ಕಪಾಟಿನಲ್ಲಿ ಇಟ್ಟಿದ್ದ “ಆ ಪತ್ರದ” ಬೆಲೆ 1400 ಕೋಟಿ ರೂಪಾಯಿಗೂ ಹೆಚ್ಚು; ಅದನ್ನು ದಕ್ಕಿಸಿಕೊಳ್ಳಲು ಹೋರಾಡುತ್ತಿದೆ ಈ ಕುಟುಂಬ

ಕಪಾಟಿನಲ್ಲಿ ಇಟ್ಟು ಮರೆತೇ ಹೋಗಿದ್ದ ಆ ಪತ್ರದ ಬೆಲೆ 1400 ಕೋಟಿ ರೂಪಾಯಿಗೂ ಹೆಚ್ಚು ಎಂದು ಗೊತ್ತಾದ ಮೇಲೆ ಆ ಕುಟುಂಬ ಅದನ್ನು ಪಡೆಯುವುದಕ್ಕೆ ಮಾಡಿರುವ ಪ್ರಯತ್ನ ಹಾಗೂ ಈಗಿನ ಸನ್ನಿವೇಶ ಇಂಟೆರೆಸ್ಟಿಂಗ್ ಆಗಿದೆ.

ಕಪಾಟಿನಲ್ಲಿ ಇಟ್ಟಿದ್ದ ಆ ಪತ್ರದ ಬೆಲೆ 1400 ಕೋಟಿ ರೂಪಾಯಿಗೂ ಹೆಚ್ಚು; ಅದನ್ನು ದಕ್ಕಿಸಿಕೊಳ್ಳಲು ಹೋರಾಡುತ್ತಿದೆ ಈ ಕುಟುಂಬ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Sep 21, 2021 | 11:50 AM

ತುಂಬ ಇಂಟರೆಸ್ಟಿಂಗ್ ಆದಂಥ ಸ್ಟೋರಿ ಇದು. ಕೊಚ್ಚಿ ಮೂಲದ 74 ವರ್ಷದ ವ್ಯಕ್ತಿಯೊಬ್ಬರು 40 ವರ್ಷಗಳ ಹಿಂದೆ ಅನ್​ಲಿಸ್ಟೆಡ್ ಕಂಪೆನಿಯೊಂದರಲ್ಲಿ ಮಾಡಿದ್ದ ಹೂಡಿಕೆ 1400 ಕೋಟಿ ರೂಪಾಯಿಯಷ್ಟಾಗಿದೆ. ಅದಕ್ಕಾಗಿ ಅವರು ಈಗ ಹೋರಾಟ ನಡೆಸುತ್ತಿದ್ದಾರೆ. ಬಾಬು ಜಾರ್ಜ್ ವಲವಿ ಮತ್ತು ಅವರು ನಾಲ್ಕು ಹತ್ತಿರದ ಸಂಬಂಧಿಕರು ಕನಿಷ್ಠ 1448 ಕೋಟಿ ರೂಪಾಯಿಗೆ ಬಾಳುತ್ತಾರೆ. ಆದರೆ ಆದರೆ ಈಗ ಕಂಪೆನಿಯ ಜತೆಗೆ ಆ ಷೇರಿನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಹೋರಾಟ ನಡೆಯುತ್ತಿದೆ ಎಂದು ನ್ಯೂ ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ. ಇದೆಲ್ಲ ಶುರುವಾಗಿದ್ದು 1978ರಿಂದ. ಆಗ ಬಾಬು ಮತ್ತು ಅವರ ಕುಟುಂಬದ ಹತ್ತಿರ ಸಂಬಂಧಿಕರು ಸೇರಿ, ಉದಯ್​ಪುರ್ ಮೂಲದ ಮೇವಾರ್ ಆಯಿಲ್ ಅಂಡ್ ಜನರಲ್​ ಮಿಲ್ಸ್ ಲಿಮಿಟೆಡ್​ನಲ್ಲಿ ಶೇ 2.8ರಷ್ಟು ಪಾಲು ಖರೀದಿ ಮಾಡಿದ್ದರು. ಆಗ ಆ ಕಂಪೆನಿ ಅನ್​ಲಿಸ್ಟೆಡ್ ಆಗಿತ್ತು.

