Personal Loan: ವೈಯಕ್ತಿಕ ಸಾಲದ ಅರ್ಹತೆ ಹೆಚ್ಚಿಸಿಕೊಳ್ಳಲು ಇಲ್ಲಿವೆ 4 ಸರಳ ವಿಧಾನ

Personal Loan Eligibility; ವೈಯಕ್ತಿಕ ಸಾಲದ ಅರ್ಹತೆ ಹೆಚ್ಚಿಸಿಕೊಳ್ಳಲು ಮತ್ತು ಆ ಮೂಲಕ ಹೆಚ್ಚಿನ ಪ್ರಯೋಜನ ಪಡೆಯಲು ನಾಲ್ಕು ಸರಳ ವಿಧಾನಗಳನ್ನು ಇಲ್ಲಿ ನೀಡಲಾಗಿದೆ.

Personal Loan: ವೈಯಕ್ತಿಕ ಸಾಲದ ಅರ್ಹತೆ ಹೆಚ್ಚಿಸಿಕೊಳ್ಳಲು ಇಲ್ಲಿವೆ 4 ಸರಳ ವಿಧಾನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Nov 04, 2022 | 2:27 PM

ಹಣಕಾಸಿನ ಅಗತ್ಯಗಳು ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ಪಡೆಯಬಹುದಾದ ಸಾಲಗಳಲ್ಲಿ ವೈಯಕ್ತಿಕ ಸಾಲ (Personal Loan) ಕೂಡ ಮುಖ್ಯವಾದದ್ದಾಗಿದೆ. ಪ್ರವಾಸ, ಸಾಲ ಮರುಪಾವತಿ, ಅನಿರೀಕ್ಷಿತ ವೈದ್ಯಕೀಯ ವೆಚ್ಚ ಇತ್ಯಾದಗಳಿಗೆ ವೈಯಕ್ತಿಕ ಸಾಲ ಪಡೆಯಬಹುದಾಗಿದೆ. ಆದರೆ, ಬಡ್ಡಿ ದರ ಹಾಗೂ ಆಫರ್​ಗಳ ಬಗ್ಗೆ ಗಮನಹರಿಸಬೇಕಾದದ್ದು ಬಹಳ ಮುಖ್ಯ. ವೈಯಕ್ತಿಕ ಸಾಲ ಪಡೆಯಲು ನಾವು ಹೊಂದಿರುವ ಅರ್ಹತೆಯ ಆಧಾರದಲ್ಲಿ ವಿವಿಧ ಆಫರ್​ಗಳು ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗಬಹುದು. ವೈಯಕ್ತಿಕ ಸಾಲದ ಅರ್ಹತೆ ಹೆಚ್ಚಿಸಿಕೊಳ್ಳಲು ಮತ್ತು ಆ ಮೂಲಕ ಹೆಚ್ಚಿನ ಪ್ರಯೋಜನ ಪಡೆಯಲು ನಾಲ್ಕು ಸರಳ ವಿಧಾನಗಳನ್ನು ಇಲ್ಲಿ ನೀಡಲಾಗಿದೆ.

ಉತ್ತಮ ಸೇವೆ ನೀಡುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ವೈಯಕ್ತಿಕ ಸಾಲ ಪಡೆಯುವುದರಿಂದ ನಿಮಗೆ ಹೆಚ್ಚು ಪ್ರಯೋಜನವಾಗಬಹುದು ಮತ್ತು ಕೆಲಸಗಳು ಸುಲಭವಾಗಬಹುದು ಎಂಬುದನ್ನು ಅರಿತಿರಿ.

1. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವುದು

ಇದನ್ನೂ ಓದಿ
Image
Petrol Price on November 4: ನಿಮ್ಮ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕುಸಿತವಾಯ್ತಾ?; ಇಂದಿನ ಇಂಧನದ ಬೆಲೆ ಎಷ್ಟು?
Image
ಬೆಂಗಳೂರು ಗಾಂಧಿ ಬಜಾರಿನಲ್ಲಿರುವ ಜಗದ್ವಿಖ್ಯಾತ ವಿದ್ಯಾರ್ಥಿ ಭವನ್ ಹೋಟೆಲ್​ಗೆ ಸ್ಟಾರ್‌ ಬಕ್ಸ್ ಸಂಸ್ಥಾಪಕ ಭೇಟಿ
Image
RBI MPC meet: ಹಣದುಬ್ಬರ ತಡೆಯಲು ವಿಫಲ; ಕರಡು ವರದಿ ಸಿದ್ಧಪಡಿಸಿದ ಆರ್​ಬಿಐ
Image
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ಬಾಕಿ ಇರುವ ತುಟ್ಟಿಭತ್ಯೆ 3 ಕಂತಿನಲ್ಲಿ ನೀಡುವ ನಿರೀಕ್ಷೆ

ಕ್ರೆಡಿಟ್ ಸ್ಕೋರ್ ಎಂಬುದು ನಮ್ಮ ಸಾಲ ಪಡೆಯುವಿಕೆಯ ಅಭ್ಯಾಸಕ್ಕೆ ಸಂಬಂಧಿಸಿದ 3 ಅಂಕಿಗಳ ಒಂದು ಸಂಖ್ಯೆ. ನಾವು ಎಷ್ಟು ಸಾಲ ಪಡೆದಿದ್ದೇವೆ, ಎಷ್ಟರ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡುತ್ತಿದ್ದೇವೆ ಎಂಬುದರ ಆಧಾರದಲ್ಲಿ ಈ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದಲ್ಲಿ ಸಾಲ ಪಡೆಯುವುದು ಸಲೀಸಾಗಲಿದೆ. 300 ರಿಂದ 900 ರವರೆಗಿನ ಸ್ಕೋರ್ ನೀಡಲಾಗುತ್ತದೆ. ಇದು ವ್ಯಕ್ತಿಯ ಸಾಲಪಡೆಯಬಹುದಾದ ಅರ್ಹತೆಯನ್ನೂ ನಿರ್ಧರಿಸುತ್ತದೆ. 750 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವಂತೆ ನೋಡಿಕೊಳ್ಳುವ ಮೂಲಕ ವೈಯಕ್ತಿಕ ಸಾಲ ಪಡೆಯುವ ಅರ್ಹತೆಯನ್ನು ಹೆಚ್ಚಿಸಿಕೊಳ್ಳಬಹುದು. ಜತೆಗೆ, ಕಡಿಮೆ ಬಡ್ಡಿ ದರದ ಸಾಲದ ಆಫರ್​ಗಳೂ ನಿಮ್ಮನ್ನು ಅರಸಿಕೊಂಡು ಬರಬಹುದು.

ಕ್ರೆಡಿಟ್ ಸ್ಕೋರ್ ಸಂಬಂಧಿತ ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

2. ಇಎಂಐ ಪಾವತಿ ಸಾಮರ್ಥ್ಯ

ವೈಯಕ್ತಿಕ ಸಾಲ ನೀಡುವ ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಗಳು ನೀವು ಈಗಾಗಲೇ ಪಡೆದಿರುವ ಒಟ್ಟು ಸಾಲ, ವೇತನದ ಬಗ್ಗೆಯೂ ಪರಿಶೀಲನೆ ನಡೆಸುತ್ತವೆ. ನೀವು ಈಗಾಗಲೇ ಪಡೆದಿರುವ ಸಾಲ ಮತ್ತು ಹೊಸ ಸಾಲಕ್ಕೆ ಪಾವತಿ ಮಾಡಬೇಕಿರುವ ಇಎಂಐ ಮೊತ್ತ ವೇತನದ ಶೇಕಡಾ 60ಕ್ಕಿಂತಲೂ ಹೆಚ್ಚಿರಬಾರದು. ಒಂದು ವೇಳೆ ಇದು ಹೆಚ್ಚಿದ್ದಲ್ಲಿ ವೈಯಕ್ತಿಕ ಸಾಲದ ಸೌಲಭ್ಯ ದೊರಕುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಇಎಂಐ ಪಾವತಿಸುವ ಸಾಮರ್ಥ್ಯದ ಬಗ್ಗೆ ಮೊದಲೇ ಲೆಕ್ಕಾಚಾರ ಹಾಕಿಕೊಳ್ಳುವುದು ಒಳ್ಳೆಯದು.

