Gold, Silver Cheaper: ಚಿನ್ನ, ಬೆಳ್ಳಿ ಭಾರೀ ಇಳಿಕೆ; ಡಾಲರ್ ಕುಸಿತದ ಎಫೆಕ್ಟ್; ದೇಶ ವಿದೇಶಗಳಲ್ಲಿ ಎಷ್ಟೆಷ್ಟಿದೆ ದರ?

Bullion Market 2023, March 9th: ಚಿನ್ನದ ಬೆಲೆ ಭಾರತದಲ್ಲಿ 150-250 ರೂನಷ್ಟು ಇಳಿಕೆ ಕಂಡಿದೆ. ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. ವಿದೇಶಗಳಲ್ಲಿ ಅಮೆರಿಕ ಹೊರತುಪಡಿಸಿ ಬಹುತೇಕ ಪ್ರಮುಖ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಕಡಿಮೆಗೊಂಡಿದೆ.

Gold, Silver Cheaper: ಚಿನ್ನ, ಬೆಳ್ಳಿ ಭಾರೀ ಇಳಿಕೆ; ಡಾಲರ್ ಕುಸಿತದ ಎಫೆಕ್ಟ್; ದೇಶ ವಿದೇಶಗಳಲ್ಲಿ ಎಷ್ಟೆಷ್ಟಿದೆ ದರ?
ಚಿನ್ನ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Mar 09, 2023 | 5:05 AM

ಬೆಂಗಳೂರು: ಭಾರತದಲ್ಲಿ ಚಿನ್ನದ ಬೆಲೆ (Gold Prices in India) ದೊಡ್ಡಮಟ್ಟದಲ್ಲೇ ಇಳಿಕೆಯಾಗುತ್ತಿದೆ. 10 ಗ್ರಾಮ್​ಗೆ 650 ರುಪಾಯಿಯಷ್ಟು ಅಗ್ಗವಾಗಿದೆ ಚಿನ್ನ. ಬೆಳ್ಳಿ ಬೆಲೆಯೂ ಒಂದು ಕಿಲೋಗೆ 1,450ರುಪಾಯಿಯಷ್ಟು ಕಡಿಮೆ ಆಗಿದೆ. ಭಾರತದಲ್ಲಿ ಈಗ 22 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ 51,000 ರೂ ಇದೆ. 24 ಕ್ಯಾರಟ್ ಚಿನ್ನದ ಬೆಲೆ 55,630 ರೂ ಇದೆ. ಬೆಂಗಳೂರಿನಲ್ಲೂ ಚಿನ್ನದ ಬೆಲೆ 650 ರೂ ಇಳಿಕೆಯಾಗಿದೆ. ನಗರದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 51,700 ಇದ್ದದ್ದು ಈಗ 51,050 ರುಪಾಯಿ ಆಗಿದೆ. ಬಹುತೇಕ ಇತರ ದಕ್ಷಿಣ ರಾಜ್ಯಗಳಲ್ಲೂ ಇದೇ ಬೆಲೆ ಇದೆ. ಇನ್ನು, ಬೆಳ್ಳಿ ಬೆಲೆಯೂ ದೊಡ್ಡ ಪ್ರಮಾಣದ ಇಳಿಕೆ ಕಂಡಿದೆ. 100 ಗ್ರಾಮ್ ಬೆಳ್ಳಿಯ ಬೆಲೆ 145 ರುಪಾಯಿಯಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆ 10 ಗ್ರಾಮ್​ಗೆ 655.50 ರೂಪಾಯಿ ಇದೆ. ಬೆಂಗಳೂರು ಹಾಗೂ ಕೆಲ ನಗರಗಳಲ್ಲಿ 675 ರೂ ಆಗಿದೆ.

ವಿದೇಶಗಳ ಚಿನಿವಾರಪೇಟೆಗಳಲ್ಲೂ (Bullion Market) ಚಿನ್ನದ ಬೆಲೆ ಕಡಿಮೆ ಆಗಿದೆ. ಅನಿವಾಸಿ ಭಾರತೀಯರು ಹೆಚ್ಚಾಗಿ ನೆಲಸಿರುವ ಅರಬ್ ದೇಶಗಳು, ಅಮೆರಿಕ, ಸಿಂಗಾಪುರ, ಮಲೇಷ್ಯಾ ದೇಶಗಳಲ್ಲಿ ಚಿನ್ನದ ಬೆಲೆ ಮತ್ತೊಮ್ಮೆ ಕಡಿಮೆಗೊಂಡಿದೆ. ಈ ಎಲ್ಲಾ ದೇಶಗಳಲ್ಲೂ 22 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ 49 ಸಾವಿರ ರೂಗಿಂತ ಕಡಿಮೆ ಮಟ್ಟದಲ್ಲೇ ಇವೆ. ದುಬೈ ಮತ್ತು ಅಮೆರಿಕದಲ್ಲಿ 10 ಗ್ರಾಮ್ ಚಿನ್ನದ ಬೆಲೆ 46 ಸಾವಿರ ರೂ ಮಟ್ಟಕ್ಕಿಂತ ಕೆಳಗೆ ಇಳಿದಿವೆ. ಆದರೆ, ದಶಕಗಳ ಹಿಂದೆ ಈ ದೇಶಗಳು ಮತ್ತು ಭಾರತದ ಮಧ್ಯೆ ಚಿನ್ನದ ಬೆಲೆಯಲ್ಲಿ ಇದ್ದ ದೊಡ್ಡ ಅಂತರ ಈಗ ಉಳಿದಿಲ್ಲ.

