Neeraj Chopra: ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾಗೆ ಈ ಏರ್ಲೈನ್ಸ್ನಿಂದ ಅನ್ಲಿಮಿಟೆಡ್ ಉಚಿತ ಟಿಕೆಟ್
ಟೋಕಿಯೋ ಒಲಿಂಪಿಕ್ಸ್ 2020ರ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾಗೆ ಇಂಡಿಗೋ ವಿಮಾನ ಯಾನ ಸಂಸ್ಥೆ ನೀಡಿರುವ ಆಫರ್ ಇದು.
ಭಾರತೀಯ ವಿಮಾನ ಯಾನ ಸಂಸ್ಥೆ ಇಂಡಿಗೋ (IndiGo) ಶನಿವಾರದಂದು ಘೋಷಣೆ ಮಾಡಿರುವ ಪ್ರಕಾರ, ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಗೆ ಒಂದು ವರ್ಷ ಕಾಲ ಅನಿಯಮಿತವಾಗಿ ಉಚಿತ ಪ್ರಯಾಣಕ್ಕೆ ಟಿಕೆಟ್ ಆಫರ್ ಮಾಡಿದೆ. ಟೋಕಿಯೋ ಒಲಿಂಪಿಕ್ಸ್ 2020ರ ಪುರುಷರ ಜಾವೆಲಿನ್ ಎಸೆತದ ಫೈನಲ್ ಪಂದ್ಯಾವಳಿಯಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಗೆದ್ದಿರುವುದನ್ನು ಗುರುತಿಸಿ, ಈ ಘೋಷಣೆಯನ್ನು ಮಾಡಲಾಗಿದೆ. ಆಗಸ್ಟ್ 8, 2021ರಿಂದ ಆಗಸ್ಟ್ 7, 2022ರ ತನಕ ಈ ಆಫರ್ ಅನ್ವಯ ಆಗುತ್ತದೆ.
ಇಂಡಿಗೋದ ಪೂರ್ಣಾವಧಿ ನಿರ್ದೇಶಕ ಹಾಗೂ ಸಿಇಒ ರೊನೊಜಾಯ್ ದತ್ತಾ ಮಾತನಾಡಿ, ನಿಮ್ಮ ದಾಖಲೆಯಿಂದ ನಮಗೆ ಸಂತೋಷವಾಗಿದೆ. ನೀವು ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದೀರಿ. ನಮ್ಮ ವಿಮಾನಕ್ಕೆ ನಿಮ್ಮನ್ನು ಸ್ವಾಗತಿಸುವುನ್ನು ಇಂಡಿಗೋದ ಸಿಬ್ಬಂದಿ ಗೌರವ ಎಂದು ಭಾವಿಸುತ್ತಾರೆ. ಎಲ್ಲ ಗೌರವದೊಂದಿಗೆ ನಿಮಗೆ ಇಂಡಿಗೋ ವಿಮಾನದಲ್ಲಿ ಒಂದು ವರ್ಷ ಉಚಿತ ಸೇವೆ ಆಫರ್ ಮಾಡಲು ಬಯಸುತ್ತೇವೆ. ಪರಿಶ್ರಮ, ಪ್ಯಾಷನ್ ಹಾಗೂ ತಡೆಗಳನ್ನು ಎದುರಿಸಿ ನಿಲ್ಲುವುದರಿಂದ ಏನು ಸಾಧಿಸಬಹುದು ಅಂತ ನಮಗೆ ತೋರಿಸಿದ್ದೀರಿ. ಭವಿಷ್ಯದ ಭಾರತೀಯ ಅಥ್ಲೀಟ್ಗಳಿಗೆ ನೀವು ದಾರಿದೀಪ ಆಗಲಿದ್ದೀರಿ. ವೆಲ್ ಡನ್, ನೀರಜ್ ಎಂದಿದ್ದಾರೆ.
ಅಂದಹಾಗೆ, ಒಲಿಂಪಿಕ್ಸ್ನಲ್ಲಿ ವಯಕ್ತಿಕ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ನೀರಜ್ ಚೋಪ್ರಾ. 23 ವರ್ಷದ ಚೋಪ್ರಾ ಅವರ ತಂದೆ ಹರ್ಯಾಣದ ಪಾಣಿಪತ್ ಬಳಿ ಇರುವ ಖಾಂಡ್ರಾ ಎಂಬ ಹಳ್ಳಿಯಲ್ಲಿ ಕೃಷಿಕರು. 100 ವರ್ಷಗಳಿಂದ ಭಾರತವು ಟ್ರ್ಯಾಕ್ ಅಂಡ್ ಫೀಲ್ಡ್ನಲ್ಲಿ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿನ ಇಂಥದ್ದೊಂದು ಸಾಧನೆಗೆ ಎದುರು ನೋಡುತ್ತಿತ್ತು. ಇನ್ನು ಮಹೀಂದ್ರಾ ಅಂಡ್ ಮಹೀಂದ್ರಾ ಕಂಪೆನಿಯಿಂದ SUV ಆದ XUV700 ಘೋಷಣೆ ಮಾಡಲಾಗಿದೆ. ಭಾರತದಲ್ಲಿ ಈ ಎಸ್ಯುವು ಬಿಡುಗಡೆ ಆಘಬೇಕು. ತನ್ನ ಮೊದಲ ಯೂನಿಟ್ ಅನ್ನು ಒಲಿಂಪಿಕ್ ಚಾಂಪಿಯನ್ಗೆ ನೀಡಲಿದೆ.
ಇದನ್ನೂ ಓದಿ: Neeraj Chopra: ಚಿನ್ನದ ಹುಡುಗ ‘ಸುಬೇದಾರ್ ನೀರಜ್ ಚೋಪ್ರಾ’ ಬಗ್ಗೆ ನಿಮಗೆಷ್ಟು ಗೊತ್ತು?
(IndiGo Airline Offers 1 Year Unlimited Free Air Tickets To Tokyo 2020 Olympic Gold Medalist Neeraj Chopra)