Gold Silver Price Today | ಬೆಂಗಳೂರು: ಕಳೆದ ಒಂದು ವಾರದಿಂದ ಗಮನಿಸಿದರೆ ಪ್ರಾರಂಭದಲ್ಲಿ ಚಿನ್ನದ ದರ (Gold price) ಸಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಬಳಿಕ ನಾಲ್ಕೈದು ದಿನಗಳಿಂದ ಚಿನ್ನ, ಬೆಳ್ಳಿ ದರ (Silver Price) ಇಳಿಕೆಯ ಹಾದಿ ಹಿಡಿದಿದೆ. ಇದು ಚಿನ್ನಾಭರಣ ಖರೀದಿಸುವವರಿಗೆ ಸಂತೋಷದ ವಿಚಾರ. ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ಕೆಲವು ದಿನಗಳಿಂದ ಚಿನ್ನಾಭರಣ ದರ ಇಳಿಕೆ ಕಾಣುತ್ತಿದೆ. ಇಂದು ಸಹ ( ಸೆಪ್ಟೆಂಬರ್ 21, ಮಂಗಳವಾರ) ಚಿನ್ನ, ಬೆಳ್ಳಿ ದರದಲ್ಲಿ ಮತ್ತಷ್ಟು ಇಳಿಕೆ ಆಗಿದೆ.
ಮದುವೆ ಸಮಾರಂಭಗಳು ಎದುರಿಗಿದ್ದಾಗ ಚಿನ್ನ ಖರೀದಿಸಲು ಪ್ಲ್ಯಾನ್ ಮಾಡಿಯೇ ಇರುತ್ತೀರಿ. ಆದರೆ ಆಭರಣದ ದರ ಯಾವಾಗ ಇಳಿಕೆಯತ್ತ ಸಾಗಬಹುದು ಎಂಬ ನಿರೀಕ್ಷೆ ಕಾಡುವುದು ತಪ್ಪಲ್ಲ. ಕಳೆದ ಕೆಲವು ದಿನಗಳಿಂದ ಚಿನ್ನದ ದರ ಗಮನಿಸಿದಾಗ ಇಳಿಕೆಯ ಹಾದಿ ಹಿಡಿದಿದೆ. ನೀವು ಕೂಡಿಟ್ಟ ಹಣದಲ್ಲಿ ಚಿನ್ನಾಭರಣ ಖರೀದಿಸಬಹುದು ಎಂದೆನಿಸಿದರೆ ಆ ಕುರಿತಾಗಿ ಯೋಚಿಸಿ. ಇಂದು ಬೆಂಗಳೂರು, ಚೆನ್ನೈ, ದೆಹಲಿ ಸೇರಿದಂತೆಯೇ ಪ್ರಮುಳ ಎಲ್ಲಾ ಮಹಾನಗರಗಳಲ್ಲಿಯೂ ಸಹ ಚಿನ್ನದ ದರ ಇಳಿಕೆ ಕಂಡಿದೆ. ಬೆಳ್ಳಿ ದರದಲ್ಲಿ ಕೆಲವೆಡೆ ಸ್ಥಿರವಾಗಿದ್ದರೆ, ಕೆಲವೆಡೆ ಅಲ್ಪ ಪ್ರಮಾಣದಲ್ಲಿ ಇಳಿಕೆ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 43,300 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,34,000 ರೂಪಾಯಿ ನಿಗದಿಯಾಗಿದೆ. ಸುಮಾರು 1,000 ರೂಪಾಯಿ ಇಳಿಕೆ ಕಂಡಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,230 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,72,300 ರೂಪಾಯಿ ನಿಗದಿಯಾಗಿದೆ. 1,200 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಬೆಳ್ಳಿ ದರ ನಿನ್ನೆ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು, ಆ ಬಳಿಕ ಇಂದು ಸ್ಥಿರವಾಗಿದೆ. ಕೆಜಿ ಬೆಳ್ಳಿಗೆ 60,000 ರೂಪಾಯಿ ನಿಗದಿಯಾಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 43,600 ರೂಪಅಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,36,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,100 ರೂಪಾಯಿ ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,560 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,75,600 ರೂಪಾಯಿ ನಿಗದಿಯಾಗಿದೆ. ಸುಮಾರು 1,300 ರೂಪಾಯಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿ ನಿನ್ನೆ ಕೊಂಚ ಇಳಿಕೆ ಕಂಡು ಬಂದಿತ್ತು. ಇಂದು ಸ್ಥಿರತೆಯಲ್ಲಿದೆ. ಕೆಜಿ ಬೆಳ್ಳಿಗೆ 64,200 ರೂಪಾಯಿ ಇದೆ.
ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 45,130 ರೂಪಅಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,51,300 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 2,600 ರೂಪಾಯಿ ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,130 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,61,300 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 2,600 ರೂಪಾಯಿ ಇಳಿಕೆ ಕಂಡು ಬಂದಿದೆ. ಮುಂಬೈನಲ್ಲಿ ಕೆಜಿ ಬೆಳ್ಳಿಗೆ 60,000 ರೂಪಾಯಿ ನಿಗದಿ ಆಗಿದೆ.
ಇದನ್ನೂ ಓದಿ:
Gold Price Today: ಗ್ರಾಹಕರಿಗೆ ಗುಡ್ ನ್ಯೂಸ್; ಚಿನ್ನದ ದರದಲ್ಲಿ ಇಳಿಕೆ, ಆಭರಣ ಖರೀದಿಸುವುದಾದರೆ ಯೋಚಿಸಿ
Gold Price Today: ಗ್ರಾಹಕರೇ ಗಮನಿಸಿ! ಏರಿಕೆಯಾಗಿದ್ದ ಚಿನ್ನ, ಬೆಳ್ಳಿ ದರದಲ್ಲಿ ಇಂದು ಇಳಿಕೆ
(Gold price fall down today on 2021 September 21 check silver price in Bangalore Delhi Mumbai and minor city)
Published On - 7:53 am, Tue, 21 September 21