ನವದೆಹಲಿ, ಆಗಸ್ಟ್ 1: ಜಾಗತಿಕವಾಗಿ ವಿವಿಧ ಸೆಂಟ್ರಲ್ ಬ್ಯಾಂಕ್ಗಳಿಂದ ದಾಖಲೆಯ ಪ್ರಮಾಣದಲ್ಲಿ ಚಿನ್ನದ ಖರೀದಿ ಆಗಿರುವುದು, ಆಭರಣಗಳಿಗೆ ಬೇಡಿಕೆ ಹೆಚ್ಚಿರುವುದು, ಹೂಡಿಕೆದಾರರಲ್ಲಿ ಚಿನ್ನಕ್ಕೆ ಬೇಡಿಕೆ ಇರುವುದು ಇವೇ ಕಾರಣಕ್ಕೆ ಚಿನ್ನಕ್ಕಿರುವ ಬೇಡಿಕೆ ಉಳಿದಿದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ನ (World Gold Council) ಇತ್ತೀಚಿನ ‘ಗೋಲ್ಡ್ ಡಿಮ್ಯಾಂಡ್ ಟ್ರೆಂಡ್ಸ್’ ವರದಿಯು ಈ ಕ್ಯಾಲೆಂಡರ್ ವರ್ಷದ ಎರಡನೇ ಕ್ವಾರ್ಟರ್ನಲ್ಲಿ (ಏಪ್ರಿಲ್ನಿಂದ ಜೂನ್ವರೆಗೆ) ಚಿನ್ನಕ್ಕೆ ಎಷ್ಟು ಬೇಡಿಕೆ ಇದೆ ಎನ್ನುವಂತಹ ಅಂಶಗಳನ್ನು ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ ಎರಡನೇ ಕ್ವಾರ್ಟರ್ನಲ್ಲಿ ಒಟಿಸಿ ಹೊರತಾಗಿಸಿ ಚಿನ್ನಕ್ಕಿರುವ ಬೇಡಿಕೆ 921 ಟನ್ ಎಂದಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಗೋಲ್ಡ್ ಡಿಮ್ಯಾಂಡ್ ಶೇ. 2ರಷ್ಟು ಕಡಿಮೆ ಆಗಿದೆ. ಆದರೂ ಕೂಡ ಒಟಿಸಿಯನ್ನೂ ಸೇರಿಸಿದರೆ ಜಾಗತಿಕವಾಗಿ ಗೋಲ್ಡ್ ಡಿಮ್ಯಾಂಡ್ ಶೇ. 7ರಷ್ಟು ಹೆಚ್ಚಿದೆ.
ಒಟಿಸಿ ಎಂದರೆ ಓವರ್ ದಿ ಕೌಂಟರ್. ಜಾಗತಿಕವಾಗಿ ಎರಡು ರೀತಿಯಲ್ಲಿ ಚಿನ್ನದ ವ್ಯಾಪಾರ ನಡೆಯುತ್ತದೆ. ಒಂದು ಒಟಿಸಿ, ಮತ್ತೊಂದು ಗೋಲ್ಡ್ ಎಕ್ಸ್ಚೇಂಜ್ ವ್ಯವಹಾರ. ಓವರ್ ದಿ ಕೌಂಟರ್ ಅಥವಾ ಓಟಿಸಿಯಲ್ಲಿ ಚಿನ್ನದ ಸಾಂಪ್ರದಾಯಿಕ ಪದ್ಧತಿಯಲ್ಲಿ ನಡೆಯುತ್ತದೆ. ಅಂದರೆ ಮಾರಾಟಗಾರ ಮತ್ತು ಖರೀದಿದಾರ ಮುಖಾಮುಖಿಯಾಗಿ ನಡೆಸುವ ವ್ಯವಹಾರವಾಗಿರುತ್ತದೆ. ಒಟಿಸಿಯಲ್ಲಿ ನಡೆಯುವ ವ್ಯಾಪಾರ ಹೆಚ್ಚು ರಿಸ್ಕ್ನಿಂದ ಕೂಡಿರುತ್ತದೆ. ಪಾರದರ್ಶಕತೆಯೂ ಕಡಿಮೆ ಎಂಬ ಭಾವನೆ ಇದೆ.
