Gold Price Today: ಚಿನ್ನ, ಬೆಳ್ಳಿ ದರ ಮತ್ತೆ ಹೆಚ್ಚಳ; ಪ್ರಮುಖ ನಗರಗಳ ದರ ವಿವರ ಇಲ್ಲಿದೆ
Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.
Gold Silver Price on 12 November 2022 | ಬೆಂಗಳೂರು: ರೂಪಾಯಿ ಮೌಲ್ಯ ವೃದ್ಧಿ, ಕಚ್ಚಾ ತೈಲ ಬೆಲೆ ಇಳಿಕೆಯೊಂದಿಗೆ ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ (Bullion Market) ಚಿನ್ನ (Gold Price) ಹಾಗೂ ಬೆಳ್ಳಿ ದರ (Silver Price) ತುಸು ಹೆಚ್ಚಾಗಿದೆ. ಹಿಂದಿನ ದಿನದ ವಹಿವಾಟಿನ ಅಂತ್ಯದ ವೇಳೆಗೆ ಚಿನ್ನದರ ದರ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ ಬೆಳ್ಳಿ ದರ ತುಸು ಇಳಿಕೆಯಾಗಿತ್ತು. ಇಂದು ಮತ್ತೆ ಏರಿಕೆಯ ಟ್ರೆಂಡ್ ಕಂಡುಬಂದಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ 440 ರೂ. ಹೆಚ್ಚಳವಾಗಿ 47,800 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 440 ರೂ. ಹೆಚ್ಚಳವಾಗಿ 52,150 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 500 ರೂ. ಏರಿಕೆಯಾಗಿ 61,900 ರೂಪಾಯಿ ಆಗಿದೆ.
ಇದನ್ನೂ ಓದಿ: Gold Price Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ, ಬೆಳ್ಳಿ ದರ ಇಳಿಕೆ; ಪ್ರಮುಖ ನಗರಗಳ ದರ ವಿವರ ಇಲ್ಲಿದೆ
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,750 ರೂ. ಮುಂಬೈ- 47,800 ರೂ, ದೆಹಲಿ- 40,000 ರೂ, ಕೊಲ್ಕತ್ತಾ- 47,800 ರೂ, ಬೆಂಗಳೂರು- 47,850 ರೂ, ಹೈದರಾಬಾದ್- 47,800 ರೂ, ಕೇರಳ- 47,800 ರೂ, ಪುಣೆ- 47,830 ರೂ, ಮಂಗಳೂರು- 47,850 ರೂ, ಮೈಸೂರು- 47,850 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 53,180 ರೂ, ಮುಂಬೈ- 52,150 ರೂ, ದೆಹಲಿ- 52,360 ರೂ, ಕೊಲ್ಕತ್ತಾ- 52,150 ರೂ, ಬೆಂಗಳೂರು- 52,200 ರೂ, ಹೈದರಾಬಾದ್- 52,150 ರೂ, ಕೇರಳ- 52,150 ರೂ, ಪುಣೆ- 52,180 ರೂ, ಮಂಗಳೂರು- 52,200 ರೂ, ಮೈಸೂರು- 52,200 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 67,500 ರೂ, ಮೈಸೂರು- 67,500 ರೂ., ಮಂಗಳೂರು- 67,500 ರೂ., ಮುಂಬೈ- 61,900 ರೂ, ಚೆನ್ನೈ- 67,500 ರೂ, ದೆಹಲಿ- 61,900 ರೂ, ಹೈದರಾಬಾದ್- 67,500 ರೂ, ಕೊಲ್ಕತ್ತಾ- 61,900 ರೂ. ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