Gold Price Today: ಚಿನ್ನದ ದರ ಮತ್ತೆ ಏರಿಕೆ, ಬದಲಾಗಿಲ್ಲ ಬೆಳ್ಳಿ ಬೆಲೆ; ಪ್ರಮುಖ ನಗರಗಳ ದರ ವಿವರ ಇಲ್ಲಿದೆ

Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಚಿನ್ನದ ದರ ಮತ್ತೆ ಏರಿಕೆ, ಬದಲಾಗಿಲ್ಲ ಬೆಳ್ಳಿ ಬೆಲೆ; ಪ್ರಮುಖ ನಗರಗಳ ದರ ವಿವರ ಇಲ್ಲಿದೆ
ಚಿನ್ನದ ದರ (ಸಾಂದರ್ಭಿಕ ಚಿತ್ರ)

Updated on: Jan 24, 2023 | 5:00 AM

Gold Silver Price in Bangalore | ಬೆಂಗಳೂರು: ಹಿಂದಿನ ವಹಿವಾಟಿನಲ್ಲಿ ಇಳಿಕೆಯಾಗಿದ್ದ ಚಿನ್ನದ ದರ ಇಂದು ಮತ್ತೆ ಏರಿಕೆಯಾಗಿದೆ. ಇದರೊಂದಿಗೆ ಹಳದಿ ಲೋಹದ ದರದ ಏರಿಳಿತ ಮುಂದುವರಿದಿದೆ. ಸತತ ಎರಡು ದಿನ ಏರಿಕೆ ದಾಖಲಿಸಿದ್ದ ಬೆಳ್ಳಿ ದರ ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. ಇಂದು 22 ಕ್ಯಾರೆಟ್​​ನ 10 ಗ್ರಾಂ ಬಂಗಾರದ ಬೆಲೆ 100 ರೂ. ಏರಿಕೆಯಾದರೆ, 24 ಕ್ಯಾರೆಟ್​​ನ 10 ಗ್ರಾಂ ಚಿನ್ನದ ಬೆಲೆ 50 ರೂ. ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 100 ರೂ. ಏರಿಕೆಯಾಗಿ 52,350 ರೂ. ಇದೆ. 24 ಕ್ಯಾರೆಟ್ ಚಿನ್ನದ ಬೆಲೆ 50 ರೂ. ಹೆಚ್ಚಳವಾಗಿ 57,110 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ ಬದಲಾಗದೆ 72,300 ರೂ. ಆಗಿದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ – 53,230 ರೂ.
  • ಮುಂಬೈ- 52,350 ರೂ.
  • ದೆಹಲಿ- 52,500 ರೂ.
  • ಕೊಲ್ಕತ್ತಾ- 52,350 ರೂ.
  • ಬೆಂಗಳೂರು- 52,400 ರೂ.
  • ಹೈದರಾಬಾದ್- 52,350 ರೂ.
  • ಕೇರಳ- 52,350 ರೂ.
  • ಪುಣೆ- 52,350 ರೂ.
  • ಮಂಗಳೂರು- 52,400 ರೂ.
  • ಮೈಸೂರು- 52,400 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ- 58,070 ರೂ.
  • ಮುಂಬೈ- 57,110 ರೂ.
  • ದೆಹಲಿ- 57,270 ರೂ.
  • ಕೊಲ್ಕತ್ತಾ- 57,110 ರೂ.
  • ಬೆಂಗಳೂರು- 57,160 ರೂ.
  • ಹೈದರಾಬಾದ್- 57,110 ರೂ.
  • ಕೇರಳ- 57,110 ರೂ.
  • ಪುಣೆ- 57,110 ರೂ.
  • ಮಂಗಳೂರು- 57,160 ರೂ.
  • ಮೈಸೂರು- 57,160 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

  • ಬೆಂಗಳೂರು- 74,700 ರೂ.
  • ಮೈಸೂರು- 74,700 ರೂ.
  • ಮಂಗಳೂರು- 74,700 ರೂ.
  • ಮುಂಬೈ- 72,300 ರೂ.
  • ಚೆನ್ನೈ- 74,700 ರೂ.
  • ದೆಹಲಿ- 72,300 ರೂ.
  • ಹೈದರಾಬಾದ್- 74,700 ರೂ.
  • ಕೊಲ್ಕತ್ತಾ- 72,300 ರೂ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us