ವರ್ಷದಿಂದ ವರ್ಷಕ್ಕೆ ಕಂಪೆನಿ ಬೆಳೆಯುತ್ತಾ ಸಾಗಿತು. ಪ್ರವರ್ತಕರು ಕಂಪೆನಿಯ ಹೆಸರನ್ನು PI Industries ಅಂತ ಬದಲಿಸಿದರು. ಇದು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್​ ಆಗಿದ್ದಷ್ಟೇ ಅಲ್ಲ, ತುಂಬ ಚೆನ್ನಾಗಿ ಬೆಳೆದು, ಮಾರುಕಟ್ಟೆ ಬಂಡವಾಳ ಮೌಲ್ಯ (Market Capitalisation) 50 ಸಾವಿರ ಕೋಟಿ ಇದೆ. ಕಂಪೆನಿಯ ಬೆಳವಣಿಗೆಯಿಂದ ಬಾಬು ಹೂಡಿಕೆ ಕೂಡ ದೊಡ್ಡ ಮಟ್ಟದಲ್ಲಿ ಬೆಳೆಯಿತು. ಸೋಮವಾರದ (ಸೆಪ್ಟೆಂಬರ್ 20, 2021) ದಿನಾಂತ್ಯಕ್ಕೆ ಪ್ರತಿ ಷೇರಿಗೆ 3,245 ರೂಪಾಯಿಯಂತೆ ಬಿಎಸ್​ಇಯಲ್ಲಿ ವಹಿವಾಟು ಮುಗಿಸಿದೆ. ಬಾಬು ಬಳಿಯ ಶೇ 2.8ರಷ್ಟು ಷೇರಿನ ಪಾಲಿಗೆ ಕಂಪೆನಿಯ 42.48 ಲಕ್ಷ ಷೇರಾಗುತ್ತದೆ.

ಮೇವಾರ್​ ಆಯಿಲ್ ಅಂಡ್ ಜನರಲ್ ಮಿಲ್ಸ್​ (ಈಗ PI Industries) 1970ರ ಕೊನೆ ಹಾಗೂ 1980 ಆರಂಭದ ದಶಕಗಳ ಕಾಲ ಏಕಮಾತ್ರ ವಿತರಕ ಆಗಿತ್ತು. ಕಂಪೆನಿಯ ಕಾರ್ಯಾಚರಣೆ ಬೆಳೆಯುತ್ತಾ ಹೋದಂತೆ ಬಾಬು ಅವರು ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕಂಪೆನಿಯ ಕೀಟನಾಶಕ ಉತ್ಪನ್ನಗಳ ಕ್ಲಿಯರಿಂಗ್ ಮತ್ತು ಫಾರ್ವಡಿಂಗ್ ಏಜೆಂಟ್ ಆದರು. ಬಾಬು ಅವರ ದಿವಂಗತ ಸೋದರರಾದ ಜಾರ್ಜ್ ಜಿ. ವಲವಿ ಪ್ರಮುಖ ಉದ್ಯಮಿ ಆಗಿದ್ದರು, ಶಿಪ್ಪಿಂಗ್ ಉದ್ಯಮ ನಡೆಸುತ್ತಿದ್ದರು. ಅವರು ಹಾಗೂ PI Industries ಸ್ಥಾಪಕ- ಅಧ್ಯಕ್ಷ ಪರಸ್ಪರ ಪರಿಚಯಸ್ಥರಾಗಿದ್ದರು ಮತ್ತು ಅಂತಿಮವಾಗಿ ಕುಟುಂಬ ಸ್ನೇಹಿತರಾದರು.

