Gold Silver Price on 5 November 2022 | ಬೆಂಗಳೂರು: ಕಳೆದ ಒಂದು ವಾರದ ಅವಧಿಯಿಂದ ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ (Bullion Market) ಏರಿಳಿತ ಸಹಜವಾಗಿದೆ. ಚಿನ್ನ (Gold Price) ಹಾಗೂ ಬೆಳ್ಳಿ (Silver Price) ದರಗಳಲ್ಲಿ ಸದಾ ಏರಿಳಿತ ವರದಿಯಾಗಿದೆ. ಈ ಮಧ್ಯೆ, ವಾರದ ವಹಿವಾಟಿನ ಅಂತ್ಯದಲ್ಲಿ ಷೇರುಪೇಟೆ ಚೇತರಿಕೆ ದಾಖಲಿಸಿದೆ. ರೂಪಾಯಿ ಮೌಲ್ಯವೂ ವೃದ್ಧಿಯಾಗಿದೆ. ಕಚ್ಚಾ ತೈಲದ ದರದಲ್ಲಿಯೂ ಹೆಚ್ಚಳವಾಗಿದೆ. ಈ ಎಲ್ಲ ಅಂಶಗಳು ಚಿನಿವಾರ ಪೇಟೆಯ ಮೇಲೂ ಪರಿಣಾಮ ಬೀರಿದೆ. ಇಂದು ಚಿನ್ನದ ದರದಲ್ಲಿ ತುಸು ಇಳಿಕೆಯಾಗಿದ್ದರೆ, ಬೆಳ್ಳಿ ದರ ಹೆಚ್ಚಳವಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 600 ರೂ. ಇಳಿಕೆಯಾಗಿ 46,100 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 660 ರೂ. ಇಳಿಕೆಯಾಗಿ 50,290 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 1900 ರೂ. ಹೆಚ್ಚಾಗಿ 60,000 ರೂಪಾಯಿ ಆಗಿದೆ.
ಇದನ್ನೂ ಓದಿ: Gold Price Today: ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ; ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ ಇಲ್ಲಿದೆ
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,170 ರೂ. ಮುಂಬೈ- 46,100 ರೂ, ದೆಹಲಿ- 46,250 ರೂ, ಕೊಲ್ಕತ್ತಾ- 46,100 ರೂ, ಬೆಂಗಳೂರು- 46,150 ರೂ, ಹೈದರಾಬಾದ್- 46,100 ರೂ, ಕೇರಳ- 46,100 ರೂ, ಪುಣೆ- 46,130 ರೂ, ಮಂಗಳೂರು- 46,150 ರೂ, ಮೈಸೂರು- 46,150 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 51,460 ರೂ, ಮುಂಬೈ- 50,290 ರೂ, ದೆಹಲಿ- 51,440 ರೂ, ಕೊಲ್ಕತ್ತಾ- 50,290 ರೂ, ಬೆಂಗಳೂರು- 51,340 ರೂ, ಹೈದರಾಬಾದ್- 50,290 ರೂ, ಕೇರಳ- 50,290 ರೂ, ಪುಣೆ- 50,320 ರೂ, ಮಂಗಳೂರು- 50,340 ರೂ, ಮೈಸೂರು- 50,340 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 64,400 ರೂ, ಮೈಸೂರು- 64,400 ರೂ., ಮಂಗಳೂರು- 64,400 ರೂ., ಮುಂಬೈ- 60,000 ರೂ, ಚೆನ್ನೈ- 64,400 ರೂ, ದೆಹಲಿ- 60,000 ರೂ, ಹೈದರಾಬಾದ್- 64,400 ರೂ, ಕೊಲ್ಕತ್ತಾ- 60,000 ರೂ. ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