Gold Silver Price Today: ಬೆಂಗಳೂರು: ಆಭರಣ ಅಂದಾಕ್ಷಣ ಮಹಿಳೆಯರ ಕಿವಿ ನೆಟ್ಟಗಾಗುತ್ತದೆ. ಅಷ್ಟು ಪ್ರಿಯವಾದ ಚಿನ್ನದ ಆಭರಣ ತೊಟ್ಟರೆ ಮಹಿಳೆಯರಿಗೆ ಎಲ್ಲಿಲ್ಲದ ಖುಷಿ, ಸಂತೋಷ. ಕೇವಲ ಮಹಿಳೆಯರಿಗೊಂದೇ ಅಲ್ಲ ಪುರುಷರಿಗೂ ಕೂಡಾ ಚಿನ್ನದ ಉಂಗುರದ ಜತೆಗೆ ವಿವಿಧ ವಿನ್ಯಾಸ ಆಭರಣಗಳನ್ನು ತೊಡಬೇಕು ಎಂಬ ಆಸೆ ಇರುವುದು ಸಹಜ. ಕೇವಲ ತೊಟ್ಟು ಸಂತೋಷ ಪಡುವುದೊಂದೇ ಅಲ್ಲದೇ ಹೂಡಿಕೆಯ ದೃಷ್ಟಿಯಿಂದ ಚಿನ್ನವನ್ನು ಖರೀದಿಸಿಡುವ ಪದ್ಧತಿ ಇಂದಿಗೂ ಚಾಲ್ತಿಯಲ್ಲಿರುವುದರಿಂದ ಭಾರತೀಯರಿಗೆ ಬಂಗಾರದ ಮೇಲೆ ಒಲವು ಕೊಂಚ ಜಾಸ್ತಿ ಎಂದು ಹೇಳಬಹುದು. ಹಾಗಾಗಿಯೇ ಪ್ರತಿನಿತ್ಯ ಚಿನ್ನದ ದರ ಎಷ್ಟಿದೆ? ಎಂಬ ಕುತೂಹಲ ಇರುವುದು ಸಹಜ. ಇಂದಿನ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬುದರ ವಿವರ ಈ ಕೆಳಗಿನಂತಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,850 ರೂಪಾಯಿ ಇದೆ. ಅದೇ ರೀತಿ 100 ಗ್ರಾಂ ಚಿನ್ನದ ದರ 7,500 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 7,500 ರೂಪಾಯಿ ಇಳಿಕೆಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,840 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,78,400 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 8,200 ರೂಪಾಯಿ ಇಳಿಕೆ ಕಂಡು ಬಂದಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,400 ರೂಪಾಯಿಗೆ ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,44,000 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 6,000 ರೂಪಾಯಿ ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,440 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,84,400 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಏರಿಳಿತದಲ್ಲಿ ಸುಮಾರು 6,600 ರೂಪಾಯಿ ಇಳಿಕೆ ಕಂಡು ಬಂದಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,000 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,06,000 ರೂಪಾಯಿ ಆಗಿದೆ. ಸುಮಾರು 7,500 ರೂಪಾಯಿ ಇಳಿಕೆ ಕಂಡು ಬಂದಿದೆ. ಅದೇ ರೀತಿ, 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,180 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 5,01,800 ರೂಪಾಯಿ ಆಗಿದೆ. 8,200 ರೂಪಾಯಿಯಷ್ಟು ಇಳಿಕೆಯಾಗಿದೆ.
ದೆಹಲಿ, ಮುಂಬೈ, ಹೈದರಾಬಾದ್, ಕೇರಳ ಸೇರಿದಂತೆ ಬೆಂಗಳೂರು, ಜೈಪುರ, ಕೋಲ್ಕತ್ತಾ, ಚೆನ್ನೈ ಹೀಗೆ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳೆರಡೂ ಇಳಿಕೆ ಕಂಡಿದೆ. ಕಳೆದ ಎರಡು ದಿನಗಳಿಂದಲೂ ಸಹ ಆಭರಣ ಇಳಿಕೆಯತ್ತ ಸಾಗಿರುವುದು ಆಭರಣ ಖರೀದಿಸುವವರಿಗೆ ಖುಷಿ ನೀಡಿರುವ ವಿಚಾರ. ಅದೆಷ್ಟೋ ವರ್ಷಗಳಿಂದ ಚಿನ್ನಾಭರಣ ಖರೀದಿಸಲೆಂದು ಹಣ ಕೂಡಿಟ್ಟಿರುತ್ತೀರಿ, ಇಂದಿನ ಮಾರುಕಟ್ಟೆಯಲ್ಲಿ ದರ ವಿವರ ಗಮನಿಸಿ ಸರಿ ಹೊಂದುವುದಾದರೆ ಚಿನ್ನ ಕೊಳ್ಳುವ ಕುರಿತು ಯೋಚಿಸಿ.
ಬೆಳ್ಳಿ ದರ ವಿವರ
ಬೆಳ್ಳಿ ದರದಲ್ಲಿಯೂ ಸಹ ಇಂದು ಇಳಿಕೆ ಕಂಡು ಬಂದಿದ್ದು ಕೆಜಿ ಬೆಳ್ಳಿಗೆ 65,000 ರೂಪಾಯಿ ನಿಗದಿಯಾಗಿದೆ. ಸುಮಾರು 1,600 ರೂಪಾಯಿ ಇಳಿಕೆ ಕಂಡು ಬಂದಿದೆ. ಚೆನ್ನೈನಲ್ಲಿ ಕೆಜಿ ಬೆಳ್ಳಿಗೆ 70,000 ರೂಪಾಯಿ ನಿಗದಿಯಾಗಿದ್ದು, ದೈನಂದಿನ ದರ ಏರಿಳಿತದಲ್ಲಿ 1,500 ರೂಪಾಯಿಗೆ ಇಳಿಕೆಯಾಗಿದೆ. ದೆಹಲಿಯಲ್ಲಿ ಕೆಜಿ ಬೆಳ್ಳಿಗೆ 65,000 ರೂಪಾಯಿ ನಿಗದಿಯಾಗಿದೆ. ಸುಮಾರು 1,600 ರೂಪಾಯಿ ಇಳಿಕೆ ಕಂಡು ಬಂದಿದೆ. ಹೈದರಾಬಾದ್ನಲ್ಲಿ ಕೆಜಿ ಬೆಳ್ಳಿ ಬೆಲೆ 70,200 ರೂಪಾಯಿ ನಿಗದಿಯಾಗಿದೆ. 1,500 ರೂಪಾಯಿ ನಿಗದಿಯಾಗಿದೆ.
ಇದನ್ನೂ ಓದಿ:
Gold Rate Today: ಇಂದು ಇಳಿಕೆ ಕಂಡ ಚಿನ್ನದ ದರ, ಬೆಳ್ಳಿ ಬೆಲೆಯಲ್ಲಿ ಏರಿಕೆ; ನಿಮ್ಮೂರಿನಲ್ಲಿ ಆಭರಣದ ಬೆಲೆ ಎಷ್ಟಿದೆ?
Published On - 8:26 am, Sun, 8 August 21