವಲಯದಲ್ಲಿ ಇರುವ ಎಸ್​ಎಂಇಗಳಿಗೆ ಸಾಲ ಒದಗಿಸುವ ಕಡೆಗೆ ಗಮನ ಕೇಂದ್ರೀಕರಿಸುತ್ತದೆ. ಎಸ್​ಎಂಇಗಳು ಉತ್ತಮ ಉತ್ಪನ್ನಗಳನ್ನು ಖರೀದಿ ಮಾಡುವುದಕ್ಕೆ ತಂತ್ರಜ್ಞಾನದ ಸಂಯೋಜನೆ ಮಾಡುತ್ತದೆ.

ಇದನ್ನೂ ಓದಿ: Nykaa Falguni Nayar: ವಿಶ್ವದ ಶ್ರೀಮಂತ ಮಹಿಳೆಯರ ಸಾಲಲ್ಲಿ ನೈಕಾದ ಫಲ್ಗುಣಿ ನಾಯರ್; ಆಸ್ತಿ ಮೌಲ್ಯ 48,257 ಕೋಟಿ ರೂ.