Gold Price Today: ಮತ್ತೆ ದುಬಾರಿಯಾಯ್ತು ಚಿನ್ನ, ಬೆಳ್ಳಿ; ಪ್ರಮುಖ ನಗರಗಳ ದರ ವಿವರ ಇಲ್ಲಿ ನೋಡಿ

Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಮತ್ತೆ ದುಬಾರಿಯಾಯ್ತು ಚಿನ್ನ, ಬೆಳ್ಳಿ; ಪ್ರಮುಖ ನಗರಗಳ ದರ ವಿವರ ಇಲ್ಲಿ ನೋಡಿ
ಚಿನ್ನದ ದರ (ಸಾಂದರ್ಭಿಕ ಚಿತ್ರ)
Image Credit source: PTI

Updated on: Jan 27, 2023 | 5:00 AM

Gold Silver Price in Bangalore | ಬೆಂಗಳೂರು: ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಏರಿಕೆಯ ಓಟ ಮತ್ತೆ ಮುಂದುವರಿದಿದೆ. ಹಿಂದಿನ ದಿನದ ವಹಿವಾಟಿನಲ್ಲಿ ತಟಸ್ಥವಾಗಿದ್ದ ಉಭಯ ಲೋಹಗಳ ದರ ಇಂದು ಏರಿಕೆಯಾಗಿದೆ. ಅದಕ್ಕೂ ಹಿಂದಿನ ಎರಡು ಅವಧಿಯಲ್ಲಿ ಕೂಡ ಬೆಲೆ ಹೆಚ್ಚಳವಾಗಿತ್ತು. ಇಂದು 22 ಕ್ಯಾರೆಟ್​​ನ 10 ಗ್ರಾಂ ಬಂಗಾರದ ಬೆಲೆ 400 ರೂ. ಏರಿಕೆಯಾದರೆ, 24 ಕ್ಯಾರೆಟ್​​ನ 10 ಗ್ರಾಂ ಚಿನ್ನದ ಬೆಲೆ 440 ರೂ. ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆ 100 ರೂ. ಹೆಚ್ಚಳವಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 400 ರೂ. ಏರಿಕೆಯಾಗಿ 53,100 ರೂ. ಇದೆ. 24 ಕ್ಯಾರೆಟ್ ಚಿನ್ನದ ಬೆಲೆ 440 ರೂ. ಹೆಚ್ಚಳವಾಗಿ 57,930 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 100 ರೂ. ಹೆಚ್ಚಾಗಿ 72,600 ರೂ. ಆಗಿದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ – 53,800 ರೂ.
  • ಮುಂಬೈ- 53,100 ರೂ.
  • ದೆಹಲಿ- 53,250 ರೂ.
  • ಕೊಲ್ಕತ್ತಾ- 53,100 ರೂ.
  • ಬೆಂಗಳೂರು- 53,150 ರೂ.
  • ಹೈದರಾಬಾದ್- 53,100 ರೂ.
  • ಕೇರಳ- 53,100 ರೂ.
  • ಪುಣೆ- 53,100 ರೂ.
  • ಮಂಗಳೂರು- 53,150 ರೂ.
  • ಮೈಸೂರು- 53,150 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ- 57,930 ರೂ.
  • ಮುಂಬೈ- 57,930 ರೂ.
  • ದೆಹಲಿ- 58,080 ರೂ.
  • ಕೊಲ್ಕತ್ತಾ- 57,930 ರೂ.
  • ಬೆಂಗಳೂರು- 57,980 ರೂ.
  • ಹೈದರಾಬಾದ್- 57,930 ರೂ.
  • ಕೇರಳ- 57,930 ರೂ.
  • ಪುಣೆ- 57,930 ರೂ.
  • ಮಂಗಳೂರು- 57,980 ರೂ.
  • ಮೈಸೂರು- 57,980 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

  • ಬೆಂಗಳೂರು- 75,000 ರೂ.
  • ಮೈಸೂರು- 75,000 ರೂ.
  • ಮಂಗಳೂರು- 75,000 ರೂ.
  • ಮುಂಬೈ- 72,600 ರೂ.
  • ಚೆನ್ನೈ- 75,000 ರೂ.
  • ದೆಹಲಿ- 72,600 ರೂ.
  • ಹೈದರಾಬಾದ್- 75,000 ರೂ.
  • ಕೊಲ್ಕತ್ತಾ- 72,600 ರೂ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us