ಹೂಡಿಕೆಗಳು ಎತ್ತ..? ಕುಗ್ಗಿದ ಈಕ್ವಿಟಿ ಮ್ಯೂಚುವಲ್ ಫಂಡ್​ಗಳು; ಹಿಗ್ಗಿದ ಗೋಲ್ಡ್ ಇಟಿಎಫ್​ಗಳು

Gold ETFs attract more investment, while Equity mutual funds see decline in inflows: ಈಕ್ವಿಟಿ ಮ್ಯೂಚುವಲ್ ಫಂಡ್​ಗಳಿಗೆ ಹರಿದುಬರುವ ಹೂಡಿಕೆಗಳು ಜನವರಿಯಲ್ಲಿ ಕಡಿಮೆ ಆಗಿವೆ. 2025ರ ಡಿಸೆಂಬರ್​ನಲ್ಲಿ ಈಕ್ವಿಟಿ ಫಂಡ್​ಗಳಿಗೆ 28,054 ಕೋಟಿ ರೂ ಹೂಡಿಕೆ ಹೋಗಿತ್ತು. 2026ರ ಜನವರಿಯಲ್ಲಿ 24,029 ಕೋಟಿ ರೂ ಹೂಡಿಕೆ ಬಂದಿದೆ. ಇದೇ ವೇಳೆ, ಗೋಲ್ಡ್ ಇಟಿಎಫ್​ಗಳಲ್ಲಿ ನಿವ್ವಳ ಒಳ ಹರಿವಿನಲ್ಲಿ ಎರಡು ಪಟ್ಟು ಹೆಚ್ಚಳ ಕಂಡುಬಂದಿದೆ.

ಹೂಡಿಕೆಗಳು ಎತ್ತ..? ಕುಗ್ಗಿದ ಈಕ್ವಿಟಿ ಮ್ಯೂಚುವಲ್ ಫಂಡ್​ಗಳು; ಹಿಗ್ಗಿದ ಗೋಲ್ಡ್ ಇಟಿಎಫ್​ಗಳು
ಮ್ಯೂಚುವಲ್ ಫಂಡ್

Updated on: Feb 10, 2026 | 4:38 PM

ನವದೆಹಲಿ, ಫೆಬ್ರುವರಿ 10: ಸತತ ಎರಡನೇ ತಿಂಗಳು ಈಕ್ವಿಟಿ ಮ್ಯೂಚುವಲ್ ಫಂಡ್​ಗಳಿಗೆ (Equity Mutual Funds) ಹೂಡಿಕೆಗಳ ಒಳಹರಿವು ಕಡಿಮೆ ಆಗಿದೆ. ಭಾರತೀಯ ಮ್ಯೂಚುವಲ್ ಫಂಡ್​ಗಳ ಸಂಘಟನೆಯಾದ ಎಎಂಎಫ್​ಐ ನೀಡಿರುವ ಮಾಹಿತಿ ಪ್ರಕಾರ ಜನವರಿ ತಿಂಗಳಲ್ಲಿ 24,029 ಕೋಟಿ ರೂ ಮೊತ್ತದಷ್ಟು ಹೂಡಿಕೆಗಳು ಈಕ್ವಿಟಿ ಫಂಡ್​ಗಳಿಗೆ ಬಂದಿವೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಜನವರಿಯಲ್ಲಿ ಈಕ್ವಿಟಿ ಫಂಡ್​ಗಳಿಗೆ ಸಿಕ್ಕ ಫಂಡ್​ನಲ್ಲಿ ಶೇ. 14 ಇಳಿಕೆ ಆಗಿದೆ. 2025ರ ಡಿಸೆಂಬರ್ ತಿಂಗಳಲ್ಲಿ ಈಕ್ವಿಟಿ ಫಂಡ್​ಗಳು 28,054 ಕೋಟಿ ರೂ ಹೂಡಿಕೆಯನ್ನು ಆಕರ್ಷಿಸಿದ್ದವು.

ಇನ್ನು, 2025ರ ಜನವರಿಯಲ್ಲಿ ಈ ಫಂಡ್​ಗಳಿಗೆ ಹರಿದುಬಂದಿದ್ದ ಹೂಡಿಕೆಯ ಒಟ್ಟು ಮೊತ್ತ 39,687 ಕೋಟಿ ರೂ. ಇದಕ್ಕೆ ಹೋಲಿಸಿದರೆ 2026ರ ಜನವರಿಯಲ್ಲಿ ಹರಿದುಬಂದ ಹೂಡಿಕೆಯಲ್ಲಿ ಬರೋಬ್ಬರಿ ಶೇ. 39ರಷ್ಟು ಕಡಿಮೆ ಆಗಿದೆ.

