ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಳಿತ ಕಾಣುತ್ತಲೇ ಇರುತ್ತದೆ. ಆದರೆ, ಕಳೆದ ವಾರ ಏರಿಕೆ ಕಂಡಿದ್ದ ಚಿನ್ನದ ದರ (Gold Rate) 2 ದಿನಗಳಿಂದ ಭಾರೀ ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ. ಇದರಿಂದ ಚಿನ್ನಾಭರಣ ಖರೀದಿಸುವವರಿಗೆ ಸಂತಸ ಉಂಟಾಗಿರುವುದಂತೂ ಸುಳ್ಳಲ್ಲ. ಈಗಾಗಲೇ ಮದುವೆ ಸೀಸನ್ ಶುರುವಾಗಿದ್ದು, ಆಭರಣ ಮಳಿಗೆಗಳಲ್ಲಿ ಚಿನ್ನಾಭರಣ ಖರೀದಿಸುವ ಗ್ರಾಹಕರ ಸಂಖ್ಯೆಯೂ ಹೆಚ್ಚಾಗಿದೆ. ಇದರ ನಡುವೆ ಚಿನ್ನದ ಬೆಲೆ ಇಳಿಕೆಯಾಗಿರುವುದು ಶುಭ ಸುದ್ದಿ ಎನ್ನಬಹುದು. ಅತ್ತ ಬೆಳ್ಳಿ ದರವೂ ಹೆಚ್ಚೂಕಡಿಮೆ ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ಹಾಗಾದರೆ, ಇಂದು ಯಾವೆಲ್ಲ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ? ಎಂಬ ಕುರಿತು ಮಾಹಿತಿ ಇಲ್ಲಿದೆ.
ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ. ಇಂದು ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 250 ರೂ. ಇಳಿಕೆಯಾಗಿದೆ. ಹಾಗೇ 24 ಕ್ಯಾರೆಟ್ ಚಿನ್ನದ ಬೆಲೆ 280 ರೂ. ಇಳಿಕೆಯಾಗಿದೆ. ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 46,000 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 50,180 ರೂ. ಇದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,350 ರೂ, ಮುಂಬೈ- 46,000 ರೂ, ದೆಹಲಿ- 46,260 ರೂ, ಕೊಲ್ಕತ್ತಾ- 46,000 ರೂ, ಬೆಂಗಳೂರು- 46,000 ರೂ, ಹೈದರಾಬಾದ್- 46,000 ರೂ, ಕೇರಳ- 46,000 ರೂ, ಪುಣೆ- 45,950 ರೂ, ಮಂಗಳೂರು- 46,000 ರೂ, ಮೈಸೂರು- 46,00 ರೂ. ಇದೆ.
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 51,660 ರೂ, ಮುಂಬೈ- 50,180 ರೂ, ದೆಹಲಿ- 50,180 ರೂ, ಕೊಲ್ಕತ್ತಾ- 50,180 ರೂ, ಬೆಂಗಳೂರು- 50,180 ರೂ, ಹೈದರಾಬಾದ್- 50,180 ರೂ, ಕೇರಳ- 50,180 ರೂ, ಪುಣೆ- 50,130 ರೂ, ಮಂಗಳೂರು- 50,180 ರೂ, ಮೈಸೂರು- 50,180 ರೂ. ಇದೆ. ಫೆ. 22ರಂದು 410 ರೂ. ಏರಿಕೆಯಾಗಿದ್ದ ಚಿನ್ನದ ದರ 2 ದಿನಗಳಿಂದ ಕುಸಿತ ಕಾಣುತ್ತಿದೆ.
ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆಯಲ್ಲಿ ಕೂಡ ಇಳಿಕೆಯಾಗಿದ್ದರೂ ಭಾರೀ ವ್ಯತ್ಯಾಸವೇನೂ ಕಂಡುಬಂದಿಲ್ಲ. ಭಾರತದಲ್ಲಿ 1 ಕೆಜಿ ಬೆಳ್ಳಿ ದರ ನಿನ್ನೆ 64,40 ರೂ. ಇದ್ದುದು ಇಂದು 100 ರೂ. ಕುಸಿತ ಕಾಣುವ ಮೂಲಕ 64,300 ರೂ.ಗೆ ಇಳಿದಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ ಬೆಂಗಳೂರು- 70,000 ರೂ, ಮೈಸೂರು- 70,000 ರೂ., ಮಂಗಳೂರು- 70,000 ರೂ., ಮುಂಬೈ- 64,300 ರೂ, ಚೆನ್ನೈ- 69,000 ರೂ, ದೆಹಲಿ- 64,300 ರೂ, ಹೈದರಾಬಾದ್- 70,000 ರೂ, ಕೊಲ್ಕತ್ತಾ- 64,300 ರೂ. ಇದೆ.
ಇದನ್ನೂ ಓದಿ: Gold Rate: ಭಾರತದ ಪ್ರಮುಖ ನಗರಗಳಲ್ಲಿ ಫೆಬ್ರವರಿ 8ನೇ ತಾರೀಕಿನ ಚಿನ್ನ, ಬೆಳ್ಳಿ ದರ ಹೀಗಿದೆ
Gold Price Today: ಆಭರಣ ಪ್ರಿಯರಿಗೆ ಸಿಹಿ ಸುದ್ದಿ! ಚಿನ್ನದ ದರದಲ್ಲಿ ಇಳಿಕೆ; ಯಾವ ಯಾವ ನಗರಗಳಲ್ಲಿ ಬೆಲೆ ಎಷ್ಟಿದೆ?