Gold Price Today: ಚಿನ್ನದ ದರ ತುಸು ಇಳಿಕೆ, ಹೆಚ್ಚಿದ ಬೆಳ್ಳಿ ಬೆಲೆ, ಪ್ರಮುಖ ನಗರಗಳ ದರ ವಿವರ ಇಲ್ಲಿದೆ

ದೀಪಾವಳಿ ಸಂಭ್ರಮದ ಮಧ್ಯೆ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ತುಸು ಏರಿಳಿಕೆಯಾಗಿದೆ. ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರ ವಿವರ ಇಲ್ಲಿದೆ.

Gold Price Today: ಚಿನ್ನದ ದರ ತುಸು ಇಳಿಕೆ, ಹೆಚ್ಚಿದ ಬೆಳ್ಳಿ ಬೆಲೆ, ಪ್ರಮುಖ ನಗರಗಳ ದರ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Oct 27, 2022 | 6:38 PM

Gold Silver Price on 26 October 2022 | ಬೆಂಗಳೂರು: ದೀಪಾವಳಿ (Diwali) ಸಂಭ್ರಮದ ಮಧ್ಯೆ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ತುಸು ಏರಿಳಿಕೆಯಾಗಿದೆ. ಚಿನ್ನದ ದರ (Gold Price) ತುಸು ಇಳಿಕೆಯಾಗಿದ್ದರೆ ಬೆಳ್ಳಿ ದರದಲ್ಲಿ (Silver Price) ಕೊಂಚ ಏರಿಕೆಯಾಗಿದೆ. ಸತತ 7 ದಿನಗಳ ಷೇರುಪೇಟೆ ಓಟಕ್ಕೆ ತಡೆಬಿದ್ದಿರುವುದು, ರೂಪಾಯಿ ಮೌಲ್ಯದಲ್ಲಿ ತುಸು ಚೇತರಿಕೆ ಲೋಹದ ದರದ ಮೇಲೂ ಸಣ್ಣ ಮಟ್ಟಿನ ಪರಿಣಾಮ ಬೀರಿದೆ. 10 ಗ್ರಾಂ ಚಿನ್ನದ ದರ 160 ರೂ. ಇಳಿಕೆಯಾದರೆ 1 ಕೆಜಿ ಬೆಳ್ಳಿ ದರ 300 ರೂ. ಹೆಚ್ಚಳಗೊಂಡಿದೆ.

ದೇಶದ ಪ್ರಮುಖ ನಗರಗಳ ಚಿನ್ನ ಹಾಗೂ ಬೆಳ್ಳಿ ದರದ ಮಾಹಿತಿ ಇಲ್ಲಿದೆ;

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 160 ರೂ. ಇಳಿಕೆಯಾಗಿ 46,850 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 160 ರೂ. ಇಳಿಕೆಯಾಗಿ 47,010 ರೂ. ಆಗಿದೆ. ಬೆಳ್ಳಿ ದರ 300 ರೂ. ಹೆಚ್ಚಳಗೊಂಡು 58,000 ರೂಪಾಯಿ ಆಗಿದೆ.

ಇದನ್ನೂ ಓದಿ
Rishi Sunak: ರಿಷಿ ಸುನಕ್​ರ​ ಸಿರಿವಂತ ಪತ್ನಿ ಮತ್ತು ಅತ್ತೆ-ಮಾವ ಬಗ್ಗೆ ಇಲ್ಲಿದೆ ವಿವರ
Gold Price Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ, ಬೆಳ್ಳಿ ದರ; ಪ್ರಮುಖ ನಗರಗಳಲ್ಲಿನ ದರ ವಿವರ ಇಲ್ಲಿದೆ
Muhurat Trading: ಉತ್ತಮ ಗಳಿಕೆಯೊಂದಿಗೆ ಮುಹೂರ್ತ ಟ್ರೇಡಿಂಗ್ ಮುಗಿಸಿದ ನಿಫ್ಟಿ, ಸೆನ್ಸೆಕ್ಸ್, ಇಲ್ಲಿದೆ ಗಳಿಕೆ ವಿವರ
Festive Season: ಹಬ್ಬದ ಅವಧಿಯಲ್ಲಿ ಮಿತಿಮೀರಿದ ಖರ್ಚಾಗುತ್ತಿದೆಯೇ? ತಡೆಯಲು ಇಲ್ಲಿದೆ 5 ಟಿಪ್ಸ್

ಇದನ್ನೂ ಓದಿ: Gold Price Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ, ಬೆಳ್ಳಿ ದರ; ಪ್ರಮುಖ ನಗರಗಳಲ್ಲಿನ ದರ ವಿವರ ಇಲ್ಲಿದೆ

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,400 ರೂ. ಮುಂಬೈ- 46,850 ರೂ, ದೆಹಲಿ- 47,050 ರೂ, ಕೊಲ್ಕತ್ತಾ- 46,850 ರೂ, ಬೆಂಗಳೂರು- 46,900 ರೂ, ಹೈದರಾಬಾದ್- 46,850 ರೂ, ಕೇರಳ- 46,850 ರೂ, ಪುಣೆ- 46,880 ರೂ, ಮಂಗಳೂರು- 46,900 ರೂ, ಮೈಸೂರು- 46,900 ರೂ. ಆಗಿದೆ.

24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:

ಚೆನ್ನೈ- 51,720 ರೂ, ಮುಂಬೈ- 51,110 ರೂ, ದೆಹಲಿ- 51,310 ರೂ, ಕೊಲ್ಕತ್ತಾ- 51,110 ರೂ, ಬೆಂಗಳೂರು- 51,160 ರೂ, ಹೈದರಾಬಾದ್- 51,110 ರೂ, ಕೇರಳ- 51,110 ರೂ, ಪುಣೆ- 51,140 ರೂ, ಮಂಗಳೂರು- 51,160 ರೂ, ಮೈಸೂರು- 51,160 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 63,500 ರೂ, ಮೈಸೂರು- 63,500 ರೂ., ಮಂಗಳೂರು- 63,500 ರೂ., ಮುಂಬೈ- 58,000 ರೂ, ಚೆನ್ನೈ- 63,500 ರೂ, ದೆಹಲಿ- 58,000 ರೂ, ಹೈದರಾಬಾದ್- 63,500 ರೂ, ಕೊಲ್ಕತ್ತಾ- 58,000 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:30 am, Wed, 26 October 22