ಡಾಲರ್ ಎಫೆಕ್ಟ್

ಅಮೆರಿಕದಲ್ಲಿ ಡಾಲರ್ ಕರೆನ್ಸಿ ಚೇತರಿಸಿಕೊಂಡಿರುವುದು ಈಗ ಚಿನ್ನದ ಮೇಲಿನ ಹೂಡಿಕೆಗೆ ಬೇಡಿಕೆ ಕಡಿಮೆ ಆಗಿದೆ ಎಂಬ ಅಭಿಪ್ರಾಯ ಇದೆ. ಅಲ್ಲದೇ ಅಮೆರಿಕದ ಸೆಂಟ್ರಲ್ ಬ್ಯಾಂಕ್ ತನ್ನ ಬಡ್ಡಿ ದರಗಳನ್ನು ಮತ್ತೊಮ್ಮೆ ಏರಿಸುವ ಸುಳಿವು ನೀಡಿರುವುದೂ ಕೂಡ ಚಿನ್ನದ ಬದಲು ಡಾಲರ್ ಬಾಲ ಹಿಡಿಯುವತ್ತ ಹೂಡಿಕೆದಾರರು ಗಮನ ಕೊಡುತ್ತಿದ್ದಾರೆ. ಇದು ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿರಬಹುದು..

ಇದನ್ನೂ ಓದಿEPF Balance: ಮಿಸ್ಡ್ ಕಾಲ್ ಕೊಟ್ಟು ಪಿಎಫ್ ಬ್ಯಾಲೆನ್ಸ್ ತಿಳಿಯುವುದು ಹೇಗೆ? ಇಲ್ಲಿದೆ ವಿವರ

ಭಾರತದಲ್ಲಿರುವ ಬೆಲೆ

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 51,000 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,630 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 655.50 ರೂ

ಬೆಂಗಳೂರಿನಲ್ಲಿರುವ ಬೆಲೆ

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 51,050 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,680 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 675 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

ಬೆಂಗಳೂರು: 51,050 ರೂ

ಚೆನ್ನೈ: 51,620 ರೂ

ಮುಂಬೈ: 51,000 ರೂ

ದೆಹಲಿ: 51,150 ರೂ

ಕೋಲ್ಕತಾ: 51,000 ರೂ

ಕೇರಳ: 51,000 ರೂ

ಅಹ್ಮದಾಬಾದ್: 51,050 ರೂ

ಜೈಪುರ್: 51,150 ರೂ

ಲಕ್ನೋ: 51,150 ರೂ

ಭುವನೇಶ್ವರ್: 51,000 ರೂ

ಇದನ್ನೂ ಓದಿCIBIL Tips: ಅತಿಯಾಗಿ ಕ್ರೆಡಿಟ್ ಕಾರ್ಡ್ ಉಪಯೋಗಿಸದಿರಿ: ಸಿಬಿಲ್ ಸ್ಕೋರ್ ಹೆಚ್ಚಿಸುವ 3 ಐಡಿಯಾಗಳು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

ಮಲೇಷ್ಯಾ: 2,630 ರಿಂಗಿಟ್ (47,657 ರುಪಾಯಿ)

ದುಬೈ: 2035 ಡಿರಾಮ್ (45,427 ರುಪಾಯಿ)

ಅಮೆರಿಕ: 560 ಡಾಲರ್ (45,972 ರುಪಾಯಿ)

ಸಿಂಗಾಪುರ: 763 ಸಿಂಗಾಪುರ್ ಡಾಲರ್ (46,215 ರುಪಾಯಿ)

ಕತಾರ್: 2,105 ಕತಾರಿ ರಿಯಾಲ್ (47,400 ರೂ)

ಓಮನ್: 222.50 ಒಮಾನಿ ರಿಯಾಲ್ (47,384 ರುಪಾಯಿ)

ಕುವೇತ್: 174.50 ಕುವೇತಿ ದಿನಾರ್ (46,546 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (10 ಗ್ರಾಮ್​ಗೆ)

ಬೆಂಗಳೂರು: 675 ರೂ

ಚೆನ್ನೈ: 675 ರೂ

ಮುಂಬೈ: 655.50 ರೂ

ದೆಹಲಿ: 655.50 ರೂ

ಕೋಲ್ಕತಾ 655.50 ರೂ

ಕೇರಳ: 675 ರೂ

ಅಹ್ಮದಾಬಾದ್: 655.50 ರೂ

ಜೈಪುರ್: 655.50 ರೂ

ಲಕ್ನೋ: 655.50 ರೂ

ಭುವನೇಶ್ವರ್: 675 ರೂ

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