ದಕ್ಷಿಣ ಭಾರತದ ವಿತರಕರು ಈ ಸಂಬಂಧದಿಂದ ಬಾಬು ಜಾರ್ಜ್ ವಲವಿ ಅವರು ಕಂಪೆನಿಯ ಉತ್ಪನ್ನಗಳಿಗೆ ದಕ್ಷಿಣ ಭಾರತದ ವಿತರಕರಾದರು. ಅವರು ಸಹ ಆ ಅವಧಿಯಲ್ಲಿ ಷೇರುಗಳನ್ನು ಖರೀದಿಸಿದರು ಮತ್ತು ಅದರ ಪ್ರಮಾಣಪತ್ರಗಳನ್ನು ಜೋಪಾನ ಮಾಡಿಟ್ಟರು. ಆ ಸಂದರ್ಭದಲ್ಲಿ ಕಂಪೆನಿ ಅನ್​ಲಿಸ್ಟೆಡ್​ ಆಗಿದ್ದರಿಂದ ಅದು ವಹಿವಾಟು ನಡೆಸುತ್ತಿರಲಿಲ್ಲ. ಆ ಕಾರಣಕ್ಕೆ ಅದನ್ನು ಹಾಗೇ ಇಟ್ಟುಕೊಂಡರು. ಬಾಬು ವಲವಿ ಅಕ್ಷರಶಃ ತಮ್ಮ ಹೂಡಿಕೆ ಬಗ್ಗೆ ಮರೆತೇ ಹೋದರು. PI Industries ಲಿಸ್ಟೆಡ್ ಕಂಪೆನಿ ಎಂಬ ಸಂಗತಿ 2015ನೇ ಇಸವಿಯಲ್ಲಿ ಬಾಬು ಅವರ ಮಗ ಕಂಡುಕೊಂಡರು. ಡಿಮ್ಯಾಟ್​ ಖಾತೆಗಾಗಿ ಭೌತಿಕವಾದ ಷೇರು ಪ್ರಮಾಣಪತ್ರವನ್ನು ಕಂಪೆನಿಗಳ ರಿಜಿಸ್ಟ್ರಾರ್​ಗೆ​ ಸಂಪರ್ಕಿಸಿದರು. ಅಂದಹಾಗೆ PI Industriesಗೆ ರಿಜಿಸ್ಟ್ರಾರ್ ಕಾರ್ವಿ ಕನ್ಸಲ್ಟೆಂಟ್ಸ್.

“2015ರಲ್ಲಿ ನನ್ನ ಮಗ ನಮ್ಮ ಚಟುವಟಿಕೆಗಳ ನಿರ್ವಹಣೆ ಮಾಡುವುದಕ್ಕೆ ಆರಂಭಿಸಿದ ಅವನಿಗೆ ಷೇರು ಸರ್ಟಿಫಿಕೇಟ್ ಸಿಕ್ಕಾಗ, ಕಂಪೆನಿ ಲಿಸ್ಟೆಡ್​ ಎಂದು ತಿಳಿದು ಡಿಮ್ಯಾಟ್​ ಮಾಡಿಸಲು ನಾವು ಕಾರ್ವಿ ಕನ್ಸಲ್ಟೆಂಟ್ಸ್​ ಸಂಪರ್ಕಿಸಿದೆವು,” ಎಂದು ಬಾಬು ತಿಳಿಸಿದ್ದಾರೆ. ಆದರೆ ಕಂಪೆನಿಯನ್ನೇ ಸಂಪರ್ಕಿಸುವಂತೆ ಕಾರ್ವಿ ಕನ್ಸಲ್ಟೆಂಟ್ಸ್ ತಿಳಿಸಿದೆ. 1989ರ ಸೆಪ್ಟೆಂಬರ್​ನಲ್ಲಿ ಈ ಷೇರುಗಳು ಬೇರೆಯವರಿಗೆ ವರ್ಗಾವಣೆ ಆಗಿವೆ ಎಂದು ಕಂಪೆನಿಯಿಂದ ತಿಳಿಸಲಾಗಿದೆ. ಮೂಲ ಷೇರು ಪ್ರಮಾಣಪತ್ರ ಕುಟುಂಬದ ಬಳಿ ಸುರಕ್ಷಿತವಾಗಿಯೇ ಇದೆ ಎಂದು ಖಾತ್ರಿ ಪಡಿಸಲಾಗಿದೆ. ಆದರೆ ಕಂಪೆನಿಯ ಕಾರ್ಯದರ್ಶಿ ಬಾಬು ಅವರ ಮಗನಿಗೆ ಮಾಹಿತಿ ನೀಡಿ, ಅದರ ನಕಲು ಪ್ರಮಾಣಪತ್ರ ವಿತರಿಸಿರುವುದಾಗಿ ಹೇಳಿದ್ದಾರೆ.