ಇದನ್ನೂ ಓದಿ: ಭಾರತಕ್ಕೆ ದಿಢೀರ್ ಪೆಟ್ರೋಲಿಯಂ ಪೂರೈಕೆ ನಿಂತು ಹೋದರೆ, ಎಷ್ಟು ದಿನಕ್ಕೆ ಆಗುವಷ್ಟು ಪೆಟ್ರೋಲ್ ರಿಸರ್ವ್ ಇದೆ ಗೊತ್ತಾ?

ಈಕ್ವಿಟಿ ಫಂಡ್​ಗಳ ಪೈಕಿ ಮಿಡ್ ಕ್ಯಾಪ್ ಫಂಡ್​ಗಳು, ಸ್ಮಾಲ್ ಕ್ಯಾಪ್ ಫಂಡ್​ಗಳಿಗೆ ಬರುವ ಹೂಡಿಕೆ ಒಳಹರಿವಿಲ್ಲಿ ಶೇ. 23-24ರಷ್ಟು ಕಡಿಮೆ ಆಗಿದೆ. ಇಎಲ್​​ಎಸ್​ಎಸ್ ಫಂಡ್​ಗಳಿಂದ 593 ಕೋಟಿ ರೂ ಹೊರಹರಿವು ಆಗಿದೆ.

ಲಾರ್ಜ್ ಕ್ಯಾಪ್ ಫಂಡ್​ಗಳು, ಫ್ಲೆಕ್ಸಿ ಕ್ಯಾಪ್ ಫಂಡ್​ಗಳು, ಫೋಕಸ್ಡ್ ಫಂಡ್​ಗಳು ಬೇಡಿಕೆ ಉಳಿಸಿಕೊಂಡಿವೆ.

ಗೋಲ್ಡ್ ಇಟಿಎಫ್​ಗಳಿಗೆ ಹೆಚ್ಚಿದ ಹೂಡಿಕೆ

ಈಕ್ವಿಟಿ ಮ್ಯೂಚುವಲ್ ಫಂಡ್​ಗಳಿಗೆ ಜನವರಿಯಲ್ಲಿ ಬೇಡಿಕೆ ತಗ್ಗಿರುವ ಹೊತ್ತಲ್ಲೇ ಗೋಲ್ಡ್ ಇಟಿಎಫ್​ಗಳಿಗೆ (Gold ETFs) ಹೂಡಿಕೆಗಳು ಮುಗಿಬಿದ್ದು ಹೋಗುತ್ತಿವೆ. ಕಳೆದ 1-2 ವರ್ಷದಲ್ಲಿ ಸಿಕ್ಕಾಪಟ್ಟೆ ಬೆಳೆದಿರುವ ಕಾರಣಕ್ಕೆ ಬಹಳಷ್ಟು ಹೂಡಿಕೆದಾರರು ಗೋಲ್ಡ್ ಇಟಿಎಫ್ ಮತ್ತು ಸಿಲ್ವರ್ ಇಟಿಎಫ್​ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಐಟಿ ಸೆಕ್ಟರ್​ಗೆ ಆಂಥ್ರೋಪಿಕ್ ಶಾಕ್; ಇದರ ಹಿಂದಿರುವ ಬ್ರೇನ್ ಬೆಂಗಳೂರು ಮೂಲದ ವ್ಯಕ್ತಿಯದ್ದು

ಎಎಂಎಫ್​ಐ ರಿಪೋರ್ಟ್ ಪ್ರಕಾರ ಜನವರಿಯಲ್ಲಿ ನಿವ್ವಳ ಒಳ ಹರಿವು 24,040 ಕೋಟಿ ರೂ ದಅಖಲಾಗಿದೆ. ಡಿಸೆಂಬರ್​ನಲ್ಲಿ ದಾಖಲಾಗಿರುವುದಕ್ಕೆ ಹೋಲಿಸಿದರೆ ಜನವರಿಯಲ್ಲಿ ಎರಡು ಪಟ್ಟು ಹೆಚ್ಚಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us