ಇದನ್ನೂ ಓದಿ: Tax-free Gold: ಭೂತಾನ್ಗೆ ಟ್ರಿಪ್ ಹೋಗಿ, ತೀರಾ ಅಗ್ಗದ ಬೆಲೆಗೆ ಚಿನ್ನವನ್ನೂ ತನ್ನಿ; ಇದಪ್ಪಾ ಡಬಲ್ ಧಮಾಕ
ಏಪ್ರಿಲ್ನಿಂದ ಜೂನ್ವರೆಗಿ ತ್ರೈಮಾಸಿಕ ಅವಧಿಯಲ್ಲಿ ಸೆಂಟ್ರಲ್ ಬ್ಯಾಂಕುಗಳಿಂದ ಚಿನ್ನದ ಖರೀದಿಯಲ್ಲಿ ತುಸು ಕಡಿಮೆ ಆಗಿದೆಯಾದರೂ ಎಚ್1 ಅವಧಿಯಲ್ಲಿ (ವರ್ಷದ ಮೊದಲಾರ್ಧ) 387 ಟನ್ ಚಿನ್ನದ ಖರೀದಿ ಆಗಿದೆ. ಇದು ಹೊಸ ದಾಖಲೆ ಎನ್ನಲಾಗಿದೆ.
ಇನ್ನು, ಚಿನ್ನದ ಮೇಲಿನ ಹೂಡಿಕೆಯಂತೂ ಎರಡನೇ ಕ್ವಾರ್ಟರ್ನಲ್ಲಿ ಗಮನಾರ್ಹವಾಗಿ ಹೆಚ್ಚಿದೆ. ಚಿನ್ನದ ಕಾಯಿನ್ ಮತ್ತು ಗಟ್ಟಿಗಳು 277 ಟನ್ಗಳಷ್ಟು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 6ರಷ್ಟು ಹೆಚ್ಚಾಗಿದೆ. ಇನ್ನು, ವರ್ಷದ ಮೊದಲಾರ್ಧವಾದ ಜನವರಿಯಿಂದ ಜೂನ್ವರೆಗಿನ ಅವಧಿಯಲ್ಲಿ 582 ಟನ್ ಚಿನ್ನದ ವ್ಯಾಪಾರವಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ನ ಗೋಲ್ಡ್ ಡಿಮ್ಯಾಂಡ್ ಟ್ರೆಂಡ್ಸ್ ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: Cheap Gold: ಯಾವ್ಯಾವ ದೇಶಗಳಲ್ಲಿ ಚಿನ್ನ ಕಡಿಮೆ ಬೆಲೆಗೆ ಸಿಗುತ್ತದೆ? ಭಾರತಕ್ಕಿಂತ ಬಹಳ ಅಗ್ಗ ಇಲ್ಲಿನ ಚಿನ್ನ
ಚಿನ್ನದ ಬೆಲೆಗಳು ಹೆಚ್ಚಾದರೂ ಆಭರಣಗಳಿಗೆ ಬೇಡಿಕೆ ಕಡಿಮೆ ಆಗಿಲ್ಲ. ಮೊದಲಾರ್ಧದ ವರ್ಷದಲ್ಲಿ 951 ಟನ್ನಷ್ಟು ಚಿನ್ನಾಭರಣಗಳು ಮಾರಾಟವಾಗಿವೆ. ಎರಡನೇ ಕ್ವಾರ್ಟರ್ನಲ್ಲಿ ಚಿನ್ನಾಭರಣಗಳ ಮಾರಾಟದಲ್ಲಿ ಶೇ. 3ರಷ್ಟು ಹೆಚ್ಚಳವಾಗಿದೆ. ಚೀನಾ ಮತ್ತು ಟರ್ಕಿಯಲ್ಲಿ ಆಭರಣಗಳಿಗೆ ಹೆಚ್ಚು ಬೇಡಿಕೆ ಬಂದಿದೆ.
ವರ್ಲ್ಡ್ ಗೋಲ್ಡ್ ಕೌನ್ಸಿಲ್ ಕಳೆದ 30 ವರ್ಷಗಳಿಂದಲೂ ಗೋಲ್ಡ್ ಡಿಮ್ಯಾಂಡ್ ಟ್ರೆಂಡ್ಸ್ ವರದಿಗಳನ್ನು ಪ್ರಕಟಿಸುತ್ತಾ ಬರುತ್ತಿದೆ. ಜಾಗತಿಕವಾಗಿ ಚಿನ್ನಕ್ಕೆ ಬೇಡಿಕೆ ಎಷ್ಟಿದೆ ಎಂಬುದನ್ನು ಈ ವರದಿಗಳು ಅವಲೋಕಿಸುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