ಕಂಪೆನಿಯ ಕಡೆಯಿಂದ ಹುಡುಕಿಕೊಂಡು ಬಂದರು 2015ರಲ್ಲಿ ಕ್ಲೇಮ್ ಮಾಡಿದ ಮೇಲೆ ಮೂಲ ಷೇರು ಪ್ರಮಾಣಪತ್ರವನ್ನು ಪರಿಶೀಲನೆ ಮಾಡಿ, ಸಮಸ್ಯೆ ಬಗೆಹರಿಸುವಂತೆ PI Industriesನಿಂದ ಆಗಿನ ನಿರ್ದೇಶಕ ಮತ್ತು ಈಗ ಜಂಟಿ ಕಾರ್ಯನಿರ್ವಾಹಕ ನಿರ್ದೇಶಕ ರಜನೀಶ್ ಶರ್ಮಾ ಹಾಗೂ ಮಾಜಿ ಜನರಲ್ ಮ್ಯಾನೇಜರ್ ಇವರಿಬ್ಬರನ್ನು ಬಾಬು ಅವರನ್ನು ಭೇಟಿ ಮಾಡುವಂತೆ ಕೊಚ್ಚಿಗೆ ಕಳುಹಿಸಲಾಗಿದೆ. ಬಾಬು ಅವರು ಹೇಳುವಂತೆ, ಮೇಲಧಿಕಾರಿಗಳು ಈ ಷೇರು ಪ್ರಮಾಣಪತ್ರವು ಸರಿಯಾಗಿದೆ ಎಂದು ಹೇಳಿದ್ದಾರೆ. ಈ ವಿಚಾರವನ್ನು ಅಧ್ಯಕ್ಷರ ಜತೆ ಚರ್ಚಿಸುವುದಾಗಿ ಹೇಳಿದ್ದಾರೆ. ಆದರೆ ಈ ತನಕ ಯಾವುದೇ ಕ್ರಮವನ್ನು ಕಂಪೆನಿ ಕಡೆಯಿಂದ ತೆಗೆದುಕೊಂಡಿಲ್ಲ. ಜತೆಗೆ ಅಧ್ಯಕ್ಷರನ್ನು ಪ್ರತಿಕ್ರಿಯೆಗಾಗಿ ಸಂಪರ್ಕಿಸಲು ಯತ್ನಿಸಿದರೆ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎನ್ನುತ್ತಾರೆ ಬಾಬು.

ಯಾವಾಗ ಕಂಪೆನಿಯಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲವೋ ಕಂಪೆನಿಯು ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿಯನ್ನು ಸಂಪರ್ಕಿಸಿದೆ. ಸೆಬಿಯ ವಿಚಾರಣೆಗೆ ಉತ್ತರ ನೀಡಿರುವ ಕಂಪೆನಿ, 1989ರಲ್ಲೇ ಷೇರುಗಳನ್ನು ಮತ್ತೊಬ್ಬರಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದೆ. ಕಂಪೆನಿಯ ಟಾಪ್​ ಮ್ಯಾನೇಜ್​ಮೆಂಟ್​ ಗಮನಕ್ಕೆ ತರದಂತೆ ಕೆಲವು ಹಿರಿಯ ಅಧಿಕಾರಿಗಳು ಈ ಷೇರುಗಳ ಮಾರಾಟ ಮಾಡಿರಬಹುದು, ಈ ವಂಚನೆಯಲ್ಲಿ ಪಾಲ್ಗೊಂಡಿರಬಹುದು ಎಂದು ಅನುಮಾನ ವ್ಯಕ್ತಪಡಿಸುತ್ತಾರೆ ಬಾಬು. ಜತೆಗೆ ಸೆಬಿಯಿಂದ ಈ ಪ್ರಕರಣ ಮುಕ್ತಾಯ ಆಗಿಲ್ಲ. ವಿಚಾರಣೆ ನಡೆಯುತ್ತಿದೆ. ನ್ಯಾಯ ಸಿಗಬಹುದು ಎಂಬ ಭರವಸೆ ಇದೆ ಅಂತಲೂ ಎನ್ನುತ್ತಾರೆ.

ಇದನ್ನೂ ಓದಿ: Jeff Bezos: ಪುಟ್ಟ ಗ್ಯಾರೇಜಿನಿಂದ 131.58 ಲಕ್ಷ ಕೋಟಿ ರೂಪಾಯಿ ಸಾಮ್ರಾಜ್ಯದ ತನಕ ಅಮೆಜಾನ್​.ಕಾಮ್ ಕಟ್ಟಿದ ಜೆಫ್​ ಬೆಜೋಸ್​

(Share Certificate Found In Cupboard Worth More Than Rs 1400 Crore Battle To Get That By A Family From Kochi)

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