3. ಸಾಲಕ್ಕಾಗಿ ಹಲವಾರು ಕಡೆ ತರಾತುರಿಯಲ್ಲಿ ವಿಚಾರಿಸಬೇಡಿ

ಸಾಲ ನೀಡಲು ಇರುವ ಅರ್ಹತೆ ಬಗ್ಗೆ ತಿಳಿಯಲು ಬ್ಯಾಂಕ್​ಗಳು ಅಥವಾ ಹಣಕಾಸು ಸಂಸ್ಥೆಗಳು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುತ್ತವೆ. ಒಂದೇ ಬಾರಿಗೆ ಸಾಲಕ್ಕಾಗಿ ಹಲವಾರು ಕಡೆ ತರಾತುರಿಯಲ್ಲಿ ವಿಚಾರಿಸಿದಾಗ ನಾವು ವಿಚಾರಿಸಿದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳೆಲ್ಲ ನಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುತ್ತವೆ. ಪರಿಣಾಮವಾಗಿ ಕ್ರೆಡಿಟ್ ಸ್ಕೋರ್​ನಲ್ಲಿ ಕೆಲವು ಅಂಕಗಳು ಕಡಿಮೆಯಾಗಬಹುದು. ಕ್ರೆಡಿಟ್ ಸ್ಕೋರ್ ಕಡಿಮೆಯಾದಂತೆಲ್ಲ ವೈಯಕ್ತಿಕ ಸಾಲ ಪಡೆಯುವ ಅರ್ಹತೆ ಕಡಿಮೆಯಾಗುಗತ್ತಾ ಹೋಗುತ್ತದೆ. ಆದರೆ, ನಿಮ್ಮ ಕ್ರೆಡಿಟ್ ಸ್ಕೋರ್​ ಅನ್ನು ನೀವೇ ಪರಿಶೀಲಿಸುವುದರಿಂದ ಕ್ರೆಡಿಟ್ ಸ್ಕೋರ್ ಕಡಿಮೆಯಾಗುವುದಿಲ್ಲ.

4. ಸಹ ಅರ್ಜಿದಾರನನ್ನು ಸೇರಿಸಿ ಅರ್ಹತೆ ಹೆಚ್ಚಿಸಿಕೊಳ್ಳಿ

ಸಹ ಅರ್ಜಿದಾರರು ಕೂಡ ಸಾಲ ಮರುಪಾವತಿ ವಿಚಾರದಲ್ಲಿ ನಿಮ್ಮಷ್ಟೇ ಜವಾಬ್ದಾರರಾಗಿರುತ್ತಾರೆ. ಇಬ್ಬರು ವ್ಯಕ್ತಿಗಳು ಸೇರಿ ಸಾಲ ಪಡೆಯುವುದರಿಂದ ಸಾಲ ನೀಡುವ ಸಂಸ್ಥೆಗಳ ಕ್ರೆಡಿಟ್ ರಿಸ್ಕ್ ಕಡಿಮೆ ಇರುತ್ತದೆ. ಇಂಥ ಸಂದರ್ಭಗಳಲ್ಲಿ ಬ್ಯಾಂಕ್​ಗಳು ಬೇಗನೆ ಸಾಲ ನೀಡಲು ಒಲವು ತೋರುತ್ತವೆ. ಮರು ಪಾವತಿ ಸಾಮರ್ಥ್ಯ ಕಡಿಮೆ ಸೇರಿದಂತೆ ನಿಮಗೆ ವಿವಿಧ ಕಾರಣಗಳಿಂದಾಗಿ ಸಾಲ ಪಡೆಯುವ ಅರ್ಹತೆ ಕಡಿಮೆ ಇದ್ದರೆ ಸಹ ಅರ್ಜಿದಾರರನ್ನು ಸೇರಿಸಿಕೊಳ್ಳುವ ಮೂಲಕ ಸಾಲಕ್ಕೆ ಪ್ರಯತ್ನಿಸುವುದು ಉತ್ತಮ ಆಯ್ಕೆಯಾಗಬಲ್ಲದು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್